Shwetha,B profile
Shwetha,B
54 14 62
Posts Followers Following
Shwetha,B
Quote by Shwetha,B - "**ಯೋಚನೆ"**
"""""'''''''""""""""""""''''''''''''
ಕಳೆದು ಹೋದ ವ್ಯಕ್ತಿ 
ಮುಗಿದು ಹೋದ ಸಮಯ 
ಬಾರದೇ ಇರುವ ವಯಸ್ಸು 
ಚಿಂತಿಸಿದರೆ ಏನು ಫಲ.!!!!!!!!

-ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - "**ಯೋಚನೆ"**
"""""'''''''""""""""""""''''''''''''
ಕಳೆದು ಹೋದ ವ್ಯಕ್ತಿ 
ಮುಗಿದು ಹೋದ ಸಮಯ 
ಬಾರದೇ ಇರುವ ವಯಸ್ಸು 
ಚಿಂತಿಸಿದರೆ ಏನು ಫಲ.!!!!!!!!

-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಬದುಕು ಬಣ್ಣದಿಂದ 
ಕೂಡಿರಬೇಕು ಹೊರತು 
ಬಣ್ಣ ಬದಲಿಸುವ ಊಸರವಳ್ಳಿಯ 
ಬದುಕು ಬೇಡ...........!!!!!!!
  

-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ನಿನ್ನನ್ನು ಕಳೆದುಕೊಳ್ಳುವ ಮನಸ್ಸು 
ನನಗಿಲ್ಲ ಮತ್ತೊಂದು ಮನಸ್ಸು ಬಯಸುವ 
ಆಸೆ ಮೊದಲೇ ಇಲ್ಲ 
ಇದ್ದರೆ ಜೊತೆಯಾಗಿ 
ನಡೆದರೆ ನೆರಳಾಗಿ 
ಉಸಿರಿಗೆ ಉಸಿರಾಗಿ 
ಬದುಕಿಗೆ ಬೆಳಕಾಗಿ 
ಸುಮಧುರವಾದ ಜೀವನ ನಡೆಸುವೆ
 ನಾ ನಿನ್ನ ಜೊತೆಯಲ್ಲಿ.........

- ಶ್ವೇತಾ. ಬಿ ✍️ - Made using Quotes Creator App, Post Maker App
5 likes 0 comments
Shwetha,B
Quote by Shwetha,B - ಮನೆಯೊಳಗಿನ ಗಣ ಶತ್ರುಗಳು;
ಬಾಹ್ಯದಲಿ ಶತ್ರುಗಳನ್ನು ಸೃಷ್ಟಿಸುವರಯ್ಯ 
ಇದೇ ನೋಡು ನಮ್ಮ ಕಲಿಯುಗದ ಪರಿ ದೇವ.....!
         

--ಶ್ವೇತಾ.ಬಿ✍️ - Made using Quotes Creator App, Post Maker App
2 likes 2 comments
Shwetha,B
Quote by Shwetha,B - ಆಳಾಗಿ ದುಡಿದರು 
ಅರಸನಾ ಮೆರೆಯಬೇಕು
ಅವಮಾನ ಆದರೂ ಸಹ
 ಪ್ರೀತಿಯ ಅಭಿಮಾನ
ಇರುವವರು ನಾವು.......

         -ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - **ಪ್ರೀತಿಗೆ ಅಮ್ಮ.ಅಪ್ಪ**

 ಪ್ರೀತಿಯಾಅಪ್ಪಾ********
ಇಂದು ನಾನು ಮಾತನಾಡುವ ಪದಗಳು ಅಪ್ಪಾ.
 ನೀನಿದ್ದ ಕ್ಷಣಗಳು ನನ್ನ ಬದುಕಿಗೆ ಬೆಳದಿಂಗಳಂತೆ
ಅಪ್ಪ ಜವಾಬ್ದಾರಿಗಳ ಅದೆಷ್ಟು ಇದ್ದವೋ
 ಒಂದು ಸಾರಿಯಾದರೂ
 ನನ್ನ ಮುಂದೆ ಹೇಳಲಿಲ್ಲ .. 
ಆದಾಯವಿಲ್ಲದ ಜೀವನ ನಮ್ಮದು. ಅಂತಹ ಪರಿಸ್ಥಿತಿಯಲ್ಲಿ
 ನಮಗೆ  ಅಕ್ಷರ ಜ್ಞಾನ ಕಲಿಸಿದೆ .
ನನ್ನ ಮಗಳು ತಣ್ಣಗಿರಲಿ ಎಂದು ಅವಳ 
 ಕಲಿತ ವಿದ್ಯೆ  ಜೊತೆಯಲಿ ಇರಲಿ  ಎಂದು ನನಗೆ 
ಅಕ್ಷರದ ಉಡುಗೊರೆ ನೀಡಿದೆ.....
ಕಾಲೇಜ್ ಫೀಸ್ ಕೇಳಿದಾಗ ನೀನು ಎಲ್ಲಿಂದ  
ಹಣ ತರುತ್ತಿದ್ದೆ ಗೊತ್ತಿಲ್ಲ....
ಇಂದು ಹಣ ಕೊಡಲು ತಂದಿರುವೆ ಆದರೆ  
ಮನೆಯಲ್ಲಿ ನೀನೇ ಇಲ್ಲಾ.......😌
ನೀನಿಲ್ಲದ ಬದುಕು ನನಗೆ ಭಾರವಾಗಿದೆ
ಇಂದು ನಿನ್ನ ನೆನಪುಗಳೊಂದಿಗೆ 
ಬದುಕುವುದು ನನಗೆ ಅನಿವಾರ್ಯವಾಗಿದೆ............ಅಪ್ಪಾ......
ನೆನಪುಗಳ ಜೊತೆ ನಾನಿರುವ ಅಪ್ಪಾ😌

               -ಶ್ವೇತಾ.ಬಿ✍️
 - Made using Quotes Creator App, Post Maker App
2 likes 1 comments
Shwetha,B
Quote by Shwetha,B - ನನಗಾಗಿ ಕಾದಿದೆ
ನಿನ್ನೆಯ ಬಾಳಿನ
ಸುಂದರ ಕ್ಷಣಗಳಿಗೆ
ಪರಿವರ್ತನೆ ನೀಡಿದೆ
ಈ ಗಳಿಗೆ ಹರುಷದಿ
ಅಲಂಕರಿಸುವ ಆಸೆ  
ನಿನಗೆ ಗೆಳತಿ......

         -ಶ್ವೇತಾ. ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಅನ್ಯರು ಮಾಡುವ ಅವಮಾನಗಳಿಂದ
ಇತರರು ಹೇಳುವ ಸುಳ್ಳುಗಳೇ ???
ನೋವು.........

      -ಶ್ವೇತಾ.ಬಿ✍️




 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಸ್ಥಾನ ದೊರೆಯದೆ ಇರಬಹುದು
ವಿದ್ಯೆದೊರೆತಿದೆ
ಅಧಿಕಾರ ದೊರೆಯದೆ ಇರಬಹುದು
ಅಹಂಕಾರ ದೊರೆತಿಲ್ಲ
ಉದ್ಯೋಗ ದೊರೆಯದೆ ಇರಬಹುದು
ಸದ್ಗುಣಗಳು ದೊರೆತಿದೆ......
 
-    ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments

Explore more quotes

Shwetha,B
Quote by Shwetha,B - ವಿದ್ಯೆ ವಿನಯದಿಂದ ಕೂಡಿರಬೇಕು
ಹೊರತು ಅಹಂಕಾರದಿಂದಾಲ್ಲ 
ಶ್ರೀಮಂತಿಕೆ ನಿನ್ನಲ್ಲಿರಬೇಕು
ಹೊರತು ಅಹಂಕಾರದಿಂದಾಲ್ಲ
ಉದ್ಯೋಗ ಮಾರ್ಗದರ್ಶನದಿಂದ 
ಕೂಡಿರಬೇಕು ಹೊರತು ಅಹಂಕಾರದಿಂದಾಲ್ಲ
ಅಧಿಕಾರ ಆದರ್ಶ ಗುಣಗಳಿಂದ ಕೂಡಿರಬೇಕು
ಹೊರತು ಅಹಂಕಾರದಿಂದಾಲ್ಲ
ಇರೋ ಮೂರು ದಿನಗಳ ಸಂತೆಯಲ್ಲಿ
ಅಹಂಕಾರ ಏಕೆ? ಮಾನವ...!!!

           -ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ನಡೆ ನಡೆ
ಪರಿಸರ ಉಳಿಸಿ 
ನೀರಿನ ಹಾಹಾಕಾರವ ಅಳಿಸಿ
ಗಿಡಗಳ ನೆಡಿ.........
ಮನೆಗೊಂದು ಮರ ಊರಿಗೊಂದು ವನ
ಬನ್ನಿ ಕೈಜೋಡಿಸೋಣ....
ಜಗವನು ಹಸಿರಿನಿಂದ ಕಂಗೊಳಿಸೋಣ
ವಾಯು ಜಲ ಶುದ್ಧ ಮಾಲಿನ್ಯಗಳಿಂದ
ಪರಿಸರ ಉಳಿಸಿ ಅದಕ್ಕಾಗಿ ಗಿಡಗಳ ನೆಡಿ
ಶೋಕಿಗಾಗಿ ನೆಡದಿರಿ ಸ್ವಂತಕ್ಕಾಗಿ ಮಾಡಿ
ನಮ್ಮ ಪ್ರಾಣವ ಉಳಿಸಿಕೊಳ್ಳುವತ್ತಾ ಇರಲಿ
ನಮ್ಮ ನಡೆ ! ಮಳೆ ಬೆಳೆಗಾಗಿ ಉಳಿಸೋಣ
ಕಾಡುಗಳನ್ನು ! ಬೆಳೆಸಿಕೊಳ್ಳೋಣ
ಪ್ರತಿ ಮನೆಯಲ್ಲಿ ಸಾಲುಮರದ
ತಿಮ್ಮಕ್ಕನಂತೆ ಪರಿಸರ ಪ್ರೇಮಿ ಆಗೋಣ..

                   -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಯೋಗ್ಯವಾದವರಿಗೆ ಮಾತ್ರ
ಕಣ್ಣೀರು ಹಾಕುವುದು........

          -ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಹಣಕ್ಕಿಂತ ಗುಣ ಮುಖ್ಯ ಅಂದುಕೊಂಡೆ
ಹಣ ಗುಣವನ್ನೇ ಬದಲಾಯಿಸುತ್ತದೆ.....

        -ಶ್ವೇತಾ.ಬಿ - Made using Quotes Creator App, Post Maker App
0 likes 0 comments
Shwetha,B
Quote by Shwetha,B - "ಜ್ಞಾನ ಒಂದೇ ಗೆಲುವಿನ ದಾರಿ"

                -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - single ಇದೀನಿ ಎಂದು ಚಿಂತಿಸದಿರು
ಸಿಂಹ ಯಾವಾಗಲೂ single  ಆಗಿರುತ್ತದೆ

-ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಒಂದು ದಿನ ದಿನಾಂಕ 2021 ಮಾರ್ಚ್ 20 ಈ ದಿನದಂದು ನನ್ನ ಅಪ್ಪನೊಂದಿಗೆ ಮಾತನಾಡುತ್ತಿದ್ದೆ. ಆಗ  ಒಬ್ಬ ವ್ಯಕ್ತಿ ನನ್ನ ಅಪ್ಪನ ಬಳಿಗೆ ಇಂಜೆಕ್ಷನ್ ಮಾಡಿಸಿಕೊಳ್ಳಲು ಬಂದಿದ್ದನು, ಅವರಿಗೆ ಅಪ್ಪ ಇಂಜೆಕ್ಷನ್ ಮಾಡಿ ಕಾಫಿ ಕೊಟ್ಟು ಆ ವ್ಯಕ್ತಿಯೊಂದಿಗೆ ತುಂಬಾ ಪ್ರೀತಿಯಿಂದ ವಿಶ್ವಾಸದಿಂದ  ಮಾತನಾಡಿಸಿ ನೀನು ಬೇಗನೇ ಗುಣಮುಖವಾಗುತ್ತೀರಿ, ಎಂದು ಭರವಸೆ ಕೊಟ್ಟನು. ಆ ವ್ಯಕ್ತಿ ಹೋದ ನಂತರ ನಾನು ಮತ್ತೆ ನನ್ನ ಅಪ್ಪನ ಬಳಿಗೆ ಹೋದೆ. ಆಗ ನಾನು ಹೇಳಿದೆ   ಅವರಿಗೆ ಯಾಕೆ? ನೀನು ಸಹಾಯ  ಮಾಡಿದೆ. ಅವರು ನಿನ್ನ ಮೇಲೆ   ಜಗಳವಾಡಿದರು . ಆಗ ನನ್ನ ಅಪ್ಪ  ನನಗೆ ಒಂದು ಮಾತು ಹೇಳಿದರು. ನೀನು ಯಾವಾಗಲೂ ನಿನ್ನ ಜೀವನದಲ್ಲಿ ಅಳವಡಿಸಿಕೊ..........  
ನಿನ್ನ ಬಳಿ ಸಹಾಯಕ್ಕೆ ಶತ್ರು ಬಂದರೆ ಮಾಡು
ನಿನ್ನ ನಿಂದಿಸಿದವರು ಎಂದು ನೀ ನಿಂದಿಸದಿರು
ಅಪಮಾನ ಮಾಡಿದವರು ಎಂದು ನೀ ಅಪಹಾಸ್ಯ ಮಾಡಿದರು
ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡು
ನಿನ್ನನ್ನು ಅಳಿಸಿದವರು ಎಂದು ನೀ ಅವರನ್ನು ಕಣ್ಣೀರು ತರಿಸದಿರು
ಬಾಯಿಗೆ ಬಂದಂತೆ ಬೈದರೆ ನೀ ಮೌನಿ ಆಗು
ನಿನ್ನ ಬಳಿ ಆ ದೇವರು ಅಂದರೆ ರಾಮಚಂದ್ರ ಪ್ರಭುವಿಗೆ (ವಿಷ್ಣು )  ಪ್ರೀತಿ ಪಾತ್ರಳಾಗುವೆ. 
"ರಾಮನಾಗಲು ಸಾಧ್ಯವಿಲ್ಲ; ರಾಮನ ಆದರ್ಶಗಳು ಪಾಲಿಸಲು ಸಾಧ್ಯ" ಎಂದು ಹೇಳಿದರು. ಆಗ ನಾನು ಹೇಳಿದೆ  ಅಪ್ಪ ನಾನು ರಾಮನಂತೆ ಸುಮ್ಮನಿರಲಾರೆ ! ಮಾಡದೇ ಇರುವ ತಪ್ಪಿಗೆ ನಾನು ಹೊಣೆ  ಆಗಲಾರೆ . ರಾಮ ಯಾರೋ ಮಾತು ಕೇಳಿ ಸೀತೆಯನ್ನು ಕಾಡಿಗೆ ಹಾಕಿದ    ಈ ಭೂಮಿ ಮೇಲೆ ಎಂದು ಹುಟ್ಟಲಾರೆ ,ಎಂದು ಭೂಗರ್ಭದಲ್ಲಿ ಚಿರಂಜೀವಿ ಯಾದಳು .ಆ  ದೇವರನ್ನೇ ಬಿಟ್ಟಿಲ್ಲ ಇನ್ನು ನಮ್ಮಂತ ಸಾಮಾನ್ಯ ನರ ಮಾನವರು ಹೇಗೆ ಬಿಡುತ್ತಾರೆ.   ಕಿತ್ತು ಕಿತ್ತು ತಿನ್ನುತ್ತಾರೆ ಅಪ್ಪ. 
ಹೀಗೆ ಇರುವಷ್ಟು    ಅಸಹಾಯಕಳು ಕಲಿಯುಗದಲ್ಲಿ ಇರಲು ಸಾಧ್ಯವಿಲ್ಲ ಅಪ್ಪ .
 ಅಪ್ಪನ ಫೋನು  ಬಂದಿತು.
ಅಲ್ಲಿಗೆ ನಮ್ಮ ಮಾತುಕತೆಗಳು ಅಂತ್ಯವಾಯಿತು. 

 - ಶ್ವೇತಾ.ಬಿ✍️ - Made using Quotes Creator App, Post Maker App
4 likes 1 comments
Shwetha,B
Quote by Shwetha,B -  ಆಗ ನಾನು ಮಾಲೀಕನಿಗೆ ಹೇಳಿದೆ ಹೀಗೆ ಸುಮ್ಮನಿರಬೇಡಿ. ಅವರು ನಮ್ಮ ದೇಶದಲ್ಲದವರಾಗಿರಬಹುದು. ಆದರೆ ಅವರಿಗೆ ನಮ್ಮ ದೇಶದ ಮೇಲೆ ಅಭಿಮಾನ ಗೌರವ ನಂಬಿಕೆ ಇಟ್ಟುಕೊಂಡು ಬಂದಿರುತ್ತಾರೆ ಆ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕು, ಎಂದು ತಿಳಿಸಿದೆ. ಆ ಮಾಲೀಕ ಏನು ಉತ್ತರಿಸದೆ ತಲೆತಗ್ಗಿಸಿ ಸುಮ್ಮನಿದ್ದ. ಮತ್ತೆ ನಾವು ಶ್ರೀರಾಮನ  ದರ್ಶನಕ್ಕೆ ಹೋದೆವು. ಅಲ್ಲಿ ಶ್ರೀ ರಾಮನ ದರ್ಶನವನ್ನು ಮಾಡಿಕೊಂಡು ನನ್ನ ಆರಾಧ್ಯ ದೈವ ನನ್ನ ಶಕ್ತಿ ಆಂಜನೇಯ ಸ್ವಾಮಿ ದರ್ಶನಕ್ಕೆ ಹೋದೆವು. ಅಲ್ಲಿಂದ ನನ್ನ ತಂಗಿಯವರು ಮುಂದೆ ಹೋಗಿಬಿಟ್ಟಿದ್ದರು. ನಾನು ಒಬ್ಬಳೇ ಮೆಲ್ಲಗೆ ಬರುತ್ತಿದ್ದೆ. ಅಲ್ಲಿ ಇಬ್ಬರು ಹುಡುಗರು ಫೋಟೋ ತೆಗೆದುಕೊಳ್ಳುತ್ತಿದ್ದರು. ನನ್ನ ಹತ್ತಿರ ಬಂದು ಹಲೋ ಎಸ್ಕ್ಯೂಸ್ ಮಿ ಒಂದು ಫೋಟೋ ತೆಗ್ರೀ ಅಂದ್ರು ಸರಿ ಎಂದು ಫೋಟೋ ತೆಗೆದೆ. ಫೋಟೋ ತುಂಬಾ ಚೆನ್ನಾಗಿ ತೆಗೆದಿದ್ದೀರಿ ಇನ್ನು ೪ ಫೋಟೋ ತೆಗ್ರೀ ಅಂದ್ರು  ತೆಗೆದು ಕೊಟ್ಟೆ ಅವರು ತುಂಬಾ ಲಕ್ಷಣವಾಗಿದ್ದೀರಿ ಅಂದ್ರು  ನಾನು ಸುಮ್ಮನೆ ಹೋದೆ. ನನ್ನ ತಂಗಿಯವರು ಕಲ್ಲಿನ ರಥದಲ್ಲಿ ಇದೀವಿ ಬಾ ಅಂದ್ರು . ಅಲ್ಲಿಗೆ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡೆವು . ಮತ್ತೆ ಆ ಇಬ್ಬರು ಹುಡುಗ್ರು ಬಂದರು . ನನ್ನ ತಂಗಿಯನ್ನು ಅಕ್ಕ ನಿನ್ನ ಹೆಸರೇನು?   ಕೇಳಿದರು ಅವಳಿಗೆ ತುಂಬಾ ಕೋಪ ಬಂದಿತು. ಬಾಯಿಗೆ ಬಂದಂಗೆ ಬೈದಳು. ಆಗ ನಾನು ಐಸ್ ಕ್ರೀಮ್ ತೆಗೆದುಕೊಂಡು ಬಂದೆ ಅಲ್ಲಿಗೆ . ಮತ್ತೆ ಆ ಹುಡುಗರು ನನ್ನನ್ನು ನೋಡಿ ಬಂದ್ರು. ಅದು ಎಂಥ ಧೈರ್ಯ ಮೆಚ್ಚಲೇ ಬೇಕಾದದ್ದು. ನನ್ನ ತಂಗಿಯರ   ಎದರಿಗೆ  ನೀವು ನನ್ನ ಮದುವೆಯಾಗಿ ನಾನು ನಿಮ್ಮನ್ನ ರಾಣಿಯಂತೆ ನೋಡಿಕೊಳ್ಳುವೆ ಎಂದು ಹೇಳಿದರು. ಆಗ ನನಗೆ ತುಂಬಾ ಕೋಪ ಬಂತು. ಹಾಗೆ ಸುಮ್ಮನಾದೆ  ಸ್ವಾರಿ ನನಗೆ ಎಂಗೇಜ್ಮೆಂಟ್ ಆಗಿದೆ ಎಂದು ಸುಳ್ಳು ಹೇಳಿದೆ. ಅವರು ಏನು ಮಾತನಾಡದೆ ಸುಮ್ಮನೆ ಹೋದರು. ಆಗ ನನ್ನ  ತಂಗಿಯರು ತುಂಬಾ ತಮಾಷೆ ಮಾಡಿದರು. ಏನೇ ಅಕ್ಕ ನಿನ್ನ ನೋಡಿ 30 ನಿಮಿಷದಲ್ಲಿ ಪ್ರೀತಿ ಹುಟ್ಟಿದೆ ಅದು ಹೇಗೆ ಕಣೆ ಎಂದು ಹೇಳಿದರು ಅದಕ್ಕೆ ಏನು ಉತ್ತರಿಸದೆ ಸುಮ್ಮನೆ ಇದ್ದೆ. ಆಗ ಇನ್ನೊಬ್ಬ ತಂಗಿ ಅಕ್ಕ ಅವನು ನಿಜವಾಗಿಯೂ ಹೃದಯದಿಂದ ಬಂದಿರುವ ಪ್ರೀತಿಯ ಮಾತುಗಳು ಅಂದಳು ಅಲ್ಲಿಗೆ ಹಂಪಿ ವಿಶ್ವವಿದ್ಯಾಲಯ ಬಂದಿತು.

- ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಒಂದು ದಿನ ನಾನು ಮತ್ತು ನನ್ನ ತಂಗಿಯರ ಜೊತೆ ಇತಿಹಾಸ ಪುಟಗಳಲ್ಲಿ ರಾರಾಜಸುತ್ತಿರುವ ವಿಶ್ವವಿಖ್ಯಾತ ಹಂಪಿಗೆ ಹೋಗಿದ್ವಿ. ಅಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಂಡು ನಾನು ಓದಿದ ಎಲ್ಲ ನೆನಪಾಯಿತು. ಬೇಸರ ಕೂಡ ಆಯ್ತು. ನಾನು ಅಂದುಕೊಂಡೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಶಿಲ್ಪಕಲಾ ಕೃತಿಗೆ ಪುನರುಜ್ಜೀವ ತುಂಬಿದರೆ ಎಷ್ಟು ಚೆಂದ ಕಾಣುತ್ತದೆ. ಸರಿ ನನ್ನ ಕಥೆಯನ್ನು ಶುರು ಮಾಡ್ತೀನಿ, ನಾನು ನನ್ನ ತಂಗಿಯರ ಜೊತೆ ಹಂಪಿ ಗೋಪುರದ ಹತ್ತಿರ ಫೋಟೋ ತೆಗಿತಾ ನಿಂತಿದೆ . ಆಗ ಒಂದು ಹುಡುಗ ಗುಂಪು ಬರ್ತಾ ಇತ್ತು. ನನ್ನ ಗಮನ ಫೋಟೋ ತೆಗಿತಾ ಇದ್ದ ಆ ಹುಡುಗ ಗುಂಪಿನ  ಕಡೆ ಹೋಯ್ತು. ಅಲ್ಲಿ ಇಬ್ಬರು ಬಿಳಿ ಹುಡ್ಗೀರು ಇದ್ದರು. ಆ ಗುಂಪು ಬಿಳಿ ಹುಡುಗಿಯರ ಹತ್ತಿರ ಹೋಯಿತು. ಹಾಯ್ ಎಂದು ಹೇಳಿದರು. ಆ ಹುಡ್ಗೀರು ಏನು  ಉತ್ತರಿಸುವುದಿಲ್ಲ.  ಆಗ  ನಾವು ಕೂಡ ಅಂಗಡಿಯಲ್ಲಿ ಎಳನೀರು ಕುಡಿತ  ನಿಂತಿದ್ವಿ ಆ ಹುಡ್ಗರ  ಗುಂಪಿನ ಒಬ್ಬ ವ್ಯಕ್ತಿ ಬಿಳಿ ಹುಡುಗಿಯರ ಮೇಲೆ ಕೆಟ್ಟ ವರ್ತನೆ ತೋರ್ಪಡಿಸಿದನು ಆಗ ನನಗೆ ತುಂಬಾ ಕೋಪ ಬಂದಿದೆ.  ಹೊಡೆಯಲು ಹೊರಟೆ ನನ್ನ ತಂಗಿಅವರು ಬೇಡ ಅಕ್ಕ ಸುಮ್ಮನೇ ಇರು ನಮ್ಮ ಮೇಲೆ ಕೂಡ ಬರುವನು ಅಂದರು  , ಆದರೂ ನನ್ನ ಕೈಯಿಂದ ಆಗಲಿಲ್ಲ  ಅಲ್ಲಿರುವವರೆಲ್ಲರೂ ಸುಮ್ಮನೆ ನೋಡುತ್ತಾ ನಿಂತಿದ್ದರು . ಆಗ ನನಗೆ ಒಂದು ಉಪಾಯ ಹೊಳೆಯಿತು ಅಂಗಡಿ ಮಾಲೀಕನ ಹತ್ತಿರ ಜೋರಾಗಿ ಜೋರಾಗಿಯೇ ಜಗಳವಾಡದೆ ಆಗ ಎಲ್ಲರೂ ಗುಂಪು ಗೂಡಿದರು ಆಗ ಆ ಹುಡುಗರ ಗುಂಪು ಆ ಬಿಳಿ ಹುಡ್ಗೀರನ್ನು ಬಿಟ್ಟು ಹೋಯಿತು. ಆಗ ಬಿಳಿ ಹುಡ್ಗೀರು ಕನ್ನಡ ಮಾತನಾಡದೆ ಬಾರದ   ಬಿಳಿಯರಿಗೆ ಅರ್ಥವಾಯಿತು . ಅವರು ಥ್ಯಾಂಕ್ ಯು ಮೈ ಡಿಯರ್ ಫ್ರೆಂಡ್ ಎಂದು ಅಪ್ಪಿಕೊಂಡು ಸಿಹಿ ಮುತ್ತನ್ನು ನೀಡಿದರು.

 -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಒಂದು ದಿನ ನಾನು ಮತ್ತು ನನ್ನ ತಂಗಿಯರ ಜೊತೆ ಇತಿಹಾಸ ಪುಟಗಳಲ್ಲಿ ರಾರಾಜಸುತ್ತಿರುವ ವಿಶ್ವವಿಖ್ಯಾತ ಹಂಪಿಗೆ ಹೋಗಿದ್ವಿ. ಅಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಂಡು ನಾನು ಓದಿದ ಎಲ್ಲ ನೆನಪಾಯಿತು. ಬೇಸರ ಕೂಡ ಆಯ್ತು. ನಾನು ಅಂದುಕೊಂಡೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಶಿಲ್ಪಕಲಾ ಕೃತಿಗೆ ಪುನರುಜ್ಜೀವ ತುಂಬಿದರೆ ಎಷ್ಟು ಚೆಂದ ಕಾಣುತ್ತದೆ. ಸರಿ ನನ್ನ ಕಥೆಯನ್ನು ಶುರು ಮಾಡ್ತೀನಿ, ನಾನು ನನ್ನ ತಂಗಿಯರ ಜೊತೆ ಹಂಪಿ ಗೋಪುರದ ಹತ್ತಿರ ಫೋಟೋ ತೆಗಿತಾ ನಿಂತಿದೆ . ಆಗ ಒಂದು ಹುಡುಗ ಗುಂಪು ಬರ್ತಾ ಇತ್ತು. ನನ್ನ ಗಮನ ಫೋಟೋ ತೆಗಿತಾ ಇದ್ದ ಆ ಹುಡುಗ ಗುಂಪಿನ  ಕಡೆ ಹೋಯ್ತು. ಅಲ್ಲಿ ಇಬ್ಬರು ಬಿಳಿ ಹುಡ್ಗೀರು ಇದ್ದರು. ಆ ಗುಂಪು ಬಿಳಿ ಹುಡುಗಿಯರ ಹತ್ತಿರ ಹೋಯಿತು. ಹಾಯ್ ಎಂದು ಹೇಳಿದರು. ಆ ಹುಡ್ಗೀರು ಏನು  ಉತ್ತರಿಸುವುದಿಲ್ಲ.  ಆಗ  ನಾವು ಕೂಡ ಅಂಗಡಿಯಲ್ಲಿ ಎಳನೀರು ಕುಡಿತ  ನಿಂತಿದ್ವಿ ಆ ಹುಡ್ಗರ  ಗುಂಪಿನ ಒಬ್ಬ ವ್ಯಕ್ತಿ ಬಿಳಿ ಹುಡುಗಿಯರ ಮೇಲೆ ಕೆಟ್ಟ ವರ್ತನೆ ತೋರ್ಪಡಿಸಿದನು ಆಗ ನನಗೆ ತುಂಬಾ ಕೋಪ ಬಂದಿದೆ.  ಹೊಡೆಯಲು ಹೊರಟೆ ನನ್ನ ತಂಗಿಅವರು ಬೇಡ ಅಕ್ಕ ಸುಮ್ಮನೇ ಇರು ನಮ್ಮ ಮೇಲೆ ಕೂಡ ಬರುವನು ಅಂದರು  , ಆದರೂ ನನ್ನ ಕೈಯಿಂದ ಆಗಲಿಲ್ಲ  ಅಲ್ಲಿರುವವರೆಲ್ಲರೂ ಸುಮ್ಮನೆ ನೋಡುತ್ತಾ ನಿಂತಿದ್ದರು . ಆಗ ನನಗೆ ಒಂದು ಉಪಾಯ ಹೊಳೆಯಿತು ಅಂಗಡಿ ಮಾಲೀಕನ ಹತ್ತಿರ ಜೋರಾಗಿ ಜೋರಾಗಿಯೇ ಜಗಳವಾಡದೆ ಆಗ ಎಲ್ಲರೂ ಗುಂಪು ಗೂಡಿದರು ಆಗ ಆ ಹುಡುಗರ ಗುಂಪು ಆ ಬಿಳಿ ಹುಡ್ಗೀರನ್ನು ಬಿಟ್ಟು ಹೋಯಿತು. ಆಗ ಬಿಳಿ ಹುಡ್ಗೀರು ಕನ್ನಡ ಮಾತನಾಡದೆ ಬಾರದ   ಬಿಳಿಯರಿಗೆ ಅರ್ಥವಾಯಿತು . ಅವರು ಥ್ಯಾಂಕ್ ಯು ಮೈ ಡಿಯರ್ ಫ್ರೆಂಡ್ ಎಂದು ಅಪ್ಪಿಕೊಂಡು ಸಿಹಿ ಮುತ್ತನ್ನು ನೀಡಿದರು.

 -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments

Explore more quotes

Shwetha,B
Quote by Shwetha,B - ಬೆಲೆ ಇಲ್ಲದ ಜಾಗದಲಿ
 ಕಣ್ಣೀರು ಹಾಕಿದೆ
ಅಹಂಕಾರ ಇರುವ ಜಾಗದಲಿ
 ಮೌನಿಯಾದೆ
ನನ್ನನ್ನು ಟೀಕಿಸಿದವರು 
ಚುಚ್ಚು ಮಾತುಗಳಿಗೆ
ನನ್ನನ್ನು ನಾ ಪರಿಚಯಿಸಿದೆ 
ಅವರಿಗೆ..........
 
-ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಸೋತ ಜಾಗದಲ್ಲಿ ಗೆಲುವಿನ ಹರ್ಷ ಚಿಮ್ಮಲಿ


-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಎಲ್ಲಿದ್ದಾಯ  ಅಂತ ಗೊತ್ತಿಲ್ಲ 
ಆದ್ರೆ ಭೂಮಿಯ
ಯಾವ್ದೋ ದಿಕ್ಕಿನಲಿ 
ನನಗೋಸ್ಕರ ಹುಟ್ಟಿರ್ತಿಯಾ
ಹೇಗಿದ್ದೀಯಾ ಅಂತ ಗೊತ್ತಿಲ್ಲ 
ಆದ್ರೆ ನನ್ನನ್ನು ಅಂದ್ಮೇಲೆ 
ಅರಸನಾಗಿರುತ್ತಿಯಾ
ಹೆಸರೇನಂತ ಗೊತ್ತಿಲ್ಲ ಆದ್ರೆ
ನನ್ನ ಹೆಸರಿನ ಮೊದಲು 
ನಿನ್ನ ಹೆಸರು ಬೆರೆತಿರುತ್ತದೆ
ಮುಖಮುಖಿ ಯಾವಾಗ ಗೊತ್ತಿಲ್ಲ
ಆದ್ರೆ ಜಾಸ್ತಿ ನಿರೀಕ್ಷೆಯಲಿ ಇಲ್ಲ
ನಿನಗಾಗಿ ಕಾಯ್ತಿರ್ತಿನಿ..........
  
    -ಶ್ವೇತಾ.ಬಿ✍️ - Made using Quotes Creator App, Post Maker App
3 likes 0 comments
Shwetha,B
Quote by Shwetha,B - ಅವ್ರೆ ಕಾಳು ಕಣ್ಣಿನವನು
ಗುಂಟೂರುಕಾರದ ಮಾತಿನವನು
ಕಣ್ಣಿಗೆ ಕಾಣ್ಸಿಲ್ಲ ಕೈಯಿಗೆ  ಸಿಕ್ಕಿಲ್ಲ
ಟೊಮೋಟೊಯಂತ ಮುಖವುಳ್ಳವನು
ಕೈ ಬೀಸ್ಕೊಂಡು ಕನಸಿಗೆ ಬರ್ತಾನೆ
ನಿಂತತುನಿಲ್ಲಲ್ಲ ಕುತಂತ್ರ ಕೂರಲ್ಲ
ಬಟಾಣಿಯಂತೆ ಉರುಳುವನು
ಕವಿತೆಯಲಿ ಜೀವಂತ ಅವನು
ಕಲ್ಪನೆಯಲಿ ಮಾತ್ರ ಸ್ವಂತ ಅವನು
ಪ್ರೀತಿಯ ಬಾಗಿಲಿಗೆ ಬಂದು ಬೆಲ್ ಮಾಡ್ಡಾಗ
ಬಾಗಿಲು ತೆಗೆದು ನೋಡಿ ಹೇಳ್ತೀನಿ
ಅವನು ಯಾರು ಅಂತಾ..........

-ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - "HAPPY NEW YEAR"
*******************

ಮನದಲಿ ಪ್ರೀತಿ ಇರಲಿ 
ಮೊಗದಲಿ ನಗು ಇರಲಿ
 ಹೃದಯದಲಿ ಕರುಣೆ ಇರಲಿ 
ಕಂಗಳಲಿ ಕನಸಿರಲಿ
 ಕೈಗಳಲಿ ಹಾರೈಕೆ ಇರಲಿ
ತುಟಿಗಳಲಿ ಸಿಹಿ ಮಾತಿರಲಿ
2024ರ    ದಿನಗಳು 
ಸಂತಸದಿಂದ ತುಂಬಿರಲಿ
"ಹೊಸವರ್ಷದ ಹಾರ್ದಿಕ ಶುಭಾಶಯಗಳು"

              -ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಅರ್ಥವಿಲ್ಲದ ಪ್ರಶ್ನೆಗಳು
ಅರ್ಥವಿದ್ದರೂ ನೀಡಿದ ಉತ್ತರಗಳು
ಅರ್ಥವಿದ್ದು ಅರ್ಥವಿಲ್ಲದ ನೋವುಗಳು
ನೆಮ್ಮದಿ ಇಲ್ಲದ ದಿನಗಳು
ಮರೆತು ಹೋದ ಮನಸ್ಸುಗಳು
ಮರೆಯದೆ ಬರುತ್ತಿರುವ ಕಣ್ಣೀರುಗಳು
ನಿದ್ದೆ ಇಲ್ಲದ ರಾತ್ರಿಗಳು
ಕಳೆದು ಹೋದ ಹಗಲುಗಳು
ಸಮಯದ ಜೊತೆ 
ಹೋಗುತ್ತಿರುವ ವರ್ಷಗಳು
ಗೊತ್ತಿದ್ದರೂ ಗೊತ್ತಿಲ್ಲದ ನಟನೆಗಳು
ಬದುಕು ಜಟಕಾಬಂಡಿಯಾದರೆ
ಜಟಕಾ ಬಂಡಿ ಅಲ್ಲದ ಜೀವನ
ಸಮಯದಲಿ ಸಾಗಿದ ಜೀವನ......

        -ಶ್ವೇತಾ. ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - *"2023"*


ಅವಮಾನಿಸುವವರು
ಕಡೆಗಣಿಸುವವರು
ಹೀಯಾಳಿಸಿದವರು
ಶಪಿಸುವವರು
ಅಹಂ ನಿಂದ ವರ್ತಿಸಿದವರು
ಅಪಹಾಸ್ಯ ಮಾಡಿದವರು
ಹೊಸ ಪರಿಚಯದ ವ್ಯಕ್ತಿಗಳು
ನಗು ಮತ್ತು ಅಳು, ಸೋಲುಗಳಲ್ಲಿ
2023ರಲ್ಲಿ ಕಲಿತ ಪಾಠಗಳು 
ಮುಗಿದು ಹೋದ ಆ ದಿನಗಳು
ಮುಂದಿನ ಹೊಸ ಅಧ್ಯಾಯ 
2024ರ ಕಲಿಯುವುದಕ್ಕೆ ಸಿದ್ದಳು ನಾ........

-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ""read""
***********
DREAM BIG
SET GOAL
MAKE PLAN
GET TO WORK
TRICKS PLAN
STICK PLAN
REACH THE GOAL
  
        -Shwetha,b✍️ - Made using Quotes Creator App, Post Maker App
3 likes 1 comments
Shwetha,B
Quote by Shwetha,B - ದಯವಿಟ್ಟು
ಆ  panta shirt , insult ಹಾಕ್ಕೊಂಡು
ಆ ತರ ಲುಕ್ ಮಾತ್ರ ಕೊಡ್ಬೋಡ
❤️ದ  ಬಡಿತ ಜಾಸ್ತಿ ಆಗಿ ಜೀವ
ಹೋದ್ರೆ ಹೋಗುತ್ತದೆ
ಆದರೆ .................
LIC ಮಾಡ್ಸಿಲ್ಲ..........!

           -ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಕೋಟಿ ಜನ ಮೆಚ್ಚೋ
ನಾ ವಿರಾಟ್ ಕೊಹ್ಲಿ ಯಂತಹ
ಆಟಗಾರ್ತಿ ಅಲ್ಲ....
ನನ್ನಲ್ಲಿ ಬರೀ ತಪ್ಪುಗಳನ್ನು
 ಹುಡುಕೋ  ವ್ಯಕ್ತಿ ನಾ

          -ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments

Explore more quotes

Shwetha,B
Quote by Shwetha,B - Never look down on
anyone everyone has
their own individual capability ...

-shwetha .b✍️ - Made using Quotes Creator App, Post Maker App
4 likes 1 comments
Shwetha,B
Quote by Shwetha,B - "ನಗು "
************
ನಗು ಇನ್ನೊಬ್ಬರ ಮನದಲಿ
 ಚುಚ್ಚುವಂತಿರಬಾರದು
ನಗು ಇನ್ನೊಬ್ಬರ ಮೊಗದಲಿ
ನಗುವಿನ ಛಾಯೆ 
ಮೂಡಿಸುವಂತಿರಬೇಕು

            --ಶ್ವೇತಾ.ಬಿ✍️

 - Made using Quotes Creator App, Post Maker App
8 likes 2 comments
Shwetha,B
Quote by Shwetha,B - ""108""
**********
ರಸ್ತೆಯಲೊಂದು  ಅಪಘಾತ
ರಕ್ತದ ಮೊಡವಿನಲಿ ಬಿದ್ದಿದ್ದರು
ಅಮ್ಮ,,, ಅಮ್ಮ,,,, ಅಂತಾ
ನೋವಿನ  ಆಕ್ರಂದನದಲಿ ಇದ್ದರು
ವೇಗದಲಿ ಅಳುತ್ತಾ ಬರುವೆ
ನೀ ಯಾರೋ,,,,,,,,,

ಬರ ನಿಮಿಷದಲಿ
ನೆತ್ತಿಯ ಮೇಲೆ ಹೊತ್ತುಕೊಂಡು
ಮಿಂಚಿನಂತೆ ಬೆಳಕಿನ ವೇಗದಲಿ
ನುಗ್ಗಿ ಹೋಗುವೆ
ನಮ್ಮವರು ಇಲ್ಲದ ಸ್ಥಳದಲಿ
ನಾನಿರುವೆ ಅಂತ ಓಡಿಬರುವೆ
ದವಾಖಾನೆಯಲಿ ಜೊತೆಯಲಿ ಇರುವೆ
ನೀ ಯಾರೋ,,,,

ಜನನಕ್ಕು ಮರಣಕ್ಕು ಬರುವೆ
ನಗು ಮಗುವಿನಂತೆ ನಮಗೆ
ಜೀವ ಉಳಿಸಲು  ಸಂಚಾರಿಸುವ
ಸಂಜೀವಿನಿ ಆಗಿರುವೆ
ನೀ ಯಾರೋ,,,,,,,,,
*****108*****

              __ಶ್ವೇತಾ.ಬಿ✍️

 - Made using Quotes Creator App, Post Maker App
0 likes 0 comments
Shwetha,B
Quote by Shwetha,B - "**"ಜೈ ಶ್ರೀ ರಾಮ್"**"
___________________________
ಹೇ ರಾಮನ ಬಂಟ ಹನುಮಂತ
ಪರಮಾತ್ಮನ ಅಂಶವೇ ಮಾರುತಿ
ಲಂಕೆಯನು ಬೆಂಕಿಯಲಿ ಹೊತ್ತಿ 
 ದಹಿಸಿದ ಪವನ ಪುತ್ರ
ಗ್ರಹಗಳ ವಿಮೋಚಕ ಆಂಜನೇಯ
ಗಿಡಮೂಲಿಕೆ ತರಲು
 ಹೋಗಿ ಬೆಟ್ಟವನು ಕೈಯಲಿ  
ಹಿಡಿದ ಅಂಜನಾಪುತ್ರ
ಸಪ್ತಸಾಗರವನು ದಾಟಿ
ಸೀತಾಮಾತೆಗೆ ಸಂದೇಶ
ನೀಡಿ ಸೀತೆಯ ಮೊಗದಲಿ
 ನಗು ಮೂಡಿಸಿದ ಮಂಗಳಮೂರ್ತಿ
ಸೂರ್ಯ ,ಸುದರ್ಶನ ಚಕ್ರವನು
ಬಾಯಿಯಲಿ ಹಿಡಿದ ಭಜರಂಗಿ
ಭೂತಪೇತಗಳ ಮನದಲಿ
"ರಾಮ"ನಾಮವನು ಭಕ್ತಿಯ ಸುಧೆಯಲಿ
ತೇಲಿಸಿ ಚಿರಂಜೀವ ಜೀವಿಸಿದ
ರಾಮನ ಭಕ್ತ ಹನುಮಂತ
ಜೈ ಶ್ರೀ ರಾಮ್..............

                --ಶ್ವೇತಾ.ಬಿ✍️
 - Made using Quotes Creator App, Post Maker App
0 likes 0 comments
Shwetha,B
Quote by Shwetha,B - **ನಿದ್ರೆ**
########
ಎಷ್ಟು ಜಾಗ ಬದಲಿಸಿದರು
ನಿದ್ರೆ ಬರಲಿಲ್ಲ ಎಷ್ಟು ದಣಿದರು
ಕೆಲಸ ಮುಗಿಸಿದರು
ನೆಮ್ಮದಿಯ ನಿದ್ರೆ ಬರಲಿಲ್ಲ

ನಾಳೆನ ಚಿಂತೆಗಳ ಎಚ್ಚರಿಸುತ್ತಾ
ಮಕ್ಕಳ ಭವಿಷ್ಯದ ಕಾಳಜಿ ಕಾಡುತ್ತಾ
ದೇವರನು  ಸ್ಮರಿಸಿದರು ಬಾರದ ನಿದ್ರೆ

ಸಾಲದ ಹೊರೆಯಲಿ ಮಲಗಿದೆ
ಪಕ್ಕದಲಿ  ತಂಬಿಗೆ  ಇಟ್ಟುಕೊಂಡು
ನೀರು ಕುಡಿದು ಸಮಾಧಾನದಿಂದ
ನಿದ್ರಿಸಿದರು ನಿದ್ರೆ ಬರಲಿಲ್ಲ

ಎಷ್ಟು ದಿಕ್ಕು ಬದಲಿಸಿದರು
ಮಲಗುವ ಕೋಣೆ ವಾಸ್ತು ಸರಿ ಇಲ್ಲ
ಅಂತ ಹೇಳುವರು

ಅಂದೊಂದು ಬಾರದ ನಿದ್ರೆ,,,,,,,

ಆ ಕಡೆ ಈ ಕಡೆ ಹೊರಳಾಡದೆ
ಮೆತ್ತನೆಯ ಹಾಸಿಗೆಯಲಿ ಚಿರ ನಿದ್ದೆ
ಎಷ್ಟು ಕೂಗಿದರು ಕಿರಿಚಾಡಿದರು
ಹೂವಿನ ಹಾಸಿಗೆ ಮೇಲೆ ಮಲಗಿದೆ

ನೀರು ಎರಚಿ ಮುಟ್ಟಿ ಎಬ್ಬಿಸುವರು
ಸುಟ್ಟರೂ ನೋವಾಗದ ನಿದ್ರೆ
ಮಣ್ಣಿನ ಪರಿಮಳದೊಂದಿಗೆ
 ಸುಖದ ನಿದ್ರೆಯಲಿಮಲಗಿದೆ...

                 -ಶ್ವೇತಾ.ಬಿ✍️


 - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಸಾಲಿಗೂಡಿಗೆ ಶಿಕ್ಷಕಿ ಆಗೋಕೆ
ತರಬೇತಿ ಪಡಿಯೋಕೆ ಬಂದೆ
ನಾ ಕನಸು ಕಂಡ ಕಾಲೇಜು
ನನಗೆ ದೊರೆಯಲಿಲ್ಲ
 ಬಯಸದೇ ಬಂದ ಭಾಗ್ಯವಾಯಿತು
 ಸತ್ಯದ  ಆ ಸಾಲಿ ಗುಡಿ.....
ಜೇನುತುಪ್ಪದ ಕಲರ್ ಸೀರೆ
ನನ್ನ ಸಮವಸ್ತ್ರವಾಯಿತು
ಕಮಲದಂತೆ  ನಗು ಮೊಗವನು
 ಅರಳಿಸಿ ಕೊಂಡು
ಹಳ್ಳಿಯಿಂದ ಸಿಟಿಗೆ ಬಂದೆ
ಬಲಗೈಯಲ್ಲಿ ನೆರಿಗೆ ಹಿಡಿದು
ಎಡಗೈಯಲ್ಲಿ ಸೆರಗು ಹಿಡಿದು
ರಸ್ತೆಯಲ್ಲಿ ಪಾದಚಾರಿ ನಡಿಗೆಯಲಿ
ಹೋದೆ ನಾ.....
ಕೈಯಲ್ಲಿ ಚಕ್ಮಿಸ್ ಕಪ್ಪುಹಲಿಗೆಯಲಿ
 ಸವೆಸೋ ಕೋಮಲವಾದ ಕೈಗಳ
ಬಳೆಯ ಶಬ್ದನಾದದಲ್ಲಿ ಕನ್ನಡ ಅಕ್ಷರಗಳು
ಬಣ್ಣ ಹಚ್ಚದೆ ಕನ್ನಡ ಮಾತಾಡೋ ತುಟಿಗಳು
ಮಕ್ಕಳ ಕೆನ್ನೆಗೆ ಮುತ್ತಿಟ್ಟು
ಮಕ್ಕಳ ಹೃದಯ ಕದ್ದವಳು ನಾ
ಅಕ್ಷರ ಕಲಿಸೋ ನನ್ನ ಕನಸುಗಳು
ಶಾಲಾ ಆವರಣದಲ್ಲಿ ಸರಸ್ವತಿ ಮಾತೆ
ದಾರಿಯಲ್ಲಿ ರಾಧೆಯಂತೆ ಕಂಡೆ ನಾ
ನೆರಳಂಗೆ ಹಿಂದೆ ಬರ್ತೀನಿ ಅಂತ
ಹೇಳಲು ಬಂದರು
ಅಷ್ಟರಲ್ಲಿ ಅಣ್ಣ ಎಂದು ಕೂಗಿದೆ
ನಾ.........
                 -  ಶ್ವೇತಾ.ಬಿ ✍️

 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಮದುವೆ ಎಂಬ ಮೂರ
ಅಕ್ಷರಗಳಲಿ ಬೆಂದೆ ನಾ...

ಮೂರು ದಿನದ ಸಂತೆಯಲಿ
ಬಡಿವಾರದ ಮದುವೆ 
ಅದ್ದೂರಿಯಾಗಿ ಆಯ್ತು 
ಅನ್ನೋದು ಮುಖ್ಯವಲ್ಲ  

ಎಷ್ಟು ಅದ್ದೂರಿಯಾಗಿ
ಜೀವನ ಸಾಗಿಸಿದೆ ಅನ್ನೋದು ಮುಖ್ಯ

ಸಾಲ ಸೋಲ ಮದುವೆ ಮಾಡಿ
ಸವಾಲುಗಳನ್ನ ಅದ್ದೂರಿಯಾಗಿ ಎದುರಿಸಬೇಕು

ಆಡಿಕೊಳ್ಳುವ ಕೊಂಕುಮಾತಿಗೆ
ಡೊಂಕಾಗದೆ  ಸೂತ್ರಧಾರಿಯಂತೆ
ಇರಬೇಕು
ಯಾವ ವಿಧದಲ್ಲಿ ಯಾದ್ರು
ಮದುವೆಯಾದರೆ
ವಿಚ್ಛೇದನ ಕೊಡುವಂತಿರಬಾರದು

ಬಾಳ ಸಂಗಾತಿ ಆಯ್ಕೆಉತ್ತಮವಾಗಿ
ಸಂಸಾರದಲಿ ಅದ್ದೂರಿಯಾಗಿ
ನೀವು........

       ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - patience may seem bitter
sometimes but it's fruit is
always sweet.

         shwetha.B✍️ - Made using Quotes Creator App, Post Maker App
3 likes 0 comments
Shwetha,B
Quote by Shwetha,B - ಲ್ಲೇನ್ನನೀ ವೆರುಬ ನಾ ಪ್ಪ ಅ

    ಶ್ವೇತಾ.ಬಿ ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - Patience may seem bitter
soomtimes but it's fruit is
always sweet.


                shwetha,b✍️ - Made using Quotes Creator App, Post Maker App
5 likes 0 comments

Explore more quotes

Shwetha,B
Quote by Shwetha,B - ನನ್ನ ಸಾವಿನ ಸುದ್ದಿಯನ್ನು 
ಒಮ್ಮೆಲೇ ಕೊಡಬೇಡ
ಅಮ್ಮನನ್ನು ಕೇಳಿದ್ರೆ
ದೀಪ ಹಚ್ಚುಎಂದು ಹೇಳು
ಆದರೂ ಅರ್ಥವಾಗದಿದ್ದರೂ
ಜೋರಾಗಿ ಅತ್ತು ಬಿಡು
ಅಣ್ಣ ನನ್ನ ಕೇಳಿದರೆ
ಸಮಾಧಾನಪಡಿಸಿ
ಆದರೂ ಅರ್ಥವಾಗದಿದ್ದರೆ
ನೆಲ ಉಳು ಎಂದು ಹೇಳು
ನನ್ನ ಸಾವಿನ ಸುದ್ದಿಯನ್ನು
ಒಮ್ಮೆಲೆ ಕೊಡಬೇಡ
ಅತ್ತಿಗೆ ನನ್ನ ಕೇಳಿದ್ರೆ
ತಲೆ ತಗ್ಗಿಸಿ ಸುಮ್ಮನಿದ್ದು ಬಿಡು
ಆದರೂ ಅರ್ಥವಾಗದಿದ್ದರೆ
ಊರುಗೋಲು ಮುರಿದಿ ಇಡು
ತಮ್ಮ ನನ್ನ ಕೇಳಿದರೆ
ಆ ಸ್ಥಳ ಖಾಲಿಯಾಗಿವೆಂದು ಹೇಳು
ಆದರೂ ಅರ್ಥವಾಗದಿದ್ದರೆ
ಬಿಗಿ ಅಪ್ಪಿ ಜೋರಾಗಿ ಅತ್ತುಬಿಡು
ತಂಗಿ ನನ್ನ ಕೇಳಿದರೆ
ನಕ್ಷತ್ರಗಳನ್ನು ತೋರಿಸು
ಆದರೂ ಅರ್ಥವಾಗದಿದ್ದರೆ
ನನ್ನ ಪುಸ್ತಕಗಳು ತೋರಿಸಿ
ನನ್ನ ಸಾವಿನ ಸುದ್ದಿಯನ್ನು 
ಒಮ್ಮೆಲೆ ಕೊಡಬೇಡ ಗೆಳತಿ.

ಶ್ವೇತಾ. ಬಿ ✍️


 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಅವಮಾನ ಮಾಡಿದರು ಜನ
ಸುತ್ತಲೂ ನಿಷ್ಠುರದ ನುಡಿಗಳು
ಒಮ್ಮೊಮ್ಮೆ ಮೂಕಳಂತೆ ಸುಮ್ಮನಿದ್ದೆ
ಮತ್ತೊಮ್ಮೆ ನನ್ನಲ್ಲೇ ನಾ ವಿಸ್ಮಿತಳಂತೆ
ಆಲಿಸಿದೆ, ಆಕ್ರಂದಿಸಿದ್ದೆ
ಅವಮಾನ ಮಾಡಿದರು ಜನ
ನಾ ಹುಟ್ಟಿದ್ದು ವ್ಯರ್ಥವೆಂದು
ಮರುಗಿದೆ, ಮೌನದಿ
ಜಿಗುಪ್ಸೆಯಲ್ಲಿ ಸಾಯಲು ಹೊರಟೆ
ನಾ ನಿದ್ದು ಸಾಧಿಸಲು ಇನ್ನೇನಿದೆ
ಆಗ ನೆನಪಾಯಿತು
ಭಗವದ್ಗೀತೆಯ ತತ್ವಗಳು
ಗೆದ್ದವರಿಗಿಂತ ಸೋತವರ 
ಇತಿಹಾಸರಚಿಸಿದ್ದು
ಎಷ್ಟು ಜನರಿಲ್ಲ ನನ್ನಂತೆ ಇನ್ನು
ಗೆದ್ದೇ ಗೆಲ್ಲುವೆ ಒಂದು ದಿನ
ಅವಮಾನ ಮಾಡಿದರು ಜನ
ಅವಮಾನ ಅಪಹಾಸ್ಯ ಮಾಡಿದವರ 
ಎದುರೇ ಹಾರ ತುರಾಯಿಗಳಿಂದ
ಸನ್ಮಾನ ಮಾಡಿಸಿಕೊಳ್ಳಲು
ನಾ ನಿಲ್ಲಬೇಕಿದೆ ಎದ್ದು
ಅವಮಾನ ಮಾಡಿದರು ಜನ.

ಶ್ವೇತಾ. ಬಿ ✍️

 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಅನುಭವ ಮಂಟಪ ಸ್ಥಾಪಿಸಿ
ಶಿವ ಶರಣರ ವಚನಗಳ
 ನೆಲೆ ಕಲ್ಪಿಸಿದ ಗುರು

ಕಾಯಕವೇ ಕೈಲಾಸ 
ದುಡಿದು ತಿನ್ನುವ ಮಹತ್ವ 
ಸಾರಿದ ಕರ್ಮಯೋಗಿ

ಜಾತಿಗೀತಿಯಿಲ್ಲ  ಇರುವೊಂದೆ
ಮಾನವ ಜಾತಿಯೆಂದು
ಸಾರಿದ ವಿಶ್ವಗುರು

ಮೌಢ್ಯತೆ, ಅಂಧಕಾರ ಮಡುವಿನಲ್ಲಿ
ಜನರಿಗೆ ಸುಜ್ಞಾನದ 
ಬೆಳಕು ನೀಡಿದ ಜಗಜ್ಯೋತಿ

ಆತ್ಮಶುದ್ಧಿಗಾಗಿ
ಮೂರ್ತಿಪೂಜೆಯ ಖಂಡಿಸಿ
ನಾಡಿನ ಒಳಿತಿಗಾಗಿ ಹೋರಾಡಿದ
ಮಹಾಮಾನವತಾವಾದಿ
  
ನಿಂದಿಸುವವರ ಕೊಂಕುಮಾತಿಗೆ
ಉರಿಯುವವರು ಉರಿಯಲಿ ಬಿಡು 
ದೇವರಾಗಿಬಿಡುವೆಂದು

ವಚನಗಳ ಮೂಲಕ ಅರಿವು
 ಮೂಡಿಸಿದ ಬಸವಣ್ಣನವರು
ವಚನ ಕ್ರಾಂತಿಯ ಹರಿಕಾರನಾದ

ಶ್ವೇತಾ ,ಬಿ ✍️


 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಅನುಭವ ಮಂಟಪ ಸ್ಥಾಪಿಸಿ
ಶಿವ ಶರಣರ ವಚನಗಳ
 ಸ್ವಾತಂತ್ರ ಕಲ್ಪಿಸಿದ ಗುರು

ಕಾಯಕವೇ ಕೈಲಾಸ 
ದುಡಿದು ತಿನ್ನುವ ಮಹತ್ವ 
ಸಾರಿದ ವಿಶ್ವಗುರು

ಜಾತಿಗೀತಿಯಿಲ್ಲ  ಇರುವೊಂದೆ
ಮಾನವ ಜಾತಿಯೆಂದು
ಸಾರಿದ ವಿಶ್ವಗುರು

ಮೌಢ್ಯತೆ, ಅಂಧಕಾರ ಮಡುವಿನಲ್ಲಿ
ಜನರನ್ನು ಸುಜ್ಞಾನದ 
ಬೆಳಕು ನೀಡಿದ ಜಗಜ್ಯೋತಿ

ಆತ್ಮಶುದ್ಧಿಗಾಗಿ
ಮೂರ್ತಿಪೂಜೆಯ ಖಂಡಿಸಿ
ನಾಡಿನ ಒಳಿತಿಗಾಗಿ ಹೋರಾಡಿದ
ಮಹಾಮಾನವತಾವಾದಿ
  
ನಿಂದಿಸುವವರ ಕೊಂಕುಮಾತಿಗೆ
ಉರಿಯುವವರು ಉರಿಯಲಿ ಬಿಡು 
ದೇವರಾಗಿಬಿಡುವೆಂದು
ವಚನಗಳ ಮೂಲಕ ಅರಿವು
 ಮೂಡಿಸಿದ ಮಹಾಗುರು ಬಸವಣ್ಣನವರು..

ಶ್ವೇತಾ ,ಬಿ ✍️


 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ***ಬಾ, ಸ,ಪ್ರೌ,ಶಾಲೆ ೧ ನೆನಪು***
*******"""""""**********

ಸರಸ್ವತಿ ಮಾತೆ ನೆಲೆಸಿದ
ಪವಿತ್ರವಾದ ದೇಗುಲ
ಸುಂದರವಾದ ಪ್ರಕೃತಿ ಮಡಿಲಿನ
ಮುದ್ದು ಮನಸ್ಸಿನ ಮೊಗ್ಗುಗಳೆ
ಮುಗ್ಧತೆಯ ತೋಟದಲ್ಲಿ ಅರಳಿದ
ಮಕ್ಕಳ ಮಾತುಗಳು
ಸ್ಮಾರ್ಟ ರೂಮಿನಲ್ಲಿ ನಡೆದಿತ್ತು
ಹುಣಸೆ ಕಾಯಿಯ ಸಭೆ
ಹುಣಸೆಕಾಯಿ ಸಭೆಯಲ್ಲಿ
ಶಿಕ್ಷಕ-ಶಿಕ್ಷಕರ ನಿಮಿಕ್ರಿ ಪ್ರದರ್ಶನ
ಹಾ,ಹಾ , ಎಂತಹ  ಹುಣಸೆಕಾಯಿ
ಹುಣಸೆಕಾಯಿ ಸವೆಯುತ್ತಾ
 ಆ ಮುದ್ದಾದ ಮಾತುಗಳಿಂದ
ನಿಮಿಕ್ರಿ ಪ್ರಾರಂಭವಾಯಿತು
ಮನ ಹಿಕ್ಕಿರಿದು ನಗುವಿನ ಹಬ್ಬ
ಬೀರಿದ ದಿನಗಳು
ಶಾಲಾ ದಿನಗಳ ನೆನಪುಗಳು ಹಿಂತಿರುಗಿ
ಅಂತರಂಗದ  ಅಲೆಯಂತೆ
ಅಪ್ಪಳಿಸಿ ಜಲಧಾರೆಯಲ್ಲಿ
ನನ್ನೆದೆಯ ಅಚ್ಚಳಿಯದೆ ಉಳಿದಿರುವ
ಸುಂದರವಾದ ಕ್ಷಣಗಳೊಂದಿಗೆ
ಬಾ,ಸ, ಪ್ರೌ, ಶಾಲೆಯಲ್ಲಿ ಕಳೆದಿರುವೆ...
 
ಶ್ವೇತಾ.ಬಿ✍️



 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ನನ್ನ ಪಾಡಿಗೆ ನಾನು ಜೀವಿಸುತ್ತಾ
ನವ್ಯ ಕನಸುಗಳು ಬುಟ್ಟಿಯನ್ನು ಹೊತ್ತು
 ಹೆಜ್ಜೆ ಹಾಕುತ್ತಾ ಸಾಗುತ್ತಿರುವಾಗ

ನನ್ನ ಹೃದಯ ಮಂದಿರದಲಿ ನೆಲೆಸಿ
ಅವನ ಸುಂದರವಾದ ನೋಟಕ್ಕೆ
ಪ್ರೇಮ ತಂತಿಯು ಮಿಡಿಯಿತು

ನನ್ನೊಲುಮೆಯ ಸಿಹಿಯಾದ ಮಾತು
ನನ್ನೆಯ ಮನದ ಸಂತಸವ ಪಸರಿತು
ಸುಮಧುರವಾದ ಬಾಂಧವ್ಯ ಬೆಸೆಯಿತು

ನನ್ನೊಲುಮೆಯ ಮೊಗವ ನೋಡಲು
ಸೀತೆಯಂತೆ ಕಾದಿಹೆನು
ಅವನ ಕರೆಯೋಲೆಗಳು ಇಲ್ಲದೆ
ಪ್ರೀತಿಯ ಪುಷ್ಪಗಳೊಂದಿಗೆ ಕಾದಿಹೆನು

ನನ್ನೊಲುಮೆಯ ಪ್ರೀತಿಯ ಚುಂಬನ
ಬೇರೆ ದುಂಬಿಯಲಿ ಬಿಂಬಿಸಿತು
ಬಿಂಬಿಸಿದ ಪ್ರೀತಿಯು ಏನಗೆ ತಿಳಿಯಿತು

ಬಂದಿಯಾದ ಹೃದಯವು ಕರಗಿತು
ರಿಂಗಣದ  ಕರೆಯೋಲೆಯಲ್ಲಿ
ಮಾತಿನ ಚಕಮಕಿಯಲಿ ಮುಳ್ಳಿನ 
ಹಾರ ಏನಗೆ ಹಾಕಿದನು

ನಾ   ಎಷ್ಟ ಪ್ರೀತಿಸಿದವನನ್ನು
ಅವನ ಪ್ರೀತಿಗಾಗಿ ಕಾಡಿ ಬೇಡಿದೆ
ನನ್ನೊಲುಮೆಯ ನನ್ನನ್ನು ತೊರೆದು
ಬೇರೊಂದು ದುಂಬಿಯಲ್ಲಿ ಶೋಭಿಸುತ್ತಿದನು
ನಂಬಿದ ಪ್ರೀತಿಗೆ ಕಂಬನಿ ಶಾಶ್ವತವಾಯಿತು....


ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಮುದ್ದು ಮೊಗದಲ್ಲಿ ನಗುವಿನ 
ಹಬ್ಬ ಬೀರಿದ ದಿನವಿದು
ಮಗಳ ಮದುವೆ ಕನಸುಕಂಡ ದಿನವಿದು
ಎಲ್ಲರೊಂದಿಗೆ ಸಂತಸ ಹಂಚಿದ ದಿನವಿದು
ಮಗಳೊಂದಿಗೆ ಮಾತನಾಡಿದ ದಿನವಿದು
ಮಗಳಿಗೆ ಮಾತುಕೊಟ್ಟ ದಿನವಿದು
ಮಗಳ ನಗುವಿನಲ್ಲಿ ನಗು ಕಂಡ ದಿನವಿದು
ಮಗಳನ್ನು ಎಬ್ಬಿಸಿ ವಿಭೂತಿ ಧರಿಸ
ಸಾಕ್ಷಾತ್ ಶಿವನ ರೂಪದಲಿ ಮಗಳ
 ಕಣ್ಣಿಗೆ ಪ್ರತ್ಯಕ್ಷನಾಗಿ ಅರೆಕ್ಷಣದಲ್ಲಿ
ಮಾಯವಾದನು ನನ್ನಪ್ಪ
ಈ ದಿನ ಗೋಡೆಯ ಮೊಳೆಗೆ ನೇತುಹಾಕಿದ
ಫೋಟೋದಂತಿರುವನು  ನನ್ನಪ್ಪ....
 
ಶ್ವೇತಾ .ಬಿ ✍️

 - Made using Quotes Creator App, Post Maker App
1 likes 0 comments
Shwetha,B
Quote by Shwetha,B - "ಅಹಂಕಾರ"

ವಿದ್ಯೆ ವಿನಯದಿಂದ ಕೂಡಿರಬೇಕು
 ಹೊರತು ಅಹಂಕಾರದಿಂದಾಲ್ಲ
ಶ್ರೀಮಂತಿಕೆ ನಿನ್ನಲ್ಲಿಬೇಕು
ಹೊರತು ಅಹಂಕಾರದಿಂದಾಲ್ಲ
ಉದ್ಯೋಗ ಮಾರ್ಗದರ್ಶನದಿಂದ
 ಕೂಡಿರಬೇಕು ಹೊರತು ಅಹಂಕಾರದಿಂದಾಲ್ಲ
ಅಧಿಕಾರ ಆದರ್ಶ ಗುಣಗಳಿಂದ ಕೂಡಿರಬೇಕು
ಹೊರತು ಅಹಂಕಾರದಿಂದಾಲ್ಲ
ಅಹಂಕಾರ ಎಲ್ಲಾರನ್ನು ಕಳೆದುಕೊಳ್ಳುತ್ತದೆ
ಇರೋ ಮೂರು ದಿನಗಳ ಸಂತೆಯಲ್ಲಿ
ಅಹಂಕಾರ ಏಕೆ ? ಮಾನವ....!

ಶ್ವೇತಾ. ಬಿ ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಎಷ್ಟು ಪ್ರೀತಿಸಿದೆ ಅವನನ್ನು
ಅವನ ಹುಸಿ ಪ್ರೀತಿಯ
ನಶೆಯಲಿ ಖುಷಿಯಲ್ಲಿದ್ದೆ ನಾ
ಅವನ ರಂಗಿನ ಮಾತಿಗೆ
ನಿಜವೆಂದು ತಿಳಿದೆ ನಾ

ಮೋಸದ ಪ್ರೀತಿ ತೋರಿ
ಕಣ್ಣಿನಲ್ಲಿ ಕಂಬನಿ ಹೊಳೆ 
ಹರಿಯುವಂತೆ ಮಾಡಿದ
ಮೋಸದ ಪ್ರೀತಿ......

ಶ್ವೇತಾ. ಬಿ ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ನವ್ಯ ಕನಸುಗಳ ಮೆರವಣಿಗೆಯಲಿ
ಒಲವಿನ ಅನುರಾಗದಲಿ
ಪ್ರೀತಿಯ ಚುಂಬನ
ಒಲವಿನ ಹೃದಯಗಳ 
ಸವಿಗಾನದ ಇಂಚರ

ನನ್ನ ಬಾಳ ಪುಟದಲಿ
ಪ್ರೀತಿಯ ಮುನ್ನುಡಿ ಬರೆದ
ಬರಡಾದ ಎನ್ನೆದೆಯೊಳು 
ಪ್ರೀತಿಯ ಹೂ ಮಳೆ ಸುರಿಸಿದೆ

ಈ ಸುಂದರ ನೋಟ
 ಕಂಗಳೊಂದಿಗಿನ  ಕಾದಾಟ
ವಿಸ್ಮಯದ ತಥ್ಯಭಾವದೊಳು
ತನ್ಮಯತೆಯೊಂದಿಗೆ ಸ್ಪಂದಿಸಿದೆ

 ಜೋಡಿಗಳ ಬೆಸೆದ ಮಿಲನೋತ್ಸವ
ಮನಸ್ಸು ಮನಸ್ಸುಗಳ 
ಒಂದಾದ ಪ್ರೇಮ ತಂತಿ ನಾದ
ನನ್ನುಸಿರ ಹೆಸರೊಂದಿಗೆ ಬೆರೆತು

ಜೊತೆ ಜೊತೆಯಾಗಿ ಸಪ್ತ
ಹೆಜ್ಜೆಯಲಿ ಸಾಗಿ
ಸುಮಧುರವಾದ ಪಯಣದಲಿ
ಬಾಳಸಂಗಾತಿಯಾಗಿರುವೆ..

ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments

Explore more quotes