ಸಮನ್ವಿ profile
ಸಮನ್ವಿ
61 4 0
Posts Followers Following
ಸಮನ್ವಿ
Quote by ಸಮನ್ವಿ - ಚಂದಿರನಂತೆ ನೀನಿರಲು 
ಹುಣಿಮ್ಮೆಯಂತೆ ನಾ ನಲಿವೆ 
ತಾರೆಗಳಂತೆ ನೀ ನಗಲು 
ಮುಗಿಲಂತೆ ನಾ ಉಲಿವೆ 
ಮಳೆಯಾಗಿ ನೀ ಸುರಿಯೇ 
ಇಳೆಯಂತೆ ಕಾದಿರುವೆ 

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ನಿನ್ನೊಡನೆ ನಾ ನಡೆವ ಪ್ರತಿ ಹೆಜ್ಜೆಯೂ 
ಗಮ್ಯ ಸೇರದಿದ್ದರೂ 
ನನ್ನೊಡಲಲ್ಲಿ ಅಡಗಿರುವ ನಿನ್ನೆಡೆಯ 
ಪ್ರೀತಿ ಎಂದೋ ಗಮ್ಯ ತಲುಪಿದೆ 

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ನಿನಗಾಗಿ ಬರೆದ ಕವಿತೆಯ ಸಾಲಲ್ಲಿ
ನಿನ್ನನೇ ಅರಸುವಂತಿದೆ 
ನಿನಗಾಗಿ ಮುಡಿಪಿಟ್ಟ ಒಲವಲ್ಲಿ 
ನಿನ್ನನ್ನೇ ಬಂಧಿಸಿದಂತಿದೆ 
ನಿನ್ನೊಡಾನಟಕ್ಕಾಗಿ ಹಂಬಲಿಸಿ 
ನನ್ನನ್ನೇ ನಾನೇ ಮರೆತಾಗಿದೆ
ನಿನ್ನೊಲವಲ್ಲಿ ಮಿಂದೆಳುವ 
ಗಳಿಗೆಗಾಗಿ ಜೀವ ಕಾಯುತ್ತಿದೆ 
ನೀ ಬಂದು ಈ ಪರಿತಪನೆಯ 
ಪರಿಹರಿಸಬಾರದೆ!!!

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ನೀ ಈಗಷ್ಟೇ ಬೀರಿದ ಮಲ್ಲಿಗೆಯೋ 
ಭುವಿಗಿಳಿದ ಮೊದಲ ಮಳೆ ಹನಿಯೋ
ಆಗಸದ ಚಂದ್ರನ ತುಣುಕೋ 
ನವಿಲ ನಾಟ್ಯದ ಸೊಬಗೋ 
ಹಕ್ಕಿಗಳ ಚಿಲಿಪಿಲಿ ಕಲರವವೋ 
ಮನದ ಮಾತುಗಳ ರಾಯಭಾರಿಯೋ 
ಅಥವಾ ಇದೆಲ್ಲವೂ ಕಲೆತ ಸುಂದರ
ಕಲಾಕೃತಿಯ ಪ್ರತಿರೂಪವೋ!!!!

ಸಮನ್ವಿ - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - ಆ ಭಾನು ಈ ಭೂಮಿ 
ಎಲ್ಲೆಲ್ಲೂ ನೀ ನನ್ನಲ್ಲೂ ನೀ
ಈ ಜೀವ ಆ ಭಾವ 
ಮರೆಯಾಗೋವರೆಗೂ
ನನ್ನ ಉಸಿರಲ್ಲೂ ನೀ 
ನೀ ಇರದೆ ನಾನು
ಮಳೆ ಕಾಣದ ಭಾನು 
ಆ ಭಾನು ಈ ಭುವಿಯ ಕಲೆತಂತೆ 
ನಾ ನಿನ್ನ ಬೆರೆವಂತ ಮನಸಾಗಿದೆ!!! 

ಸಮನ್ವಿ - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನಿನ್ನ ನೆನಪ ಪುಳಕವೇ 
ಸಿಹಿ ತಿಂಡಿಯ ಸವಿದಂತೆ!
ಹೊಸ ವಸ್ತು ಪಡೆದಂತೆ!
ಹೂ ಅರಳುವುದ ನೋಡಿದಂತೆ!
ಸಮುದ್ರ ತೀರದಲ್ಲಿ ತಿರುಗಿದಂತೆ !
ಆ ಭಾನ ಚಂದಿರನ ಕೈಯಲ್ಲಿ ಇಡಿದಂತೆ!
ಹೃದಯಕ್ಕೆ ಹೃದಯದ ಭಾಷೆ ಅರಿವಾದಂತೆ!

ಸಮನ್ವಿ - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಕಲ್ಪನೆಯ ಕನಸಲ್ಲಿ
ಹುಡುಕಾಟ ನಿನಗಿಲ್ಲಿ 
ಕಣ್ಣೊಳಗೆ ನೀ ಅವಿತಿದ್ದರೂ 
ಕಣ್ಮುಂದೆ ಕಾಣಲಾರೆ !
ಮನದೊಳಗೆ ನೀ ಅಡಗಿದ್ದರೂ 
ಒಡನಾಡಿಯಾಗಿ ಇರಲಾರೆ !
ಕಲ್ಪನೆಯಾಗಿಯೇ ಉಳಿವೆಯೋ 
ಕನಸಾಗಿ ಕಾಡುವೆಯೋ ನಾ ಅರಿಯೇ!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ -  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - "Until you start believing, you will not be able to find the path that leads you to the right or wrong road."

Samanvi - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - ಒಲವೇ ನನ್ನೊಲವೇ ನೀ ನನ್ನೊಟ್ಟಿಗಿರಲು 
ಈ ಜಗವನ್ನೇ ನಾ ಮರೆತಂತಿದೆ!
ನಿನ್ನ ಪ್ರೀತಿ ನಿನ್ನ ಸಹನೆ ಕಂಡಂಥ ಕ್ಷಣವೇ
ನನ್ನಲ್ಲೇ ನಾ ಕಳೆದಂತಿದೆ!
ನೀ ದೂರ ಇರಲು ಹಗಲೆಲ್ಲ ಇರುಳು 
ಒಂದೊಮ್ಮೆ ಆ ಸೂರ್ಯ ನೀನಾಗಿ ನಗಬಾರದೆ!
ಈ ಜೀವ ನಿನ್ನಲ್ಲೇ ಉಸಿರಾಡುವಾಗ
ಹೂವಂತೆ ಎಂದು ಜೊತೆಗಿರಬಾರದೆ!!!

ಸಮನ್ವಿ  - Made using Quotes Creator App, Post Maker App
0 likes 0 comments

Explore more quotes

ಸಮನ್ವಿ
Quote by ಸಮನ್ವಿ - ಮಾತು ಮಾತಲಿ ಮರಳು ಮಾಡುವ 
ಮಂದಿಯ ನಡುವೆ
ಮನದ ಮಾತಿಗೆ 
ಮರುಗುವ ಮನವುಂಟೆ ?
ಮನದ ಮಾತನು 
ಅರಿವ ಅರಿವುಂಟೆ ?
ಮರಳು ಮಾತಿಗೆ ಮರುಳಾಗುವುದೇ
ಹೊರತು ಮನದ ಮಾತಿಗೆ 
ಪ್ರತಿಸ್ಪಂದಿಸುವ ಪ್ರಕ್ರಿಯೆ 
ಪರಿಪಾಠದಲ್ಲಿಲ್ಲ!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ -  - Made using Quotes Creator App, Post Maker App
3 likes 2 comments
ಸಮನ್ವಿ
Quote by ಸಮನ್ವಿ -  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - "My life should align with how I dreamt it, not according to the wishes or choices of others."

Samanvi - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - "Unless you like things or people, nothing will be listened to by us, regardless of whether the content is good or bad."

Samanvi  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನ ನಗುವಲ್ಲಿ ನಿನ್ನ ಒಲವಿದೆ!
ನಿನ್ನ ನಗುವಲ್ಲಿ ನನ್ನ ಉಸಿರಿದೆ !
ಉಸಿರು ಉಸಿರಲು ನಿನದೇ ನೆನಪಿದೆ!
ನೆನಪ ಮರೆಯಲಿ ನೋವು ಅಡಗಿದೆ!
ನೋವ ನೆನೆದು ಜೀವ ಅಳಿಸಲೋ ?
ನೋವಿನೊಟ್ಟಿಗೆ ಜೀವ ಸವೆಸಲೋ ?
ತಿಳಿಯದಾಗಿದೆ!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಯಾರು ಯಾರ ಜೀವನದಲ್ಲೂ ಶಾಶ್ವತ ಅಲ್ಲ ನಿಜವೇ 
ಆದರೆ ಅವರ ನೆನಪು ಮತ್ತು ಅವರಿಂದ ಕಲಿತ
ಒಳ್ಳೆಯ ವಿಷಯಗಳು ನಮ್ಮ ಮುಂದಿನ ಜೀವನಕ್ಕೆ
ಸ್ಪೂರ್ತಿ ಅದಾಗಲೇ ಅವರು ನಮ್ಮೊಡನಿದ್ದು 
ಹೋದದ್ದಕ್ಕೂ ಒಂದು ಸಾರ್ಥಕತೆ!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಭಾವನೆ ಎಂಬುದು ಒಬ್ಬರಲ್ಲಿ ಇದ್ದರೆ ಸಾಲದು ಇಬ್ಬರಲ್ಲೂ ಇದ್ದರೇನೆ ಯಾವುದೇ ಸಂಬಂಧ ಚೆನ್ನಾಗಿರೋದು!!!
 ಅದು ಬಿಟ್ಟು ಒಬ್ಬರೇ ಯಾವಾಗ್ಲೂ ಸೋತರೆ ತುಂಬಾ ಸೋತವರು ಒಂದು ದಿನ ಕಣ್ಮರೆ ಆದರೂ ಆಶ್ಚರ್ಯ ಇರಲ್ಲ....

ಸಮನ್ವಿ - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - Unexpected outcomes in expected situations can cause significant disappointment, whereas finding unexpected joy in unforeseen circumstances can bring happiness and inspire us to lead a fulfilling life!!!

Samanvi - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - Expectations in a relationship alone will not sustain it in the long run; however, clarity about these expectations may contribute to its longevity.

Samanvi - Made using Quotes Creator App, Post Maker App
0 likes 0 comments

Explore more quotes

ಸಮನ್ವಿ
Quote by ಸಮನ್ವಿ - ಬೊಗಸೆಯಲ್ಲಿ ಹಿಡಿದಿಟ್ಟ ನೀರಾದೆ ಏಕೆ !!
ಆಗಸದಿ ಮರೆಯಾದ ಚಂದ್ರಮನಾದೆ ಏಕೆ!!!
ಕಾರಿರುಳಲಿ ಕಾಡುವ ನೆರಳಾದೆ ಏಕೆ !!!
ಈ ಕನಸ ಹೊತ್ತಿಗೆಯ ಮುನ್ನುಡಿಯಾದೆ ಏಕೆ !!
ಈ ಕೊನೆ ಮೊದಲಿಲ್ಲದ ಹುಚ್ಚು ಕಲ್ಪನೆಯಲ್ಲಿ 
ಕೊನೆವರೆಗೂ ಕಾಣ ಸಿಗದ ಚಿತ್ರವಾಗಿಯೇ 
ಉಳಿದು ಹೋದೆ ಏಕೆ!!!!

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ನನ್ನೆದೆಯ ಬಾಂದಳದಿ ನೀನಿಟ್ಟ ರಂಗೋಲಿ 
ಅಚ್ಚಳಿಯದೆ ಉಳಿದಿದೆ!
ನನ್ನೊಲವ ಹೂ ಮಾಲೆ ಅಣಿ ಆಗಿ
ನಿನ್ನ ಬರುವಿಕೆಗಾಗಿ ಕಾದಿದೆ !
ನಿನ್ನ ಕೊರಳ ಕೂಗಿಗೆ ಮರುನುಡಿಯಲು
ಇಲ್ಲೊಂದು ವೀಣೆ ಪರಿತಪಿಸಿದೆ !
ನಿಜವ ನುಡಿ ನೀ ಬರುವೆಯೋ 
ಅಥವಾ ಬಂದಂತೆ ನಟಿಸಿ 
ಬಹುದೂರ ಸಾಗಿ ಹೋಗುವೆಯೋ 

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನೀ ಜೊತೆಗಿರಲು ಮನದ ಹಕ್ಕಿ
ಗರಿಗೆದರಿ ಹಾರಾಡುತಲಿ
ತನ್ನಿಷ್ಟದ ದನಿಯ ಸೊಬಗಿಗೆ ಬೆರಗಾಗಿ 
ಅದೇ ಗುಂಗಲ್ಲಿ ದಿನ ಕ್ಷಣದಂತೆ ಕಳೆವ
ಈ ಪ್ರೀತಿಯ ಪರಿಯೆಂತು !
ಜಗವ ಮರೆಸುವ ಈ ಅಪೂರ್ವ
ಕ್ಷಣಗಳನ್ನು ಅಂಗೈಯಲ್ಲಿ 
ಬಚ್ಚಿಡುವ ಆಸೆ ನನ್ನದು!!!

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಆಯಸ್ಸು ಇಲ್ಲದ ಸಂಬಂಧದಲ್ಲಿ 
ಅದಕ್ಕಾಗಿ ಏನೆಲ್ಲಾ ಮಾಡಿದರು
ಪ್ರಯೋಜನವಿರದು!!
ಆಯಸ್ಸು ಇರುವ ಸಂಬಂಧದಲ್ಲಿ 
ಅದನ್ನು ಅರ್ಥೈಸಿಕೊಳ್ಳುವ
 ಪ್ರಯತ್ನವೇ ಇಲ್ಲದಿದ್ದರೂ 
ಉಪಯೋಗವಿರದು!??

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಪ್ರಶ್ನೆಗೆ ಪ್ರಶ್ನೆ ಉತ್ತರವಲ್ಲ,
ಉತ್ತರವಿಲ್ಲದ ಪ್ರಶ್ನೆಯೇ ಇಲ್ಲ,
ಪ್ರತಿ ಪ್ರಶ್ನೆಯ ಹಿನ್ನೆಲೆಯಲ್ಲಿ 
ಉತ್ತರದ ಹುಡುಕಾಟದಲ್ಲಿ 
ಪ್ರಶ್ನೆಯೇ ಉತ್ತರವಾಗುವುದೋ
ಉತ್ತರವೇ ಪ್ರಶ್ನೆಯ ರೂಪ 
ತಾಳುವುದೋ?

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥವೇ ಶಾಪ !
ಕೆಟ್ಟದ್ದರ ಮಧ್ಯೆ ಒಳ್ಳೆತನವೇ ಶಾಪ!
ಅಪನಂಬಿಕೆ ಇರುವೆಡೆಯಲ್ಲಿ ನಂಬಿಕೆಯೇ ಶಾಪ !
ಉದಾಸೀನದ ನಡುವೆ ಕಾಳಜಿಯೇ ಶಾಪ!
ಅಸಡ್ಡೆಯ ನಡುವೆ ಪ್ರೀತಿಯೇ ಶಾಪ!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನೊಳಗೆಲ್ಲ ನಿನ್ನದೇ ಮೋಡಿ 
ಕಣ್ಣೆವೆಯೆಲ್ಲ ನಿನ್ನನೇ ನೋಡಿ
ಅನುರಾಗ ಮನದಲಿ ಮೂಡಿ 
ನೆನಪೆಂಬ ಬುತ್ತಿಯು ಕಾಡಿ 
ನನ್ನೀ ಹೃದಯದ ಭಾಷೆ ನಿನ್ನ
ತಲುಪುವುದೆಂತು!!!
ಪ್ರೀತಿಯ ದೋಣಿ ತೀರ 
ಸೇರುವುದೆಂತು!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಮನದ ಪತ್ರಿಕೆಯಲ್ಲಿ 
ಪ್ರಕಟಗೊಂಡ ಪ್ರತಿ ಪುಟದಲ್ಲೂ 
ನಿನ್ನದೇ ಛಾಪಿದೆ ಆದರೂ 
ನಿನ್ನೊಡನೆ ಆಡಲು
ಮಾತುಗಳೇ ಬರಿದಾದ ಆಗಿದೆ 
ಮೌನ ಮನೆ ಮಾಡಿ ನಿಂತಿದೆ 
ನೀ ಹೇಳು ಕಾರಣವೇನು
ಈ ಮೌನ ನೀನಿತ್ತ ಸಂದೇಶವೇ 
ಅಥವಾ ಮೌನವೇ ಮಾತಾಗಿ 
ಕಣ್ಣುಗಳ ಭಾಷೆಗೆ ಮುನ್ನುಡಿಯೇ!!!!

ಸಮನ್ವಿ  - Made using Quotes Creator App, Post Maker App
4 likes 0 comments
ಸಮನ್ವಿ
Quote by ಸಮನ್ವಿ - null - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಪ್ರತಿಯೊಬ್ಬರಿಂದಲೂ 
ಪ್ರತಿಯೊಂದರಿಂದಲೂ 
ಏನಾದರೂ 
ಹೊಸ ಅನುಭವದ ಪಾಠ 
ಕಲಿಯಬೇಕೆ ಹೊರತು 
ಇದು ಏಕೆ ಹೀಗೆ 
ಎಂಬ ಪ್ರಶ್ನೆಯ ಜಾಡು 
ಇಡಿದು ಅದರ ಹಿಂದೆಯೇ 
ಅಲೆಯಬಾರದು!
ಅಲೆದಷ್ಟು ಮನ ದಣಿವುದೇ ಹೊರತು
ಪ್ರಶ್ನೆಗೆ ಉತ್ತರ ದೊರಕದು
ಹೊಸ ಬದಲಾವಣೆಯ 
ಬಗ್ಗೆ ಗಮನ ನೀಡಲಾಗದು!!!

ಸಮನ್ವಿ  - Made using Quotes Creator App, Post Maker App
0 likes 0 comments

Explore more quotes

ಸಮನ್ವಿ
Quote by ಸಮನ್ವಿ - Learn new things from every passing cloud in life.
Think in a way that views challenges as opportunities to teach you lessons and make you strong, rather than bringing yourself down by believing you are the only one facing problems.

Samanvi  - Made using Quotes Creator App, Post Maker App
3 likes 0 comments
ಸಮನ್ವಿ
Quote by ಸಮನ್ವಿ - ಅಪರೂಪದ ಗೆಳತಿ
ಅನುರಾಗದ ಒಡತಿ
ನೀ ಬಂದು ಮನವ ತಣಿಸಿ
ಮಿಂಚಿನ ಕಣ್ಣೋಟ ಹರಿಸಿ 
ನಾಚಿ ನೀರ ಝರಿಯಾಗಿ ಹರಿದು
ನಿನ್ನ ಹನಿಯ ಅಪ್ಪುಗೆಯ ಮುದವ 
ನೀಡುವುದ ಹೊರತು
ಹುಲು ಮಾನವರಲ್ಲಿ ನಡುಕವ ತಂದು
ಭೋರ್ಗರೆದು ಅವರನ್ನು 
ನಿನ್ನೋಡಲ ತಣಿಸಲು 
ಹೊತ್ತೊಯ್ಯುವುದು ನಿನಗೆ ತರವೇ???

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಆಡುವ ಮಾತಿನ ಪರಿ 
ಮೆದುಳು, ಹೃದಯ ಮತ್ತು
ಮಾತನಾಡುವ ಬಾಯಿ 
ಮೂರರಲ್ಲೂ ಸಾಮ್ಯತೆ 
ಕಾಯ್ದುಕೊಳ್ಳುವುದು ಉತ್ತಮ !
ಹೃದಯದ ಭಾಷೆ ಬೇರೆ
ಮೆದುಳಿನ ವೈಖರಿ ಬೇರೆ
ಆಡುವ ಮಾತು ಆಟ ಆಗಿಬಿಟ್ಟರೆ
ಕೇಳುವ ಕಿವಿಗಳು
ಕಣ್ಣೀರಿಟ್ಟರು ಅದು ಮಾತನಾಡಿದವರ
ಹೃದಯ ತಟ್ಟದು...

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನೊಳಗೆ ನಾ ಮೌನಿ 
ನೀ ಎದುರು ಬಂದಾಗ !
ನನ್ನೊಳಗೆ ನಾ ಧ್ಯಾನಿ 
ನಿನ್ನೊಲವು ಕಂಡಾಗ !
ನೀನಿರದ ಘಳಿಗೆಯಲ್ಲಿ
ನಿನ್ನ ನೆನಪೇ ನನಗೆ ಉಸಿರಾಟವಿಲ್ಲಿ !
ನೀನಿರದ ಕನಸಲ್ಲಿ
ನಿನ್ನ ಹುಡುಕಾಟವೇ ನನ್ನ ಕಲ್ಪನೆಯಲ್ಲಿ!!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಪ್ರಶ್ನೆಯ ಉತ್ತರದ ಹುಡುಕಾಟದಲ್ಲಿ 
ನನಗೆ ಸಿಕ್ಕ ಉತ್ತರ ನೀನು !
ನಿನ್ನ ಆಗಮನ ನನ್ನ ಪ್ರಶ್ನೆಗೆ ಉತ್ತರವಾಗುವುದೋ
ಅಥವಾ ನಿನ್ನ ನಿರ್ಗಮನ ಮತ್ತೊಂದು 
ಪ್ರಶ್ನೆಯ ತದ್ದೊಡ್ಡುವುದೋ ನಾ ಅರಿಯೇ???
ಒಂದು ಪ್ರಶ್ನೆಗೆ ಉತ್ತರವಾದ ನೀನು
ಮತ್ತೊಂದು ಪ್ರಶ್ನೆಯ ಸೃಷ್ಟಿಸದಿರು ಎಂಬುದಷ್ಟೇ 
ನನ್ನೀ ಮನವಿ.... 

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಹೇಳದೆ ಮಾಡುವುದಕ್ಕೂ 
ಮಾಡದೇ ಹೇಳುವುದಕ್ಕೂ
ಬಹಳ ವ್ಯತ್ಯಾಸ ಉಂಟು!!!!
ಹೇಳದೆ ಮಾಡಿದರೆ ದೊರಕುವ ಸಾರ್ಥಕತೆಗೂ
ಮಾಡದೇ ಹೇಳುವಾಗ ದೊರಕುವ ನಿರಾರ್ಥಕತೆಗೂ 
ಇರುವಷ್ಟು ವ್ಯತ್ಯಾಸ!!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನೊಲವ ಕವಿತೆ ನೀನು
ಕವಿ ಮನದೊಳಗಿನ ಅರ್ಥ ನೀನು
ಸಾಲೊಳಗಿನ ಪದ ಪುಂಜ ನೀನು
ಆ ಸಾಲಿನ ಅರ್ಥವ ಗೋಜಲು ಗೊಳಿಸಿ
ನಿನ್ನಿಷ್ಟದಂತೆ ಸಾಗದಿರು ನೀನು.!!!!

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಯಾರಲ್ಲೂ ಅತಿಯಾದ ನಂಬಿಕೆ ಸಲ್ಲದು 
ನಂಬಿ ತದ ನಂತರ ಪರಿತಪಿಸುವುದಕ್ಕಿಂತ 
ನಂಬದೇ ಬಂದಂತೆ ಸ್ವೀಕರಿಸುವುದು ಸೂಕ್ತ.... 

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಒಳ್ಳೆ ಜೀವನದ ಅರ್ಥ ತಂದೆ ತಾಯಿಯೊಂದಿಗೆ ಇರುವುದಾ?
ಒಡಹುಟ್ಟಿದವರೊಂದಿಗೆ ಇರುವುದಾ?
ಜೀವನಕ್ಕೆ ಸಂಗಾತಿ ಇರುವುದಾ?
ಮಕ್ಕಳು ಇರುವುದಾ?
ಸ್ನೇಹಿತರು ಇರುವುದಾ?
 ಹಣ ಆಸ್ತಿ ಇರುವುದಾ???  
ಮೇಲಿನ ಎಲ್ಲದರೊಂದಿಗೆ ನೆಮ್ಮದಿ ಇರಲೇಬೇಕು..
ಜನಸಾಮಾನ್ಯರಿಗೆ ಎಲ್ಲವೂ ಒಂದಿಗೆ ದೊರಕದು 
ದೊರಕದ ಹೊರತು ಬದುಕು ಅಪೂರ್ಣ..
ಜ್ಞಾನಿಗಳಿಗೆ ಎಲ್ಲವೂ ದೊರಕಿದರೂ 
ಜೀವನ ನಶ್ವರ.....

  ಸಮನ್ವಿ - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಮಾಡುವ ಯುದ್ಧವನ್ನೆಲ್ಲ ಗೆಲ್ಲಬೇಕೆಂದೇನಿಲ್ಲ ಕೆಲವೊಮ್ಮೆ ಗೆಲ್ಲುವ  ಹುಮ್ಮಸಿನ್ನಲ್ಲಿರುವವರನ್ನು ನೋಡಿ ಅದೊಂದು ಕುಹಕ ನಗೆ ಕೊಟ್ಟರು ಸಾಕು ಯುದ್ಧ ಗೆದ್ದಂತೆ ಲೆಕ್ಕ.

ಸಮನ್ವಿ  - Made using Quotes Creator App, Post Maker App
2 likes 0 comments

Explore more quotes

ಸಮನ್ವಿ
Quote by ಸಮನ್ವಿ - ಯಾರು ಯಾರನ್ನು ಬದಲಾಯಿಸಲು 
ಆಗದು,
ಒಮ್ಮೊಮ್ಮೆ ನಮ್ಮದೇ ಹೃದಯ ನಮ್ಮ ಮಾತೇ ಕೇಳದಿರುವಾಗ .... 

ಸಮನ್ವಿ  - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - ನಿನಗೆ ನನ್ನ ಅವಶ್ಯಕತೆ ಮುಗಿದ ಮೇಲೆ
ನಾನೆಷ್ಟೇ  ಕಾತರಿಸಿ ಕನವರಿಸಿದರು 
ನೀ ತಿರುಗಿ ಬರಲಾರೆ!!!!!
ನನಗೆ ನಿನ್ನ ಉಪಸ್ಥಿತಿ ಇಲ್ಲದ ಮೇಲೆ
ನೀನೆಷ್ಟೇ ಅಲ್ಲಗಳೆದು ದೂರವಾದರು 
ನಾ ನಿನ್ನ ಮರೆಯಲಾರೆ!!!!

ಸಮನ್ವಿ  - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - I wouldn't wish to trouble anybody 
I wouldn't be a passing cloud in anyone's life 
all I wanted is who makes me happy 
when I am in trouble 
who can put step along with me 
towards the clouds....

samanvi  - Made using Quotes Creator App, Post Maker App
3 likes 0 comments
ಸಮನ್ವಿ
Quote by ಸಮನ್ವಿ - ಭಾವನೆಗಳ ತೋರದ ಮಾತ್ರಕ್ಕೆ 
ಭಾವನೆಗಳೇ ಇಲ್ಲವೆಂದೇನಿಲ್ಲ!!
ಈ ಭಾವನರಹಿತ ಪ್ರಪಂಚದಲ್ಲಿ 
ಅದಕ್ಕೆ ಬೆಲೆ ಇಲ್ಲವೆಂದರಿತು ಸಹ
ಆದ ತೋರಿ ನಗೆಪಾಟಲಾಗೋ 
ದುಸ್ಥಿತಿಯ ಅವಶ್ಯಕತೆ ಇಲ್ಲವೆಂದು!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಹೇ ಹನಿಯೇ ತಂಪು ಸುರಿದು
ಇಳೆಯ ಮೊಗದಿ ನಗುವ ತರಿಸು
ಮನದ ಅಂಗಳದಿ ಪ್ರೀತಿ ಚೆಲ್ಲಿ
ನನ್ನೀ ಮೊಗದ ನಗುವ ಉಳಿಸು
ನನ್ನ ಮನದ ಕವಿತೆಯನ್ನು 
ಅದರ ಜೋಡಿ ಮನಕೆ ತಿಳಿಸು 
ನಮ್ಮೀ ಒಲವು ತೀರ ಸೇರಿ
ಅಲೆಗಳ ಒಡನಾಡಿಯಾಗುವಂತೆ ಹರಸು....

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನೀ ಮನದ ಮೊದಲ ಬಯಕೆ
ನಾ ನಿನ್ನ ಅರಸಿ ಕುಳಿತೆ!
ನೀ ಮನದ ಹೊರಗೆ ನಿಂತು
ಇಣುಕಿ ನೋಡಿ ಹೋದೆ ಏಕೆ?
ನನ್ನ ಹೃದಯದ ಬಡಿತವೆಲ್ಲ 
ನಿನ್ನ ನೆನಪ ಸುಳಿಯಲಿ ಸಿಲುಕಿದೆ!
ಕಳೆದೆ ಹೋದೆ, ಕಳೆದೆ ಹೋದೆ
ನಿನಗಾಗಿ ಕಾದು,
ನೀ ಎಂದು ಬರುವೆ ತಿಳಿಸು, 
ಅಂದೆ ನಾ ಅರಿವೆ
ನಿನ್ನೊಳಗಿನ ಮನಸ ಮಾತು...

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ವಸ್ತು ತಮ್ಮ ಬಳಿ ಇರುವವರೆಗೂ ಯಾರಿಗೂ
 ಅದರ ಬೆಲೆ ಅರ್ಥ ಆಗಲ್ಲಾ!!!
ಅದಕ್ಕೆ ಸತ್ತವರಿಗಾಗಿ ಅಳೋಕೆ ಜನಕ್ಕೆ 
ಸಮಯ ಇರುತ್ತೇ 
ಬದುಕಿರುವವರಿಗಾಗಿ ಅಲ್ಲಾ!!
ಜನರ ಸಮಯ ಪಡಿಯೋಕೆ ಅಂತ 
ಸಾಯೋಕೆ ಆಗಲ್ಲಾ!!
ಯಾರ ಗೊಡವೆ ಇಲ್ಲದೆ 
ಬದುಕಲು ಸಹ ಆಗಲ್ಲಾ!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - Being alone would be very difficult task
for a person like me....
unfortunately, when it is chosen me 
I don't have an option to hide from it....

samanvi  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಅರಿತು ನಡೆವ ಮನವಿದ್ದಲ್ಲಿ ಹೇಳಿದ್ದೆಲ್ಲವೂ ಸರಿಯೇ 
ಅರಿಯದ ಮನವಿದ್ದಲ್ಲಿ ಸರಿಯೇ ಹೇಳಿದರು ಅದು ತಪ್ಪೇ!!!!
ಇದುವೇ ಜೀವನ ಸತ್ಯ....  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ನೀ ಹೇಳದ ಮಾತ್ರಕ್ಕೆ ನಿನ್ನಲ್ಲಿ ಭಾವನೆಗಳೇ ಇಲ್ಲವೆಂದೇನಿಲ್ಲ 
ನೀ ಅದನ್ನು ಅಡಗಿಸಿಡುವ ಪ್ರಯತ್ನದಲ್ಲಿ ತೊಡಗಿರುವೆ ಎಂದು ನಾ ಬಲ್ಲೆ...  
ಎಂದಾದರೂ ಒಂದು ದಿನ ನಿನ್ನ ಭಾವ ಲಹರಿ ಹರಿಯಲೇಬೇಕು ಅಂದು ನಾ ನಿನ್ನೊಡನೆ ಇರಲಾರೆನೆಂದು ನೀ ಬಲ್ಲೆಯಾ?  - Made using Quotes Creator App, Post Maker App
1 likes 3 comments

Explore more quotes