Chethana Bhargav
Quote by Chethana Bhargav - ಕಂಚಿನ ಕಂಠದ ನಿರೂಪಕಿ
ಕನ್ನಡ ಭಾಷೆಯ ಆರಾಧಕಿ
ನಿರೂಪಣೆ ಕ್ಷೇತ್ರದ ಸಾಧಕಿ
ಮನೆಮನಗಳ ಗೆದ್ದ ನಾಯಕಿ

ಕನ್ನಡ ಹಿರಿತೆರೆ  ಕಿರಿತೆರೆಯ ನಟಿ
ಭಾಷಾ ಪ್ರಭುತ್ವಕ್ಕೆ ಯಾರಿಲ್ಲ ಸರಿಸಾಟಿ
ಸ್ಪಷ್ಟ ಕನ್ನಡ ಉಚ್ಚಾರಣೆ
ಯಾರಲ್ಲೂ ನಾ ಕಾಣೆ 

ಅಚ್ಚ ಕನ್ನಡದ ಅಪ್ಪಟ ಕನ್ನಡತಿ
ಸುಮಧುರ ಧ್ವನಿಯ ಒಡತಿ
ಒನ್ ಅಂಡ್ ಓನ್ಲಿ ವರು
ಎಳೆದಿರಿ ಕನ್ನಡದ ತೇರು

ಹತ್ತುವಾಗ ಇಳಿಯುವಾಗ ಗಮನವಿರಲಿಯೆಂದೆ 
ಬಾರದ ಲೋಕಕ್ಕೆ ಪಯಣ ಬೆಳೆಸಿದೆ
ಕನ್ನಡದ ಹೆಮ್ಮೆಯ ಅಪರ್ಣ
ನಮ್ಮಯ ಶ್ರದ್ಧಾಂಜಲಿ ಭಾವಪೂರ್ಣ

-ಚೇತನ ಭಾರ್ಗವ - Made using Quotes Creator App, Post Maker App
0 likes 0 comments

Comments

You may like