Sujatha Raj(veda)
Quote by Sujatha Raj(veda) - ಮರೆಯಲೆತ್ನಿಸುತಿಹ ಮನದೊಳ್
ಮರಳುತ್ತಿಹ ನೆನಹುಗಳ
ಮರೆತೂ ಮರೆಯಲಾಗದು
ಮರೆತಂತಿಹ ಮರೆವೊಳ್
ನುಸುಳುತಿಹ ನೋವುಗಳ
ಸುರಿಸಿಕಂಬನಿಯಾಗಿಸಲಾಗದು
ಒರೆಸಿ ಕಂಬನಿಯ್ಹರಳ ವಿಭ್ರಾಂತಿಯೊಳ್
ಸರಿಸಿಬೇಸರವನ್ನಾಳಲಾಗದು
ಕಳೆದ ದಿನಗಳು ಕೆಣಕುತಿರೆ
ಬಾರದ ಲೋಕದೊಳ್
ನೀನಿರುವುದ ನೆನೆಸಲಾಗದು
ಬಡಬದುಕನರಗಿಸಿ ಬವಣೆಯೊಳ್
ದಿಟ್ಟೆಯೊಳಾಳಿಕಟ್ಟಿದ ಕೋಟೆಯ
ಕೆಡವಲಾಗದು
ರಾಖಿ-ಗೌರಿ ಎಂಬಿತ್ಯಾದಿಯಾಡಂಬರದೊಳ್
ಮಿಂದೇಳದಭಾವಗಳಮೀರಿದ 
ಅನುಬಂಧವು ನಮ್ಮದು
ಸದಾ ನಿನ್ನಗುನುಡಿಗಳ ಕಾಣದೆ ಉಳಿದರೂ
ಕೆಡವುವೀದುಷ್ಟನರಕದೊಳ್ನೀನಿರದೇ ಹೋದರೂ
ಬಯಸುವನಾನೀನಾನಾಕದೊಳಿರು 
ಅಣ್ಣಾ ನೀನಲ್ಲೇ ಇರು 
ಸದಾನಗುತಿರು ತಾರೆಗಳ ತೆರದಿ
ಕಣ್ಣೆತ್ತಿ ಕಾಣ್ವೆನಾನೆಚ್ಚಿರುಳೊಳು ಮುದದಿ
                                     ವೇದ... - Made using Quotes Creator App, Post Maker App
0 likes 0 comments