sugamma patil
60 1 3
Posts Followers Following
sugamma patil
Quote by sugamma patil -     *ವ್ಯರ್ಥ*

ಎಷ್ಟು ದೊಡ್ಡ ಮನೆ ಕಟ್ಟಿಸಿಕೊಂಡರೇನು 
ಒಟ್ಟಾಗಿ ಬಾಳುವ ಮನಸ್ಸು ಮುರಿದ ಮೇಲೆ 
ಎಷ್ಟು ಜ್ಞಾನವನ್ನು ಸಂಪಾದಿಸಿದರೇನು 
ತಿಳಿ ಹೇಳುವ ಸೌಜನ್ಯವಿಲ್ಲದಿದ್ದ ಮೇಲೆ 
ಎಷ್ಟು ಪ್ರೀತಿ ಹೃದಯದಲ್ಲಿ ತುಂಬಿದ್ದರೇನು 
ವ್ಯಕ್ತಪಡಿಸದೆ ದಿನಗಳು ಉರುಳಿ ಹೋದ ಮೇಲೆ
ಎಲ್ಲವೂ ವ್ಯರ್ಥವಲ್ಲವೇ ಬದುಕಿದ್ದಾಗ ದೊರೆಯದಿದ್ದ ಮೇಲೆ

✍️ ಸೂಗಮ್ಮ ಪಾಟೀಲ್
      ಉತ್ನಾಳ್/ವಿಜಯಪುರ

 - Made using Quotes Creator App, Post Maker App
0 likes 0 comments
sugamma patil
Quote by sugamma patil - ಪ್ರತ್ಯುತ್ತರ 

ಪ್ರತಿಯೊಂದು ವಿಷಯಕ್ಕೂ ಪ್ರತ್ಯುತ್ತರ ನೀಡಲೇಬೇಕಿಲ್ಲ 
ಅರ್ಥೈಸಿಕೊಳ್ಳುವ ಮನಸ್ಸಿದ್ದರೆ ಮೌನವು ಕೂಡಾ ಕೆಲವೊಮ್ಮೆ ಉತ್ತರವಾಗಿರುತ್ತದೆ 

✍️ ಸೂಗಮ್ಮ ಪಾಟೀಲ್  - Made using Quotes Creator App, Post Maker App
0 likes 0 comments
sugamma patil
Quote by sugamma patil - 

*ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ*

ಸಂಗೊಳ್ಳಿಯಲ್ಲಿ ಜನಿಸಿದ ವೀರ 
ಕೆಂಚವ್ವ ಭರಮಪ್ಪನವರ ಕುವರ 
ಸ್ವತಂತ್ರಕ್ಕಾಗಿ ಹೋರಾಡಿದ ಧೀರ 
ಬ್ರಿಟಿಷರನ್ನು ಎದುರಿಸಿದ ಶೂರ 

ಕಿತ್ತೂರು ಚೆನ್ನಮ್ಮಳ ಬಲಗೈ ಬಂಟ
ಆಂಗ್ಲರ ವಿರುದ್ಧ ಸತತ ಹೋರಾಟ 
ದೇಶಕ್ಕಾಗಿ ಸರ್ವಸ್ವವನ್ನು ಅರ್ಪಿಸಿದವರು 
ಸಾವಿನಲ್ಲೂ ಸಾರ್ಥಕತೆಯ ಪಡೆದವರು 

ಕುತಂತ್ರ ಬುದ್ಧಿಯ ಬ್ರಿಟಿಷರ ತಂತ್ರ
ಬಂಧನವಾಯಿತು ಅಮಾಯಕ ಜೀವ
ನೇಣುಗಂಬನೇರುವಾಗಲು ಕೊನೆಯಾಸೆ ಒಂದೇ
ಸಂಗೊಳ್ಳಿ ರಾಯಣ್ಣನ ಕೊನೆಯಾಸೆ ಒಂದೇ

ಮರಳಿ ಹುಟ್ಟಬೇಕು ತಾ ತನ್ನ ತಾಯಿನಾಡಿನಲ್ಲಿ
ಹುಟ್ಟಡಗಿಸಬೇಕು ಪರದೇಶಿಗರನ್ನು ತಾನು ಇಲ್ಲೇ
ಭಾರತದಿಂದಲೇ ಆಂಗ್ಲರನ್ನು ಒದ್ದು ಓಡಿಸಬೇಕು
ಭಾರತ ದೇಶದಿ ತ್ರಿವರ್ಣ ಧ್ವಜವ ಹಾರಾಡಿಸಬೇಕು

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್



 - Made using Quotes Creator App, Post Maker App
0 likes 0 comments
sugamma patil
Quote by sugamma patil - ಕ್ಷಣ 

ಕ್ಷಣ ಕ್ಷಣಕ್ಕೂ ಒಂದೊಂದು ತಿರುವು ಸಿಗುವುದು ಬಾಳಿನಲ್ಲಿಂದು
ಪ್ರತಿಕ್ಷಣವು ಸೋಲು ಅವಮಾನವಾಯಿತೆಂದು
ತಕ್ಷಣಕ್ಕೆ ತೆಗೆದುಕೊಳ್ಳಬೇಡಿ ಅವಸರದ ನಿರ್ಧಾರವನ್ನು 
ಕೆಟ್ಟ ದಿನಗಳು ಕಳೆದಷ್ಟು ಒಳ್ಳೆಯ ದಿನಗಳ ಆಯಸ್ಸು ಹೆಚ್ಚಿರುತ್ತೆ ಎಂಬ ಆತ್ಮ ವಿಶ್ವಾಸದಿಂದ
ಸಂತೋಷವಾಗಿ ಬದುಕುವುದನ್ನು ಕಲಿಯೋಣ
ನಾಳೇ ಊಹಿಸಲಾಗದ ಯಶಸ್ಸು ತಂದುಕೊಡಬಹುದು

ಸೂಗಮ್ಮ ಪಾಟೀಲ್ - Made using Quotes Creator App, Post Maker App
0 likes 0 comments
sugamma patil
Quote by sugamma patil - ಸಿಂಧೂರ 

ಹೆಣ್ಣಿನ ಹಣಿಯಾಗ ಸಿಂಧೂರವೇ ಸಿಂಗಾರ
ಮುತ್ತೈದೆ ಕೊರಳಾಗ ಕರಿಮಣಿಯೇ ಬಂಗಾರ
ನೆರಳಂಗ ಪತಿಯಿರಲು ಜೀವನ ಬಲು ಸುಂದರ
ಪ್ರತಿ ಕನಸುಗಳು ಆಗುವವು ನನಸುಗಳ ಭಂಡಾರ

✍️ ಸೂಗಮ್ಮ ಪಾಟೀಲ್
      ಉತ್ನಾಳ್
 - Made using Quotes Creator App, Post Maker App
0 likes 0 comments
sugamma patil
Quote by sugamma patil - **ಮುಂಗಾರು ಮಳೆ**

ಮುಂಗಾರು ಮಳೆಯ ಹನಿಗಳು 
ಭುವಿಯ ಮುತ್ತಿಕ್ಕುವಾಗೆಲ್ಲ ಅನಿಸುತಿತ್ತು ಗೆಳತಿ 
ನಿನ್ನ ಕೈ ಹಿಡಿದು ನಿನ್ನೊಟ್ಟಿಗೆ ಹೆಜ್ಜೆ ಹಾಕಬೇಕೆಂದು
ಆದರೆ ನನ್ನ ಕನಸು ನನಸಾಗಲೇ ಇಲ್ಲ

ಮಳೆಯ ಹನಿಗಳಲ್ಲಿ ನೆನೆದು ಶೀತವಾದರೆ 
ಎಂಬ ನಿನ್ನ ಕಾಳಜಿಗೆ ಮನಸೋತು ನನ್ನ ಕನಸು ಗಾಳಿಯಲ್ಲಿ ತೂರಿಬಿಟ್ಟೆ 
ನನ್ನ ಕನಸು ಕನಸಾಗಿಯೇ ಉಳಿದುಕೊಂಡಿತು ನಿಜವಾಗಿ ನನಸಾಗಲೇ ಇಲ್ಲ ಗೆಳತಿ 

ಸಾಗರದ ದಡದಲ್ಲಿ ಕುಳಿತು ತಂಗಾಳಿ ತಂಪಿನಲ್ಲಿ 
ಚಿಲಿಪಿಲಿ ಗುಟ್ಟುವ ಹಕ್ಕಿಗಳ ಇಂಪಾದ ಸಪ್ತಸ್ವರಗಳಲ್ಲಿ ಸೋಂಪಾಗಿ ನಿನ್ನ ಮಡಿಲಲಿ ಹಾಯಾಗಿ 
ನಿದ್ರಿಸಬೇಕೆಂದು ಬಯಸಿದ್ದೆ  
ನಿನ್ನ ಮಡಿಲಿಗೆ ಭಾರವಾಗಬಾರದೆಂದು ಬಯಕೆಯನ್ನೇ ತೊರೆದುಬಿಟ್ಟೆ ಗೆಳತಿ

ಎದೆಗಪ್ಪಿಕೊಂಡು ಮನದೆಲ್ಲ ಭಾವಗಳನು 
ನಿನ್ನೊಟ್ಟಿಗೆ ಹಂಚಿಕೊಳ್ಳಬೇಕೆಂದು 
ಸುಸಮಯಕ್ಕಾಗಿ ಕಾಯುತ್ತಿದ್ದೆ
ಸಮಯ ಸಿಗಲೇ ಇಲ್ಲ ಕಾಲ ಉರುಳಿತು ಹಾದಿ ಸವೆಯಿತು ಈಗ ಅನ್ನಿಸುತ್ತಿದೆ 
ಸಮಯ ಎಷ್ಟು ಬೇಗ ಕಳೆಯಿತೆಂದು 
ಬಚ್ಚಿಟ್ಟ ಭಾವನೆಗಳನೆಲ್ಲ ಬಚ್ಚಿಟ್ಟುಕೊಂಡೆ ಹೋಗುವುದಕ್ಕಿಂತ ಬಿಚ್ಚಿಟ್ಟು ಒಮ್ಮೆ ಹೇಳುವೆ ಗೆಳತಿ
ಕೇಳಿ ಬಿಡು ನೀನಿಂದು 
ಈ ಜೀವಕ್ಕೆ ನೀನೇ ಉಸಿರು ನಿನ್ನಿಂದಲೇ
ಇರುವುದು ನನ್ನಯ ಬಾಳು ಸದಾ ಹಚ್ಚ ಹಸಿರು 

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್ 










 

 - Made using Quotes Creator App, Post Maker App
0 likes 0 comments
sugamma patil
Quote by sugamma patil -   ಕಾಣಿಕೆ
ಸಿಕ್ಕಿಲ್ಲಾ ಈ ವರ್ಷದ ವಾರ್ಷಿಕೋತ್ಸವಕ್ಕೆ  
ಪತಿಯವರಿಂದ ಪ್ರೀತಿಯ ನೆನಪಿನ ಕಾಣಿಕೆ
ಯಾಕೆಂದರೆ ನನ್ನದಿತ್ತು ದುಬಾರಿ ಆಯ್ಕೆ
ಗಗನಕ್ಕೆ ಏರಿದೆ ಬಂಗಾರದ ಬೇಡಿಕೆ
ಇಳಿಯುವರೆಗೂ ಈಡೇರುವುದಿಲ್ಲ ನನ್ನ ಬಯಕೆ 

✍️ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್         - Made using Quotes Creator App, Post Maker App
0 likes 0 comments
sugamma patil
Quote by sugamma patil - ನಮ್ಮಿಂದ ಏನು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತವರಿಗೆ ಆತ್ಮವಿಶ್ವಾಸ ತುಂಬದ ಜನ
ಏನಾದರೂ ಸಾಧಿಸಬೇಕೆಂದು ಪ್ರಯತ್ನಶೀಲರಾದಾಗ ನಮ್ಮಿಂದ ಆ ಕಾರ್ಯ ಅಸಾಧ್ಯ ಎಂದು ಅಪಹಾಸ್ಯ ಮಾಡಿ ನಕ್ಕು ನಮಗಿರುವ ಆತ್ಮವಿಶ್ವಾಸವನ್ನು ಕುಗ್ಗಿಸುವರು
ಅವರನ್ನು ಎಂದು ದ್ವೇಷಿಸದಿರಿ ನಕಾರಾತ್ಮಕ ಮಾತುಗಳಿಂದಲೇ ತಮಗರಿವಿಲ್ಲದಂತೆ ನಮ್ಮ ಏಳಿಗೆಗೆ ಕಾರಣರಾಗುತ್ತಾರೆ 

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್  - Made using Quotes Creator App, Post Maker App
0 likes 0 comments
sugamma patil
Quote by sugamma patil - ನಮ್ಮವ್ವ

ಸಾಲಿ ಮೆಟ್ಟಿಲು ಹತ್ತಲಾರದಕಿ
ಓದು ಬರಹ ಬರಲಾರದಕಿ  
ಆದ್ರೂ ಯಾರಿಗೇನು ಕಮ್ಮಿಯಿಲ್ಲ ನಮ್ಮವ್ವ
ಸಾವಿರ  ಮಂದಿಗೇ ವಿದ್ಯೆ ಕಲಿಸಂಗ ಕಲೀಲಿ
ನನ್ನ ಮಗಳಂತ ಸಾಲಿಗಿ ಕಳಿಸಿದಾಕಿ ನಮ್ಮವ್ವ

ಕೈ ಹಿಡಿದು ಬರಸಾಕ ಬರ್ತಿರಲಿಲ್ಲ
ಪುಸ್ತಕ ಹಿಡಿದು ಓದಸಾಕ ಆಗ್ತಿರಲಿಲ್ಲ
ಆದ್ರೂ ಯಾರಿಗೇನು ಕಮ್ಮಿಯಿಲ್ಲ ನಮ್ಮವ್ವ
ಒಂದು ಕೆಲಸ ಹಚ್ಚದೆ  ನಿನಗ ತಿಳಿದಷ್ಟು ಓದು
ನನ್ನಂಗ ನಿನ್ನ ಬಾಳು ಆಗುದು ಬ್ಯಾಡ ಅಂದಾಕಿ ನಮ್ಮವ್ವ

ಬಂಧು ಬಾಂಧವರ ಮಾತು ಕೇಳಾದಕಿ
ಮಂದಿ ಮಾತು ತಲಿಗಿ ಹಾಕೋಲಾರದಾಕಿ
ಆದ್ರೂ ಯಾರಿಗೇನು ಕಮ್ಮಿಯಿಲ್ಲ ನಮ್ಮವ್ವ
ಹೆಣ್ಮಕ್ಕಳಿಗ್ಯಾಕ ಬೇಕು ಇಷ್ಟೊಂದು ಓದು ಅಂದ್ರ
ವಿದ್ಯೆ ಹೆಣ್ಣು ಮಕ್ಕಳಿಗೆ ಅಗತ್ಯವಾಗಿ ಬೇಕು ಚೆನ್ನಾಗಿ ಓದು ಅಂದಾಕಿ ನಮ್ಮವ್ವ

ಊರು ಬಿಟ್ಟ ಊರಿನ ಕಾಲೇಜಿಗೆ ಕಳಿಸಿದಾಕಿ 
ಮರೆಯಾಗ ನಿಂತು ಕಣ್ಣೀರು ಒರೆಸಿಕೊಂಡಾಕಿ
ಆದ್ರೂ ಯಾರಿಗೇನು ಕಮ್ಮಿಯಿಲ್ಲ ನಮ್ಮವ್ವ
ನನ್ನ ನೆನಪಾದಾಗೆಲ್ಲ ಸಜ್ಜಿ ರೊಟ್ಟಿ ಚೂಡಾ
ಮಾಡಕೊಂಡು ಅಣ್ಣಗ ಜೋಡ ಕರಕೊಂಡು
ನನ್ನ ನೋಡಾಕ ಓಡೋಡಿ ಬರಾಕಿ ನಮ್ಮವ್ವ

ಹೊತ್ತು ಹೊತ್ತಿಗೂ ತುತ್ತು ಮಾಡಿ ತಿನಿಸಾಕಿ
ಪರೀಕ್ಷೆ ಫಲಿತಾಂಶಕ್ಕಾಗಿ ಹಗಲು ರಾತ್ರಿ ಕಾಯಾಕಿ
ಆದ್ರೂ ಯಾರಿಗೇನು ಕಮ್ಮಿಯಿಲ್ಲ ನಮ್ಮವ್ವ
ಫಸ್ಟ್ ರಾಂಕ್ ಬಂದವಳೇ ನನ್ನ ಮಗಳು ಅಂತಾ
 ಊರು ತುಂಬಾ ಪೇಡಾ ಕೊಟ್ಟು ಹೇಳಕೊಂಡು ಬರಾಕಿ ನಮ್ಮವ್ವ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್










 - Made using Quotes Creator App, Post Maker App
0 likes 0 comments
sugamma patil
Quote by sugamma patil - ಎಲ್ಲಾ ಅಡೆತಡೆಗಳನ್ನು ದಾಟಿ 
ಎಲ್ಲಾ ಕಾಲೆಳೆಯುವರನ್ನು ಎದುರಿಸಿ 
ಎಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಅನ್ನುವುದು ಮುಖ್ಯವಲ್ಲ 
ಆಗಸದೆತ್ತರಕ್ಕೆ ಬೆಳೆದ ಮೇಲೂ 
ಮೊದಲಿನ ಸರಳತೆ ಉಳಿಸಿಕೊಳ್ಳುವುದು ಮುಖ್ಯ 

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್  - Made using Quotes Creator App, Post Maker App
0 likes 0 comments

Explore more quotes

sugamma patil
Quote by sugamma patil - ತಲೆಯಲ್ಲಿ ಅನುಮಾನ ತುಂಬಿದ್ದಾಗ 
ಪ್ರತಿಯೊಬ್ಬರ ಮಾತು ನಂಬಿಕೆಗೆ  ವಿರುದ್ಧವಾಗಿಯೇ ಇರುತ್ತದೆ 
ನಿಷ್ಕಲ್ಮಶ ಮನವಿದ್ದಾಗ ಮಾತ್ರ ಪ್ರತಿಯೊಬ್ಬರ ಮಾತು ಸತ್ಯವೇ ಆಗಿರುತ್ತದೆ 

✍️ ಸೂಗಮ್ಮ ಪಾಟೀಲ್ 
       ಉತ್ನಾಳ್  - Made using Quotes Creator App, Post Maker App
0 likes 0 comments
sugamma patil
Quote by sugamma patil - ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಶಾಶ್ವತವಾಗಿ ಕಡಿದುಕೊಳ್ಳುವುದೇ ಮೇಲು
ಒತ್ತಾಯ ಪೂರ್ವಕವಾಗಿ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ
ಪ್ರಯೋಜನಕ್ಕೆ ಪ್ರಾಮುಖ್ಯತೆ ಕೊಡುವವರಿಗೆ ಪ್ರೀತಿಯ ಸಂಬಂಧ ಅವಶ್ಯಕತೆ ತೀರಿದ ಬಳಿಕ
ಅನಗತ್ಯವಾಗಿರುತ್ತದೆ


✍️ ಸೂಗಮ್ಮ ಪಾಟೀಲ್
 - Made using Quotes Creator App, Post Maker App
0 likes 0 comments
sugamma patil
Quote by sugamma patil - ಒಂದು ಹೆಣ್ಣು ತನ್ನ  ತವರು ಮನೆ ಮರೆತು ಬಿಟ್ಟಿದ್ದಾಳೆ ಅಂದ್ರೆ
ಗಂಡನ ಮನೇಲಿ ಯಾವದಕ್ಕೂ ಕೊರತೆ ಇಲ್ಲ ಕಷ್ಟ ಇಲ್ಲ ಅಂತಾ ಅರ್ಥ ಅಲ್ಲ
ಕಷ್ಟವನ್ನು ಹೇಳಿಕೊಂಡರೆ ತವರಲ್ಲಿ ಬೆಲೆ ಸಿಗುವುದಿಲ್ಲವೆಂಬ ವಾಸ್ತವ ಸತ್ಯವನ್ನು ಅರಿತಿದ್ದಾಳಷ್ಟೆ
ಅದಕ್ಕೆ ತನ್ನ ಇಡೀ ಜೀವನ ನೋವಲ್ಲಿದ್ದರು ನುಂಗಿಕೊಂಡು ನಗುತ್ತಲ್ಲೇ ಬಾಳುತ್ತಾಳೆ


✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್  - Made using Quotes Creator App, Post Maker App
1 likes 0 comments
sugamma patil
Quote by sugamma patil - ಎಲ್ಲರೂ ನಮ್ಮವರೆ ಎಂಬ ಭಾವನೆ ನಮ್ಮೆಲ್ಲರ ಮನಸಲ್ಲಿದ್ದರೆ 
ಪ್ರೀತಿಗೆ ಕೊರತೆ ಇರುವುದಿಲ್ಲ 
ಎಲ್ಲರೂ ನಮ್ಮವರೆ ಎಂದು ನಾಟಕೀಯ ಪ್ರೀತಿ ತೋರಿಸಿದರೆ 
ಆ ಪ್ರೀತಿಗೆ ಆಯಸ್ಸೇ ಇರುವುದಿಲ್ಲ 

✍️ ಸೂಗಮ್ಮ ಡಿ ಪಾಟೀಲ್  - Made using Quotes Creator App, Post Maker App
0 likes 0 comments
sugamma patil
Quote by sugamma patil - 

ಸಹನೆ 

ಎಲ್ಲವನ್ನು  ಸಹಿಸಿಕೊಂಡು ಹೊಂದಿಕೊಂಡು ಬಾಳುತ್ತಾರೆ ಎಂದರೆ 
ಯಾರನ್ನು ಎದುರಿಸುವ ಧೈರ್ಯವಿಲ್ಲ ಎಂದರ್ಥವಲ್ಲ 
ಆಡಿದ ಮಾತಿಗಿಂತ ಹೃದಯದ ಪ್ರೀತಿಗೇ ಹೆಚ್ಚಿನ ಮಹತ್ವ ಕೊಡುತ್ತಾರೆ ಎಂದರ್ಥ 
ಪ್ರೀತಿಗೆ ಮಹತ್ವ ಕೊಡುವವರನ್ನು ಪ್ರೀತಿಸೋಣ

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್  - Made using Quotes Creator App, Post Maker App
1 likes 0 comments
sugamma patil
Quote by sugamma patil - ಶಾಪ -ಪಾಪ 

ಇತ್ತೀಚಿಗೆ ಪತಿಯವರಿಗೆ 
ಹಾಕುತ್ತಿಲ್ಲ ನಾನು ಶಾಪ 
ಯಾಕೆಂದರೆ 
ಕೇಳಿದ್ದೆಲ್ಲ ಇಲ್ಲ ಎನ್ನದೆ 
ಕೊಡಿಸುತ್ತಿದ್ದಾರೆ 
ನನ್ನವರು ಪಾಪ 

✍️ ಸೂಗಮ್ಮ ಡಿ ಪಾಟೀಲ್ 
      ಪಾಟೀಲ್  - Made using Quotes Creator App, Post Maker App
0 likes 0 comments
sugamma patil
Quote by sugamma patil - ಮುಖವಾಡದ ಮುಖಗಳನ್ನೇ ಜನರು ಹೆಚ್ಚಾಗಿ ನಂಬುವಾಗ
ಅಸಲಿ ಮುಖಗಳಿಗೆ ಬೆಲೆ ಕಮ್ಮಿಯಾಗಿಯೇ ಸಿಗುತ್ತದೆ 
ನಿಜಾ 
ಆದರೆ ಅದು ಕೇವಲ ಮುಖವಾಡ ಕಳಚುವರೆಗೆ ಮಾತ್ರ ಎಂಬುದನ್ನು ನಾವು ಮರೆಯಬಾರದು
ನೈಜತೆಯಿಂದ ಬದುಕೋಣ

✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್  - Made using Quotes Creator App, Post Maker App
1 likes 0 comments
sugamma patil
Quote by sugamma patil - *ಕಾಲ*

ಕಾಲವನ್ನು ನಿಂದಿಸುತ್ತ ಕಾಲ ಕಳೆಯುವದಲ್ಲ ಜೀವನ
ಅಮಾಯಕರನ್ನು ಹಂಗಿಸುತ ಬಾಳುವುದಲ್ಲ ಜೀವನ
ಜಗದಲ್ಲಿ ನಿಂದಿಸುವ ಮನಸುಗಳನ್ನು ವಂದಿಸುತ್ತ
ಕಾಲಕ್ಕೆ ತಕ್ಕಂತೆ ಎಲ್ಲರೂಳಗೊಂದಾಗಿರುವುದೆ ಜೀವನ

*ಕಾರ್ಯ*

ಮಾಡಬೇಕು ಯಾವುದೇ ಕಾರ್ಯ ದೈವ ಮೆಚ್ಚುವಂತೆ
ಬಾಳಬೇಕು ಜಗದಲ್ಲಿ ನಾವು ಶತ್ರುಗಳು ಮೆಚ್ಚುವಂತೆ
ಸಾಗಬೇಕು ಪಯಣ ಸೋಲು ಗೆಲುವುಗಳನ್ನು ಮೆಟ್ಟಿ ಹಂಚಬೇಕು ಪ್ರೀತಿ ಕೊನೆವರೆಗೂ ಉಳಿಯುವಂತೆ ಗಟ್ಟಿ

✍️ ಸೂಗಮ್ಮ ಡಿ ಪಾಟೀಲ್
        ಉತ್ನಾಳ್
 - Made using Quotes Creator App, Post Maker App
1 likes 0 comments
sugamma patil
Quote by sugamma patil - ಸಮಯ 

ಸಮಯ ಸರಿದು ಹೋಗುತ್ತದೆ 
ಇರುವಾಗಲೇ ಎಲ್ಲವನ್ನು ಅನುಭವಿಸಿ 
ಸಂಯಮ ಸಂಸ್ಕಾರ ತಿಳಿಸುತ್ತದೆ 
ಸಹನೆಯಿಂದ ವರ್ತಿಸಿ 

✍️ ಸೂಗಮ್ಮ ಡಿ ಪಾಟೀಲ್ 
      ಉತ್ನಾಳ್ /ವಿಜಯಪುರ 
 - Made using Quotes Creator App, Post Maker App
0 likes 0 comments
sugamma patil
Quote by sugamma patil - ಅಜ್ಞಾನಿಯ ಜೊತೆಗೆ ವಾದಿಸಿ ವ್ಯರ್ಥ ಸಮಯ ಕಳೆಯುವದಕ್ಕಿಂತ ಮೌನವಾಗಿರುವುದು ಉತ್ತಮ 
ಜ್ಞಾನಿಯ ಜೊತೆಗೆ ಚರ್ಚಿಸಿ ಜೀವನದಲ್ಲಿ ಅಲ್ಪವಾದರೂ ಸಾಧಿಸುವುದು ಅತ್ಯುತ್ತಮ 

ಸೂಗಮ್ಮ ಡಿ ಪಾಟೀಲ್ 
ಉತ್ನಾಳ್  - Made using Quotes Creator App, Post Maker App
0 likes 0 comments

Explore more quotes

sugamma patil
Quote by sugamma patil - *ಅನುಮತಿ*

ನಾ ಗ್ರಹಿಸಬೇಕಿತ್ತು ಮದುವೆ ಮುನ್ನವೇ
ಅವಳ ಗುಣ ಅವಗುಣಗಳನ್ನು ಅಂದು
ನಿರಾಕರಿಸಲು ಇತ್ತು ಅವಕಾಶವಂದು
ತಿಳಿಯದೆ ಒಪ್ಪಿಬಿಟ್ಟೆ ಸುಮ್ಮನೆ ಅವಳನ್ನು

ರೂಪೇಷು ಲಕ್ಷ್ಮಿ ನನ್ನ ಸಂಗಾತಿಯವಳು
ಕ್ಷಮಯಾ ಧರಿತ್ರಿ ಎಂದು ಆಗಲಿಲ್ಲವಳು
ಚಾಮುಂಡೇಶ್ವರಿಯ ವರ ಪ್ರಸಾದದ ಸತಿ
ನನಗವಳೇ ಎಂದಿಗೂ ಮುದ್ದು ಶ್ರೀಮತಿ

ಅನುಮತಿ ಸಿಗದು ನನ್ನ ಇಷ್ಟಗಳಿಗೆಂದೂ 
ಮಾತಾಡಲು  ಅವಳ ಸಮ್ಮತಿ ಬೇಕಿಂದು
ಮಾಡಿದ ತಪ್ಪಿಗೆ ನಾನೇ ನಿಗ್ರಹಿಸಿಕೊಂಡೆ
ನನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಇಂದು

ಸೂಗಮ್ಮ ಡಿ ಪಾಟೀಲ್
ಉತ್ನಾಳ್ 



 - Made using Quotes Creator App, Post Maker App
0 likes 0 comments
sugamma patil
Quote by sugamma patil - *ಸಂಕ್ರಾಂತಿ*

ಹೊಸ ವರುಷದ ಮೊದಲ ಹಬ್ಬವಿದು ಸಂಕ್ರಾಂತಿ 
ಹುಟ್ಟದಿರಲ್ಲೆಂದು ನಮ್ಮ ಮನೆ ಮನಗಳಲ್ಲಿ ಕ್ರಾಂತಿ 
ಸೂರ್ಯನ ಆರಾಧನೆಯ ಪುಣ್ಯದ ಕಾಲವಿಂದು 
ಸುಳಿಯದಿರಲಿ ಕೆಟ್ಟ ವಿಚಾರಗಳು ತಲೆಯಲ್ಲೆಂದು 

ಗಂಗೆಯಲ್ಲಿ ಮೀಯುವರು ದೈವವನು ಸ್ಮರಿಸುವರು
ಪಾಪ ಪರಿಹಾರವಾಯಿತೆಂದು ಸಂತೃಪ್ತಿ ಹೊಂದುವರು 
ಹೊಸ ಬಟ್ಟೆ ಧರಿಸುವರು ಹೊಸತನವ ಬಯಸುವರು 
ಹಳೆಯ ತಪ್ಪುಗಳನ್ನೆಲ್ಲಾ ತಪ್ಪದೆಯೇ ಮರೆಯುವರು

ದಾನ ಧರ್ಮವ ಮಾಡುತ ದೇವರನು ಬೇಡುವರು 
ಅಧರ್ಮದ ಹಾದಿಯ ಮರುದಿನವೇ ತುಳಿಯುವರು
ನೆನೆದೆಳ್ಳು ಕುಟ್ಟಿ ಪುಡಿಮಾಡಿ  ಮೈಗೆಲ್ಲ  ಬಳಿಯುವರು 
ಪಾಪದ ಫಲವಿಂದು ದೂರಾಯಿತೆಂದು ನಲಿಯುವರು

ಎಳ್ಳು ಬೆಲ್ಲವ ತಿಂದು ಒಳ್ಳೆ ಒಳ್ಳೆಯ ಮಾತಾಡೆನ್ನುವರು 
ಒಳ್ಳೇ ಮಾತಾಡುತ್ತಲೇ ಕತ್ತು ಹಿಸುಕುವ ಹೀನ ಜನರು 
ಭಕ್ಷ್ಯ ಭೋಜನ ಮಾಡಿ ಅಕ್ಕರೆಯಿಂದ ಉಣಿಸುವರು
ಭಿಕ್ಷೆಗೆಂದು ಬಂದವರ ನೋಡಿ ನಡೆ ಮುಂದೆನ್ನುವರು 

ವರುಷ ಉರುಳಿ ವರುಷ ಬಂದರು ಬದಲಾಗಿಲ್ಲ ಜನ
ನಾನು ನನ್ನದೆನ್ನುವ ಅಹಂಕಾರವೇ ತುಂಬಿದ ಮನ 
ಮೀಸಲಾಗದಿರಲಿ ಒಳ್ಳೆತನ ಬರೀ ಹಬ್ಬದ ದಿನದಂದು 
ನಾವಳಿದರು ಇರಲಿ ನಮ್ಮೆಸರು ಜನರ ಎದೆಯಲ್ಲೆಂದು 

ಸೂಗಮ್ಮ ಡಿ ಪಾಟೀಲ್ 
ಉತ್ನಾಳ್ /ವಿಜಯಪುರ 




  - Made using Quotes Creator App, Post Maker App
0 likes 0 comments
sugamma Almel
Quote by sugamma Almel - *ನಾನು ಬಲ್ಬ್ ನೀನು ಸ್ವಿಚ್ಚು ಒಲವೇ ನಮ್ಮ ಬೆಳಕು*

ನಾನು ಬಲ್ಬ್ ನೀನು ಸ್ವಿಚ್ಚು ಒಲವೇ ನಮ್ಮ ಬೆಳಕು
ನಿನ್ನಿಂದಲೇ ನಾನು ನನ್ನಿಂದಲೇ ನೀನು ಬರದಿರಲಿ ಎಂದಿಗೂ ನಮ್ಮಿಬ್ಬರಲ್ಲಿ ಒಡಕು

ನಾನು ಹೃದಯ ನೀನು ಮಿಡಿತ ಪ್ರೀತಿಯೇ ನಮ್ಮ ಉಸಿರು
ನಾನು ದೇಹವು ನೀನು ಜೀವವು ಪ್ರೇಮವೇ ಅದರ ಹೆಸರು

ನಾನು ಕಣ್ಣು ನೀನು ದೃಷ್ಟಿ  ತುಂಬಿರಲಿ ಅದರ ತುಂಬಾ ಭರವಸೆಯ ಕನಸು ಕಂಗಳಲ್ಲಿ
ನಾನು ಭಾವನೆ ನೀನು ಕಲ್ಪನೆ ಅದರ ಸಮ್ಮಿಲನದಲಿ ಮೂಡಲಿ ಹೊಸದೊಂದು ಕಾವ್ಯ ಹೃದಯದಲ್ಲಿ

ನನ್ನಿಂದಲೇ ಎಲ್ಲಾ ನಿನ್ನಿಂದಲೇನೂ ಇಲ್ಲವೆಂಬ 
ಜಂಭವೇ ನಿನಗೆ ಜಾಸ್ತಿಯು
ನಾನಿಲ್ಲದಿದ್ದರೆ ನಿನ್ನ ಜೀವನದ ತುಂಬಾ ಬರೀ ಕತ್ತಲೆ ಎಂಬುದು ನನಗೆಂದೂ ಖಾತ್ರಿಯು

ನಾನು ನಿನಗಾಗಿ  ನೀನು ನನಗಾಗಿ ನಗುವೇ ನಮ್ಮಯ ಆಸ್ತಿಯು
ನಾನು ನಿನ್ನೊಂದಿಗೆ ನೀನು ನನ್ನೊಂದಿಗೆ ನಂಬಿಕೆಯೇ ನಮ್ಮೊಲವ ಶಕ್ತಿಯು

✍️ ಸೂಗಮ್ಮ ಡಿ ಪಾಟೀಲ್
       ಉತ್ನಾಳ್  - Made using Quotes Creator App, Post Maker App
0 likes 0 comments
sugamma Almel
Quote by sugamma Almel - 
ಕುರುಡು ಪ್ರೀತಿ 

ನಿನ್ನ ಹಿಡಿ ಪ್ರೀತಿಗಾಗಿ ಹಂಬಲಿಸಿ ಬೇಸತ್ತು
ನೊಂದಿದ್ದೆ ನಾನು
ನನ್ನನ್ನು ನನ್ನವರನ್ನು ಪ್ರೀತಿಸಲು ಸಮಯವೇ
ಕೊಡಲಿಲ್ಲ ನಾನು 
ಯಾಕೆಂದರೆ ಕುರುಡು ಪ್ರೀತಿಯಲ್ಲಿ
ಮುಳುಗಿ ಬಿಟ್ಟಿದ್ದೆ ನಾನು


ನಿನ್ನ ಕನಸುಗಳ ನನಸಿಗಾಗಿಯೇ ಹಗಲಿರುಳು
ಶ್ರಮಿಸಿದ್ದೆ ನಾನು
ನನ್ನ ಕನಸುಗಳನ್ನೆಲ್ಲ ಕೈ ಬಿಟ್ಟು 
ನಿನಗಾಗಿಯೇ ಜೀವಿಸುತ್ತಿದ್ದೆ ನಾನು 
ನನ್ನ ಕನಸುಗಳ್ಯಾವುದು ದೊಡ್ಡದೆನಿಸಲಿಲ್ಲ ನನಗೆ
ಯಾಕೆಂದರೆ ಕುರುಡು ಪ್ರೀತಿಯ ಬಲೆಯಲ್ಲಿ 
ಸಿಕ್ಕಿ ಬಿದ್ದಿದ್ದೆ ನಾನು

ನಿನ್ನ ಕಾರ್ಯ ಸಾಧನೆಗಾಗಿ ಕೈಜೋಡಿಸುತಲಿ ಮೆಟ್ಟಿಲುಗಳಾಗಿ 
ನಿನ್ನ ಯಶಸ್ಸನ್ನು ಬಯಸಿದ್ದೆ ನಾನು
ಯಶಸ್ಸು ಕೀರ್ತಿ ಬಂದ ಕೂಡಲೇ ನನ್ನನ್ನು ತಿರಸ್ಕರಿಸಬಹುದೆಂದು ಊಹಿಸಿರಲಿಲ್ಲ ನಾನು
ಯಾಕೆಂದರೆ ನನ್ನೆಲ್ಲಾ ಯಶಸ್ಸು 
ನಿನ್ನಲ್ಲಿಯೇ ಕಂಡು
ಸಂಭ್ರಮಿಸಿದ್ದೆ ನಾನು

ಸ್ವಾರ್ಥದ ದುರಾಸೆಗೆ ಪ್ರೀತಿಯ ಮುಖವಾಡ
 ಧರಿಸಿ ನನ್ನೊಲವಿಗೆ ಘೋರಿ ಕಟ್ಟಿ ಮೆರೆದೆ ನೀನು
ನಿಸ್ವಾರ್ಥ ಬಾಳು ನಡೆಸಿ ಯಶಸ್ಸಿನ ಮೆಟ್ಟಿಲು ಹತ್ತಿದಾಗಲೂ 
ಅದರ ಹಿಂದಿರುವ ವ್ಯಕ್ತಿ 
ನನ್ನೊಲವಿನ ಗೆಳೆಯ ನೀನೇ ಎಂದು 
ನೆನಪಿಸಿಕೊಂಡು ಹೇಳಿದೆ ನಾನು
ಯಾಕೆಂದರೆ ಈ ಪ್ರೀತಿ ಕುರುಡಲ್ಲವೇನು

✍️ಸೂಗಮ್ಮ ಡಿ ಪಾಟೀಲ್
       ಉತ್ನಾಳ್ 

 - Made using Quotes Creator App, Post Maker App
0 likes 0 comments
sugamma Almel
Quote by sugamma Almel - **ಆ ಕಣ್ಣುಗಳು** 

ಅವಳ ಹೊಳೆಯುವ ಆ ಕಣ್ಣುಗಳೆ
 ಹಾಗೆ ಅದೆಷ್ಟು ಸಲ ನೋಡಿದರು 
ಮತ್ತೆ ಮತ್ತೆ ನೋಡ ಬಯಸುವ ಆತುರ 
ಅವಳು ಅತಿ ಮೌನಿ ಆದರೂ 
ಮಾತಿಗೂ ಮೀರಿದ ಭಾವಗಳು  
ಮಾತನಾಡುತ್ತಿದ್ದವು ಆ ಕಣ್ಣುಗಳಲ್ಲಿ 


ಅವಳು ತುಸು ಹೆಚ್ಚೆ ಆಗಿದ್ದಳು ಮುಂಗೋಪಿ 
ಆದರೂ ತೋರುತ್ತಿರಲಿಲ್ಲ ಆ ಕಂಗಳಲ್ಲಿ ಮುನಿಸು 
ಅವಳದು ಸತ್ಯ ಪ್ರಾಮಾಣಿಕತೆಯ ನೋಟ 
ಮಾಡುವಳು ಸದಾ ಕಣ್ಣಲ್ಲೇ
 ನ್ಯಾಯ ನೀತಿಯ ಪಾಠ


ನಾನೊಬ್ಬ ಹುಚ್ಚು ಪ್ರೇಮಿ 
ಬರೀ ಪ್ರೀತಿ ಪ್ರೇಮದ ನಶೆ ಏರಿಸಿಕೊಂಡವ
ಹಗಲು ರಾತ್ರಿಯೆಲ್ಲಾ ಅವಳ ಆ ಕಣ್ಣುಗಳ
 ಹುಡುಕಾಟದಲ್ಲೇ ಜೀವನ ಸವೆಸಿದವ 
ಆದರೆ ಒಮ್ಮೆಯೂ ನೋಡಲಿಲ್ಲ
 ಅವಳು 
ನನ್ನ ತಿರುಗಿ 
ಯಾಕೆಂದರೆ ಅವಳೊಬ್ಬಳು ಆಗಿದ್ದಳು 
ಹುಡುಗಾಟದ ಹುಡುಗಿ 
ಅವಳದು ಪ್ರತಿದಿನವೂ ಚೆಲ್ಲಾಟದ ನಡಿಗೆ

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್ 

 












 - Made using Quotes Creator App, Post Maker App
0 likes 0 comments
sugamma Almel
Quote by sugamma Almel -        ಗುಬ್ಬಚ್ಚಿಗಳು

ಬೇಸಿಗೆ ಬರಗಾಲದಿ ಬಳಲುತ್ತಿವೆ ಗುಬ್ಬಚ್ಚಿಗಳು
ಹನಿ ನೀರು ಕಾಣದೆ ಪರದಾಡುತ್ತಿರುವ ಹಕ್ಕಿಗಳು
ಮರಿ ಗುಬ್ಬಿಗಳಿಗಾಗಿ ಮನೆಯನರಸಿ ಬರುತಿಹವು
  ಪ್ರತಿ ಮನೆಯ ಮೇಲುಗಡೆ ನೀರು ಕಾಳಿಟ್ಟು ರಕ್ಷಿಸಿ 

ನಮ್ಮ ಹಾಗೇ ಬದುಕಿ ಉಳಿಯಲಿ ಗುಬ್ಬಚ್ಚಿಗಳು
ಮುಂದಿನ ಸಂತತಿಯು ನೋಡಲಿ ಪಕ್ಷಿಗಳನ್ನು
ಗಗನದೆತ್ತರಕ್ಕೆ ಮಹಡಿಯನು ಕಟ್ಟುವ ಭರದಲ್ಲಿ
ಕಡಿಯದಿರಿ ಮನೆ ಮುಂದಿರುವ ಹಸಿರು ಗಿಡವನ್ನು

ಗಟ್ಟಿಯಾದ ಸೂರಿಲ್ಲ ಗುಬ್ಬಿಗಳಿಗೆ ಭುವಿಯಲ್ಲಿ
ಹಸಿರು ಗಿಡಗಳಲ್ಲಿಯೇ ಕಟ್ಟುವವು ಗೂಡನ್ನು
ಹಸಿದಾಗ ತುಸು ಕಾಳು ತಿನ್ನುವವು ಹೊಲದಲ್ಲಿ
ಹೊಡೆದು ಓಡಿಸದಿರಿ ಹಕ್ಕಿಗಳ ಕಾಟವೆಂದು

ಮಳೆ ಬಿಸಿಲು ಚಳಿಯಲ್ಲೂ ಮರವೇ ಆಶ್ರಯತಾಣ
ಹುಡುಕಾಡಿ ತಂದು ತಿನ್ನಿಸಿ ಬೆಳೆಸುವೆವು ಮರಿಗಳನ್ನ
ನೀವು ತಿನ್ನುವದರಲ್ಲಿ ಹಿಡಿ ಅಕ್ಕಿಯಿಟ್ಟು ಪೋಷಿಸಿರಿ 
ಪುಣ್ಯದ ಕೈಗಳಿಂದ ಬೆಳೆಯಲಿ ಗುಬ್ಬಚ್ಚಿ ಸಂತತಿಯು 

ಮಾತು ಬರುವ ಮನುಜರಾಗಿ ಮಾನವೀಯತೆ ತೋರಿ
ಮೂಕ ಖಗಗಳ ವೇದನೆಯನು ಅರಿತು ಕಾಪಾಡಿರಿ 
ಹಸಿರು ಉಳಿಸಿ ಉಸಿರಾಡಿ ಮರ ನೆಟ್ಟು ದೊಡ್ಡವರಾಗಿ
ನೀರಿಟ್ಟು ಗುಬ್ಬಚ್ಚಿ ಸಂತತಿ ಬದುಕಿಸಿ ಪಕ್ಷಿ ರಕ್ಷಕರಾಗಿ

✍️ ಸೂಗಮ್ಮ ಡಿ ಪಾಟೀಲ್
       ಉತ್ನಾಳ್ 













 - Made using Quotes Creator App, Post Maker App
0 likes 0 comments
sugamma Almel
Quote by sugamma Almel - **ಮುಂಗಾರು ಮಳೆ**

ಮುಂಗಾರು ಮಳೆಯ ಹನಿಗಳು 
ಭುವಿಯ ಮುತ್ತಿಕ್ಕುವಾಗೆಲ್ಲ ಅನಿಸುತಿತ್ತು ಗೆಳತಿ 
ನಿನ್ನ ಕೈ ಹಿಡಿದು ನಿನ್ನೊಟ್ಟಿಗೆ ಹೆಜ್ಜೆ ಹಾಕಬೇಕೆಂದು
ಆದರೆ ನನ್ನ ಕನಸು ನನಸಾಗಲೇ ಇಲ್ಲ

ಮಳೆಯ ಹನಿಗಳಲ್ಲಿ ನೆನೆದು ಶೀತವಾದರೆ 
ಎಂಬ ನಿನ್ನ ಕಾಳಜಿಗೆ ಮನಸೋತು 
ನನ್ನ ಕನಸು ಗಾಳಿಯಲ್ಲಿ ತೂರಿಬಿಟ್ಟೆ 
ನನ್ನ ಕನಸು ಕನಸಾಗಿಯೇ ಉಳಿದುಕೊಂಡಿತು
 ನಿಜವಾಗಿ ನನಸಾಗಲೇ ಇಲ್ಲ ಗೆಳತಿ 

ಸಾಗರದ ದಡದಲ್ಲಿ ಕುಳಿತು ತಂಗಾಳಿ ತಂಪಿನಲ್ಲಿ 
ಚಿಲಿಪಿಲಿ ಗುಟ್ಟುವ ಹಕ್ಕಿಗಳ ಇಂಪಾದ ಸಪ್ತಸ್ವರಗಳಲ್ಲಿ 
ಸೋಂಪಾಗಿ ನಿನ್ನ ಮಡಿಲಲಿ ಹಾಯಾಗಿ 
ನಿದ್ರಿಸಬೇಕೆಂದು ಬಯಸಿದ್ದೆ  
ನಿನ್ನ ಮಡಿಲಿಗೆ ಭಾರವಾಗಬಾರದೆಂದು
 ಬಯಕೆಯನ್ನೇ ತೊರೆದುಬಿಟ್ಟೆ ಗೆಳತಿ

ಎದೆಗಪ್ಪಿಕೊಂಡು ಮನದೆಲ್ಲ ಭಾವಗಳನು 
ನಿನ್ನೊಟ್ಟಿಗೆ ಹಂಚಿಕೊಳ್ಳಬೇಕೆಂದು 
ಸುಸಮಯಕ್ಕಾಗಿ ಕಾಯುತ್ತಿದ್ದೆ
ಸಮಯ ಸಿಗಲೇ ಇಲ್ಲ ಕಾಲ ಉರುಳಿತು 
ಹಾದಿ ಸವೆಯಿತು ಈಗ ಅನ್ನಿಸುತ್ತಿದೆ 
ಸಮಯ ಎಷ್ಟು ಬೇಗ ಕಳೆಯಿತೆಂದು 
ಬಚ್ಚಿಟ್ಟ ಭಾವನೆಗಳನೆಲ್ಲ ಬಚ್ಚಿಟ್ಟುಕೊಂಡೆ ಹೋಗುವುದಕ್ಕಿಂತ 
ಬಿಚ್ಚಿಟ್ಟು ಒಮ್ಮೆ ಹೇಳುವೆ ಗೆಳತಿ
ಕೇಳಿ ಬಿಡು ನೀನಿಂದು 
ಈ ಜೀವಕ್ಕೆ ನೀನೇ ಉಸಿರು ನಿನ್ನಿಂದಲೇ
ಇರುವುದು ನನ್ನಯ ಬಾಳು ಸದಾ ಹಚ್ಚ ಹಸಿರು 

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್
 










 

 - Made using Quotes Creator App, Post Maker App
0 likes 0 comments
sugamma Almel
Quote by sugamma Almel - ಅದೃಷ್ಟದಿಂದ ಗಳಿಸಿದ್ದು ನಸೀಬು ಇರುವರೆಗೂ ಮಾತ್ರ ಕೈಹಿಡಿಯುತ್ತದೆ 
ಯೋಗ್ಯತೆಯಿಂದ ಗಳಿಸಿದ್ದು ಜೀವನದ ಕೊನೆವರೆಗೂ ಕೈ ಹಿಡಿಯುತ್ತದೆ 
ಯೋಗ್ಯತೆಯಿಂದ ಗಳಿಸಲು ಪ್ರಯತ್ನಿಸೋಣ

ಸೂಗಮ್ಮ ಪಾಟೀಲ್  - Made using Quotes Creator App, Post Maker App
0 likes 0 comments
sugamma Almel
Quote by sugamma Almel -  ಮಾಡುವ ಕೆಲಸದಿಂದಾಗಲಿ ಗಳಿಸಿದ ಸಂಪತ್ತಿನಿಂದಾಗಲಿ ವ್ಯಕ್ತಿಯ ಘನತೆ ಗೌರವ ಹೆಚ್ಚುವುದಿಲ್ಲ 
ಆಡುವ ಮೌಲ್ಯಯುತ ಮಾತಿನಿಂದ ಮಾತ್ರ ಹೆಚ್ಚುತ್ತದೆ 
ತೂಕದ ಮಾತನಾಡಲು ಪ್ರಯತ್ನಿಸಿ ಘನತೆ ಗೌರವ ಹೆಚ್ಚಿಸಿಕೊಳ್ಳಿ 
ಆಸ್ತಿ, ಅಂತಸ್ತು, ಕೆಲಸದಿಂದಲ್ಲ.....

ಸೂಗಮ್ಮ ಡಿ ಪಾಟೀಲ್ 
ಉತ್ನಾಳ್  - Made using Quotes Creator App, Post Maker App
0 likes 0 comments
sugamma Almel
Quote by sugamma Almel - ಗಜಲ್ 

ಸುಡುವ ದ್ವೇಷದ ಜ್ವಾಲೆಯು ಎದೆಗೆ ಹರಡಲು ತಡೆಯಲಿಲ್ಲ ನೀನು
ಕಾಡುವ ಬಯಕೆಗಳ ಮೆಟ್ಟಿ ಜೀವನವನು
ನಡೆಸಲಿಲ್ಲ ನೀನು

ಅರಳುವ ಮೊಗ್ಗಿಗೂ ನಿರ್ಬಂಧ ಹೇರಲು
ಬಯಸಿದರೆ ಸಾಧ್ಯವೇನು
ಕೆರಳುವ ಸ್ವಭಾವವನು ಬಿಟ್ಟು ಶಾಂತತೆಯ ತೋರಲಿಲ್ಲ ನೀನು

ಮಿಡಿವ ಜೀವಿಯ ಅರಿಯದೆ ದೂರು ನೀಡುತ್ತಲೆ
ಕಾಲ ದೂಡಿದೆಯಲ್ಲವೇ
ಒಡೆದ ಬಾಂಧವ್ಯದಲ್ಲೂ ಕಿಡಿಯ ಆರಿಸುವ ಮನಸು
ಮಾಡಲಿಲ್ಲ ನೀನು

ಮನದ ತುಡಿತವು ತಿಳಿಯದೆ ದುಡುಕಿ ಹೆಜ್ಜೆಯನು
ಹಾಕಿದೆಯಲ್ಲವೇ
ಕನಸಿನಲ್ಲಿ ಕಾಣಿಸಿದ ಪ್ರೇಯಸಿಯ ಬಯಸಿ ಪ್ರೀತಿ
ಪಡೆಯಲಿಲ್ಲ ನೀನು

ನೀತಿ ನಿಯಮಗಳ ಚೌಕಟ್ಟಿನ ಪರದೆಯಲ್ಲಿ ಬೆಳೆದವಳು ಸುಗಮಳಂದು
ಭೀತಿ ತುಂಬಿದ ಹೃದಯದಲ್ಲಿ ಒಲವ ಸುಧೆ
ಹರಿಸಲಿಲ್ಲ ನೀನು

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 
 - Made using Quotes Creator App, Post Maker App
0 likes 0 comments

Explore more quotes

sugamma Almel
Quote by sugamma Almel - ಮಕ್ಕಳ ಬುದ್ಧಿವಂತಿಕೆಯನ್ನು ಅವರು ಗಳಿಸುವ ಅಂಕಗಳಿಂದ ಅಳೆಯಬೇಡಿ 
ಪಡೆದುಕೊಂಡ ಜ್ಞಾನದಿಂದ ಅಳೆಯಿರಿ 
ಗಳಿಸಿದ ಅಂಕಕ್ಕಿಂತಲೂ ಪಡೆದುಕೊಂಡ ಜ್ಞಾನ  ಮಕ್ಕಳ ಬದುಕು ರೂಪಿಸುತ್ತದೆ 

✍️ ಸೂಗಮ್ಮ ಪಾಟೀಲ್  - Made using Quotes Creator App, Post Maker App
0 likes 0 comments
sugamma Almel
Quote by sugamma Almel - ಅಪ್ಪ ನೀವೆಷ್ಟು ಒಳ್ಳೆಯವರು.....

ಹೆಜ್ಜೆ ಹೆಜ್ಜೆಗೂ ವಿಶ್ವಾಸ ತುಂಬಿ ಬೆಳೆಸುವ ತಾಯಿಯ ಪ್ರೀತಿ ಎಲ್ಲರಿಗೂ ಕಾಣಿಸಿತು ಆದರೆ 
ಪ್ರತಿ ಹೆಜ್ಜೆಗೂ ಹೆಗಲು ಕೊಟ್ಟು ನಡೆಸುವ ತಂದೆಯ ವಾತ್ಸಲ್ಯ ಯಾರಿಗೂ ಕಾಣಿಸಲೇ ಇಲ್ಲ 

ಚೆಂದ ಮಾಮನ ತೋರಿಸಿ ಜೋಗುಳ ಹಾಡಿ ತುತ್ತು ಮಾಡಿ ಉಣ್ಣಿಸುವ ತಾಯಿಯ ಮಮತೆ ಎಲ್ಲರಿಗೂ ಹಿಡಿಸಿತು ಆದರೆ 
ಪ್ರತಿ ತುತ್ತಿನಲ್ಲೂ ಇರುವುದು ತಂದೆಯ ಶ್ರಮದ ಫಲ ಎಂಬುದು ಯಾರಿಗೂ ಕಾಣಿಸಲೇ ಇಲ್ಲ 

ಎಡವಿ ಬಿದ್ದಾಗ ಔಷದಿ ಹಚ್ಚಿದ ತಾಯಿಯ ಪ್ರೇಮ ಮನವ ತುಂಬಿತು ಆದರೆ 
ಜೀವನದಲ್ಲಿ ಎಡವಿ ಬೀಳದ ಹಾಗೇ ಬದುಕಲು ಕಲಿಸಿದ ತಂದೆಯ ಆದರ್ಶ ಯಾರಿಗೂ ಕಾಣಿಸಲೇ ಇಲ್ಲ 

ತಪ್ಪು ಮಾಡಿದರು ತಿದ್ದಿ ಅಪ್ಪಿಕೊಳ್ಳುವ ತಾಯಿಯ ದೊಡ್ಡ ಗುಣ ಶ್ರೇಷ್ಠವೆನಿಸಿತು ಆದರೆ 
ತಪ್ಪೇ ಮಾಡದ ಹಾಗೇ ಬಾಳು ನಡೆಸಬೇಕೆಂದು ಬೈದು ಬುದ್ಧಿ ಹೇಳಿದ ತಂದೆಯ ದೊಡ್ಡತನ ಯಾರಿಗೂ ಕಾಣಿಸಲೇ ಇಲ್ಲ 

ತನಗಿರದ ಸುಖ ಸಂತೋಷ ತನ್ನ ಕುಡಿಗಿರಲೆನ್ನುವ ತಾಯಿ ದೇವತೆಯಾದಳು ಆದರೆ 
ಪ್ರಪಂಚದ ಸುಖ ಸಂತೋಷವೆಲ್ಲ ತನ್ನ ಮಗುವಿನ ಕಾಲಡಿಯಿರಲೆಂದು ಹೋರಾಡಿದ ತಂದೆಯ ಪ್ರಯತ್ನ ಯಾರಿಗೂ ಕಾಣಿಸಲೇ ಇಲ್ಲ 

ಅಪ್ಪ ನೀವೆಷ್ಟು ಒಳ್ಳೆಯವರು.......... ಆದರೂ ಬೈದುಕೊಳ್ಳುತ್ತಿದ್ದೆ ಮನದಲ್ಲಿ ಅಮ್ಮನಷ್ಟೇ ಮೃದು ಮನಸ್ಸು ನಿಮಗಿಲ್ಲವಲ್ಲ ಎಂದು ಆದರೆ 
ನೀವೊಬ್ಬ ಒರಟು ಮುಖದ ತಾಯಿ ಹೃದಯ ಹೊಂದಿದ ಸಾಹುಕಾರ ಎಂದು ನಾ ಅರಿತುಕೊಳ್ಳಲೇ ಇಲ್ಲ 

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್ 




 - Made using Quotes Creator App, Post Maker App
0 likes 0 comments
sugamma Almel
Quote by sugamma Almel - ಮನಸ್ಸಿನ ವಿಷಕ್ಕೆ ಮದ್ದೆಲ್ಲಿ

ಮನಸ್ಸಿನ ವಿಷಕ್ಕೆ ಮದ್ದೆಲ್ಲಿ
ಮುಖವಾಡ ತೊಟ್ಟು ಯಾಮಾರಿಸುವಾಗ
ಕರ್ಮ ಫಲದ ಭಯವೆಲ್ಲಿ
ಪಾಪ ಪ್ರಜ್ಞೆ ಮನದಲ್ಲಿ ಕಾಡದಿರುವಾಗ

ಒಳ್ಳೆಯತನಕ್ಕೆ ಬೆಲೆಯೆಲ್ಲಿ
ಸ್ವಾರ್ಥವೇ ಮೈ ತುಂಬಾ ತುಂಬಿರುವಾಗ
ಸತ್ಯಕ್ಕೆ ನೆಮ್ಮದಿಯೆಲ್ಲಿ
ಸುಳ್ಳೇ ಸತ್ಯವೆಂದು ನಂಬುವ ಜನವಿರುವಾಗ

ಅಸೂಯೆಗೆ ಕೊನೆಯೆಲ್ಲಿ
ದ್ವೇಷದ ವಿಷಬೀಜ ಬಿತ್ತುತ್ತಿರುವಾಗ
ಪುಣ್ಯದ ಫಲವೆಲ್ಲಿ
ಪಾಪಾತ್ಮರನ್ನು ಸಲಹುತಿರುವಾಗ

ಹಿಂಸೆಗೆ ಅಂತ್ಯವೆಲ್ಲಿ
ನಯವಾದ ಮಾತಲ್ಲಿ ಇರಿಯುವಾಗ
ಅಹಿಂಸೆಗೆ ಉಳಿವೆಲ್ಲಿ
ಮೋಸದ ಬಲೆಯಲ್ಲಿ ನರಳುವಾಗ

ನಿನ್ನೊಟ್ಟಿಗಿರುವಾಗ ನಿನ್ನದೇ ಗುಣಗಾನ
ಅವರೊಟ್ಟಿಗಿರುವಾಗ ನಿನಗೆ ಅವಮಾನ
ಯಾರು ಹಿತವರಿಲ್ಲ ಬಾಳ ಹಾದಿಯಲ್ಲಿ
ಎಲ್ಲರೂ ಮಹಾನ್ ಕಲಾವಿದರಿಹರಿಲ್ಲಿ 
ವಿಧಿಯಾಡಿಸುವ ಈ ಬಾಳ ನಾಟಕದಲ್ಲಿ

ಅವರಿವರ ಮೋಸದ ಜಾಲಕೆ ಸಿಲುಕದಿರಿ
ವಿಷಜಂತುವಿನ ಸ್ನೇಹವನ್ನು ಬಯಸದಿರಿ
ಸವಿ ಮಾತಿಗೆ ಮನಸೋತು ಮರುಳಾಗದಿರಿ
ಸಿಹಿ ತುತ್ತಿಗೂ ವಿಷ ಬೆರೆಸುವರಿಹರು ಎಚ್ಚರವಾಗಿರಿ


✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 


 - Made using Quotes Creator App, Post Maker App
0 likes 0 comments
sugamma Almel
Quote by sugamma Almel - ವಿಕೃತ ಮನಸ್ಸು

ಸಾಲು ಸಾಲು ಮರಗಳನ್ನು ನೆಡಲಿಲ್ಲ ನಾವು
ಬರೀ ಸಾಲು ಸಾಲು  ಮರಗಳನ್ನು  ಕಡಿದವರು
ಹಸುರೆಲೆಯ ಹಸಿವನೆಂದು ನೀಗಿಸಲಿಲ್ಲ ನಾವು
ನಮ್ಮ ಧನದಾಹದ ಹಸಿವು ನೀಗಿಸಿಕೊಂಡವರು

ಪ್ರಕೃತಿಯ  ಕೊಡುಗೆಗೆ ಋಣಿಯಾಗಿಲ್ಲ ನಾವು
ವಿಕೃತ ಮನದ ಬಯಕೆಯ ಬೆನ್ನನು ಹತ್ತಿದವರು
ಸುಕೃತವಿದು  ಮಾನವ  ಜನ್ಮವೆಂದು ಅರಿಯದೆ
ಸೃಷ್ಟಿಯ ವಿನಾಶದ ಪಾಪ ಕೃತ್ಯಕ್ಕೆ ಕೈ ಹಾಕಿದೆವು

ಅಳಿವಿನಂಚಿನಲ್ಲಿರುವುದಿಂದು ಪ್ರಕೃತಿ ಅಲ್ಲವಿಲ್ಲಿ
ನಾಶ ಮಾಡುತ್ತಿರುವುದು ಯಾರದೋ ಸ್ವತ್ತಲ್ಲವಿಲ್ಲಿ
ನಮ್ಮದೆಯಾದ  ಹಸಿರು ನಮ್ಮದೆಯಾದ  ಉಸಿರು
ನಾವು ಉಳಿಸಿ ಬೆಳೆಸೋಣ ಸದಾ ಜಗದಲ್ಲಿ ಹಸಿರು 

✍️ಸೂಗಮ್ಮ ಡಿ ಪಾಟೀಲ್
    ಉತ್ನಾಳ್ /ವಿಜಯಪುರ - Made using Quotes Creator App, Post Maker App
0 likes 0 comments
sugamma Almel
Quote by sugamma Almel - **ಹಸಿರಿದ್ದರೆ ಉಸಿರು**

ಉರಿಬಿಸಿಲು  ಕಂಡು ಹಿಡಿ  ಶಾಪವಿಟ್ಟೇವು
ಉಸಿರಾಡುವ  ಗಾಳಿಗೆ ಸಂಚಕಾರ ತಂದೇವು
ನೆರಳು ಕೊಡುವ ಮರದ ಕೊರಳನ್ನ ಕತ್ತರಿಸಿದೆವು 
ನೆರಳಲ್ಲಿ ಕೂತು ನರಳಾಡುವ ಸ್ಥಿತಿಗೇ ಮುಟ್ಟಿದೆವು 

ನೆಡಲಿಲ್ಲ ನಾವೆಂದೂ ಒಂದೂ  ಮರವನ್ನು
ಮರೆತಿಲ್ಲ  ಮರದ  ನೆರಳಿಗೆ  ನಿಲ್ಲುವದನ್ನು
ತಪ್ಪಿಸಿಲ್ಲ ಕೊಡಲಿಯ  ಏಟನ್ನೆಂದೂ  ನಾವು
ಕಡಿದದ್ದು ಮರವಲ್ಲ ನಮ್ಮ ಬದುಕನ್ನೇ ನಾವು

ಇನ್ನೂ ಅರಿತಿಲ್ಲ ವಿನಾಶದ ಅಂಚಿನಲ್ಲಿರುವುದನ್ನು
ಅಟ್ಟಹಾಸದಲ್ಲಿ ಕೆಡವಿ ಕಟ್ಟುತಿರುವೆವು ಮನೆಯನ್ನು
ಸುಂದರ ವಿನ್ಯಾಸದ ಬಹುಮಹಡಿ ಕಟ್ಟಡಗಳನ್ನು
ಹೀಗೆ ಸಾಗಿದರೆ ಉಳಿಯುವುದೇ ಪ್ರಕೃತಿ ನಮಗಿನ್ನು 

ಮಾನವನ  ಕ್ರೂರತ್ವಕ್ಕೆ ಕೊನೆಯಿಲ್ಲವಲ್ಲ ಇಲ್ಲಿಂದು 
ಬರಿದು ಮಾಡುತ್ತಿರುವುದು ಹೆತ್ತೊಡಲನ್ನು ಇಂದು 
ಮರೆಯದಿರಿ ಮಣ್ಣಲ್ಲಿ ಮಣ್ಣಾಗುವ ಮುನ್ನವಿಂದು
ಉಳಿಸಿ ಬೆಳೆಸಬೇಕು ನಾವು ನಿತ್ಯವು ಹಸಿರನ್ನಿಂದು

ಸೂಗಮ್ಮ ಡಿ ಪಾಟೀಲ್
ಉತ್ನಾಳ್/ವಿಜಯಪುರ 


 - Made using Quotes Creator App, Post Maker App
0 likes 0 comments
sugamma Almel
Quote by sugamma Almel - " ಹೆಣ್ಣು ಹೊರೆಯಲ್ಲ ವರವೇ ಆಗಿಹಳಲ್ಲ"

ಹೆಣ್ಣು ಹೊರೆಯಲ್ಲ ವರವೇ ಆಗಿಹಳಲ್ಲ
ಆದರೂ ಹುಣ್ಣೆಂದು ಜಗದಿ ಜರಿಯುವರಲ್ಲ
ಮಗಳಾಗಿ ಮನೆ ಬೆಳಗುವ ಜ್ಯೋತಿಯವಳು 
ಸೊಸೆಯಾಗಿ ವಂಶ ಬೆಳೆಸುವ ಗೃಹಲಕ್ಷ್ಮಿ ಅವಳು

ಸಿಕ್ಕಿಲ್ಲ ಅವಳಿಗಿನ್ನೂ ಸರಿಸಮಾನ ಸ್ಥಾನಮಾನ
ದಿಕ್ಕು ದಿಕ್ಕುಗಳಲ್ಲಿ ತುಂಬಿದೆ ಅವಳದೇ ಆಕ್ರಂದನ
ಬೇಕಿಲ್ಲ ಅವಳಿಗೆ  ಸಮಾನತೆ ಆಶ್ವಾಸನೆಯ ಮಾತು
ಜಯಿಸಿ ಬದುಕುವಳು ಅವಳು ಎಲ್ಲದಕ್ಕೂ ಸೋತು

ಸರ್ವರ ಹಿತ ಬಯಸುವ ಉದಾರ ಗುಣದವಳು
ತಾಳ್ಮೆಯ ಗಣಿಯಾಗಿ ಮನೆಯನು ನಡೆಸುವಳು
ಒಳ ಹೊರಗೂ ದುಡಿದು ಬದುಕು ರೂಪಿಸುವಳು
ದಿನವಿಡಿ ದಣಿದರು ಮಂದಹಾಸವನು ಬೀರುವಳು 

ಹೊತ್ತು ಹೊತ್ತಿಗು ಬೇಯಿಸಿ ಹಾಕುವಳು ಕುಂತು
ಮಿಕ್ಕುಳಿದಷ್ಟೆ  ಅನ್ನವನ್ನು ಉಣ್ಣುವಳು ಕೂತು
ಕುಟುಂಬದ ಯಶಸ್ಸಿಗೆ ಕಾರಣವಾದರೂ ಕಾಣದಕೈ
ಸಕಲ ಕ್ಷೇತ್ರದಲ್ಲಿ ಆಗಿಹದಿಂದು ಅವಳದೆ ಮೇಲುಗೈ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 











 - Made using Quotes Creator App, Post Maker App
0 likes 0 comments
sugamma Almel
Quote by sugamma Almel - **ಸಿಂಹದೊಲವಿನ ಸೆಲ್ಫಿ**

ಕಾಡಿನ ರಾಜ ನಾಡನು ಅರಸಿ ಬಂದಿತು ಇಂದು ಹರುಷದಲ್ಲಿ 
ಎಮ್ಮೆಯ ಮೊದಲನೇ ನೋಟಕೆ ಸೋತಿತು ಸಿಂಹವು ಹೃದಯದಲ್ಲಿ 
ಅಂದದ ಎಮ್ಮೆಯ ಚೆಂದದ ಪಟವನು ಬಯಸಿತು 
ಮನದಲ್ಲಿ 
ಚೆಲುವಿನ ಜೋಡಿಯ ಒಲವಿನ ಪಟವನು ತೆಗೆಯಲು ಖುಷಿಯಲ್ಲಿ 

ಅಂಜುತ ಅಳುಕುತ ಸನಿಹಕ್ಕೆ ಬಂದಿತು ಎಮ್ಮೆಯು ಭಯದಲ್ಲಿ 
ಎಮ್ಮೆಗೆ ಅಕ್ಕರೆ ತೋರಿ ಸಿಂಹವು ತಬ್ಬಿತು ತೋಳಿಂದ ಸಂತಸದಲ್ಲಿ 
ಜಂಗಮವಾಣಿಯ ಬಳಸಿ ಸುಂದರಿ ಮುಖವನು ಒರೆಸುತಲಿ 
ಮೊದಲನೇ ಭೇಟಿಯ ಪಟವು ಸೆರೆಯಾಯಿತು ಕ್ಯಾಮರದಲ್ಲಿ 

ಕಾಡಿನ ರಾಜನ ಹೆಂಡತಿಯಾದೆ ಎಂದು ಬೀಗಿತು ಹೆಮ್ಮೆಯಲ್ಲಿ 
ಪ್ರಾಣಿಗಳ್ಯಾವು ಸಿಕ್ಕದೆ ಹೋದರೆ ಬಲಿಯಾಗುವೆ ಒಂದು ದಿನ ನಾನಿಲ್ಲಿ 
ನೋವಲಿ ಕೊರಗಿತು ಎದುರಿಸದೆ ಸೋತಿತು ಎಮ್ಮೆಯು ಮನಸಿನಲ್ಲಿ 
ನಗುಮುಖ ತೋರದೆ ಆತಂಕದಲ್ಲೇ ಪೋಸು ಕೊಟ್ಟಿತು ಸಿಂಹದೊಲವಿನ ಸೆಲ್ಫಿಯಲ್ಲಿ 

✍️ ಸೂಗಮ್ಮ ಡಿ ಪಾಟೀಲ್ 
       ಉತ್ನಾಳ್ - Made using Quotes Creator App, Post Maker App
0 likes 0 comments
sugamma Almel
Quote by sugamma Almel - **ಸಾಧನೆಯ ಹಾದಿಯಲ್ಲಿ**

ಸಾಧನೆಯ ಹಾದಿಯಲ್ಲಿ ಅಡೆ ತಡೆಗಳು ಸಾವಿರಾರು 
ಸೋಲಿಗೆ ಹೆದರಿದರೆ ಗೆಲುವಿಂದು ಯಾರದೋ ಪಾಲು
ಮೆಟ್ಟಿ ನಿಲ್ಲಬೇಕು ನಮ್ಮೆಲ್ಲ ಕುಂದು ಕೊರತೆಗಳನ್ನು
ಧೈರ್ಯದಿಂದ ಅಡಿಯಿಟ್ಟರೆ ವಿಜಯ ನಮ್ಮದಿಂದು 

ಅವಮಾನ ಸನ್ಮಾನ ಎಲ್ಲಾ ಕ್ಷಣಿಕವಾಗಿವೆ ಬಾಳಲ್ಲಿ
ಕಾರ್ಯದಿಂದ ಹೆಸರನ್ನು ಗಳಿಸಬೇಕಿಂದು ನಾವಿಲ್ಲಿ
ಅವಕಾಶ ಅದೃಷ್ಟ ಕೈ ಹಿಡಿಯದಿದ್ದರೇನು ಜಗದಲ್ಲಿ
ಪ್ರಾಮಾಣಿಕತೆ ಒಂದಿದ್ದರೆ ಹರಸುವನು ಭಗವಂತನಿಲ್ಲಿ

ಅಸಾಧ್ಯವೆಂಬುದು ಯಾವುದು ಇಲ್ಲ ಮನುಜನಿಗೆ
ಸಾಧಿಸುವ ಛಲವಿರಬೇಕು ನಿಸ್ವಾರ್ಥ ಮನದೊಳಗೆ
ಸಮಯ ಕಾಯದು ನಮಗಾಗಿ ಬದುಕಿನಲ್ಲಿ ಇಂದು
ಸದುಪಯೋಗ ಮಾಡಿಕೊಂಡು ಸಾಗುತಿರಬೇಕಿಂದು 

ಸಾಧನೆ ಎಂದು ಪ್ರಯತ್ನಶೀಲರ ಸ್ವತ್ತು ಆಗಿಹದು
ಸೋಮಾರಿಗಳಿಗೆಂದೂ ಇಲ್ಲಿ ಯಶಸ್ಸು ಒಲಿಯದು
ಸಂಶಯದಿ ಹೆಜ್ಜೆ ಇಟ್ಟರೆ ಸಿಗುವುದೆಂದೂ ಅಪಜಯ 
ದಿಟ್ಟತನದಿಂದ ಗುರಿ ಇಟ್ಟು ಮುಂದೆ ನಡೆದರೆ ವಿಜಯ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 

 - Made using Quotes Creator App, Post Maker App
1 likes 0 comments
sugamma Almel
Quote by sugamma Almel -                **ಹೊಸಬಾಳು**

 ಕಟ್ಟಿಕೊಳ್ಳಬೇಕು ನೂರಾರು ಕನಸು ಜೀವನದಲ್ಲಿ
 ಕಷ್ಟ ಸುಖವು ಸಮವೆಂದು ತಿಳಿದು ಬಾಳಬೇಕಿಲ್ಲಿ
 ಪ್ರೀತಿ ಹಂಚುತಲೇ ಪ್ರೀತಿಯನು ಪಡೆಯಬೇಕಿಲ್ಲಿ
 ಭರವಸೆಯಿಂದ ನಗುತಲಿ ನಾವು ಸಾಧಿಸಬೇಕಿಲ್ಲಿ

ಹೂವಿನಂಥ ನಿರ್ಮಲ ಮನಸ್ಸಿರಬೇಕು ಬದುಕಲ್ಲಿ
ದ್ವೇಷವ ಮಾಡುತಲಿ ಕಳೆಯಬಾರದು ಕಾಲವನ್ನಿಲ್ಲಿ
ನೋವು ನಲಿವು ಎಲ್ಲವೂ ಅವನ ಕಾಣಿಕೆಯಿಲ್ಲಿ
ನಾನೆಂಬ ಅಹಂಕಾರದಿ ಮನುಜ ಮೆರೆಯಬಾರದಿಲ್ಲಿ

ಒಳಿತು ಮಾಡಿದರೆ ಒಳಿತೆ ಆಗುವುದು ನಿಜವಿಲ್ಲಿ
ಕೆಡುಕಿನ ಬೆನ್ನ ಹತ್ತಿದರೆ ಕೆಡುಕೆ ಉಳಿಯುವದಿಲ್ಲಿ
ನಿಶ್ಚಲ ಹೃದಯದಿಂದ ಗುರಿಯತ್ತ ಸಾಗೋಣವಿಲ್ಲಿ
ಹೊಸತು ಬಾಳಿಗೆ ಸ್ಫೂರ್ತಿಯಾಗೋಣ ನಾವಿಲ್ಲಿ 

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 

 - Made using Quotes Creator App, Post Maker App
1 likes 0 comments
sugamma Almel
Quote by sugamma Almel - **ವಿದಾಯ**

ವಿದಾಯ ಹೇಳಬೇಕೆಂದಿರುವೆ  ಹಳೆಯ ವರುಷಕಲ್ಲ
ಹಳೆಯ ವರುಷದ ಕಹಿ ನೆನಪುಗಳಿಗೆ ಮಾತ್ರ
ಸ್ವಾಗತವನು ಕೋರುತ್ತಿರುವೆ ಹೊಸ ವರುಷಕಲ್ಲ
ಹೊಸ ಕನಸು ಗುರಿಗಳ ಕಾರ್ಯಾಚರಣೆಗೆ ಮಾತ್ರ

**ಗತಿಸಿದ ವರ್ಷ**

ಗತಿಸಿದ ವರುಷದೊಂದಿಗೆ ಅಳಿಸಿ ಹೋಗಲಿ
ಗತಕಾಲದ ನೋವು ನಲಿವುಗಳು ಹೃದಯದಿಂದ
ಉದಯಿಸುವ ದಿನಗಳಲ್ಲಿಂದು ಮೂಡಲಿ
ಹೊಸದೊಂದು ಆಶಾಕಿರಣ ಭರವಸೆಯಿಂದ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 



 - Made using Quotes Creator App, Post Maker App
0 likes 0 comments

Explore more quotes

sugamma Almel
Quote by sugamma Almel - *ಮುಗಿಲ ತಾರೆ*

ಮುಗಿಲತಾರೆ ಗಗನದಲ್ಲಿ ಪ್ರಜ್ವಲಿಸುತ ಬೆಳಗುತಿವೆ 
ಕಾರ್ಗತ್ತಲನು ಅಳಿಸುತಲಿ ಕಣ್ಮನವನು ಸೆಳೆಯುತಿವೆ 
ನಿಲುಕದಿಹ ನಕ್ಷತ್ರವನು ಹೃದಯವಿಂದು ಬಯಸುತಿದೆ
ಹಿಡಿಯಲಿಂದು ಹೊರಟಿರುವೆ ಕೈಜಾರುತಲಿ 
ನಡೆಯುತ್ತಿದೆ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 
 




 - Made using Quotes Creator App, Post Maker App
0 likes 0 comments
sugamma Almel
Quote by sugamma Almel -  *ನಿನಗೆ ನಾನು ನನಗೆ ನೀನು*

ಬಡವನ ಗುಡಿಸಲು ಮೆಚ್ಚಿ ಬಂದೆ 
ಒಡಹುಟ್ಟಿದವರ ತೊರೆದು ನಿಂದೆ
ಏಳು ಹೆಜ್ಜೆ ಇಟ್ಟು ಮನವ ತುಂಬಿದೆ
ಏಳೇಳು ಜನ್ಮಕೂ ಸಂಗಾತಿ ನೀನೆಂದೆ

ಬಯಸಿ ಬಯಸಿ ಹರಕೆಯನು ಹೊತ್ತೆ
ಬಂಗಾರದಂಥ ಮುದ್ದು ಮಕ್ಕಳನ್ನು ಹೆತ್ತೆ
ಸಾಕಿ ಸಲಹುತ  ಪ್ರೀತಿ ವಾತ್ಸಲ್ಯವ ಕೊಟ್ಟೆ
ಮಾತೃ  ಹೃದಯದಿಂದ  ಕೈತುತ್ತನ್ನು ಇಟ್ಟೆ

ತಾಯಿ ಹಾಲು ವಿಷವಾಗಿ ಹೋಯಿತಿಂದು
ತಂದೆ ಸಂಸ್ಕಾರ ನಾಶವಾಯಿತು ಯಾಕಿಂದು
ನಾವು ಹೆತ್ತ ಮಕ್ಕಳು ನಮಗಾಗಲಿಲ್ಲವಿಂದು
ನಾವಿಟ್ಟ ಕನಸುಗಳು ಹೊಸಕಿ ಹಾಕಿದರಿಂದು

ಹಗುರಾದ ಮನಸಿನಲ್ಲಿ ಭಾರವಾದ ನೋವಿಟ್ಟು
ಬಿಟ್ಟೋದ ಮಕ್ಕಳವರು ಅಕ್ಕರೆಗೆ ಕೊಳ್ಳಿ ಇಟ್ಟು
ಬೇರೆ ಯಾರೂ ಬರರು ನಮ್ಮಯ ಬದುಕಿಗಿನ್ನು 
ನಿನಗೆ ನಾನು ನನಗೆ ನೀನು ಇಷ್ಟೇ ಜೀವನವಿನ್ನು


✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 
 - Made using Quotes Creator App, Post Maker App
0 likes 0 comments
sugamma Almel
Quote by sugamma Almel - 
 ಆಸೆ 

ಕಾಲಕ್ಕೆ  ತಕ್ಕಂತೆ  ನಡಿಬೇಕು  ನಾವು
ಪಾಲಿಗೆ ಬಂದಷ್ಟೇ ಪಡೆಯಬೇಕು ನಾವು
ಅಲ್ಲಿ ಮೇಲಿಲ್ಲ ಕೀಳಿಲ್ಲ ಹರನ ದೃಷ್ಟಿಯಲ್ಲಿ 
ಎಲ್ಲಾ ನಮ್ಮವರು ಅನ್ನೋದೆ ಭ್ರಮೆಯಿಲ್ಲಿ

ಮಂದಿ ಮಾತು ಕೇಳಿ ನೀ ಬಾಳ ಬ್ಯಾಡವ್ವ
ಹಿಂದ ಆಡಿಕೊಂಡು ನಗೋದು  ಬಿಡರವ್ವ
ತಂದೆ ತಾಯಿ ಮಾತು ಕೇಳಿ  ಬಾಳಬೇಕವ್ವ
ಬಂಧು ಬಳಗದ ಆಸೆಯ ಮಾಡಬ್ಯಾಡವ್ವ

ಅವ ಕೊಟ್ಟಷ್ಟೇ ನಮ್ಮದೆಂದು ತಿಳಿಬೇಕವ್ವ
ಶಿವ ಇಟ್ಟಂಗ ಜೀವನವನು ಮಾಡಬೇಕವ್ವ 
ಅತಿಯಾದ ಬಯಕೆಯ ಬೆನ್ನು ಹತ್ತಬ್ಯಾಡವ್ವ
ಮಿತಿಯಲ್ಲಿ ಕನಸುಗಳನ್ನು ನೀ ಕಾಣಬೇಕವ್ವ

ಮುಖ ನೋಡಿ ಪ್ರೀತಿಯನಿಲ್ಲಿ ಹಂಚುತಾರವ್ವ
ಸುಖ ಸಂತೋಷದಲ್ಲಿ ಮಾತ್ರ ಜನ ಇರ್ತಾರವ್ವ
ಕಷ್ಟ ನಷ್ಟದಲ್ಲಿ  ನಮಗ್ಯಾರು  ಜೊತೆಯಾಗರವ್ವ
ಇಷ್ಟದಂಗ ಜೀವನವನ್ನು  ನಾವು ನಡೆಸಬೇಕವ್ವ

ಸೂಗಮ್ಮ ಡಿ ಪಾಟೀಲ್
ಉತ್ನಾಳ್




 

 - Made using Quotes Creator App, Post Maker App
0 likes 0 comments
sugamma Almel
Quote by sugamma Almel - 
*ಬೆಕ್ಕಿನ ಸವಾರಿ*

ಪುಟ್ಟದೊಂದು ಬೆಕ್ಕಿನ ಮರಿ ನಾನು ಸಾಕಿದ್ದೆ
ತೊಟ್ಟು ಹಾಲು ದಿನವು ಕೊಟ್ಟು ಸಲುಹುತ್ತಿದ್ದೆ
ಕದ್ದ ಹಾಲಿನಲ್ಲಿ ಒಂದು ಪಾಲು ಅದಕಿಡುತ್ತಿದ್ದೆ 
ನಿದ್ದೆಗಣ್ಣಿನಲ್ಲೂ ಅದರ ಕಾಳಜಿ ಮಾಡುತಿದ್ದೆ 

ಮಳೆಯ ಹನಿಯು ಜಿನುಗುತಿರಲು ಸಂತಸವು
ಗೆಳೆಯರೊಟ್ಟಿಗೆ ಆಡುವುದೇ ಬಲು ಆನಂದವು
ಎಲೆಯ ಛತ್ರಿಯಾಗಿ ಮಾಡಿಕೊಂಡು ನಡೆದೆನು
ತಲೆಯ ಮೇಲೆ ಬೆಕ್ಕು ಹೊತ್ತುಕೊಂಡು ಹೋದೆನು

ಎಲ್ಲರ ನಿದಿರೆಯನು ಕೆಡಿಸಿದವರೆಂದು ಉಗಿದರು
ಗೆಲ್ಲುವಾಸೆಯಲ್ಲಿ ಆಡುತಲಿ ಮನೆಯ ಮರೆತವರು 
ಸೋತ ಮೇಲೆ ಹೊರಟಿತು ಮನೆಕಡೆ ನಮ್ಮ ಸವಾರಿ
ಮಾತೆಯ ಹೆಗಲೆ ನಮ್ಮಿಬ್ಬರಿಗಾಗ ಜಂಬೂ ಸವಾರಿ

ಊರಿಗೂರೆ ನಮ್ಮ ಜೋಡಿಯನ್ನು ನೋಡುತ್ತಿದ್ದರು 
ದಾರಿಯನ್ನು ಕಾಯುತ್ತಿದ್ದರು ನಮ್ಮ ಮನೆಯವರು
ಸುಳಿವನು ಕಾಣದೆಯೇ ಅಪ್ಪ ಅಮ್ಮ ಬೇಸತ್ತಿದ್ದರು
ಬಳಿಯಲಿ ಹೋಗಿ ಅಮ್ಮನೆಂದೆ ಬೆಂಡೆತ್ತಿ ಬಿಟ್ಟರು

✍️ ಸೂಗಮ್ಮ ಡಿ ಪಾಟೀಲ್
     ಉತ್ನಾಳ /ವಿಜಯಪುರ 

 


 - Made using Quotes Creator App, Post Maker App
0 likes 0 comments
sugamma Almel
Quote by sugamma Almel - *ಪಯಣ*

ಮಡಿಲಲಿ  ಮುಗ್ಧ ಮಗುವಾಗಿದ್ದೆವು  ಹುಟ್ಟಿದಾಗ
ಬೆಳೆಯುತ್ತ ಹೆಗಲಾದೆವು ಜನ್ಮ ಕೊಟ್ಟ ತಂದೆಗಾಗ

ಕನಸುಗಳನು ಬಿತ್ತಿದೆವು ಅಣ್ಣನೊಟ್ಟಿಗೆ ನಾವಾಗ
ಸಂಭ್ರಮದಿ  ಸಾಗುತಲಿತ್ತು  ನಮ್ಮ ಪಯಣವಾಗ

ಸ್ವಾರ್ಥ ದುರಾಸೆ ಬುದ್ಧಿ ಇರಲಿಲ್ಲ ನಮ್ಮೆದೆಯಾಗ
ಪ್ರೀತಿ  ತ್ಯಾಗ ತುಂಬಿ ತುಳುಕುತಿತ್ತು  ಜೀವನದಾಗ

ಸೋಲು ಗೆಲುವಲ್ಲು ಎಲ್ಲಾ ಭಾಗಿಯಾಗುವರಾಗ
ಕೇಳದೆಯೇ  ಸಹಾಯಹಸ್ತವನ್ನು ನೀಡುವರಾಗ

ಬೆಳವಣಿಗೆ  ಹಂತದಲಿ ಬದಲಾಯಿತು ಮನಗಳು
ಲೆಕ್ಕಾಚಾರದ  ಭಾವವನು ತುಂಬಿರುವ ಜನಗಳು

ದಯೆ  ಧರ್ಮವೆಂಬುವುದು ಇಲ್ಲಿ ಬಾಯಿಮಾತು
ಪಾಲಿಸುವರಿಲ್ಲ ಯುಗದಿ ಈ ತತ್ವಕ್ಕೆ ಮನಸೋತು

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 








 - Made using Quotes Creator App, Post Maker App
1 likes 0 comments
sugamma Almel
Quote by sugamma Almel - **ಅಡುಗೆ**

ಯೂಟ್ಯೂಬ್ ನೋಡಿ ಮಾಡುತ್ತಿದ್ದಳು ದಿನವು
ಚೂರು ಅಡುಗಿ ನನ್ನ ಹುಡುಗಿ
ಹುಚ್ಚು ಖೋಡಿ ಕಲಿಸಿಲ್ಲೇನಾ ನಿಮ್ಮವ್ವ ನಿನಗ ಚೆಂದ ಮಾಡುದು ಅಡುಗಿ 
ನಮ್ಮ ಮನಿಯಲ್ಲಿ ನಮ್ಮಪ್ಪನದೇ ಕೈ ಅಡುಗಿ
ಅವ ಹೆಂಗ್ ಮಾಡ್ತಿದ್ದ ಹಂಗೆ ಮಾಡಿ ಹಾಕಿರುವೆ ನಾನು ನಿನಗ ಗಡಗಿ 
ಹಿಡಿಸಿಲ್ಲ ಅಂದ್ರ ಹೋಗಿಬಿಡು ನೀ ಸುಮ್ಮನೆ ನಮ್ಮಪ್ಪನ ಕಡಿಗಿ

ಸೂಗಮ್ಮ ಡಿ ಪಾಟೀಲ್
ಉತ್ನಾಳ್  - Made using Quotes Creator App, Post Maker App
0 likes 0 comments
sugamma Almel
Quote by sugamma Almel - 
**ಕಾಗದ **
 
ಪ್ರೇಮದ ಓಲೆಯನು ಬರೆದಿದ್ದಳು ನನ್ನವಳು
ಒಲವು ತುಂಬುತಲಿ ನನಗೆಂದು ತಂದು ಕೊಟ್ಟಳು 
ಕಾಗದದಿ ಕಾಣಿಸಲಿಲ್ಲ ಅವಳದೊಂದು ಅಕ್ಷರಗಳು          ಯಾಕಂದ್ರೆ ಶಾಹಿಯಿಲ್ಲದ ಪೆನ್ನನು ಆಕೆ ಬಳಸಿದ್ದಳು
  
✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 
 - Made using Quotes Creator App, Post Maker App
0 likes 0 comments
sugamma Almel
Quote by sugamma Almel - 


*ಕೆಂಪು ಬಸ್ಸು*

ಕೆಂಪು ಬಣ್ಣದ ಬಸ್ಸು
ನೋಡಲು ತುಂಬಾ ರಸ್ಸು
ಅದರೊಳಗಿರುವರು ಮಿಸ್ಸು
ಕೊಡುವೆ ದಿನವು ಒಂದು ಕಿಸ್ಸು

ಮಾಡುವೆ ನೂರೆಂಟು ಲೆಕ್ಕ
ದಿನಾ ಕುಳಿತು ಮಿಸ್ಸಿನ ಪಕ್ಕ
ಮಿಸ್ಸಿಗೆ ನಾನೇ ಅಚ್ಚುಮೆಚ್ಚು
ಅವರೊಟ್ಟಿಗೆ ಹೋಗುವ ಹುಚ್ಚು

ಗರಿ ಗರಿ ಚಕ್ಕಲಿ ಚಿಕ್ಕಿ ಒಯ್ಯುವೆ
ಚಿಣ್ಣರ ಜೊತೆಯಲ್ಲಿ ತಿನ್ನುವೆ
ಕಿಡಕಿಯಲ್ಲಿ ತಲೆಯನು ಹಾಕುವೆ
ಬಸ್ಸಿನ ಚಾಲಕನ ಕೈ ಏಟು ತಿನ್ನುವೆ

✍️ ಸೂಗಮ್ಮ ಡಿ ಪಾಟೀಲ್
       ಉತ್ನಾಳ್ 

 - Made using Quotes Creator App, Post Maker App
0 likes 0 comments
sugamma Almel
Quote by sugamma Almel - 
**ಹೀಗೂ ಇರುವರು**

ಹೀಗೂ ಇರುವರು ಕೆಲವರು
ಹಂಗಿಸಿ ನಮಗೆ ಕೊಡುವರು
ಹಿಂಗೆ ಬಂದು ಹೋಗುವರು 
ಹಂಗೆ ಹಗೆತನ ಕಲಿಸುವರು 

ಹಗಲು ಕನಸನು ಕಾಣುವರು
ಹಗೆಯ ಸಾಧಿಸುತ ಬಾಳುವರು
ಹಗುರವಾಗಿ  ಮಾತಾಡುವರು
ಹಣದ ಆಮಿಷವ ತೋರುವರು

ಹಗಲಿಗೊಂದು ಮಾರು ವೇಷ
ಹಿಂಗದವರದು ಎಂದು ರೋಷ
ಹಂತ ಹಂತವು ಬೆಳೆವುದು ದ್ವೇಷ
ಹುಟ್ಟೋದು ಹಿತೈಷಿಗಳಲ್ಲಿ ಆಕ್ರೋಶ

ಹಾದಿಯನು ತಪ್ಪಿಸುವರೇ ಹೆಚ್ಚಿಹರು
ಹಾರೈಸುತಲಿ ಕಿಡಿ ಕಾರುವ ಗುಣದವರು
ಹರಕೆಯ ಕುರಿಯಾಗಿ ಮಾಡುವರವರು
ಹರ್ಷದಿ ವಂಚಿಸಿ ಬಲಿ ಕೊಡುವರವರು

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ 
 - Made using Quotes Creator App, Post Maker App
0 likes 0 comments
sugamma Almel
Quote by sugamma Almel - ಮುಖವಾಡ 
ಮುಖವಾಡ ಹಾಕಿಕೊಂಡು ಬದುಕುವರನು
 ನೋಡಿ ಛಿದ್ರವಾಗಿದೆ  ಮುಗ್ಧ  ಹೃದಯವಿನ್ನು
ಕಾಲದ  ಓಟದಿ ತನ್ನವರ  ತುಳಿದು  ಓಡುವರು 
ನನ್ನವರು ಎಂಬ ಭಾವನೆಯನೇ ಮರೆಯುವರು

ಮೋಸ ವಂಚನೆಯ ಜಾಲದಲ್ಲಿ ಮುನ್ನುಗ್ಗುವರು
ಹೆಸರು ಗಳಿಸುವ  ಹುಚ್ಚಿನಲಿ ಕಾಲವ ಕಳೆವರು
ಹತ್ತಿದ ಏಣಿಯನ್ನೇ  ಓದೆಯುವ ಗುಣದವರು
ಬಿತ್ತಿದ ಬೆಳೆಯ ಸುಟ್ಟು  ಕಾಯಿಸಿಕೊಳ್ಳುವರು

ತಿಳಿದು ತಿಳಿಯದಂತೆ ನಟಿಸುವ ನಟರಿವರು
ಸರಳವಾಗಿ ಅಡ್ಡದಾರಿಯಲಿವರು ಸಾಗುವರು
ಗೆದ್ದೆ ಎಂದು  ಬೀಗುತಲಿಂದು  ಮೆರೆಯುವರು
ಸದ್ದಿಲ್ಲದೇ ಸುದ್ದಿ ಮಾಡುವಂತಹ  ಧನವಂತರು

ಕಳೆದು ಹೋಗಿದೆ  ಇಂದು  ಮಾನವೀಯತೆ
ತುಳಿದು ಬದುಕುತಿಹರು ಜಗದಿ ದಾನವರಂತೆ
ಹೆತ್ತಕರುಳು ಕೊರಗುತಿದೆ ನಿಜದಿ ಮನದಲ್ಲಂತೆ 
ಮರಳಿ  ಬದುಕುವರೇ  ಇವರು  ಮಾನವರಂತೆ

✍️ ಸೂಗಮ್ಮ ಡಿ ಪಾಟೀಲ್
      ಉತ್ನಾಳ್ - Made using Quotes Creator App, Post Maker App
0 likes 0 comments

Explore more quotes