Shilpa P Jain profile
Shilpa P Jain
10 0 1
Posts Followers Following
Shilpa P Jain
Quote by Shilpa P Jain - ಜೀವನದಲ್ಲಿ ಯಾವಾಗ್ಲೂ 
ಖುಷಿನೇ ಬೇಕು ಅಂದ್ರೆ ಹೇಗೆ? 
ಕಷ್ಟಗಳು ಬಂದಾಗಲೇ 
ಗೊತ್ತಾಗೋದು ಅಲ್ಲವೇ 
ನಮ್ಮ ಕೈಗಳು ಅಸಹಾಯಕರಾದಾಗ 
ಬೇರೆ ಯಾವ ಕೈಗಳು 
ನಮ್ಮ ಕಣ್ಣಿರೋರೆಸಲು 
ಮುಂದೆ ಬರುತ್ತವೆ ಎಂದು.....

ಶಿಲ್ಪ ಪಿ ಪಿ ಜೈನ್, ಮೈಸೂರು. - Made using Quotes Creator App, Post Maker App
2 likes 0 comments
Shilpa P Jain
Quote by Shilpa P Jain - ಎಷ್ಟೋ ಬಾರಿ 
ಬದುಕು 
ಬಣ್ಣಗಳಿಲ್ಲದೆ 
ಬರಡಾದರೂ 
ನಿಮ್ಮ ಬಣ್ಣ ಮಾಸದಿರಲಿ...


ಶಿಲ್ಪ ಪಿ ಪಿ ಜೈನ್, ಮೈಸೂರು. - Made using Quotes Creator App, Post Maker App
0 likes 1 comments
Shilpa P Jain
Quote by Shilpa P Jain - ನಿಮ್ಮ ಜೀವನದಲ್ಲಿ ಎಲ್ಲಾ ಇದೆ... ಯಾವುದು ಇಲ್ಲ ಎಂದೇನಲ್ಲ ಆದರೆ ಗಂಡ ಹೆಂಡತಿ,ಮಕ್ಕಳು,...ಹೀಗೆ ದಿನ ಬೆಳಗಾದ್ರೆ ಮೂರು ಗೇಣು ಹೊಟ್ಟೆ ಹೊರೆಯಲು ನೀವು ಕೆಲವೊಂದನ್ನು ಪಡೆದುಕೊಂಡ್ರು.... ..ಬಹುಶಃ ಬಹಳಷ್ಟನ್ನು ಕಳೆದುಕೊಂಡಿರ್ತೀರಾ ಅನ್ಸತ್ತೆ ...ಚಿಕ್ಕವರಿದ್ದಾಗ ಅಂದರೆ ತೀರಾ ಬಾಲಿಶವಲ್ಲ ಒಂದ್ ಒಂಬತ್ತರಿಂದ ಹದಿನಾಲ್ಕು ವರ್ಷ ವಯಸ್ಸಲ್ಲಿ ನಿಮಗಿದ್ದ ಆಸೆ ಆಮಿಷಗಳು ಅದೆಷ್ಟೋ....ಆಗೆಲ್ಲಾ ಸಣ್ಣ ಸಣ್ಣ ಖುಷಿಗಳು ಸ್ವರ್ಗವನ್ನೇ ತೋರಿಸ್ತಾ ಇರ್ತವೆ...ಆದ್ರೆ ಈಗ ಕೈ ತುಂಬಾ ಹಣ ಇದ್ರೂ ತಲೆ ತುಂಬಾ ಜವಾಬ್ಧಾರಿಗಳು ಆ ಖುಷಿನ ಕಿತ್ಕೊಂಡ್ ಬಿಡ್ತಾವೆ. ಎಷ್ಟೋ ಸರಿ ನೀವು ಪ್ರೀತ್ಸೋರ್ ನಿಮ್ ಜೊತೆ ಇರೋದಕ್ಕಿಂತ ನಿಮ್ಮ ಮೊಬೈಲ್ ನಿಮ್ಮ್ ಟೈಮ್ ಪಾಸ್ ಮಾಡ್ತಾ ಇರತ್ತೆ. ನೀವು ಹುಷಾರಿಲ್ಲದೇ ಇದ್ದಾಗ ಹಾಸ್ಪಿಟಲ್ ಗೆನೋ ಕರ್ಕೊಂಡ್ ಹೋಗೋ ನಿಮ್ಮವರಿಗೆ ನಿಮ್ಮ್ ತಲೆ ನೇವರಿಸಿ ಮುತ್ತಿಟ್ಟು ನಾನಿದ್ದೇನೆ ಎಂದು ಹೇಳೋಕೆ ಪುರುಸೊತ್ತಿರಲ್ಲ. ಹಲವರ ಜೀವನದಲ್ಲಿ ಹೀಗಿದ್ಯೋ ಇಲ್ವೋ ಆದ್ರೆ ಕೆಲವರ ಜೀವನದಲ್ಲಿ ಇದು ಮಾತ್ರ ಹೊರತಲ್ಲ...ಜೀವನದಲ್ಲಿ ದುಡ್ ಬೇಕು ಅದಿಲ್ದೆ ಪುಕಸಟ್ಟೆ ಪ್ರವಚನ ನೀಡಬಹುದು ಹೊರತು ಜೀವ್ನ ಕಟ್ಕೋಳ್ಳೋಕೆ ಆದ್ರೆ... ಆದ್ರೆ ಸಾಧ್ಯವಿದ್ರೆ ನಿಮ್ಮವ್ರಿಗಾಗಿ values ಮರೀಬೇಡಿ. ಆದಷ್ಟು ಸಣ್ಣ ಸಣ್ಣ ಸಂತೋಷಗಳನ್ನು ಮಕ್ಕಳಂತೆ ಆಚರಿಸಿ.

ಶಿಲ್ಪ ಪಿ ಪಿ ಜೈನ್, ಹೊರನಾಡು. - Made using Quotes Creator App, Post Maker App
1 likes 1 comments
Shilpa P Jain
Quote by Shilpa P Jain - ಹರ್ಷೋನ್ನುಡಿ

ಅತಿಯಾದ ಆಲೋಚನೆಯಿಂದಲೇ
ಮನಸ್ಸು ಆಚೆ ಈಚೆ ಜಾರುತ್ತದೆ.
ಇರಲಿ ಮಿತವಾದ ಒಳಿತಿನೆಡೆಗಿನ ಚಿಂತೆ
ಜೀವನ ಉದ್ಧಾರದ ಜೊತೆಗೆ ನೆಮ್ಮದಿಯ ಚಿಂತನೆ.
ಸಿಕ್ಕ-ಸಿಕ್ಕ ಚಿಕ್ಕ-ಚಿಕ್ಕ ವಿಷಯಗಳಿಗೆ ತಲೆಕೆಡಿಸಿಕೊಂಡು
ಸುಂದರ ಜೀವನವನ್ನು ಸಿಕ್ಕು-ಸಿಕ್ಕು ಮಾಡಿಕೊಳ್ಳಬೇಡಿ.



ಶಿಲ್ಪ ಪಿ ಪಿ ಜೈನ್, ಹೊರನಾಡು. - Made using Quotes Creator App, Post Maker App
0 likes 0 comments
Shilpa P Jain
Quote by Shilpa P Jain - ಹರ್ಷೋನ್ನುಡಿ.

ಎಲ್ಲರಿಗೂ ಒಳ್ಳೆಯವರಾಗಿರೋದು
ತುಂಬಾ ಕಷ್ಟ
ನಿಮಗೆ ನೀವು ಒಳ್ಳೆಯವರು 
ಅನ್ನಿಸಿದ್ರೆ ಸಾಕು.
ನಿಮ್ಮ ಆತ್ಮಸಾಕ್ಷಿಗಿಂತ ಪರೀಕ್ಷಕ
ಇನ್ನೊಬ್ಬನಿರಲು ಸಾಧ್ಯವಿಲ್ಲ.

ಶಿಲ್ಪ ಪಿ.ಪಿ ಜೈನ್, ಹೊರನಾಡು. - Made using Quotes Creator App, Post Maker App
1 likes 0 comments
Shilpa P Jain
Quote by Shilpa P Jain - ನಮ್ಮ ಮೂಡ್ ಹೇಗಿದ್ರೂ
ಪರಿಸ್ಥಿತಿ ಹೇಗಿದ್ರೂ
ನಾವು ನಗ್ತಿರ್ಬೇಕು
ಅದನ್ನ ನಿರೀಕ್ಷೆ ಮಾಡೋರು
ಅವರ ಮೂಡ್ ಸರಿಯಿಲ್ಲ
ಎಂದಾಗ ನೀನು ತೆಪ್ಪಗಿರು ಅಂತಾರೆ....
ಇದು ಸರಿನಾ?


ಶಿಲ್ಪ ಪಿ ಪಿ ಜೈನ್, ಹೊರನಾಡು. - Made using Quotes Creator App, Post Maker App
0 likes 0 comments
Shilpa P Jain
Quote by Shilpa P Jain - ಹರ್ಷೋನ್ನುಡಿ

Royal ಅನ್ನೋದು 
ನೀನು ಬಳಸೋ ವಸ್ತುಗಳಲ್ಲಿ ಇರಲ್ಲ.
ಬದಲಾಗಿ ನಿನ್ನ ವ್ಯಕ್ತಿತ್ವದಲ್ಲಿ ಇರುತ್ತದೆ.
ಆಡಂಬರದ ವಸ್ತುಗಳು ದೇಹಕ್ಕೆ ಹಿತ ಕೊಟ್ಟರೆ??
ಒಳ್ಳೆಯ ವ್ಯಕ್ತಿತ್ವ ಪರಮಾತ್ಮನಿಗೆ ಸನ್ನಿಹಿತವಾಗಿರುತ್ತವೆ.

ಶಿಲ್ಪ ಪಿ ಪಿ ಜೈನ್, ಹೊರನಾಡು. - Made using Quotes Creator App, Post Maker App
1 likes 0 comments
Shilpa P Jain
Quote by Shilpa P Jain - ಹರ್ಷೋನ್ನುಡಿ
ಏಕೋ ಅಮ್ಮನ್ನ ಅಪ್ಪನ ನೆನಸ್ಕೊಂಡ್ರೆ
ಹೊಟ್ಟೆ ಚುರ್ ಅಂತಿದೆ...
ಇವತ್ ನಾವು ಅವ್ರನ್ 
ಖುಷಿ ಪಡ್ಸೋಕೆ ಏನೇ ಮಾಡಿದ್ರು
ಅವ್ರು ನಮ್ ಜೀವನ 
ಕಟ್ಟೋಕೆ ಕಳ್ಕೊಂಡ್ ಕಾಲನ
ಕೊಡೋಕೆ ಆಗ್ತಿಲ್ವಲ್ಲ ಅಂತ...
ಇದೇ ಖುಷಿ ಅವತ್ ಸಿಕ್ಕಿದ್ರೆ 
ವಯಸ್ಸಿಗೆ ಸಹಜ ಆಸೆಗಳಿರ್ತಾ ಇತ್ತು ಖುಷಿ ಆಗ್ತಿತ್ತು...
ಅವ್ರೂ ಹುಲಿ ತರ ಬದುಕ್ತಿದ್ರು ಅಂತ.....
ಆದ್ರೆ ಅವ್ರು ಹಸು ತರ....ಅಂದೂ ಇಂದೂ.....

ಶಿಲ್ಪ ಪಿ ಪಿ ಜೈನ್, ಹೊರನಾಡು. - Made using Quotes Creator App, Post Maker App
0 likes 0 comments
Shilpa P Jain
Quote by Shilpa P Jain - ರೋಬೋಟ್ ಯಾಂತ್ರಿಕ
ಜೀವನ...
ಅನಿವಾರ್ಯವಾಗಿ 
ಹೋಗಿಬಿಟ್ಟಿರುತ್ತದೆ...
ಜವಾಬ್ಧಾರಿಗಳ ಮುೂಟೆ
ಬೆನ್ನ ಸವೆಸುತ್ತಿರುವಾಗ....
ದೂರಬೇಡಿ ಸಮಯ 
ಕೊಡುತ್ತಿಲ್ಲವೆಂದು....
ನಿಮ್ಮ ಸಮಯವನ್ನು 
ನಮಗಾಗಿ
ಕಾಯ್ದಿರಿಸಿ....
ಸ್ವಲ್ಪ ಮಟ್ಟಿನ ಸಾಂತ್ವಾನ ಬೇಕಾಗಿದೆ

ಶಿಲ್ಪ ಪಿ ಪಿ ಜೈನ್ -ಹೊರನಾಡು. - Made using Quotes Creator App, Post Maker App
0 likes 0 comments
Shilpa P Jain
Quote by Shilpa P Jain - ಹರ್ಷೋನ್ನುಡಿ.

ಜೀವನ ಕರೆದುಕೊಂಡು 
ಹೋದಲ್ಲೇ ನೀವು
ಹೋಗಬೇಕು.....
ನೀವು ಹೇಳಿದಂತೆ
ನಿಮ್ಮ ಜೀವನ ಕೇಳಲ್ಲ
ಅನಿರೀಕ್ಷಿತ ತಿರುವುಗಳೇ 
ಇದಕ್ಕೆ ಸಾಕ್ಷಿ...
ಎಲ್ಲಾ ನಿರ್ಧಾರ ನಿಮ್ಮದಲ್ಲ
ಕಾಣದ ಕೈಯದ್ದು.....
ಖುಷಿಯಿಂದ ಸ್ವೀಕರಿಸು
ಪ್ರತಿ ಕ್ಷಣನೂ ನಿನ್ನದಾಗಿಸಿಕೋ...

ಶಿಲ್ಪ ಪಿ ಪಿ ಜೈನ್, ಹೊರನಾಡು. - Made using Quotes Creator App, Post Maker App
0 likes 0 comments

Explore more quotes