S
Featured Quote Shwetha,B 2022-05-29T05:34:53+0000
Quote by Shwetha,B - ನನ್ನ ಸಾವಿನ ಸುದ್ದಿಯನ್ನು 
ಒಮ್ಮೆಲೇ ಕೊಡಬೇಡ
ಅಮ್ಮನನ್ನು ಕೇಳಿದ್ರೆ
ದೀಪ ಹಚ್ಚುಎಂದು ಹೇಳು
ಆದರೂ ಅರ್ಥವಾಗದಿದ್ದರೂ
ಜೋರಾಗಿ ಅತ್ತು ಬಿಡು
ಅಣ್ಣ ನನ್ನ ಕೇಳಿದರೆ
ಸಮಾಧಾನಪಡಿಸಿ
ಆದರೂ ಅರ್ಥವಾಗದಿದ್ದರೆ
ನೆಲ ಉಳು ಎಂದು ಹೇಳು
ನನ್ನ ಸಾವಿನ ಸುದ್ದಿಯನ್ನು
ಒಮ್ಮೆಲೆ ಕೊಡಬೇಡ
ಅತ್ತಿಗೆ ನನ್ನ ಕೇಳಿದ್ರೆ
ತಲೆ ತಗ್ಗಿಸಿ ಸುಮ್ಮನಿದ್ದು ಬಿಡು
ಆದರೂ ಅರ್ಥವಾಗದಿದ್ದರೆ
ಊರುಗೋಲು ಮುರಿದಿ ಇಡು
ತಮ್ಮ ನನ್ನ ಕೇಳಿದರೆ
ಆ ಸ್ಥಳ ಖಾಲಿಯಾಗಿವೆಂದು ಹೇಳು
ಆದರೂ ಅರ್ಥವಾಗದಿದ್ದರೆ
ಬಿಗಿ ಅಪ್ಪಿ ಜೋರಾಗಿ ಅತ್ತುಬಿಡು
ತಂಗಿ ನನ್ನ ಕೇಳಿದರೆ
ನಕ್ಷತ್ರಗಳನ್ನು ತೋರಿಸು
ಆದರೂ ಅರ್ಥವಾಗದಿದ್ದರೆ
ನನ್ನ ಪುಸ್ತಕಗಳು ತೋರಿಸಿ
ನನ್ನ ಸಾವಿನ ಸುದ್ದಿಯನ್ನು 
ಒಮ್ಮೆಲೆ ಕೊಡಬೇಡ ಗೆಳತಿ.

ಶ್ವೇತಾ. ಬಿ ✍️


 - Made using Quotes Creator App, Post Maker App