Venkatachala G profile
Venkatachala G
414 34 11
Posts Followers Following
Venkatachala G
Quote by Venkatachala G - ಕಡೆಗಣಿಸುವವರ
ಮುಂದೆ,
ಕಲ್ಲಾಗು ಮನವೇ...
ಸುರಿಸುವೇತಕೆ
ಕಣ್ಣೀರು...
ಯೋಗ್ಯರಲ್ಲ
ನಿನ್ನ ಕಣ್ಣೀರಿಗವರು...
ತೊರೆದುಬಿಡು,
ಮನದಿಂ ದೂಡಿಬಿಡು...
ಚೆಲುವಚೆನ್ನ.

 - Made using Quotes Creator App, Post Maker App
0 likes 0 comments
Venkatachala G
Quote by Venkatachala G - ಎಷ್ಟು ಚೆನ್ನಿತ್ತು
ನೆನೆಪುಗಳೇ
ಇಲ್ಲದಿದ್ದರೆ...
ಎಷ್ಟು ಸೊಗಸಿತ್ತು
ಕನಸುಗಳೇ 
ಇಲ್ಲದಿದ್ದರೆ...
ಎಷ್ಟು ಒಳಿತಿತ್ತು
ಭಾವಗಳೇ 
ಇಲ್ಲದಿದ್ದರೆ...
ಗಿಡಮರಗಳಂತೆ
ನಲಿದಾಡಬಹುದಿತ್ತು...
ಚಿಂತೆಗಳೇ ಇಲ್ಲದೆ
ಸುಖಿಸಬಹುದಿತ್ತು...!
ಚೆಲುವಚೆನ್ನ
 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಎಷ್ಟು ಚೆನ್ನಿತ್ತು
ನೆನೆಪುಗಳೇ
ಇಲ್ಲದಿದ್ದರೆ...
ಎಷ್ಟು ಸೊಗಸಿತ್ತು
ಕನಸುಗಳೇ 
ಇಲ್ಲದಿದ್ದರೆ...
ಎಷ್ಟು ಒಳಿತಿತ್ತು
ಭಾವಗಳೇ 
ಇಲ್ಲದಿದ್ದರೆ...
ಗಿಡಮರಗಳಂತೆ
ನಲಿದಾಡಬಹುದಿತ್ತು
ನಾವೂ.....
ಚೆಲುವಚೆನ್ನ
 - Made using Quotes Creator App, Post Maker App
0 likes 0 comments
Venkatachala G
Quote by Venkatachala G - ಬಯಸದಿದ್ದರೂ
ಬರುವುದು....
ಬಯಸಿದರೂ
ಬಾರದು....
ಮನವು ಇದನು
ಒಪ್ಪದು....
ರಚ್ಚೆ
ಹಿಡಿಯುತಿರುವುದು
ಬುದ್ಧಿಮಾತ
ಕೇಳದು....
ದಾರಿ
ಕಾಣದಾಗಿಹುದು....
ಬೆಳಕ
ತೋರ ಬಾರಾ...!
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ನಿಂದಿಸುವುದು
ಬಲು ಸುಲಭವು
ವಂದಿಸುವುದೇ
ಕಡು ಕಷ್ಟವೋ....
ನೋಯಿಸುವುದು
ಬಲು ಸುಲಭವು
ನಗಿಸುವುದೇ
ಕಡು ಕಠಿಣವೋ....
ಕೆಡಿಸುವುದು
ಬಲು  ಸುಲಭ
ಕಟ್ಟುವುದೇ
ಕಡು ಕಾಠಿಣ್ಯವೋ....

ವಂದಿಸುತ್ತಾ,ನಗಿಸುತ್ತಾ,ಕಟ್ಟುತ್ತಾ
ಬಾಳುವುದ ಕಲಿಸೋ
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ನಿರ್ಮಲವಾಗಬೇಕಿತ್ತು ಗಗನ...
ದೋ ಎಂದು ಮಳೆ ಸುರಿದ ನಂತರ...
ಆದರೇಕೋ ಮತ್ತೆ ಮತ್ತೆ
ಮೋಡಬಂದು ಮುಸುಕುತ್ತಿದೆ...

ಅಂತೆಯೇ

ಹಗುರಾಗಬೇಕಿತ್ತು ಈ ಮನ....
ಅತ್ತು ಅತ್ತು ಕಣ್ಣೀರು ಸುರಿಸಿದ ನಂತರ....
ಆದರೇಕೋ ಮತ್ತೆ ಮತ್ತೆ
ನೆನಪುಗಳು ಒತ್ತರಿಸಿ ಕಾಡುತ್ತಿವೆ....

ದಾರಿ ಯಾವುದೋ ಮನವ ತಣಿಸಲು..‌!

ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ನಡೆವ ಹಾದಿಯಲಿ,
ಹೆಜ್ಜೆಗಳ ಎಣಿಸುವೆಯೇಕೆ...?
ದಣಿವು ಹೆಚ್ಚಾದೀತು....
ಬಂದ ದಾರಿಯನು,
ತಿರುಗಿ ನೋಡುವೆಯೇಕೆ...?
ದುಃಖ ದುಪ್ಪಟ್ಟಾದೀತು....
ತೋರಿದ ಕಾಳಜಿಗೆ,
ನಿರೀಕ್ಷೆಯ ನೋಟವೇಕೆ...?
ನಿರಾಸೆಯೇ ಮೈದಾಳೀತು....
ಬಲವಿರುವನಕ,
ಸುಮ್ಮನೆ ನಡೆದುಬಿಡು...!
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಬೆವರ ಬಸಿದೊಡೇನ್...
ದುಡಿದು ದಣಿದರೇನ್...
ಬೇಡವೆನಿಸಿದಾಗ,
ಕೈ ಬಿಡುವರು...
ಕೈ ಕಟ್ಟಿ ನಿಲುವರು...
ಎಲ್ಲ ಮರೆವರು....
ದೋಣಿಯಲಿ ದಾಟಿ,
ಅಂಬಿಗನ ಮರೆತಂತೆ...
ಜಗವಿಹುದೇ ಹೀಗಂತೆ...!
ಚೆಲುವಚೆನ್ನ.

 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಬೆವರ ಬಸಿದೊಡೇನ್...
ದುಡಿದು ದಣಿದರೇನ್...
ಬೇಡವೆನಿಸಿದಾಗ
ನೀನ್ ಅವರಿಗೇನ್...!
ಕೈ ಬಿಡುವರು...
ಕೈ ಕಟ್ಟಿ ನಿಲುವರು...
ಎಲ್ಲ ಮರೆವರು....
ದೋಣಿಯಲಿ ದಾಟಿ
ಅಂಬಿಗನ ಮರೆತಂತೆ...
ಜಗವಿಹುದೇ ಹೀಗಂತೆ
ಚೆಲುವಚೆನ್ನ.

 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಒಲವಿಗೆ ಮನ
ಹಂಬಲಿಸಿತ್ತು....
ಮೋಸಹೋದಾಗ
ಕಣ್ಣೀರಾಯ್ತು....
ಕೊನೆಗೆ,
ಚೂರಾದ
ಹೃದಯವನು
ಮನವೇ 
ಸಂತೈಸಿತು...!
ಚೆಲುವಚೆನ್ನ
 - Made using Quotes Creator App, Post Maker App
1 likes 0 comments

Explore more quotes

Venkatachala G
Quote by Venkatachala G - ಕಾದಿರುವೆ
ಕಾತರದಿ,
ಕಕ್ಕುಲತೆಯಿಂ....
ಕನವರಿಸುತಿಹೆ
ಕನಸಿನಲು,
ಕೂರ್ಮೆಯಿಂ....
ಕಾಪಿಡುತಿಹೆ
ಕೌತಕದಿಂ,
ಕಾಡುವ
ಕುರುಹುಗಳನು....
ಕಾಪಾಡು
ಕೃಪೆಯಿಂದ...!
ಚೆಲುವಚೆನ್ನ
ವೆಂಕಟಾಚಲ ಜಿ - Made using Quotes Creator App, Post Maker App
4 likes 0 comments
Venkatachala G
Quote by Venkatachala G - ಕಾದಿರುವೆ
ಕಾತರದಿ,
ಕಕ್ಕುಲತೆಯಿಂ....
ಕನವರಿಸುತಿಹೆ
ಕನಸಿನಲು,
ಕೂರ್ಮೆಯಿಂ....
ಕಾಪಿಡುತಿಹೆ
ಕೌತಕದಿಂ,
ಕಾಡುವ
ಕುರುಹುಗಳನು...!
ಚೆಲುವಚೆನ್ನ
ವೆಂಕಟಾಚಲ ಜಿ - Made using Quotes Creator App, Post Maker App
1 likes 0 comments
Venkatachala G
Quote by Venkatachala G - ರಾಮ ಹನುಮರ
ದಿವ್ಯ ಸಮಾಗಮ....
ಜಗದ ಪಾಲಿಗದು
ಆನಂದಧಾಮ....
ರಾಮ, ಹನುಮನ
ಪ್ರಾಣವಾದ...
ಹನುಮ, ರಾಮನ
ಉಸಿರಾದ....
ವಿಶ್ವವೇ ವಿಸ್ಮಯವಾಯಿತು....
ರಾಮಹನುಮರ ಪೂಜಿಸಿತು...!
ಚೆಲುವಚೆನ್ನ.
ವೆಂಕಟಾಚಲ ಜಿ

 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಅನೃತವನೆ
ಉಸಿರಾಡಿ
ಮೇಲೇರಿದವರು,
ಮೆರೆದಾಡಿದವರು....
ನೃತವು ಪ್ರಜ್ವಲಿಸೆ,
ತಲೆತಗ್ಗಿಸಿ ಕೆಳಗಿಳಿವರೋ...
ಕಾಲನ ಹೊಡೆತವು
ಅತಿ ತೀಕ್ಷ್ಣವೋ...!
ಚೆಲುವಚೆನ್ನ.
ವೆಂಕಟಾಚಲ ಜಿ

 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಒಲವಿಗೆ ಮನ
ಹಂಬಲಿಸಿತ್ತು....
ಮೋಸಹೋದಾಗ
ಕಣ್ಣೀರಾಯ್ತು....
ಕೊನೆಗೆ,
ಚೂರಾದ
ಹೃದಯವನು
ಮನವೇ 
ಸಂತೈಸಿತು...!
ಚೆಲುವಚೆನ್ನ
 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಮೋಸಗೊಳಿಸುವರು...
ಕುಹಕವ ನುಡಿವರು...
ಮದದಿಂ ಮೆರೆವರು...
ತಿದ್ದಿಕೊಳಲು ಮರೆವರು...
ಕಂದಕಕೆ ಬೀಳುವರು...
 ಗೋಳ್ಕರೆದು  ಬೇಡುವರು...
 ಕೈನೀಡಲು ಇವರತ್ತ
 ಯಾರೂ ಧಾವಿಸರು...
ತಿರುಗಿಯೂ ನೋಡದೆ
ಮುಂದೆಹೋಗುವರೋ...!
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಕಣ್ಣೀರಾಗುತ್ತದೆ ಮಾತು
ಮನವು  ನೊಂದುಹೋದಾಗ....

ಮೌನವಾಗುತ್ತದೆ ಮಾತು
ಹೃದಯ ಘಾಸಿಯಾದಾಗ....

ಆನಂದಭಾಷ್ಪವಾಗುತ್ತದೆ ಮಾತು
ಮನಸ್ಸು ಹಕ್ಕಿಯಂತೆ ಹಾರಿದಾಗ....

ಭಾವನೆಗಳು ಮನದ
ಕನ್ನಡಿ ತಾನೇ...!

ಕನ್ನಡಿ ತಾನೇ

Quote by Venkatachala G -  ಶ್ರೀವಿಷ್ಣುವೇ ಧರೆಗಿಳಿದ,
ಶ್ರೀರಾಮಚಂದ್ರನಾದ....
ಬಾಲ ಲೀಲೆ ತೋರಿದ,
ತಾಯ್ತಂದೆಯರಿಗೆ ಮುದ ನೀಡಿದ....
ವಿಶ್ವಾಮಿತ್ರನ ಯಜ್ಞವ ಕಾಯ್ದ,
ಜಾನಕಿಯ ಜಯಿಸಿ ತಂದ....
 ವಾಲಿಯ ಸಂಹರಿಸಿದ,
ಹನುಮ ಸುಗ್ರೀವರ ಸಂತೈಸಿದ....
ದುರುಳ ರಾವಣನ ಮರ್ದಿಸಿದ 
ಸೀತಾಮಾತೆಯನು ಮರಳಿ ತಂದ....
 ಅಯೋಧ್ಯೆಯ ಉದ್ದರಿಸಿದ,
ಸ್ವರ್ಗವನ್ನೇ  ಧರೆಗಿಳಿಸಿದ...!
ಚೆಲುವಚೆನ್ನ.
ವೆಂಕಟಾಚಲ ಜಿ - Made using Quotes Creator App, Post Maker App
1 likes 0 comments

Explore more quotes

Venkatachala G
Quote by Venkatachala G - ನಿಜದ ಒಲವು 
ಕನಸೆನಿಸಿದೆ....
ಮರೆಯುವುದೇ
ದಿಟವೆನಿಸಿದೆ....
ಇದನೊಪ್ಪದ ಮನವನು
ಮುದ್ದುಮಾಡಬೇಕಿದೆ....
ಹಠಮಾಡುವ ಹೃದಯವನು
ಸಂತೈಸಬೇಕಿದೆ....
ಚೆಲುವಚೆನ್ನ - Made using Quotes Creator App, Post Maker App
3 likes 0 comments
Venkatachala G
Quote by Venkatachala G - ಬಹಿರಂಗದಲಿ
ಬಲು ಹತ್ತಿರ ಹತ್ತಿರ....
ಅಂತರಂಗದಲಿ
ಅತಿ ದೂರ ದೂರ....
ಪ್ರೀತಿ ಇಲ್ಲ ಒಳಗೆ,
 ಬರಿದೆ ತೋರಿಕೆ ಹೊರಗೆ....
ಎಂದೋ ಒಂದಾಗುವ ನಂಬಿಕೆ....
ಇನ್ನೂ ಇದೆ  ಮುಗ್ಧ ಮನಕೆ...
ಹುಸಿಯಾಗದಿರಲಿ...!
ಚೆಲುವಚೆನ್ನ - Made using Quotes Creator App, Post Maker App
3 likes 2 comments
Venkatachala G
Quote by Venkatachala G - ನಿಜದ ಒಲವು 
ಕನಸೆನಿಸಿದೆ....
ಮರೆಯುವುದೇ
ದಿಟವೆನಿಸಿದೆ....
ಇದನೊಪ್ಪದ ಮನವನು
ಮುದ್ದುಮಾಡಬೇಕಿದೆ
ಹಠಮಾಡುವ ಹೃದಯವನು
ಸಂತೈಸಬೇಕಿದೆ....
ಚೆಲುವಚೆನ್ನ - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಪೆಚ್ಚುಮೋರೆ ಯಾಕೋ...?
ನಿನ್ನ ನೋವು , ಅವಗೆ ನಲಿವು
ತೊರೆದುಬಿಡು ಅವರನು...
ಅರ್ಥವಾಗಲಿಲ್ಲ , ಅವಗೆ ನೀನು
ಚೆಲುವಚೆನ್ನ. - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಸಾಗಬೇಕಿದೆ
ಜೊತೆಯಲ್ಲಿ
ಅಂದುಕೊಂಡರೂ
ಸಾಗಲಾಗುತ್ತಿಲ್ಲ
ಎಂಬುದೇ
ಸತ್ಯವೆನಿಸಿದಾಗ
ದೂರವಾಗುತ್ತಾ
ನಿಧಾನವಾಗಿ
ಮರೆಯಾಗಬೇಕೋ...!
ಚೆಲುವಚೆನ್ನ - Made using Quotes Creator App, Post Maker App
2 likes 1 comments
Venkatachala G
Quote by Venkatachala G - ಕಟ್ಟುತ್ತಿದೆ,
ಗುಬ್ಬಿಯೊಂದು
ಪ್ರೀತಿಯ 
 ಹೊಸ ಗೂಡನು....

ಮೊಟ್ಟೆ ಇಡುವುದೋ...
ಮರಿಮಾಡುವುದೋ...
ಅರ್ಧಕ್ಕೆ ಗೂಡನ್ನೇ
ಬಿಟ್ಟು ಹೋಗುವುದೋ...
ಬಲ್ಲವರಾರೋ...!
ಚೆಲುವಚೆನ್ನ.

 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಕಟ್ಟುತ್ತಿದೆ,
ಗುಬ್ಬಿಯೊಂದು
ಪ್ರೀತಿಯ 
ಗೂಡನು....

ಮೊಟ್ಟೆ ಇಡುವುದೋ
ಮರಿಮಾಡುವುದೋ
ಅರ್ಧಕ್ಕೆ ಗೂಡನ್ನೇ
ಬಿಟ್ಟು ಹೋಗುವುದೋ...
ಬಲ್ಲವರಾರೋ
ಚೆಲುವಚೆನ್ನ.

 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಮರೆಯಬೇಕಿನಿಸಿದೆ...
 ಮರೆಯುವುದನೆ ಮರೆಸಿದೆ
 ನಿನ್ನನ್ನೇ ಮೆರೆಸಿದೆ....
ಬುದ್ಧಿ ಇಲ್ಲ ಮನಸಿಗೆ - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಮರೆಯಬೇಕಿನಿಸಿದೆ...
ಆದರೆ ಮರೆಯುವುದನೆ ಮರೆಸಿದೆ
 ನಿನ್ನನ್ನೇ ಮೆರೆಸಿದೆ....
ಬುದ್ಧಿ ಇಲ್ಲ ಮನಸಿಗೆ - Made using Quotes Creator App, Post Maker App
7 likes 0 comments
Venkatachala G
Quote by Venkatachala G - ಬಾಳಿನಲಿ,
ಬೇವು
ಅನಿವಾರ್ಯ,
ಸಹಿಸಿಕೊಳ್ಳೋಣ....

ಬದುಕಿನಲಿ,
ಬೆಲ್ಲ 
ಆಕಸ್ಮಿಕ,
ಸವಿದುಬಿಡೋಣ....

ವಸಂತ
ತಿದ್ದಿತೀಡಿದ
ಹಸಿರಸಿರಿಯನು
ಮನದಣಿಯೆ
ಕಣ್ತುಂಬಿಕೊಳ್ಳೋಣ....

ಸರ್ವರಿಗೂ
ಶುಭಾಶಯಗಳ 
 ಸವಿ ಹೂರಣವ
ಹಂಚೋಣ...
ಚೆಲುವಚೆನ್ನ
ವೆಂಕಟಾಚಲ - Made using Quotes Creator App, Post Maker App
3 likes 0 comments

Explore more quotes

Venkatachala G
Quote by Venkatachala G - ಅನುರಣಿಸಿದೆ,
ನಿಸರ್ಗದ
ಕಣಕಣದಲ್ಲೂ
ಹೊಸತನ....

ಮೂಡಿದೆ,
ಸಕಲ 
ಜೀವರಾಶಿಯಲ್ಲೂ
ಭಾವ ವಿನೂತನ....

ಪ್ರಕೃತಿ
ಮಾತೆಗಿದೋ,
ನಮ್ಮ 
ಶತಕೋಟಿ ನಮನ....

ಯುಗಾದಿಯ
ಸಡಗರದಿ,
ಸರ್ವರಿಗೂ
ಶುಭಾಶಯಗಳ ತೋರಣ
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
4 likes 0 comments
Venkatachala G
Quote by Venkatachala G - ಬಡತನದಲಿ,
ವಿನಯ ವಿಧೇಯತೆಗಳಲಿ
ಬೆಳೆದವರು,
ಚಂದ್ರಮನಂತಾಗುವರು
ಆಗಸಕೆ....

ಸಿರಿ, ವಿಲಾಸದಲಿ
ದರ್ಪ ದಾರ್ಷ್ಟ್ಯಗಳಲಿ
ಬೆಳೆದವರು,
ಕಳೆಗಳಂತಾಗುವರು
ಸಮಾಜಕೆ....

ಬೆಳೆಯಿರಿ
 ಬೆಳಗಿರಿ
ಹೊಳೆಯಿರಿ
ಕಳೆಗಳಾಗದಿರಿ...!
ಚೆಲುವಚೆನ್ನ.
ವೆಂಕಟಾಚಲ ಜಿ

 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ವ್ಯತ್ಯಾಸವಿಹುದು 
ಕುತೂಹಲಕ್ಕೂ 
ಕಾಳಜಿಗೂ....

ಕುತೂಹಲದಲ್ಲಿ 
ಸ್ವಾರ್ಥ ವು
ಇರಬಹುದು....

ಕಾಳಜಿಯಲಿ
 ನಿಸ್ವಾರ್ಥ ವೇ
ಇಹುದೋ....

 ಕಾಳಜಿಯ 
ತೋರುವರ
ಕಡೆಗಣಿಸದಿರೋ...!
ಚೆಲುವಚೆನ್ನ.
ವೆಂಕಟಾಚಲ ಜಿ - Made using Quotes Creator App, Post Maker App
1 likes 0 comments
Venkatachala G
Quote by Venkatachala G - ನಿರ್ಮಲವಾಗಬೇಕಿತ್ತು ಗಗನ...
ದೋ ಎಂದು ಮಳೆ ಸುರಿದ ನಂತರ...
ಆದರೇಕೋ ಮತ್ತೆ ಮತ್ತೆ
ಮೋಡಗಳು ಬಂದು ಮುಸುಕುತ್ತಿದೆ...

ಅಂತೆಯೇ

ಹಗುರಾಗಬೇಕಿತ್ತು ಈ ಮನ....
ಅತ್ತು ಅತ್ತು ಕಣ್ಣೀರು ಸುರಿಸಿದ ನಂತರ....
ಆದರೇಕೋ ಮತ್ತೆ ಮತ್ತೆ
ನೆನಪುಗಳು ಒತ್ತರಿಸಿ ಕಾಡುತ್ತಿವೆ....

ದಾರಿ ಯಾವುದೋ ಮನವ ತಣಿಸಲು..‌!

ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
1 likes 0 comments
Venkatachala G
Quote by Venkatachala G - ಒಡಲೊಳಗಿನ
ಒಲವಿಂಗೆ
ಮೋಸವಾಯ್ತೆಂದು
ಒಡಲನೇತಕೆ
ಬಲಿ ಕೊಡುವೆ....
ಒಡಲೊಂದು
ದೃಢವಾಗಿದ್ದರೆ
ದಿಟದ
ಒಲವು
ಮರಳಿ
ಸಿಗದಿಹುದೆ...?
ನಿಜದೊಲವ
ಧಣಿಯಾಗೊ...!
ಚೆಲುವಚೆನ್ನ
 ವೆಂಕಟಾಚಲ ಜಿ - Made using Quotes Creator App, Post Maker App
0 likes 1 comments
Venkatachala G
Quote by Venkatachala G - ನಟನೆಯಾದರೂ 
ಸೈ
ಮುಖವಾಡವಾದರೂ
ಸೈ
ನಗುನಗುತ್ತಿರಬೇಕು
ಹೊರಗೆ....
ಎಷ್ಟೇ
ನೋವಿದ್ದರೂ 
ಒಳಗೆ....

ಮನಸಾರೆ 
ನಗುವುದೆಂತೋ
ಒಳಗಿನ
ಯಮಯಾತನೆಯಲಿ...!
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಬಿಕ್ಕುತ್ತ ಬಿಕ್ಕುತ್ತ
ಕಣ್ಣೀರು
ಸುರಿಸುತ್ತ
ಏಕಾಂಗಿತನದಲಿ
ಅತ್ತು ಹಗುರಾಗಬೇಕಿದೆ....

ನಗುತ್ತ ನಗಿಸುತ್ತ
ಸಂತೋಷಪಡುತ್ತ
ಹೊರಜಗತ್ತಿನಲಿ
ಮುಂದೆ ಸಾಗುತ್ತಿರಬೇಕಿದೆ....

ನಕ್ಕವರು ನೆನೆಸಿಕೊಂಡಾಗ
ಅತ್ತ ಮನ ಅರಳುವುದೋ
ಚೆಲುವಚೆನ್ನ.
ವೆಂಕಟಾಚಲ ಜಿ

 - Made using Quotes Creator App, Post Maker App
4 likes 0 comments
Venkatachala G
Quote by Venkatachala G - ಋಣವಿರಬೇಕು,
ಅವನ
ಕರುಣೆಯೂ ಬೇಕು...
ಇಂತಿರೆ,
ಕಣ ಬೇಡಿದರೂ
ಕಣಜವೇ
ದೊರೆವುದು...
ಇಂತಲ್ಲದಿರೆ,
ಕಣಜವನೆ
ಬೇಡಿದರೂ
ತೃಣಮಾತ್ರವೂ
ದೊರೆಯದು ನೋಡಾ...!
ಚೆಲುವಚೆನ್ನ
ವೆಂಕಟಾಚಲ ಜಿ
 - Made using Quotes Creator App, Post Maker App
3 likes 0 comments
Venkatachala G
Quote by Venkatachala G - ನಿರೀಕ್ಷೆಯ
ಸಿಹಿ 
ನೀರೇಕೋ
ಕಹಿಯಾಗಿ
ಹರಿಯತೊಡಗಿದೆ...
ಅಸೆಗಳ
ಮೂಟೆಹೊತ್ತ
ಬಂಡಿಯ
ಗಾಲಿಗಳೇಕೋ
ಕಳಚಿಕೊಳ್ಳತೊಡಗಿದೆ...

ಆಸೆ,ನಿರೀಕ್ಷೆಗಳ
ತೊರೆಯಬೇಕಿದೆ....
ಬದುಕು ಬಂದಂತೆ
ಬಾಳಬೇಕಿದೆ...!
ಚೆಲುವಚೆನ್ನ.
ವೆಂಕಟಾಚಲ ಜಿ

 - Made using Quotes Creator App, Post Maker App
3 likes 0 comments
Venkatachala G
Quote by Venkatachala G - ಅಂದುಕೊಂಡಿದ್ದೆಲ್ಲಾ 
ಆಗಿಯೇ ಬಿಟ್ಟರೆ
ಅವನಾಟಕ್ಕೆ
ಅರ್ಥವೇನಿಹುದು...

ಅಂದುಕೊಂಡಿದ್ದನ್ನೆಲ್ಲಾ
ಅಂದಗೆಡಿಸಿ
ಅಪ್ಪಾಲೆ ತಿಪ್ಪಾಲೆ
ಆಡಿಸಿ ಬೀಳಿಸುವುದೇ
ಅವನಾಟ ಕಾಣೋ...!
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments

Explore more quotes

Venkatachala G
Quote by Venkatachala G - ಸತ್ಯವನು
ಮುಚ್ಚಿಡಲಾಗದೆ
ಜಿನುಗುತಿದೆ
ಹನಿಹನಿ ನೀರು,
ಕಣ್ಣಿನಿಂ....

ಸತ್ಯವನು
ಮರೆಮಾಡಲೆಂದೇ
ನಗೆ ಕಾಣುತಿದೆ
ತುಟಿಯಂಚಿನಲಿ
ಬಲವಂತದಿಂ....

ನಯನ ಸತ್ಯವು
ಅಧರ ಮಿಥ್ಯವು...!
ಚೆಲುವಚೆನ್ನ.
ವೆಂಕಟಾಚಲ. ಜಿ - Made using Quotes Creator App, Post Maker App
4 likes 0 comments
Venkatachala G
Quote by Venkatachala G - ಪಾಠ 
ಕಲಿಸಿಬಿಡುತ್ತಾರೆ
ಒಮ್ಮೊಮ್ಮೆ...
ಎಂತಹ
ಹಿರಿಯರೆನಿಸಿಕೊಂಡವರಿಗೂ
ಕಿರಿಯರು...

ಹಿಂದೊಮ್ಮೆ,
ಬಂಗಾರದ 
ಜಿಂಕೆಯೊಂದು
ಶ್ರೀರಾಮಚಂದ್ರನಿಗೇ
ಪಾಠ ಕಲಿಸಿ
ಹೋಯಿತಂತೆ....
 ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ಸತ್ಯವನು
ಮುಚ್ಚಿಡಲಾಗದೆ
ಜಿನುಗುತಿದೆ
ಹನಿಹನಿ ನೀರು,
ಕಣ್ಣಿನಿಂ....
ಸತ್ಯವನು
ಮರೆಮಾಡಲೆಂದೇ
ನಗೆ ಕಾಣುತಿದೆ
ತುಟಿಯಂಚಿನಲಿ
ಬಲವಂತದಿಂ
ನಯನ ಸತ್ಯವು
ಅಧರ ಮಿಥ್ಯವು...!
ಚೆಲುವಚೆನ್ನ.
ವೆಂಕಟಾಚಲ. ಜಿ - Made using Quotes Creator App, Post Maker App
2 likes 0 comments
Venkatachala G
Quote by Venkatachala G - ನುಚ್ಚುನೂರಾಗಿದೆ,
ಭರವಸೆಯ
ಬೃಹತ್ ಬಂಡೆ....
ಚೂಪಾದ
ಉಳಿಯ
ಏಟಿನಿಂ....
ಕೊಚ್ಚಿ ಹೋಗಿದೆ,
ನಿರೀಕ್ಷೆಯ
ಹಿರಿಯ
ವೃಕ್ಷವೊಂದು....
ಕೊರೆವ
ಪ್ರವಾಹದ
ಸೆಳೆತಕೆ....
ಭರವಸೆ,
ನಿರೀಕ್ಷೆಗಳು ಸಾಕು
ಸಾಮಾಧಾನಿಯಾಗುವತ್ತ
ಹೆಜ್ಜೆ ಹಾಕು...!
ಚೆಲುವಚೆನ್ನ 
ವೆಂಕಟಾಚಲ ಜಿ

 - Made using Quotes Creator App, Post Maker App
2 likes 0 comments
Venkatachala G
Quote by Venkatachala G - ವಿಶ್ವಾಸದಿಂ
ಉಬ್ಬಿಹೋಗಿದ್ದ
ಗಾಳಿಚೆಂಡನು
ಒಡೆಯಲಾಗಿದೆ,
ಅವಿಶ್ವಾಸದ
ಸೂಜಿಯನು
ಚುಚ್ಚಿ....
ನಂಬಿಕೆಯ
ಅಡಿಗಲ್ಲಿನಿಂ
ಆಕಾಶದೆತ್ತರಕ್ಕಿದ್ದ
ಗೋಪುರವನು
ಕೆಡವಲಾಗಿದೆ,
ಅಪನಂಬಿಕೆಯ
ಸಿಡಿಮದ್ದನು
ಸಿಡಿಸಿ...
ಜಗದ ಜನರ
ಗತಿಯಿಂತಿಹುದೋ....
ತಾಳುವಿಕೆಯೇ
ತಪವೋ...!

Quote by Venkatachala G - ಬೇಕು,
ಮನೆಯ ಮುಂದೆ
ರಂಗುರಂಗಿನ
ರಂಗವಲ್ಲಿ....
ಬೇಕು,
ಮನದೊಳಗೆ
ಬಣ್ಣದಾ ಕನಸುಗಳು
ಬದುಕಿನಲ್ಲಿ....
ಸುಟ್ಟು ಬಿಡೋಣ
ಅಸಹಜ
ಕಾಮನೆಗಳ
ಈ ಶುಭ ಸಂದರ್ಭದಲ್ಲಿ...!
ಚೆಲುವಚೆನ್ನ.
ವೆಂಕಟಾಚಲ ಜಿ
 - Made using Quotes Creator App, Post Maker App
0 likes 0 comments
Venkatachala G
Quote by Venkatachala G - ಕಹಿಯೇನೂ 
ಅಲ್ಲ
ಸೋಲು
ಯಾವಾಗಲೂ....
ಸಿಹಿಯೇನೂ
ಅಲ್ಲ
ಗೆಲುವು
ಎಂದೆಂದಿಗೂ....
ಇರಲಿ
ಸೋಲು
ಗೆಲುವುಗಳೆರಡೂ 
ಬಾಳಿನಲಿ....
ರಸಧಾರೆಯುಕ್ಕಲು
ಬದುಕಿನಲಿ...!
ಚೆಲುವಚೆನ್ನ
ವೆಂಕಟಾಚಲ ಜಿ - Made using Quotes Creator App, Post Maker App
0 likes 0 comments
Venkatachala G
Quote by Venkatachala G - ಅನ್ಯರ
ಕೋಪ
ನಮ್ಮನು
ಸುಡದು....
ನಮ್ಮ 
ಕೋಪ
ನಮ್ಮನು
ಸುಡದೇ
ಬಿಡದು....
ಅದಕ್ಕೇ 
ಕೋಪವೆಂಬುದು
ಅನರ್ಥಸಾಧನವೆಂದರು
ನಮ್ಮ ಹಿರಿಯರು ...!
ಚೆಲುವಚೆನ್ನ
ವೆಂಕಟಾಚಲ ಜಿ - Made using Quotes Creator App, Post Maker App
0 likes 0 comments
Venkatachala G
Quote by Venkatachala G - ಬೆಚ್ಚಗಿಡಬೇಕಾದ
ಕನಸುಗಳೇಕೋ
ಸುಡುಸುಡು
ಸುಡುತ್ತಿವೆ....
ಭಾವಕ್ಕಿಳಿಸಬೇಕಾದ
ನೆನೆಪುಗಳೇಕೋ
ಕಾಡಿಕಾಡಿ
ಕಂಗೆಡಿಸುತ್ತಿವೆ....
ಇರಲಿ 
ಆದರೂ
ಕನಸುಗಳು....
ನೆನೆಪುಗಳು...!
ಚೆಲುವಚೆನ್ನ.
ವೆಂಕಟಾಚಲ ಜಿ

 - Made using Quotes Creator App, Post Maker App
0 likes 0 comments

Explore more quotes