Ramya Sr profile
Creator Profile

Ramya Sr

Sharing quote designs and daily inspiration.

5 Posts
0 Followers
0 Following
R
Ramya Sr
Quote by Ramya Sr - ನಿನ್ನನ್ನು ನೀನು ಪ್ರೀತಿಸು
 ನಿನ್ನೊಳಗಿನ ಆತ್ಮವಿಶ್ವಾಸವನ್ನು ಬಡಿದೆಬ್ಬಿಸು
 ನಿಸ್ವಾರ್ಥತೆಯಿಂದ ನಿನ್ನ ಗುರಿಯ ಕಡೆ ಪ್ರಯಾಣಿಸು
 ಯಶಸ್ಸಿನ ಬಗ್ಗೆ ಚಿಂತೆ ಬೇಡ
 ಆದರೆ ಪ್ರಯತ್ನಗಳನ್ನು  ಎಂದೂ ಬಿಡಬೇಡ

✍️R - Made using Quotes Creator App, Post Maker App
R
Ramya Sr
Quote by Ramya Sr - society recognise only Our success
 they don't see our hardwork behind it
 so we run to catch the success 

✍️R - Made using Quotes Creator App, Post Maker App
R
Ramya Sr
Quote by Ramya Sr - ಜೀವವಿಲ್ಲದ ಹಣ ಜಗತ್ತನ್ನೇ ಕೈಗೊಂಬೆಯಂತೆ ಆಡಿಸುವ ಶಕ್ತಿಯನ್ನು ಅಡಗಿಸಿಕೊಂಡಿದೆ
✍️R - Made using Quotes Creator App, Post Maker App
R
Ramya Sr
Quote by Ramya Sr - ಪ್ರತಿ ಒಬ್ಬರ ಜೀವನದಲ್ಲಿ ಅಮೂಲ್ಯವಾದ ಕಾಲಘಟ್ಟ ವೆಂದರೆ ಅದುವೇ ಬಾಲ್ಯ...
ನೆನೆದಾಗೆಲ್ಲ ಮತ್ತೆ ಹಿಂದೆ ಮರಳಬೇಕೆನಿಸುವುದೇ ಬಾಲ್ಯ..
ಯಾವುದೇ ಚಿಂತೆ, ಒತ್ತಡಗಳಿಲ್ಲದೆ ಹಕ್ಕಿಯಂತೆ  ಹಾರಡಿದ 
ಸವಿ ನೆನಪೇ ಬಾಲ್ಯ..
ದಣಿದಷ್ಟು  ಆಟ, ಅಮ್ಮನ ಕೆಂಪಾದ ನೋಟ 🤨
ಬಡತನದಲಿಯೂ ನೆಮ್ಮದಿಯ ತಾಣ 
ಸಂತೆಯಿಂದ ಬಂದ ಅಪ್ಪನ ಕೈಚೀಲಾವನ್ನ ಕಂಡು ಸಂತಸದಿಂದ ಓಡಿ ಬಂದ ನೆನಪು ...🙃
ಅಮ್ಮನ ಸೆರಗಿಡಿದು ಮನೆ ತುಂಬಾ ಓಡಾಡಿದ ನೆನಪು..
ತಮ್ಮನ ಜೊತೆ ತಿಂಡಿಗಾಗಿ ಕಿತಾಡಿದ ನೆನಪು..
ಆಟವಾಡಿ  ದಣಿದು ಅಮ್ಮನ ತೊಡೆಮೇಲೆ ಮಲಗಿದ ನೆನಪು..😴😴
ಗೆಳೆಯರ ಜೊತೆ ಮಳೆಯಲ್ಲಿ ದೋಣಿ ಬಿಟ್ಟ ನೆನಪು..
ಬೇಸಿಗೆ ರಜದಲ್ಲಿ ಗೆಳೆತಿಯರೆಲ್ಲ ಕೂಡೀ ಮಾವಿನಕಾಯನ್ನ ಕದ್ದು ರುಚಿ ನೋಡಿದ ನೆನಪು..😉😉
ಮನೆಯ ಹೊರಗೆ ಮಲಗಿ ಚಂದಾ ಮಾಮನ ಜೊತೆ ಮಾತಾಡುತ್ತ ಮಿನುಗುವ ನಕ್ಷತ್ರಗಳನ್ನ ಏಣಿಸಿದ ನೆನಪು..
ಕಲಿಕೆ ಕಡೆ ಗಮನ ಕೊಡದೆ ಅಪ್ಪನ ಹತ್ರ ಮೊದಲ ಬಾರಿ ಒದೆ ತಿಂದ ನೆನಪು..
ಶುಲ್ಕ ಕಟ್ಟಿಲವೆಂದು ಶಾಲೆಯಲ್ಲಿ ಶಿಕ್ಷಕರು ನಮ್ಮೆಲ್ಲರನ್ನು ಮನೆಗೆ ಹೋಗಿ ಎಂದಾಗ ಅವರ ಮುಂದೆ ಸಪ್ಪೆ ಮುಖ😒😒 ಮಾಡಿ ಹೊರಬಂದಾಗ ನಗುತ್ತ😃😃 ಮನೆಗೆ ಓಡಿ ಬಂದ ನೆನಪು..
ಶಾಲೆಯಲ್ಲಿ ರೈಲು ಬಂಡಿ ಆಡಿ  ಕೈ ಮುರಿದು ಕೊoಡಾಗ  ಅಮ್ಮನಂತೆ ಕಾಳಜಿ ತೋರಿಸಿದ ಶಿಕ್ಷಕರ  ನೆನಪು..🙂🙂

✍️R


                                                                                       - Made using Quotes Creator App, Post Maker App
R
Ramya Sr
Quote by Ramya Sr - ನಾಟಕವೆಂಬ ಬದುಕಿನೊಳಗೆ ನೂರಾರು ಬಿಕ್ಕಟ್ಟುಗಳು
 ವಯಸ್ಸು ಕಳೆದಂತೆ ಚಿಂತೆಗಳ ಮೂಟೆ ಹೊತ್ತಿ ಮೌನಕ್ಕೆ ಶರಣಾಗುತ್ತೇವೆ
 ವಿಭಿನ್ನ ಬಣ್ಣ ಹಚ್ಚಿಕೊಂಡು ನಟಿಸುವ ಈ ಜಗದೊಳು ಬಿಳಿ ಬಣ್ಣನೆಯ ಶುದ್ಧ ಮನಸುಳ್ಳ ವ್ಯಕ್ತಿಗಳಿರುವುದೇ ವಿರಳ
 ಪ್ರತಿಯೊಬ್ಬರಲ್ಲಿಯೂ ಒಂದು ಮುಖ ಒಳ್ಳೆಯವ ಒಂದು ಮುಖ ಕೆಟ್ಟವ ಇರುವುದು ಸಹಜ
ಈ ಎರಡರ ಹೆಚ್ಚು ಕಡಿಮೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವ ನಿಂತಿದೆ
 ವ್ಯಕ್ತಿ ತನ್ನ ಜೀವನದ ಸುಳಿಯಿಂದ ಹೊರಬರಲು ಯೋಚಿಸದೆ
 ಇತರರ ಸುಳಿಯ ಆಳ ಎಷ್ಟಿದೆ ಎಂದು ಲೆಕ್ಕಾಚಾರ ಮಾಡುವುದರಲ್ಲಿ ಜೀವನ ಮುಗಿಸುವವರು
 ಅಹಂ ಎಂಬ ಪೇಟ ಧರಿಸಿ ರಾಜನೆಂದು ಬೀಗದೆ
 ಸದ್ಗುಣಗಳ ಒಡವೆ ಧರಿಸಿ ಎಲ್ಲರೊಳಗೆ ಸೇರಿ ಕೂಡಿ ಬಾಳಬೇಕು 
✍️ರಮ್ಯ  - Made using Quotes Creator App, Post Maker App