ra_ndomthoughts24 profile
ra_ndomthoughts24
10 4 0
Posts Followers Following
ಮೌನ ಮಾತಾದಾಗ....🗯️
ra_ndomthoughts24
Quote by ra_ndomthoughts24 - ಆಟದ ಬರದಲ್ಲಿ ಬಿದ್ದ ನಿನ್ನ ಅಳುವ ಕಂಡು ಅತ್ತಂತ ತಾಯಿಯದು ಪ್ರೀತಿ 
ನೀ ಮಾಡಿದ ತಪ್ಪಿಗೆ ತಾನೇ ಹೊಡೆದರು ಮನಸಲ್ಲೇ ಮರುಗುವ ತಂದೆಯದು ಪ್ರೀತಿ 
ಅದೆಷ್ಟೇ ಜಗಳವಾದರು ನಿನ್ನ ಜೊತೆ ನಿಲ್ಲುವ ಅಣ್ಣ-ತಮ್ಮನದು ಪ್ರೀತಿ 
ಪ್ರತಿ ಹೆಜ್ಜೆಗೂ ದೈರ್ಯ ಹೇಳುವ ಅಕ್ಕ-ತಂಗಿಯದು ಪ್ರೀತಿ
ಏನಿಲ್ಲದಿದ್ದಾಗಲು ನಿನ್ನ ಜೊತೆ ಬರುವ ಗೆಳೆಯರದು ಪ್ರೀತಿ 
ಪ್ರತಿಫಲ ಬಯಸದೆ ನಿನ್ನ ಖುಷಿಯಲಿ ತನ್ನ ಖುಷಿ ಕಾಣುವವರದು ಪ್ರೀತಿ 
ಹೇಳದ ಮಾತನು ತಿಳಿವುದು ಪ್ರೀತಿ 
ಕಾಣದ ಕವಿತೆಯ ರಾಗದಿ ಹಾಡುವುದು ಪ್ರೀತಿ 
ದೇವರ ಗುಡಿಯಲಿ ನಿನ್ನ ಹೆಸರ ಪ್ರಾರ್ಥಿಸುವುದು ಪ್ರೀತಿ 
ಅರೆಗಳಿಗೆಯ ಬಿಡುವಿನಲೂ ಕ್ಷಣಬಿಡದೆ ನೆನೆವುದು ನಿಜ ಪ್ರೀತಿ....ಯಾರೋ ಕೇಳಿದರಂತೆ ಏನಿದು ಪ್ರೀತಿ? - Made using Quotes Creator App, Post Maker App
10 likes 0 comments
ra_ndomthoughts24
Quote by ra_ndomthoughts24 - ಬಣ್ಣಗಳೆಲ್ಲವೂ ನನ್ನ ಹುಡುಕಿ ಬಂದಂತೆ 
ಮುಚ್ಚಿಟ್ಟ ಕನಸೀಗ ಬೆಳಕ ಕಾಣುವಂತೆ 
ನಾ ನಡೆಯೊ ದಾರಿಯಲೂ ನಿನ್ನ ಹೆಜ್ಜೆ ಹುಡುಕುವಂತೆ 
ಕನವರಿಕೆಯ ಕಣ್ಣುಗಳು ನಿನ್ನ ನೋಡ ಬಯಸುವಂತೆ 
ತಿಳಿಯಾದ ಹೃದಯವಿದು ಪರವಶವಾಯಿತಂತೆ
ಬರವಣಿಗೆಯ ಸಾಲುಗಳು ನಿನ್ನ ಹೆಸರ ಹೇಳುವಂತೆ 
ಮರೆಯಾದ ಮುಗುಳುನಗು ನಿನ್ನ ನೆನೆದು ಬರುವಂತೆ 
ಜನರಿರುವ ಸಂತೆಯಲೂ ನಿನ್ನ ಕಡೆಗೆ ಸೆಳೆಯುವಂತೆ 
ಮರುಜನ್ಮ ಕೂಡ ನಾ ನಿನ್ನ ಬಯಸುವಂತೆ
ತಿಳಿಯಾದ ಹೃದಯವಿದು ಪರವಶವಾಯಿತಂತೆತಿಳಿಯಾದ ಹೃದಯವಿದು ಪರವಶವಾಯಿತಂತೆ - Made using Quotes Creator App, Post Maker App
1 likes 0 comments
ra_ndomthoughts24
Quote by ra_ndomthoughts24 - ಹೊಸವರ್ಷವಿದು ಕಹಿ ನೆನಪುಗಳ ಹಿಂದೆ ಇಡಲು 
ಹೊಸ ವರ್ಷವಿದು ಈಗಿರುವ ಕನಸುಗಳಿಗೆ ಬಣ್ಣ ತುಂಬಲು 
ಹೊಸ ರಂಗೋಲಿಯನು ಅಂಗಳಕೆ ಸೇರಿಸಲು 
ಇರುವ ರೆಕ್ಕೆಗೆ ಹಾರಲು ಹೊಸ ದಾರಿಯ ತೋರಲುra_ndomthoughts24 - Made using Quotes Creator App, Post Maker App
2 likes 0 comments
ra_ndomthoughts24
Quote by ra_ndomthoughts24 - ಅವಳೊಂದು ಮುಗಿಯದ ಪುಸ್ತಕ....
 ಪ್ರತಿ ಕ್ಷಣದ ನೋವಲ್ಲೂ ಜೊತೆಯಾದವಳು
ನನ್ನೆಲ್ಲಾ ಭಾವಗಳ ತಿಳಿದವಳು 
ಹೇಳದೆಯೂ ನನ್ನೊಡನೆ ನಡೆದವಳು 
ನನಗಿಂತ ನನ್ನನು ಅರಿತವಳು....ra_ndomthoughts24 - Made using Quotes Creator App, Post Maker App
3 likes 0 comments
ra_ndomthoughts24
Quote by ra_ndomthoughts24 - ಜೊತೆಬರದ ನೆರಳಿನ ಹಂಬಲಿಕೆಯಲಿ ನಡೆಯುತಾ 
ಒಂದಿಷ್ಟು ಕನಸುಗಳ ಕಣ್ಣಲ್ಲೇ ಬಚ್ಚಿಡುತಾ 
ತಿಳಿಯಾದ ಹೃದಯವನು ತಾನಾಗೇ ಕಲಕುತ್ತಾ 
ಬರದ ಮಳೆಯನು ದಿನಬಿಡದೆ ಬಯಸುತಾ 
ಪ್ರತಿದಿನ ಕಾಯುವಳು ಭರವಸೆಯಲಿ ನನ್ನವಳು....ಭರವಸೆಯಲಿ ನನ್ನವಳು ra_ndomthoughts24 - Made using Quotes Creator App, Post Maker App
3 likes 0 comments
ra_ndomthoughts24
Quote by ra_ndomthoughts24 - ಒಂದಿಷ್ಟು ಜಾಗದಲಿ ಇಡಿ ಬದುಕ ಕಂಡವಳು 
ತನ್ನವರ ಖುಷಿಯಲ್ಲಿ ತನ್ನ ನೋವ ಮರೆತವಳು 
ಮಗುವಾಗಿದ್ದ ನಮ್ಮೊಡನೆ ಮಗುವಂತೆ ಆಡಿದಳು 
ನಾ ಕಂಡ ನನ್ನಜ್ಜಿ ನಮಗಾಗಿ ಬದುಕಿಹಳು 
ನಾ ಕಂಡ ನನ್ನಜ್ಜಿ ಅಮ್ಮನಷ್ಟೇ ಪ್ರೀತಿಸುವಳು....ನಾ ಕಂಡ ನನ್ನಜ್ಜಿra_ndomthoughts24 - Made using Quotes Creator App, Post Maker App
1 likes 0 comments
ra_ndomthoughts24
Quote by ra_ndomthoughts24 - ಕಾಣದ ಕೈವೊಂದಿರುವುದು ದಣಿದ ಜೀವಕೆ ಸಾಂತ್ವನವ ಹೇಳಲು 
ಕಾಣದ ಕೈವೊಂದಿರುವುದು ಯಾರಿಲ್ಲದ ದಾರಿಯಲಿ ಜೊತೆಯಾಗಿ ಸಾಗಲು 
ಕಾಣದ ಕೈವೊಂದಿರುವುದು ಮನದ ಭಾರವನಿಳಿಸಲು
ಕಿವುಡಾಗಿರುವ ಹೃದಯಕೆ ಕಿವಿಮಾತ ಹೇಳಲು....ra_ndomthoughts24 - Made using Quotes Creator App, Post Maker App
4 likes 0 comments
Nayana shetty
Quote by Nayana shetty - ತಪ್ಪು ಒಪ್ಪುಗಳ ಪರಿವಿಲ್ಲದ ಬಾಲ್ಯವದು
ಮತ್ತೆ ಬೇಕೆಂದರೂ ಹಿಂತಿರುಗಿ ಬಾರದು....
ಮರದೆಲೆಯಲ್ಲಿ ವ್ಯವಹಾರ ಮಾಡಿದ್ದ ದಿನವದು 
ನಿಜಹಣವಿದ್ದರೂ ಆ ಖುಷಿ ಈಗ ಕಾಣದು 
ರಜೆಗಳಲ್ಲಿ ಕ್ಷಣಕೂಡ ಕಾಯದೆ ಆಡಿದ ಆ ದಿನಗಳು 
ಒಂದೆರೆಡು ರಜೆಗೆ ಮನೆ ಸೇರಲು ಕಾಯುವ ಈ ದಿನಗಳು 
ಅಮ್ಮ ಕೊಟ್ಟ ಒಂದೇಟನ್ನು ಮರುಕ್ಷಣ ಮರೆಯುತ್ತಿದ್ದ ಆ ದಿನಗಳು 
ಅರ್ಥವಿಲ್ಲದ ಪ್ರಶ್ನೆಗಳ ಮನಸಲ್ಲಿಟ್ಟು ಮರುಗುವ ಈ ದಿನಗಳು 
ನೋವು ನಲಿವುಗಳ ಅರಿವಿಲ್ಲದೇ ಬೆಳೆದ ಬಾಲ್ಯವದು 
ಚಿಕ್ಕ ಚಿಕ್ಕ ವಿಷಯದಲೂ ದೊಡ್ದ ದೊಡ್ದ ಖುಷಿಯಿದ್ದ ಬಾಲ್ಯವದು 
ಜವಾಬ್ದಾರಿಗಳ ಬೆನ್ನಲ್ಲಿ ಕಟ್ಟುತ್ತಾ, ಹಳೆದಿನಗಳ ಮನಸಲಿ ನೆನೆಯುತ್ತಾ, ಕಿಟಕಿಯಲಿ ಭವಿಷ್ಯವ ಹುಡುಕುತ್ತಿರುವ ದಿನವಿದು 
ತಪ್ಪು ಒಪ್ಪುಗಳ ಪರಿವಿಲ್ಲದ ಬಾಲ್ಯವದು
ಮತ್ತೆ ಬೇಕೆಂದರೂ ಹಿಂತಿರುಗಿ ಬಾರದು....ra_ndomthoughts24 - Made using Quotes Creator App, Post Maker App
5 likes 1 comments
Nayana shetty
Quote by Nayana shetty - ಮಗುವಾದಳವಳು ಅವನಾಡೊ ಮಾತಿಗೆ 
ಮನಸೋತಿಹಳವಳು ಅವನೊಡೋ ನೋಟಕೆ 
ಕಾದಿರುವಳವಳು ಒಂದಾಗೋ ಗಳಿಗೆಗೆ 
ಕನಸ ಕಾಣುವಳವಳು ಜೊತೆಯಾಗಿರುವ ಬದುಕಿಗೆ 
ಮನಸ ಕೊಟ್ಟಿಹಳವಳು ತಿಳಿತಿಳಿಯದೇ ಅವನಿಗೆ 
ಪ್ರೀತಿ ಬಯಸಿರುವಳವಳು ಮರೆಯಲ್ಲಿರುವ ಅವನೆಡೆಗೆ 
ಪ್ರತಿ ಕ್ಷಣವೂ ನೆನೆದಿಹಳು ತನಗರಿಯದ ಆ ಒಲವನು 
ಪ್ರತಿ ಮೌನದಲೂ ಹುಡುಕುವಳು ಅವನಾಡೋ ಮಾತುಗಳನು....ra_ndomthoughts24 - Made using Quotes Creator App, Post Maker App
7 likes 0 comments
Nayana shetty
Quote by Nayana shetty - ಮಲೆನಾಡೇಕೆ ಸ್ವಾರ್ಗವಾಗದು....
ಹಸಿರ ಹೊದ್ದು ನೆಲ ಮಲಗಿರಲು 
ಬನ ಬನವೂ ತಾನು ಸೊಂಪಾಗಿ ಬೆಳೆದಿರಲು 
ಹಕ್ಕಿ ಪಿಕ್ಕಿಗಳು ನೆಲೆಯ ಬಯಸಿ ಬಂದಿರಲು 
ಕಣ್ಣು ತಂಪಾಗಿಸುವ ಕಿವಿಯ ಇಂಪಾಗಿಸುವ ಗಾಳಿ ಇಲ್ಲಿರಲು 
ಮಲೆನಾಡೇಕೆ ಸ್ವಾರ್ಗವಾಗದು....
ಪ್ರಕೃತಿ ಮಡಿಲಲಿ ಜೀವರಾಶಿ ನಗುತಿರಲು 
ಕವಿಮನೆಯ ಕುರುಹು ಇನ್ನೂ ಕಣ್ಣಲಿರಲು 
ಹಳೆ ಜನರ ಬದುಕು ಕೂಡ ಈಗಿರಲು 
ಮಳೆಗಾಲದ ಖುಷಿಯಿನ್ನೂ ನಮ್ಮೂರಲಿರಲು
ಮಲೆನಾಡೇಕೆ ಸ್ವಾರ್ಗವಾಗದು....
ಮನ ಮುಟ್ಟುವ ಭಾಷೆ ನಮ್ಮದಾಗಿರಲು 
ಹೊರಜಗದಲ್ಲಿದ್ದರೂ ಮಲೆನಾಡೆನ್ನಲು ಮೈ ನವಿರಾಗುತಿರಲು ನನ್ನೂರಲ್ಲಿ ಬದುಕಲು ನನ್ನೂರ ಸೇರಲು ಮನ ಬಯಸಿರಲು 
ಕಣ್ಣಿಗೆ ನನ್ನೂರು ಹಸಿರ ಮನೆಯಾಗಿರಲು
ಮಲೆನಾಡೇಕೆ ಸ್ವಾರ್ಗವಾಗದು....
ra_ndomthoughts24 - Made using Quotes Creator App, Post Maker App
3 likes 0 comments

Explore more quotes