Vanditha profile
Vanditha
24 5 0
Posts Followers Following
Vanditha
Quote by Vanditha - ಹುಟ್ಟು ಅನಿರೀಕ್ಷಿತ, ಸಾವು ನಿಶ್ಚಿತ ಈ ಅನಿರೀಕ್ಷಿತ-ನಿಶ್ಚಿತ ಬದುಕಿನಲ್ಲಿ‌ ನಿರೀಕ್ಷೆಗಳು ಅಪರಮಿತ ಆದರೆ ಬದುಕಿನಲ್ಲಿ ನಿರೀಕ್ಷೆಗಿಂತ ಅನಿರೀಕ್ಷಿತ ತಿರುವುಗಳೇ ಹೆಚ್ಚಿರುವಾಗ ನಿರೀಕ್ಷೆಗೆ ತಕ್ಕಂತೆ ನಡೆಯುವುದು ಕಷ್ಟಸಾಧ್ಯ.. 
                              -ವಂದು


 - Made using Quotes Creator App, Post Maker App
0 likes 0 comments
Vanditha
Quote by Vanditha - ಬದಲಾಗುವ ಜನರ ನಡುವೆ ನೀ ಬದಲಾಗದಿದ್ದರೂ ಬದಲಾದಂತೆ ನಟಿಸುತ್ತಾ ಇದ್ದು ಬಿಡು...,
                        -ವಂದು - Made using Quotes Creator App, Post Maker App
0 likes 0 comments
Vanditha
Quote by Vanditha -  ಜೀವನದಲ್ಲಿ ಒಬ್ಬ ಕೆಟ್ಟ ವ್ಯಕ್ತಿಯ ನಿರ್ಗಮನವು ಮತ್ತೊಬ್ಬ ಒಳ್ಳೆಯ ವ್ಯಕ್ತಿಯ ಆಗಮನಕ್ಕೆ ಕಾರಣವಾಗಬಹುದು. ಆದರೆ ಸಮಯ ಬರುವವರೆಗೂ ತಾಳ್ಮೆಯಿಂದ ಕಾಯಬೇಕು...
                     -ವಂದು - Made using Quotes Creator App, Post Maker App
0 likes 0 comments
Vanditha
Quote by Vanditha - ಕೆಲ ಅಲ್ಪ ಜ್ಞಾನಿಗಳು ನಾನೇ ಅತೀ ಬುದ್ಧಿವಂತ, ನಾನೇ ಸರ್ವಾಧಿಕಾರಿ ಎಂದುಕೊಂಡು ಮದವೇರಿ ಮೆರೆಯುತ್ತಿರುತ್ತಾರೆ..‌ ಬಹುಶಃ  ಅವರಿಗೆ ತಿಳಿದಿಲ್ಲ ಮರಕ್ಕಿಂತ ಮರ ದೊಡ್ಡದಿದೆ ಎಂದು.... 
                               - ವಂದು - Made using Quotes Creator App, Post Maker App
0 likes 0 comments
Vanditha
Quote by Vanditha - ಮನುಷ್ಯ ಬದುಕಿದ್ದಾಗ ಭಾವನೆಗಳನ್ನರಿಯದೆ, ನೋವುಣಿಸಿ ಸತ್ತ‌ ಮೇಲೆ‌ ಬಂದು ಕಣ್ಣೀರಾಕಿ, ಗೋಳಾಡಿ ಕ್ಷಮಿಸು ಎಂದು‌ ಕಾಲು‌ ಹಿಡಿದರೇನು‌ ಫಲ....??
                          -ವಂದು - Made using Quotes Creator App, Post Maker App
0 likes 0 comments
Vanditha
Quote by Vanditha - ಹಳೆಯ ಘಟನೆಗಳನ್ನು ಮರೆಯಬೇಕೆಂದೆಷ್ಟು ಮನದಲ್ಲಿ ನಿಲ್ಲದ ಮೊರೆತ.. ನೆನೆಯುತ ಕುಳಿತಷ್ಟು ಕಣ್ಣಂಚಲ್ಲಿ ಕಣ್ಣೀರಿನ ಭೋರ್ಗರೆತ
-ವಂದು - Made using Quotes Creator App, Post Maker App
1 likes 2 comments
Vanditha
Quote by Vanditha -  ಶ್ರೀಮಂತಿಕೆ, ಸೌಂದರ್ಯ ನೋಡಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದಕ್ಕಿಂತ ಒಳ್ಳೆಯ ವ್ಯಕ್ತಿತ್ವ, ಮನಸ್ಥಿತಿ, ಕಷ್ಟ ಸುಖವನ್ನು ತಿಳಿಯುವ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉತ್ತಮ... 
                              -ವಂದು
                         - Made using Quotes Creator App, Post Maker App
1 likes 2 comments
Vanditha
Quote by Vanditha - ಜೀವನವೆಂಬ ನಾಟಕರಂಗದಲ್ಲಿ ನಾವೆಲ್ಲರೂ ಪಾತ್ರಧಾರಿಗಳು ಮೇಲಿರುವವನು ಸೂತ್ರಧಾರಿ. ಅವನು ನಡೆಸಿದಂತೆ ನಡೆಯಬೇಕು ದಡವ ಸೇರುವವರೆಗೂ ದಣಿಯದೇ ಮುನ್ನುಗ್ಗಬೇಕು..
                               
                                 -ವಂದು - Made using Quotes Creator App, Post Maker App
3 likes 2 comments
Vanditha
Quote by Vanditha - ಜೀವನದಲ್ಲಿ ನಾವು ರೂಢಿಸಿಕೊಂಡಿರುವ ಅತೀ ಒಳ್ಳೆಯತನವು ಕೆಲವೊಮ್ಮೆ ದುಃಖಕ್ಕೆ ಕಾರಣವಾಗುತ್ತದೆ.
                   -ವಂದು - Made using Quotes Creator App, Post Maker App
0 likes 0 comments
Vanditha
Quote by Vanditha - ಜೀವನವೆಂಬ ಮೂರಕ್ಷರದ ಪಥದಲ್ಲಿ ಹಲವಾರು ವ್ಯಕ್ತಿಗಳ ಆಗಮನ ಮತ್ತು ನಿರ್ಗಮನವಾಗುತ್ತದೆ. ಅದರಲ್ಲಿ ಕೆಲವರು  ಸಂತೋಷವನ್ನು ನೀಡುತ್ತಾರೆ. ಕೆಲವರು ದುಃಖವನ್ನು ನೀಡುತ್ತಾರೆ. ಮತ್ತೆ ಕೆಲವರು ಏನೂ ಹೇಳದೆ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದು ಬಿಡುತ್ತಾರೆ.
                                -ವಂದು
                           - Made using Quotes Creator App, Post Maker App
1 likes 0 comments

Explore more quotes

Vanditha
Quote by Vanditha - ಅನಿರೀಕ್ಷಿತವಾಗಿ‌ ಜೀವನಕ್ಕೆ ಆಗಮಿಸಿ‌ ನನ್ನೆಲ್ಲಾ ಕಷ್ವವನ್ನು ತಿಳಿದು ಸ್ವೀಕರಿಸಿ, ಇನ್ನೇನೋ ಮನದಲ್ಲಿ ಸಣ್ಣ ಆಸೆ ಚಿಗುರೊಡೆಯುತ್ತಿದೆ ಎಂದುಕೊಳ್ಳುವ ಮೊದಲೇ ಕಾರಣ ತಿಳಿಸದೆ ದೂರಾದೆಯಾ...
                                   
                                              -ವಂದು - Made using Quotes Creator App, Post Maker App
2 likes 1 comments
Vanditha
Quote by Vanditha - ದೇವರು ಜೀವನದಲ್ಲಿ ತಪ್ಪು ಮಾಡಿದವರಿಗೆ  ಶಿಕ್ಷೆ  ನೀಡಿದರೆ ಅದಕ್ಕೊಂದು ಅರ್ಥವಿದೆ. ಆದರೆ  ಏನೂ ತಪ್ಪು ಮಾಡದವರಿಗೆ  ಶಿಕ್ಷೆ  ನೀಡುವುದು ಸರಿಯೇ?
                                                        -ವಂದು - Made using Quotes Creator App, Post Maker App
2 likes 4 comments
Vanditha
Quote by Vanditha - ಪೂಜೆ, ಹೋಮ, ಹವನಗಳನ್ನು ಮಾಡುವಾಗ ದೇವರ ಮೇಲಿರುವ ಭಕ್ತಿ, ದೇವರು ನೋಡುತ್ತಾನೆ, ತಪ್ಪು ಮಾಡಿದರೆ ಶಿಕ್ಷಿಸುತ್ತಾನೆಂದು ಯೋಚಿಸುವ ಮನುಜ.. ಮತ್ತೊಬ್ಬರಿಗೆ ಮೋಸ, ವಂಚನೆ, ದ್ರೋಹ ಮಾಡುವಾಗ  ದೇವರು ನೋಡುತ್ತಾನೆ, ತಪ್ಪು ಮಾಡಿದರೆ ಶಿಕ್ಷಿಸುತ್ತಾನೆಂದು ಯೋಚಿಸುವುದಿಲ್ಲವಾ...???
         
               -ವಂದು - Made using Quotes Creator App, Post Maker App
5 likes 5 comments
Vanditha
Quote by Vanditha - ಸುಖದಲ್ಲಿ ನಿನ್ನ ಜೊತೆ ಇರುವವರ ಬದಲು
 ದುಃಖದಲ್ಲಿ  ನಿನ್ನ ಜೊತೆ ನಿಂತು ಕಂಬನಿ ಒರೆಸಿ, ಹೆಗಲಿಗೆ ಹೆಗಲು ಕೊಟ್ಟು, ನಿನ್ನ ದುಃಖವ ತನ್ನದೆಂದು ಭಾವಿಸಿ ನಿಂತವರ ಜೊತೆ ಇರು... 

                        -ವಂದು - Made using Quotes Creator App, Post Maker App
4 likes 0 comments
Vanditha
Quote by Vanditha - ಹಿಂದಿನ‌ ದಿನಗಳನ್ನು ಚಿಂತಿಸಿ ಕೊರಗದಿರು, 
ನಾಳೆಯ ದಿನಗಳನ್ನು ನೆನೆದು ನರಳದಿರು.
ಹಿಂದೆ ಆಗಿದ್ದನ್ನು ಅಳಿಸಲಾಗದು, 
ಮುಂದೆ ಆಗುವುದನ್ನು ತಡೆಯಲಾಗದು,
ಆದ್ದರಿಂದ  ಈ  ದಿನದ ಬಗ್ಗೆ ಮಾತ್ರ ಯೋಚಿಸು.
 ಇಲ್ಲದರ ಬಗ್ಗೆ ಕುಂತು ಕೊರಗುವುದರ ಬದಲು ಇರುವುದರಲ್ಲೇ ಸಂತೋಷವನ್ನು ಹುಡುಕಲು ಪ್ರಯತ್ನಿಸು..

                                                         -ವಂದು - Made using Quotes Creator App, Post Maker App
4 likes 0 comments
Vanditha
Quote by Vanditha - ಕಷ್ಟ ಬಂದಾಗ ಕುಗ್ಗದಿರು, ಸುಖ ಬಂದಾಗ ಹಿಗ್ಗದಿರು, ಏನಾದರೂ ಆಗಲಿ ಬದುಕಿನ ಬಗ್ಗೆ ಜಿಗುಪ್ಸೆ ಪಡದಿರು.. ಕಷ್ಟ ಶಾಶ್ವತವಲ್ಲ, ಸುಖ ಸ್ಥಿರವಲ್ಲ ಎಲ್ಲವೂ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ.

-ವಂದು - Made using Quotes Creator App, Post Maker App
2 likes 3 comments
Vanditha
Quote by Vanditha - ಕತ್ತಲೆ‌ ಕವಿದಿರುವ ಬಾಳು ಆ ಬಾಳಿನಲ್ಲಿ ಬೆಳಕು ಮೂಡುವುದಿಲ್ಲವೆಂದು ಪರಿತಪಿಸುತ್ತಿರುವ ಮನ. ಈ ಮನದ ನೋವನ್ನು ಯಾರೊಂದಿಗೂ ಹೇಳಲಾಗದೆ ಮನಸ್ಸಿನಲ್ಲಿ ಮೂಟೆ ಕಟ್ಟಿಟ್ಟುಕೊಂಡು ಅಳಲಾರದೇ, ನಗಲಾರದೇ ಬಳಲುತ್ತಿದೆ ಈ ಜೀವ.

                                        -ವಂದು - Made using Quotes Creator App, Post Maker App
1 likes 2 comments
Vanditha
Quote by Vanditha - ಮನಸ್ಸೆಂಬ ಪುಟ್ಟ ಮನೆಯಲ್ಲಿ ಆಸೆ ಕನಸುಗಳು ನೆರವೇರುವುದಿಲ್ಲ ಅವುಗಳಿಗೆ ಜಾಗವಿಲ್ಲ. ಎಂದು ಮನಸ್ಸನ್ನು ಕಲ್ಲು ಮಾಡಿಕೊಂಡು ಬದುಕುವಾಗ ಮತ್ತೆ ಯಾರೋ ಬಂದು ಸಣ್ಣ ನೀರೆರೆದು ಎಲ್ಲೋ ಸಣ್ಣದಾಗಿ ಆಸೆ ಚಿಗುರುತ್ತಿದೆ ಎಂದುಕೊಳ್ಳುವ ಮೊದಲೇ ನಿಮಿರಿ ಹೋಗುತ್ತದೆ.

-ವಂದು - Made using Quotes Creator App, Post Maker App
1 likes 0 comments
Vanditha
Quote by Vanditha - ತೋಟದಲ್ಲಿ ಎಲೆಗಳ‌ ನಡುವೆ ಅಡಗಿ ಕುಳಿತ ಮಲ್ಲಿಗೆಯೊಂದು ಮೆಲ್ಲಗೆ ನುಡಿಯಿತು ನನ್ನ ಈ ಪಯಣ ದೇವಾಲಯದ ದೇವರ ಮುಡಿಗೋ ಅಥವಾ ಮಸಣದಲ್ಲಿರುವ ಗೋರಿಯ ಮೇಲೋ ನಾ ತಿಳಿಯನು ಆದರೆ ನಾನು ಸುವಾಸನೆ ಬೀರುವುದನ್ನು ಎಂದಿಗೂ ಬಿಡೆನು ಹಾಗೆಯೇ ಮನುಷ್ಯನ ಜೀವನದಲ್ಲಿ ಏನೇ ಕಷ್ಟ ಎದುರಾದರೂ  ಎಲ್ಲವನ್ನು ಎದುರಿಸಿ ಸದಾ ನಗುನಗುತ ಇರಬೇಕು ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿಯಿದೆ.
                                         -ವಂದು - Made using Quotes Creator App, Post Maker App
0 likes 0 comments
Vanditha
Quote by Vanditha - ಅಧಿಕಾರದ ಮದವೇರಿದವರು, ಹಣದ ಮದವೇರಿದವರು, ರಾಜಕೀಯ ಪ್ರಭಾವವಿದೆ ಎಂದು ರಾರಾಜಿಸುವವರು, ನಾನು ಏನೇ ಮಾಡಿದರೂ ಯಾರು ನನ್ನನ್ನು ಕೇಳುವವರಿಲ್ಲ ಎಂಬ ಅಹಂ ಉಳ್ಳವರು, ನಾನೇ ಸರ್ವಾಧಿಕಾರಿ ಎಂದು ಮೆರೆಯುವವರು ಇಂದು ನಿನ್ನನ್ನು ನೋಯಿಸುತ್ತಾರೆ, ನಿಂದಿಸುತ್ತಾರೆ, ಆರೋಪಿಸುತ್ತಾರೆ, ಅವಮಾನಿಸುತ್ತಾರೆ.  ಚಿಂತಿಸಬೇಡ ತಾಳ್ಮೆಯಿಂದ ಇರು, ದೇವರಂತಿದ್ದು ಬಿಡು. ಅವರಿಗೆ ಅರಿಯದು ಮುಂದೊಂದು ದಿನ ತಾವು ಮಾಡಿದ ಪಾಪ ಕರ್ಮಗಳ ಬುತ್ತಿ ಹೊರಬೇಕೆಂದು, ಕರ್ಮ ಯಾರನ್ನು ಬಿಡುವುದಿಲ್ಲ..
                                   -ವಂದು - Made using Quotes Creator App, Post Maker App
1 likes 0 comments

Explore more quotes

Vanditha
Quote by Vanditha - ನೀ ವಿದ್ಯಾರ್ಥಿ ನಿಲಯದ ಸೋಪಾನವನ್ನು ಇಳಿದು ಬರುವಾಗ  ಮೊದಲ ಬಾರಿ ನಾ ಕಂಡೆ ನಿನ್ನ.. ಯಾವ ಜನ್ಮದ ಋಣಾನುಬಂಧವೋ ನಾ ತಿಳಿಯೆನು ಆ ದೇವರೇ ನನಗೆ ಕಳುಹಿಸಿದ ಸ್ನೇಹಿತೆ/ಸೋದರಿ ನೀ... ಸದಾ ನನಗೆ ಒಳಿತನ್ನೇ ಬಯಸಿ ಕಷ್ಟಕಾಲದಲ್ಲಿ ಕೈ ಜೋಡಿಸಿ ನಿಂತು ಜೊತೆಯಾಗಿ ಇರೋ ಏಕೈಕ‌  ಸಹಚರಿ ನೀ.. ನಿನ್ನ‌ ಸ್ನೇಹಕ್ಕೆ‌ ಸದಾ ಚಿರಋಣಿ ನಾ..
                            -ವಂದು - Made using Quotes Creator App, Post Maker App
1 likes 0 comments
Vanditha
Quote by Vanditha - ಮನದಲ್ಲಿ ಬತ್ತಿಹೋದ ಸಾವಿರಾರು ಕನಸುಗಳು ಯಾರ ಬಳಿಯೂ ಹೇಳಲಾಗದೇ ಹೊರಬರುತ್ತಿರುವ ಕಣ್ಣೀರಿನ ಹನಿಗಳು... ಮನಸ್ಸಿನೊಳಗೆ  ಒಮ್ಮೊಮ್ಮೆ ದ್ವೇಷದ ಜ್ವಾಲೆ  ಎದ್ದು ನಿಂತರೆ ಮತ್ತೊಮ್ಮೆ ಯಾರನ್ನು ದ್ವೇಷಿಸಬೇಡ ಅವರವರ ಬುತ್ತಿ ಅವರವರ ಹೆಗಲಿಗೆ ಎಂದೆನಿಸುತ್ತದೆ. . ಒಟ್ಟಾರೆ ಈ ನೋವಿಗೆ ಕೊನೆಯೆಂಬುದಿಲ್ಲವೇ ಎಂದು ಪರಿತಪಿಸುತ್ತಿದೆ ಮನ..

-ವಂದು - Made using Quotes Creator App, Post Maker App
1 likes 0 comments
Vanditha
Quote by Vanditha - 

ಜೀವನವೆಂಬ ಸಾಗರದಲ್ಲಿ ಒಮ್ಮೊಮ್ಮೆ ಕಷ್ಟಗಳು ಹುಣ್ಣಿಮೆಯ ತರಂಗಗಳ ರೀತಿ ಬಂದು ಅಪ್ಪಳಿಸುತ್ತವೆ. ತರಂಗಗಳ ವೇಗಕ್ಕೆ ಎದೆಯೊಡ್ಡಿ ನಿಂತು ಎದುರಿಸಬೇಕೆಂದುಕೊಂಡಿದ್ದೇನೆ. ಆದರೆ ಆ ರಭಸವನ್ನು ತಾಳಲಾರದೆ ಎಲ್ಲಿ ಕುಸಿದು ಬೀಳುವೆನೆಂಬ ಭಯ

                                        -ವಂದು - Made using Quotes Creator App, Post Maker App
5 likes 1 comments
Vanditha
Quote by Vanditha - ತೋಟದಲ್ಲಿ ಎಲೆಗಳ‌ ನಡುವೆ ಅಡಗಿ ಕುಳಿತ ಮಲ್ಲಿಗೆಯೊಂದು ಮೆಲ್ಲಗೆ ನುಡಿಯಿತು ನನ್ನ ಈ ಪಯಣ ದೇವಾಲಯದ ದೇವರ ಮುಡಿಗೋ ಅಥವಾ ಮಸಣದಲ್ಲಿರುವ ಗೋರಿಯ ಮೇಲೋ ನಾ ತಿಳಿಯನು ಆದರೆ ನಾನು ಸುವಾಸನೆ ಬೀರುವುದನ್ನು ಎಂದಿಗೂ ಬಿಡೆನು.. ಹಾಗೆಯೇ ಮನುಷ್ಯನ ಜೀವನದಲ್ಲಿ ಏನೇ ಕಷ್ಟ ಎದುರಾದರೂ ಎಲ್ಲವನ್ನು ಎದುರಿಸಿ ಸದಾ ನಗುನಗುತ ಇರಬೇಕು ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿಯಿದೆ.
                                         

-ವಂದು - Made using Quotes Creator App, Post Maker App
4 likes 0 comments