VIJAY MANJUNATH profile
VIJAY MANJUNATH
13 0 0
Posts Followers Following
VIJAY MANJUNATH
Quote by VIJAY MANJUNATH - ಗಿರಾಕಿ: ಒಂದು kg ಚಿಪ್ಸ್ ಗೆ ಎಷ್ಟು?

ವ್ಯಾಪಾರಿ : 80 ರುಪಾಯಿ.

ಗಿರಾಕಿ : ಲೂಸ್  ತಗೊಂಡ್ರೆ?

ವ್ಯಾಪಾರಿ : ಯಾರ್ ತಗೊಂಡ್ರು ಅಷ್ಟೇ.😝😜😛
 - Made using Quotes Creator App, Post Maker App
1 likes 0 comments
VIJAY MANJUNATH
Quote by VIJAY MANJUNATH - ಮಾತು ಎಂಬುದು "ಮುತ್ತು"
ಮೌನವೆಂಬುದು "ಚಿನ್ನ"
ಮಾತನು ಅರಿತು ಆಡದೆ ಹೋದರೆ
ಮಾತೆ ತರುವುದು‌"ಮೃತ್ಯು" - Made using Quotes Creator App, Post Maker App
1 likes 0 comments
VIJAY MANJUNATH
Quote by VIJAY MANJUNATH - ಎಲ್ಲೆಲ್ಲೂ ಇರುವ ನನ್ನನ್ನು ಎಲ್ಲೆಲ್ಲೋ ಹುಡುಕಿ ಕೊನೆಗೆ ನಾನಿಲ್ಲವೇ ಇಲ್ಲ ಎಂದು ಬಡಬಡಿಸಿ ತಡಬಡಿಸುತ್ತಿರುವ ನೀನೆಂಥ ಭಕ್ತನೋ ಅಯ್ಯಾ!!!???
ನಿನ್ನಂತರಂಗದ ಸುಪ್ತಾತ್ಮದಿ ಗುಪ್ತವಾಗಿ ಅಡಗಿರುವ ಸತ್ಯಾತ್ಮನೇ ನಾನು
ಸತ್ಯಾತ್ಮನೇ ನಾನು

ಸತ್ಯಾತ್ಮ - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ಕೆಲವೊಬ್ಬರು ನಮ್ಮ ತಂದೆ ಅಥವಾ ತಾಯಿ ಸತ್ತ ನಂತರ ಯಾರೂ ನಮ್ಮ ಕೈಹಿಡಿಯಲಿಲ್ಲ ಅಂತ ಹಲುಬುತ್ತಾರೆ. ಮೊದಲು ನಮಗಿಂತಲೂ ಕೆಳಗಿರುವ ನಿರ್ಗತಿಕರನ್ನೋ ಭಿಕ್ಷುಕರನ್ನೋ ನೋಡಿ ನಾವು ಅವರಿಗಿಂತ ಎಷ್ಟೋ ಮೇಲಿದ್ದೇವಲ್ಲಪ್ಪ ಅಂತ ಸಂತಸಪಡಿ. ಯಾರೂ ಪುಗಸಟ್ಟೆ ಕೊಡಲ್ಲ ಕೊಡಬಾರದು ನಾವು ತೆಗೆದುಕೊಳ್ಳಲೂ ಬಾರದು ಅದು ಏನಿದ್ದರೂ ಅಂಗವಿಕಲರಿಗೆ ನಿರ್ಗತಿಕರಿಗೆ ಮಾತ್ರ. ಕೈಕಾಲು ಗಟ್ಟಿಯಾಗಿರುವ ಸ್ವಾಭಿಮಾನಿ ಯಾರ ಹತ್ತಿರವೂ ಕೈಚಾಚಬಾರದು ಚಾಚಿದರೆ ಆತ ಬದುಕಿರುವ ಶವ ಮಾತ್ರ. ಮೊದಲು ಸ್ವಾಭಿಮಾನಿಯಾಗು ತಮ್ಮ ಒಳ್ಳೆಯದಾಗಲಿ - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ನಮ್ಮ ಜೀವನದ ಅತ್ಯಂತ ಸೂಕ್ತವಾದ ಮುಖ್ಯವಾದ ಒಳ್ಳೆಯ ಗುರುಗಳು ಮಾರ್ಗದರ್ಶಕರು ಯಾರು???🤔
ನಮ್ಮನ್ನು ಟೀಕಿಸುವವರು ಮುಂದೆ ಹಲ್ಕಿರಿದು ನಮ್ಮಿಂದ ಸಹಾಯ ಪಡೆದು ಬೆನ್ನಿಗೆ ಇರಿದವರು ನಯವಂಚಕರು ಮೋಸಗಾರರು. ಏಕೆಂದರೆ ಇಂಥವರಿಂದ ನಾವು ಸಮಾಜದಲ್ಲಿ ಜೀವನದಲ್ಲಿ ಹೇಗೆ ಬದುಕಬೇಕೆಂಬ ಪಾಠ ಕಲಿಯುತ್ತೇವೆ
ವಿಜಯೋಕ್ತಿ - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ಅರಿಷಡ್ವರ್ಗಗಳಲ್ಲಿ ಕಾಮಕ್ಕೆ ಮೊದಲ ಸ್ಥಾನ
ಏಕೆಂದರೆ ಬುದ್ಧನೂ ಸಹಾ ಹೇಳಿದಂತೆ
ಆಸೆಯೇ ದುಃಖಕ್ಕೆ ಮೂಲ.
ಕಾಮಕ್ಕೆ Comma ಇಟ್ಟರಷ್ಟೇ ಸಾಲದು Full stop ಇಟ್ಟರೆ ಮಾತ್ರ ಜೀವನ ಗೆಲ್ಲಬಹುದು

ವಿಜಯೋಕ್ತಿ - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ಹೆಣ್ಣು ಹೊನ್ನು ಮಣ್ಣಿನ ಹಿಂದೆ ಹೋದರೆ ಕೊನೆಗೆ ಬಾಯಿಗೂ ಮಣ್ಣೇ. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ರಾಮಾಯಣ ಮಹಾಭಾರತ ಕಾಲದ ತತ್ವ ಇಂದಿಗೂ ಜೀವಂತ ಎಂಥಾ ವಿಪರ್ಯಾಸ??? ನಾನು ನನ್ನದು ನನ್ನ ಹೆಂಡತಿ ನನ್ನ ಮಕ್ಕಳು ಎನ್ನುವೆಯಲ್ಲಾ ಎಲ್ಲಿಯವರೆಗೆ??? ನೀನಾರಿಗಾದೆಯೋ ಎಲೆ ಮಾನವಾ??? - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ಕಷ್ಟಪಟ್ಟು ದುಡಿದು ನಮಗೆ ಆಗಿ ಇನ್ನೂ ಹೆಚ್ಚಿದ್ದರೇ ಇಷ್ಟಪಟ್ಟು ದಾನ ಮಾಡಿ. ನೊಂದವರಿಗೆ ಸಾಂತ್ವನ ಹೇಳಿ
ಸಹಾಯ ಮಾಡಿದವರಿಗೆ ಕೃತಜ್ಞತೆ ಹೇಳಿ
ಯಾರನ್ನೂ ನೋಯಿಸದಿರಿ
ಯಾರಿಗೂ ಕೇಡು ಬಗೆಯದಿರಿ ಬಯಸದಿರಿ.
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿಡಿ.
ಇದೇ ಮಾನವೀಯತೆಯ ಮೂಲಮಂತ್ರ.

ವಿಜಯೋಕ್ತಿ. - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ಯುವಕ - ಗುರುಗಳೇ ಮದುವೆ ಮಕ್ಕಳು ಆದರೆ ಜೀವನ ಹೇಗಿರುತ್ತೆ?

ವೇದಾಂತಿ - ಮದುವೆಯಾದ್ರೆ ಮೂರು ಬಾಗಿಲು ಮಕ್ಕಳಾದ್ರೆ ಊರುಬಾಗಿಲು

ಯುವಕ - ಗುರುಗಳೇ ಸಂಸಾರ ಎಂದರೇನು?

ವೇದಾಂತಿ - ಇರುವ ಸಾರವನ್ನೆಲ್ಲಾ ಬಸಿದುಕೊಂಡು Some ಸಾರವನ್ನುಳಿಸುವುದೇ ಸಂಸಾರ😛😜😝 - Made using Quotes Creator App, Post Maker App
3 likes 0 comments
VIJAY MANJUNATH
Quote by VIJAY MANJUNATH - ಚಿಕ್ಕವರಿದ್ದಾಗ ಅನಿಸುತ್ತಿತ್ತು ಛೇ ಯಾವಾಗ ನಾವೂ ದೊಡ್ಡವರಾಗುವುದು ಅಂತ.
ಈಗ ಅನಿಸುತ್ತಿದೆ ಅಯ್ಯಯ್ಯೋ ಇಷ್ಟೊಂದು ದೊಡ್ಡವರಾಗಿ ಬಿಟ್ಟೆವಾ???🤔🤔🤔ಎಂದು. ದೊಡ್ಡತನವನ್ನು ಅಟ್ಟಿಸಿಕೊಂಡು ಹೋಗಿ ಹಿಡಿಯಲೆತ್ನಿಸಿದರೂ ಮುಂಡೇದು ಕೈಗೆ ಸಿಗುತ್ತಲೇ ಇಲ್ಲ.
ಮಗುವಾಗಿ ಆಮೇಲೆ ಮಾಗಿ ಮುಂದೆ ಬಾಗಿ ನಂತರ ಸಾಗಿ ಹೋಗುವುದೇ ಜೀವನ ಅಲ್ಲವೇ!!! - Made using Quotes Creator App, Post Maker App
2 likes 0 comments

Explore more quotes

VIJAY MANJUNATH
Quote by VIJAY MANJUNATH - ಅಭಿಮಾನ ಹಾಲಂತೆ ದುರಭಿಮಾನ ವಿಷವಂತೆ ಅಭಿಮಾನವಿಲ್ಲದೇ ನಿರಭಿಮಾನಿಗಳಾದರೂ ಸರಿಯೇ ದುರಭಿಮಾನಿಗಳಾಗಬಾರದು.

ಸಿನಿಮಾಗಳನ್ನು ನೋಡಿ ಮನರಂಜನೆ ಪಡೆದು ಥಿಯೇಟರ್ ನಿಂದ ಹೊರಬರುವಾಗ ಸಿನಿಮಾದವರನ್ನು ಥಿಯೇಟರ್ ಗೇಟಿನ ಬಳಿಯೇ ಬಿಟ್ಟು ಬನ್ನಿ.

ನಮ್ಮ ಜೀವನಕ್ಕೆ ಉತ್ತಮ ಆದರ್ಶಗಳು ಆದರಣೀಯ ವ್ಯಕ್ತಿಗಳು ನಮಗೆ ನಾವೇ BOSS ಆಗಿರಬೇಕು. ಬೇರೆ ಯಾರಿಗೂ ಗುಲಾಮರಾಗಬಾರದು - Made using Quotes Creator App, Post Maker App
0 likes 0 comments
VIJAY MANJUNATH
Quote by VIJAY MANJUNATH - ಪಂಚ ಪಾಂಡವರಲ್ಲಿ ಗಾಂಡೀವಿ ಅರ್ಜುನ ಮಹಾನ್ ಧನುರ್ಧಾರಿ ಜಗದೊಡೆಯ ಶ್ರೀ ಕೃಷ್ಣನ ಪ್ರೀತಿಪಾತ್ರ
ಬಲಶಾಲಿ ಭೀಮ ಮಹಾನ್ ಗದಾಧಾರಿ ಶಕ್ತಿವಂತ
ನಕುಲ ಮಹಾನ್ ಖಡ್ಗ ನೈಪುಣ್ಯಕಾರ
ಸಹದೇವ ಭೂತ ವರ್ತಮಾನ ಭವಿಷ್ಯ ಬಲ್ಲ ಜ್ಞಾನಿ
ಆದರೂ ಸಹ ಸಶರೀರನಾಗಿ ಸ್ವರ್ಗಾರೋಹಣ ಮಾಡಿದ್ದು ಧರ್ಮಿಷ್ಠ ಯುಧಿಷ್ಠಿರ ಮಾತ್ರ!
ಇದರ ಅರ್ಥಸಾರವಿಷ್ಟೆ ಅಧರ್ಮಿಗೆ ಧರ್ಮದ ಹಾದಿ‌ ಕಡು ಕಷ್ಟ ಧರ್ಮಿಷ್ಟನಿಗೆ ಧರ್ಮೋಪಾಸನೆಯೇ ಜೀವನ
ಧರ್ಮೋ ರಕ್ಷತಿ ರಕ್ಷಿತಃ
ಧರ್ಮವನು ರಕ್ಷಿಪನ ಧರ್ಮವೇ ರಕ್ಷಿಪುದು

  - Made using Quotes Creator App, Post Maker App
1 likes 0 comments
VIJAY MANJUNATH
Quote by VIJAY MANJUNATH - ಏನನ್ನೇ ಆಗಲಿ ನಾವು ಉಚಿತವಾಗಿ ಪಡೆದುಕೊಂಡರೆ ಸ್ವಾಭಿಮಾನ ಕಳೆದುಕೊಂಡ ಗುಲಾಮರಂತೆ ಬದುಕಿದ್ದೂ ಸತ್ತಂತೆ.
ಸ್ವಾಭಿಮಾನವೆಂದರೆ ಸರಳ ಸುಲಭವಲ್ಲ ಇಡೀ ಜಗತ್ತನ್ನೇ ಒಂದೆಡೆಗೆ ಕೂಡಿದರೂ ಸ್ವಾಭಿಮಾನಕ್ಕೆ ಸರಿದೂಗದು.
 ಉಚಿತವದು ಬೇಕಿರುವುದು ಭಿಕ್ಷುಕರಿಗೆ ನಿರ್ಗತಿಕರಿಗೆ - Made using Quotes Creator App, Post Maker App
0 likes 0 comments