Gangothri R V profile
Gangothri R V
40 77 5
Posts Followers Following
Gangothri R V
Quote by Gangothri R V - ಪೋನ್ ಕಾಲ್ ☎️

ಕಾಲ್ ಮಾಡೋದಾ ಬೇಡ್ವಾ? busy ಇರ್ತಾರಾ ಕಾಲ್
ಮಾಡಿದ್ರೆ ಮಾತಾಡ್ತಾರಾ 5min ಮಾತಾಡಿ ಇಟ್ರೆ ಆಯ್ತು
ಅಂತ ಕಾಲ್ ಮಾಡಿ Hello ಇಂದ ಸ್ಟ್ರಾಟ್ ಆದ ಮಾತುಕತೆ ಯಾವಾಗ ಮುಗಿಯುತ್ತೋ ಗೊತ್ತಿಲ್ಲ..,‌Finally call cut ಮಾಡೋ time ನೋಡಿದ್ರೆ more than 1 hr.. ಮತ್ತೇ , ಮತ್ತೆ ಅನ್ನೋದ್ರಿಂದ ಮತ್ತೆ ಮಾತುಕತೆ ಶುರು ಅಲ್ವ??
ಈ ಪೋನ್ ಕಾಲ್ಸೇ ಆಗೆ ಕೆಲವರು ಮಾಡಿದ್ರೆ ಖುಷಿ,
ಕೆಲವರು ಮಾಡಿದ್ರೆ ಅಯ್ಯೋ ಯಾಕಪ್ಪಾ ಮಾಡಿದ್ರು
ಅನ್ನೋ ಬೇಸರ... ಕೆಲವೊಮ್ಮೆ sweet movements ನೆನ್ಪ್
ಮಾಡಿದ್ರೆ, ಕೆಲವೊಮ್ಮೆ ಕಹಿ ಘಟನೆಗಳನ್ನ ನೆನ್ಪ್
ಮಾಡ್ತಾವೆ..ಎಷ್ಟೇ pressure, tention,busy ಇದ್ರು ಮನಸ್ಸಿಗೆ
ತುಂಬಾ ಇತ ಆದೋರ್ ಜೊತೆ ಮಾತಾಡ್ತಿದ್ದರೆ ಮುಗಿಯೊದೇ ಇಲ್ಲ..call ಅಲ್ಲೇ fight, smile, ನಮ್ಮ ಮುಂದೆ
ಬೇರೆಯವರ ಬಗ್ಗೆ ಮಾತಾಡಿದ್ರೆ jealous ಎಲ್ಲನೂ..
ಒಂದ್ ದಿನ ಮಾತಾಡಿಲ್ಲ ಅಂದ್ರೆ ಏನೋ ವರ್ಷ ಆದಾಗ್
feel......Finally ಅವರನ್ನೇ ನೆನಪು ಮಾಡ್ಕೊಂಡು ಅವರ್
ಮಧ್ಯ ನಡ್ದಿರೋ small small movements ನ ನೆನಪ್
ಮಾಡ್ಕೋಬೇಕಾದ್ time ಅಲ್ಲಿ ಅವರ ಕಡೆಯಿಂದಾನೇ
call ಬಂದಾಗ ಆಗೋ ಖುಷಿನೇ ಬೇರೆ ಅಲ್ವ......

ನಿಮ್ life ಅಲ್ಲು ಇರೋ ಆ‌ person ‌ನ‌ Tag ಮಾಡಿ
ಹೇಳ್ಬಿಡಿ I MISS YOU ಅಂತ.....

ಗಂಗೋತ್ರಿ - ಅಕ್ಷಿ..... - Made using Quotes Creator App, Post Maker App
1 likes 0 comments
Gangothri R V
Quote by Gangothri R V - Extrovert her : wow,finally ನಮ್ಮದು pre wedding shoot
ಬಂದೇ ಬಿಡ್ತು.,am soo excited..
Introvert him : ohh god,ಎಲ್ಲರ ಮುಂದೆ ಏಗಪ್ಪಾ
photos ತಗೋಳೋದು...
Extrovert her : ರಿ, ನಾವು photos ಆಗ್ ತಗೋಳೋಣ ಈಗ್
ತಗೋಳೋಣ,ಆ place  ಹೋಗೋಣ,ಈ 
place ಹೋಗೋಣ.....
Introvert him : ದೇವರೇ, ನಾವು ಹೊರಟಾಗ ನಮ್ಮ
ಜೊತೆ ಯಾರು ಬರ್ದೆ ಇರೋ ಆಗ್ ಮಾಡಪ್ಪ...
Extrovert her : Baby ನಮ್ಮ ಮದುವೇಲಿ ತಾಳಿ ಕಟ್ಟಿದ್ ಮೇಲೆ ಹಣೆಗೆ ಮುತ್ತ್ ಕೊಡ್ತೀಯಾ??
Introvert him : ಅಯ್ಯೋ! ಏಗಪ್ಪಾ ಕೊಡೋದು
ಎಲ್ಲರೂ ಅಲ್ಲೇ ಇರ್ತಾರೆ..
Extrovert her : ಮದುವೆ ಮಂಟಪದಲ್ಲಿ,, ಇವರಿಗೆ ಮೊದ್ಲೇ ಸಂಕೋಚ,ಮತ್ತ್ ನಾನ್ ಇದನ್ನೇಲ್ಲಾ expect 
ಮಾಡ್ಬಾರ್ದು.....
Introvert him :  ಕೊರಳಿಗೆ ಮೂರ್ ಗಂಟಾಕಿ ಪ್ರೀತಿಯಿಂದ
ಹಣೆಗೆ ಮುತ್ತಿಟ್ಟು,ಮಗುವಂತೆ ತೋಳಲಿ ಎತ್ತಾಡಿಸಿದ....
Extrovert her : Shocks 😯
Introvert him : Rocks 😎

Gangothri - Akshu..... - Made using Quotes Creator App, Post Maker App
1 likes 0 comments
Gangothri R V
Quote by Gangothri R V - ಈ. - ಒಂದು ಬಯಕೆ....
ಈಗೊಂದು ಬಯಕೆ ನಾ ಮೆಚ್ಚಿದ
ವಸ್ತುವ ನನಗೇ ತಿಳಿಯದೆ,
ಗೂಢಚಾರಿಯಂತೆ ಅರಿತು
ನಿಗೂಢವಾಗಿ ನಾ ಇರುವ
ವಿಳಾಸಕೆ ಅಂಚೆ ಮಾಡಿ 
surprise ನೀಡಬೇಕೆಂದು...........
ಗಂಗೋತ್ರಿ -ಅಕ್ಷಿ  - Made using Quotes Creator App, Post Maker App
5 likes 2 comments
Gangothri R V
Quote by Gangothri R V - " ಹುಣ್ಣಿಮೆ ಚಂದಿರ."

ತಿಳಿಯಾಗಸದಲಿ ಮೂಡಿದ
ಬೆಳದಿಂಗಳ ಬಾನಚಂದಿರನೇ
ಸದಾ ಹೊಳೆಯುವ ನಿನಗೆ
ಹುಣ್ಣಿಮೆಯಂದೇ ವಿಶೇಷ ಹೊಳಪೇತಕೆ,?
ನಿನ್ನ ವಿಶೇಷ ಹೊಳಪನು ಕಂಡ ಕೂಡಲೆ
ಛಾಯಗ್ರಾಹಕಿಯಾಗಿಬಿಡುವೆ ಏತಕೆ,!?
ನಿನ್ನ ಸುಂದರ ಹೊಳಪನು ಸಂಗ್ರಹಿಸಲು
ಮುಂದಾಗಿ ಬಿಡುವೆ ಏತಕೆ,!?
ಸಂಗ್ರಹಿಸಿದ ಚಿತ್ರವನು ಗೆಳೆಯನಿಗೆ
ಕಳುಹಿಸಿದರೆ ಅವ ಎಷ್ಟು ತೆಗೀತೀಯೆ
ಇರೋದೊಂದೇ ಚಂದಮಾಮ ಅಂತ
ಹೇಳ್ತಾನ , ಅಯ್ಯೋ ಚಂದಮಾಮ
ಇದ್ಯಾವ ಮೋಡಿನಯ್ಯಾ,!?
ಮಿನುಗುವ ತಾರೆಗಳು ರಾಶಿಯಲಿ
ನಿನದೇ ವಿಶೇಷ ಆಕರ್ಷಣೆ,
ದಿನದ ದಿನಚರಿಯನು ಒಪ್ಪಿಸಿ, ನಿನ್ನ
ಬೆಳದಿಂಗಳ ಬೆಳಕಲಿ ಮಲಗುವ
ಸಮಯವಾಯಿತು........
ತಿಳಿಯಾಗಸದಲಿ ಮೂಡಿದ
ಬಾನಚಂದಿರನೇ ,ಹುಣ್ಣಿಮೆಯಂದೇ 
ವಿಶೇಷ ಆಕರ್ಷಣ ಹೊಳಪೇತಕೆ,!???

ಗಂಗೋತ್ರಿ -ಅಕ್ಷಿ ✍️ - Made using Quotes Creator App, Post Maker App
7 likes 0 comments
Gangothri R V
Quote by Gangothri R V - ಬಂಧನ....
ಮುಟ್ಟಾದಳು ಮುಟ್ಟದಿರು
ಮೈಲಿಗೆ ಆದಿತು ಎಂದೇಳಿ
ಕತ್ತಲೆಯ ಕೋಣೆಯೊಳಗಿಟ್ಟು
"ಸಂಪ್ರದಾಯದ "ಹೆಸರೇಳಿ ಬಂಧಿಸಿಟ್ಟರು...
ಮನೆಯಿಂದಾಚೆ ನಡೆದರೆ ತಾನೊಂದು
ಹೆಣ್ಣೆಂದು ಗುರ್ತಿಸಲು "ಕಾಲ್ಗೆಜ್ಜೆಯ"
ಬೇಡಿಯಾಕಿ ಬಂಧಿಸಿಟ್ಟರು....
ತಾನು ಅಸಹಾಯಕಗಳು, ಪರರ
ಅವಲಂಭಿತರಾಗಿರುವಳೆಂದೇಳಿ,
ಕೈಗಳಿಗೆ "ಬಳೆಯ "ಬೇಡಿಯಾಕಿ ಬಂಧಿಸಿಟ್ಟರು...
ತನ್ನ ಜೀವನದಲ್ಲಿ ಮದುವೆಗಿಂತ
ಅತಿಮುಖ್ಯ ಸಾಧನೆಯಿಲ್ಲ,
ಪತಿಯ ಸೇವೆಗೆ ಅವಳ ಮೊದಲ
ಆದ್ಯತೆ ಎಂದೇಳಿ ಮೂರು ಗಂಟಿನ
ನೆಪವೊಡ್ಡಿ "ಮದುವೆ "ಎಂಬ
ಬಂಧನದಲ್ಲಿ ಬಂಧಿಸಿಟ್ಟರು....
ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು
ತಾನು ಹುಟ್ಟಿರುವುದೇ ಸೇವೆ
ಮಾಡಳೆಂದೇಳಿ "ಕುಟುಂಬದ"
ಹೆಸರಲಿ ಬಂಧಿಸಿಟ್ಟರು.......

ಗಂಗೋತ್ರಿ -ಅಕ್ಷಿ ✍️ - Made using Quotes Creator App, Post Maker App
4 likes 2 comments
Gangothri R V
Quote by Gangothri R V - ಹೆಣ್ಣು....

ಹೆಣ್ಣು ನೂರು ನೋವು 
ಮನದಲ್ಲಿದ್ದರು, ತಾವರೆಯ
ನಗು ಮುಖವುಳ್ಳವಳು...
ಅವಳ ಭಾವನೆಗಳ ಬದಿಗಿಟ್ಟು
ತನ್ನವರಿಗಾಗಿಯೇ ಶ್ರಮಿಸುವವಳು...
ಕನಸುಗಳಿಗೆ ಬೇಲಿ ಎಣೆದು
ವಿಧ ವಿಧ ಪಾತ್ರಗಳ 
ಧರಿಸುವವಳು......
ತನ್ನ ಜೀವನವನ್ನೇ ಪಣಕ್ಕಿಟ್ಟು
ಇನ್ನೊಂದು ಜೀವಕ್ಕೆ ಜೀವನ
ಕೊಡುವವಳು.....
ತಂದೆ ತಾಯಿಗೆ ಮಗಳಾಗಿ,
ಪತಿಗೆ ಮಡದಿಯಾಗಿ,
ಅತ್ತೆ ಮಾವನಿಗೆ ಸೊಸೆಯಾಗಿ
ಮಕ್ಕಳಿಗೆ ತಾಯಿಯಾಗಿರುವವಳು..
ಹೆಣ್ಣು ಕೇವಲ ಗೃಹಿಣಿಯಲ್ಲ,
ಸರ್ವಶಕ್ತಿ ,ಸರ್ವಗುಣಗಳುಳ್ಳ
ಸಂಪನಳು.....
ಗಂಗೋತ್ರಿ -ಅಕ್ಷಿ
 - Made using Quotes Creator App, Post Maker App
8 likes 2 comments
Gangothri R V
Quote by Gangothri R V - ಭೇಟಿಗಾಗಿ.....

ಬಿಟ್ಟಿರಲು ಕಷ್ಟ ಎನಿಸುತಿದೆ ಮನಸ್ಸಿಗೆ,
ನಿನ್ನ ನೋಡುವ ಆಸೆ,
ತವಕ ಆಗಿದೆ ಕಣ್ಣಿಗೆ......
ಬೆಳಗಿನ ನೆನಪು ನೀನೆ,
ರಾತ್ರಿಯ ಕನಸು ನೀನೆ.....
ಉಳಿದಿರಬಹುದು ಕಣ್ಣಿಂದ ದೂರ,
ಮನಸಿನಿಂದಲ್ಲ.......
ಪ್ರತಿದಿನ ‌ನೆನಪಾಗಿ ಜೊತೆಯಾಗಿ
ಓಡಾಡುತಿರುವೆ......
 ಪ್ರತಿದಿನದ ಗೈರು ಹಾಜರಿ,
ನಿನ್ನ ‌ಪ್ರೀತಿ ,ಕಾಳಜಿ,ಹುಸಿ ‌ಕೋಪ
ತುಸು ಮುನಿಸು ನೆನಪಾಗುವಂತೆ
ಮಾಡಿದೆ.... ನೆನಪಾದ ಪ್ರತಿಕ್ಷಣ
ಮಗುವಂತಾಗಿ ಕಣ್ತುಂಬುವುದು...
ನಿನ್ನ ಪ್ರೀತಿಯ ಅಪ್ಪುಗೆಗಾಗಿ 
ಬೊಗಸೆ ತುಂಬ ಪ್ರೀತಿ ತುಂಬಿ
ಕಾಯುತಿರುವೆ ಭೇಟಿಗಾಗಿ.........

ಗಂಗೋತ್ರಿ - ಅಕ್ಷಿ..



 - Made using Quotes Creator App, Post Maker App
21 likes 8 comments
Gangothri R V
Quote by Gangothri R V - ಹೇಳದೆ ಉಳಿದಿದ್ದು....

ವಿರಾಮವಿರದೆ ನಡೆಯುತಿರುವ
ಮಾತಿನ ಚಕಮಕಿನಲ್ಲಿ
ಹೇಳಬೇಕೆಂದಿರುವ ಮಾತು 
ಆಗೆ ಉಳಿದಿದೆ....
ಮಾತಿನ ನಡುವೆ 
ಸರಸ ಸಲ್ಲಾಪ ಕೊಂಚ ಹೆಚ್ಚಾಗಿ,
ಹೇಳಬೇಕೆಂದು ಹೊರಟ ಮಾತು 
ಹೇಳದೆ ಆಗೆ ಉಳಿದಿದೆ......
ತಸು ಭಯ ತುಸು ನಾಚಿಕೆ
ಸ್ವಭಾವ, ನಾಚಿಕೆಯ ಬದಿಗಿಟ್ಟು
ಹೇಳಬೇಕೆಂದು ಹೊರಟ ಮಾತು 
ಹೇಳದೆ ಆಗೆ ಉಳಿದಿದೆ.....
ಬಾನ ಚಂದಿರನ ಬೆಳದಿಂಗಳ ಒಳಪಲಿ,
ಕಡಲ ತೀರದಲ್ಲಿ ಭೋರ್ಗರೆಯುವ
 ಅಲೆಗಳ ಸದ್ದಲಿ, ಅವನ ಕೈ ಹಿಡಿದು
ಕಣ್ಣಲಿ ಕಣ್ಣಿಟ್ಟು ಅವನನ್ನೇ ನೋಡುತ್ತಾ,
ಹೇಳಬೇಕೆಂದು ಹೊರಟ ಮಾತು
 ಹೇಳದೆ ಆಗೆ ಉಳಿದಿದೆ.......
ಮಧುರ ಕ್ಷಣಕಾಗಿ ಕಾಯುತಾ,,!!!
ಹೇಳಬೇಕಂದಿರುವ ಮಾತು ಹೇಳದೆ 
ಆಗೆ ಉಳಿದಿದೆ.......

ಗಂಗೋತ್ರಿ -ಅಕ್ಷಿ..

 - Made using Quotes Creator App, Post Maker App
3 likes 0 comments
Gangothri R V
Quote by Gangothri R V - ಆದ್ರೂ ನನ್ನವನಲ್ಲ ...

ಅವನು ನನ್ನವನೇ,
ಆದ್ರೂ ನನ್ನವನಲ್ಲ.....,
ಜೊತೆಯಲ್ಲಿದ್ದು ಸಲಹೆ ನೀಡುವ
ಸಲಹೆಗಾರ, ಆದ್ರೂ ನನ್ನವನಲ್ಲ....
ಮನಸ್ಸಿನಲ್ಲಿ ಅವಿತು
ಆಲೋಚನೆಗಳೊಳಗೆ ಬೆರೆತವ
ಆದ್ರೂ ನನ್ನವನಲ್ಲ......
ಅರಿವುಂಟು ಅವ ನನ್ನವನಲ್ಲ,
ಆದ್ರೂ,ಅವ ನನ್ನವನಲ್ಲದ ನನ್ನವ.‌..
ಅವನು ನನ್ನವನೇ,,,,
ಕೇವಲ ಭಾವನೆಗಳಲ್ಲಿ,
ಕೇವಲ ಮನದಲ್ಲಿ,
ಕೇವಲ ಬರಹದಲ್ಲಿ ,,
ನೆನಪಾಗಿ, ನೆಪವಾಗಿ ಕುಳಿತಿರುವ
ಅವನು ನನ್ನವನೇ....
ಆದ್ರೂ ಅವನು ನನ್ನವನಲ್ಲ......

ಗಂಗೋತ್ರಿ - ಅಕ್ಷಿ 
 - Made using Quotes Creator App, Post Maker App
3 likes 0 comments
Gangothri R V
Quote by Gangothri R V - ಯಾರವನು????

 ಬದುಕಿನ ಪಯಣದಲಿ ಪರಿಚಯವಾದ
ಸ್ನೇಹಿತನೂ ಅಲ್ಲ ಅವನು.,,
ಪ್ರಿಯಕರನಂತೂ ಅಲ್ಲವೇ ಅಲ್ಲ 
ಮತ್ತ್ ಯಾರೋ ಅವನು ತಿಳಿಯದೆ
ಆಲೋಚನೆಗಳೊಳಗೆ ಅವಿತು 
ಕುಳಿತಿರುವವನು....??????
ತಿಳಿಯದೆ ‌ಸಾಗುತಿರುವ 
ಬಾಳ ಪಯಣದ ನೆಪವಾಗಿ,
ನೂರು ನೆನಪಿನ ‌ಮೂಟೆಯ 
ಕಟ್ಟಿಕೊಂಡು ಕವಿತೆಯೊಳಗೆ
ಕೂತಿರುವವನು..??????
ಎದುರು ಬರದೆ ಕನಸ್ಸಲ್ಲೇ 
ಸತಾಯಿಸಿ ಕಾಡುತಿಹನು,,
ಯಾರೋ ಅವನು...?????
ಸುಮ್ಮನೆ ಕುಳಿತ್ತಿದ್ದವಳ ಮನದಲ್ಲಿ
ಪ್ರೀತಿಯ ಚಿಗುರಿಸಿ 
ಮನವ ಕದ್ದ್ಯೊಯ್ದವ
ಯಾರೋ ಅವನು..????
ಗಂಗೋತ್ರಿ ....
 - Made using Quotes Creator App, Post Maker App
6 likes 0 comments

Explore more quotes

Gangothri R V
Quote by Gangothri R V - NAANDI FOUNDATION...

ಮುಗಿತಾ ಬಂತು
Naandi foundation ಕ್ಲಾಸು....
ಪರಿಚಯ ಮಾಡ್ಸಿ
ಕೊಟ್ರು New ಫ್ರೆಂಡ್ಸು.....
ನಮ್ಮ್ pavithra mam
class ಇರ್ತಿತ್ತು ಮಸ್ತು ಮಸ್ತು.....
ಭಯ ಬಿಟ್ಟು ಧೈರ್ಯವಾಗಿ
ಮಾತಾಡೋದು ಕಲ್ ತ್ರು ನಮ್ಮ girls ಸು....
ಪಾಠದ್ ಜೊತೆ ಕಲೀತಿದ್ದ
activities ಕೊಡ್ತಿದ್ರು marks ಸು....
1/2 ಗಂಟೆ lunch break ಗೆ
1 hr ತಗೊತ್ತಿದ್ರು ನಮ್ಮ girls ಸು....
ಆದ್ರೂ, ಕೋಪ ಮಾಡ್ ಕೊಳ್ದೆ,
ಚಿನ್ನ, ಬಂಗಾರ ಅಂತ
ಮಾತಾಡ್ತಿದ್ರು ನಮ್ಮ ಮಿಸ್ಸು....
ಗೊತ್ತಿರದೆ ಎಷ್ಟು ಸಂಗತಿಗಳನ್ನ
ತಿಳಿಸಿಕೊಟ್ರು ನಮ್ಮಿಸ್ಸು.....
ನಮ್ ಕ್ಲಾಸ್ ರೂಮ್ನಲ್ಲಿ
ಕ್ಲಾಸ್ ಇರ್ತಿತ್ತು ಮಸ್ತು ಮಸ್ತು ಮಸ್ತು....
ಕಲಿತಿದ್ ನೆನಪೈತಿ ಅಷ್ಟು ಇಷ್ಟೂ,,,
ಬಾಳ್ ಚಲೊ ಐತಿ ನಮ್ಮ್
Naandi foundation skillsoo skillsoo

Gangothri RV  - Made using Quotes Creator App, Post Maker App
4 likes 0 comments
Gangothri R V
Quote by Gangothri R V - ಪರಿಚಯ....🤝
ಸಂಬಂಧಗಳ ಸಹವಾಸ ಸಾಕೆಂದು
ಬೆಸತ್ತು, ಒಂಟಿತನ ಆಯ್ದ
ಎನಗೆ,ಪರಿಚಯವಾದ ಹೊಸ
ಸಂಬಂಧ ನಿನ್ನಯ ಪರಿಚಯ.....
ಎನ್ನಯ ಬಾಳಲಿ ಹೊಸ
ಪ್ರೀತಿಯ ತುಂಬಿದ ಪರಿಚಯ....
ಕಾಳಜಿ  ಮಾಡೋ  ಅಪ್ಪ  ,
ಪ್ರೀತಿ   ತೋರೋ  ಅಮ್ಮ ‌,
ಗೌರವ  ಕೊಡುವ ತಮ್ಮನ,,
ಉಡುಗೊರೆಯಾಗಿ ಕೊಟ್ಟ ಪರಿಚಯ...
ಬಾಳಲಿ ಕವಿದ  ಕಾರ್ಮೋಡ
ಸರಿಸಿದ   ಪರಿಚಯ.....
ನನ್ನೊಳಗಿನ ನನ್ನ ನನಗೇನೇ
ಪರಿಚಯಿಸಿದ ಹೊಸ ಪರಿಚಯ.....
ದುಃಖದಲ್ಲಿ ಹೊರಗಲು ಹೆಗಲು,
ಮೊಗದಲಿ ಕಿರುನಗೆ ತರಿಸಿದ ಪರಿಚಯ......
ಸನಿಹ ಬಂದು ಕೈ ಹಿಡಿದು
ಜೊತೆಗೆ ಪಯಣಿಸಲು
ಸ್ಪಂದಿಸಿದ ಪರಿಚಯ........
ಎನ್ನಯ ಜೀವನದಲ್ಲಿ ಎಂದಿಗೂ
ಅಪರಿಚಿತವಾಗದಿರೋ ಪರಿಚಯ......

ಗಂಗೋತ್ರಿ..... - Made using Quotes Creator App, Post Maker App
21 likes 2 comments
Gangothri R V
Quote by Gangothri R V - ಹಠ ಮಾಡಿ ಕುಳಿತಿದೆ ಮುಗ್ಧ,
ಮನ ಮಾತು ಕೇಳದೆ..
ನಿನ್ನಂತೆ ಯಾರೂ ಹಿಡಿಸಿಲ್ಲವಂತೆ,
ಯಾರ ಮೇಲೂ ಒಲವು ಮೂಡಿಲ್ಲವಂತೆ,!
ಹೇಳಬೇಕಂತ್ತಿದ್ದ ಎಷ್ಟೋ ಭಾವನೆಗಳು
ಕವಿತೆಗಳಾಗಿ ಮೂಡುತಿವೆಯಂತೆ..,
ಹುಚ್ಚು ಪ್ರೀತಿ ಹಚ್ಚಿಕೊಂಡಿರೊ 
ಮನ ಕಾಯುತ ಕುಳಿತಿಯಂತೆ
ಮನ ಮೆಚ್ಚಿದ ಹುಡುಗನ
ಒಪ್ಪಿಗೆಗಾಗಿಯಂತೆ.‌....
ಗಂಗೋತ್ರಿ.ಆರ್ ವಿ. - Made using Quotes Creator App, Post Maker App
4 likes 0 comments
Gangothri R V
Quote by Gangothri R V - ಮಳೆ ಮಾರಾಯ..🌧️

ಒ,ಓ, ಮಳೆರಾಯ
ಸ್ವಲ್ಪ್ ತಡಿ ಮಾರಾಯ..,
ಇದೇನ್ ಮಲ್ನಾಡ್ ಅಂತ ತಿಳ್ದಿ ?
ಇಲ್ಲ,! ದಾರಿ ತಪ್ಪಿ ಬಂದಿ ??
ಜರ ಬಿಡ್ವ್ ಕೊಡ ನಮ್ಮ ರವಿಮಾಮ
ಆಚೆ ಬರ್ಲಿಕಾ, ಕಾಯ್ತಾ ಕುಂತ್ಯಾನಾ..,
ವರ್ಷ್ದ್ ಗಂಜಿ ತೆನೆ ಇನ್ನೂ ಹೊಲ್ದಾಗ್ಯತಿ,
ರಾಗಿ ಕಳ್ದಾಗ್ಯತಿ.., ಪಾಪ ! ನಮ್
ಬಡ್ಪಾಯಿ ರೈತ ಮಳೆ,ಚಳ್ಗ್
ಬೆಚ್ಚಿ, ಬೆಚ್ಗ್ ಮನ್ಗ್ ಕುಂತ್ಯಾನಾ..,
ಜರ ಬಿಡ್ವ್ ಕೊಡ ಹೊಲ್ದ್ ಕಡಿ
ಹೋಗಿ ತ್ಯಾಮೆ ಮಾಡ್ಲಿಕ್ಕಾ....,!
ನಿನ್ಗ್ ಎದ್ರಿ ಶಾಲೆಗೂ ರಜೆ ಕೊಟ್ಯಾರಾ,,
ರಜೆ ಕೇಳಿ ಬಾರಿ ಖುಷಿಯ್ಗಾರಾ ಮಕ್ಕಳು
ಜರ ಬಿಡ್ವ್ ಕೊಡ ಶಾಲ್ಗಿ ಹೊಗ್ಲಿಕಾ,,
ಪಾಪ!! ಗುಡ್ಸಿನಾಗ ಇರೋ ಮಂದಿ
ಹೆದ್ರ್ ಕೊಂತಾ ಕುಂತ್ಯಾರಾ ,ಇವ್ತತ್ತಿನ
ಹೊಟ್ಟೆಪಾಡು ಎಂಗಾ ಅಂತಾ,,!
ಜರ ಬಿಡ್ವ್ ಕೊಡ ಒಂದೊತ್ತಿನ್
ರೊಟ್ಟಿನಾ, ದುಡಿಲಿಕಾ,,!
ದನ - ಕರಗಾ ಹುಲ್ಲ್ ತರ್ಲಿಕ್ 
ಹೋಗಿ, ಮಳ್ಯಾಗಾ ಸಿಕ್ಕಾಕ್ ಕೊಂಡಿರೋ
ಮಾಲಿಕ್ನ್ಗಾ ಜರ ಬಿಡ್ವ್ ಮಾಡ್ಕೊಡು,
ಕೊಟ್ಟಿಗೆಗಾ ಹುಲ್ಲು ತಂದಾಕ್ಲಿ..,
ಕೆರೆ - ಬಾವಿ ಖುಷಿಯ್ಗಾ ಅವ್ರೆ
ಹೊಲ್ದ್ ಕಡಿ  ಹೋಗಿ  ತ್ಯಾಮೆ
ಮಾಡ್ಲಿಕಾ ಜಾಗ ಕೊಡ್ದಷ್ಟು ಖುಷಿಯಾಗವ್ರ.,
ಜರ ಬಿಡ್ವ ಕೊಡ ಮೈ , ಕೈ ಸಡಿಲಮಾಡ್ಕಾಲಿಕಾ...,
ಸ್ವಲ್ಪ್ ತಡಿ ಮಳೆ ಮಾರಾಯ
ಇದ್ನ್ ಏನ್ ಇಂಗಾರ್ ಅಂತ್
ತಿಳ್ದಿಯೊ ? ಇಲ್ಲ ಮುಂಗಾರ್
ಅಂತ್ ತಿಳ್ದಿಯೊ???????

ಗಂಗೋತ್ರಿ. ಆರ್.ವಿ 


 - Made using Quotes Creator App, Post Maker App
2 likes 0 comments
Gangothri R V
Quote by Gangothri R V - ಕೊಂಚ ಒಲವಾಗಿತ್ತು ರಾಧೆಗೂ
ಕೃಷ್ಣನ ಮೇಲೆ ವ್ಯಕ್ತಪಡಿಸುವಲ್ಲಿ
ಸೋತಳು.., ಜವಾಬ್ದಾರಿ ಹೊತ್ತ ಭಾರದ 
ಅಡಿಯಲ್ಲಿ!! ಮನದ ಪ್ರೀತಿ
ಗಾಯಗೊಂಡು ಹೆಪ್ಪು ಗಟ್ಟಿತ್ತು!!
 ಎಷ್ಟೋ ಬಾರಿ ಹೇಳಿ ಸೋತಳು
ಸಿಗದ ರಾಧೆಗಾಗಿ ಪ್ರೀತಿಯ
ಮೀಸಲಿಟ್ಟು ಕಾದು ದುಃಖಿತನಾಗದಿರೆಂದಳು.,
ಪ್ರೀತಿ ತುಂಬುವ ರುಕ್ಮಿಣಿ ಬರುವಳೆಂದು,,
ನುಡಿದಳು ನೊಂದ ಮನದಿ.......,
ಹಾಳ ಪ್ರೀತಿ ಮನದಿ ತುಂಬಿದ
ಕೃಷ್ಣ ನುಡಿದ ಸಿಕ್ಕರು,
ಸಿಗದ್ದಿದ್ದರೂ ಎಂದಿಗೂ ನೀನು
ನನ್ನವಳೇ.......... ಎನ್ನ
ಪ್ರೀತಿ ಎಂದಿಗೂ ನನ್ನವಳಿಗಾಗಿಯೇ..!!
ಭಾವನೆಗಳೇ ಇಲ್ಲದ ರಾಧೆ ಮನದಿ
ಮೊದಲಿಗೆ, ಸುರಿಸಿದಳು ಕಣ್ಣೀರಿನ
ಹನಿ................ ಕೊನೆಗೂ,,,
ಕೃಷ್ಣನ ಪ್ರೀತಿಯ ಒಪ್ಪಲಿಲ್ಲ!!
ರಾಧೆಯ ಪ್ರೀತಿಯ ಹೇಳಲಿಲ್ಲ.!!
ಕೃಷ್ಣನ ಹುಚ್ಚು ಪ್ರೀತಿ ರಾಧೆಯ
ಮನದಲಿ, ಬದುಕಲಿ ಮಾಸದ
ಸವಿಪುಟಗಳಾಗಿ ಉಳಿದವು........

ಗಂಗೋತ್ರಿ _ ಅಕ್ಷಿ..








 - Made using Quotes Creator App, Post Maker App
5 likes 5 comments
Gangothri R V
Quote by Gangothri R V - ಕನಸುಗಳು....

ಕನಸ್ಸಿತ್ತು ಅವಳ್ಗು ಗುಬ್ಬಚ್ಚಿ ತರ
ತನ್ನ ಅಪ್ಪನ ಮಡ್ಲಲ್ಲಿ ಮಲಗ್ಬೇಕು ಅಂತ.
ಕನಸ್ಸಿತ್ತು ಅವಳ್ಗು ತಾನು ಹಾಕೋ
ಪ್ರತಿ ಹೆಜ್ಜೆಯಲ್ಲೂ ತನ್ನ ಅಪ್ಪ
ಜೊತೆಗಿರಬೇಕು ಅಂತ....
ಕನಸ್ಸಿತ್ತು ಅವಳ್ಗು ತನ್ನ ಅಪ್ಪನೇ
ಅವಳ್ First love and First hero ಆಗಿರ್ಬೇಕು ಅಂತ..
ಕನಸ್ಸಿತ್ತು ಅವಳ್ಗು ತನ್ನ ಅಮ್ಮಗಿಂತ
ಅಪ್ಪನೇ ಜಾಸ್ತಿ ಪ್ರೀತಿ, ಕಾಳಜಿ
ಮಾಡ್ಬೇಕು ಅಂತ...!
ಕನಸ್ಸಿತ್ತು ಅವಳ್ಗು ತನ್ನ ಎಲ್ಲಾ ಒಳ
ಮನಸ್ಸಿನ ಭಾವನೆಗಳನ್ನ ಬಾನಚಂದಿರನ
ಬೆಳದಿಂಗಳಲ್ಲಿ ತನ್ನ ಅಪ್ಪ ಜೊತೆ
ಹಂಚ್ಕೋಬೇಕು ಅಂತ...
ಕನಸ್ಸಿತ್ತು ಅವಳ್ಗು ತನ್ನ ಅಪ್ಪನ
ಪ್ರೀತಿಯ ಕೈ ತುತ್ತು ತಿನ್ಬೇಕು ಅಂತ..
ಕನಸ್ಸಿತ್ತು ಅವಳ್ಗು ಪ್ರತಿ ದಿನ ರಾತ್ರಿ ತನ್ನ
ಅಪ್ಪನೇ ಲಾಲಿ ಹಾಡು ಹಾಡ್ಬೇಕು ಅಂತ...
ಆದರೆ................
ಆ ವಿಧಿಯ ವಿಪರ್ಯಾಸ ಅವಳ್
ಈ ಎಲ್ಲಾ ಕನಸುಗಳು ಬರಿ
ಕನಸುಗಳಾಗಷ್ಟೇ ಉಳಿದಿವೆ........!?

ಗಂಗೋತ್ರಿ _ ಅಕ್ಷಿ - Made using Quotes Creator App, Post Maker App
3 likes 0 comments
Gangothri R V
Quote by Gangothri R V - ಸಖಿ.....❤️

ನಿನಗಾಗಿಯೇ ಬರೆದಿರುವೆ,
ಈ ಕವಿತೆಯ ಸಾಲು..,
ಕೂಡಿಟ್ಟ ಪದಗಳದೀ ಮೂಡಿಬಂದ
ಕವಿತೆಯು ನೀ..,!
ಅನಿರೀಕ್ಷಿತ ಸಂಬಂಧ ಸ್ನೇಹವಾಗಿ
ಬದಲಾಯಿಸಿದವಳು ನೀ..,!
ಅರಳಿದ ತಾವರೆಯ ಮುಖವುಳ್ಳವಳು ನೀ.!
ನಿನ್ನೊಂದಿಗೆ ಕಳೆಯುವ ಸಮಯ
ಅಲ್ಪವಾದರು ಅತ್ಯಮುಲ್ಯವಾದದು,
ಯಾರೊಂದಿಗೂ ಮಾತನಾಡದವಳು!
ನಿಮ್ಮೊಂದಿಗೆ ಮಾತಾಡಲು ಇಚ್ಚಿಸುವೆ.,
ಎಲ್ಲಾ ಸವಿ - ವಿಚಾರಗಳ
ಹಂಚಿಕೊಳ್ಳಲು ಬಯಸುವೆ..,
ನಮ್ ಈ ಸಂಬಂಧದ ಸ್ನೇಹ
ಪಯಣ ನಿಲ್ಲದ ನಿಷ್ಕಲ್ಮಶ
ಅಲೆಗಳ ಹಾಗೆ ಸಾಗುತಿರಲಿ.....

ಗಂಗೋತ್ರಿ _‌ಅಕ್ಷಿ - Made using Quotes Creator App, Post Maker App
2 likes 0 comments
Gangothri R V
Quote by Gangothri R V - ನನ್ನವನಲ್ಲದ ನನ್ನವನಿಗೆ.,

ತಿಳಿಯದೆ ಒಲವು ಮೂಡಿ
ವರ್ಷಗಳೇ ಕಳೆದರು
ವ್ಯಕ್ತಪಡಿಸುವಲ್ಲಿ ಸೋತ ಮನವಿದು.
ಜೊತೆ ಇಡುವ ಹೆಜ್ಜೆ
ಜನ್ಮ ಪೂರ್ತಿ ಜೊತೆಯಲ್ಲೇ
ಇರುವುದೊ? ಇಲ್ಲವೊ?
ಎಂಬ ಭಯವಡಗಿತು ಮನದಲಿ.,
ಭಾವನೆಗಳ ರಾಶಿ ಹೊತ್ತು,!
ಇದ್ದು ಬಿಟ್ಟೆ ನಾ ಏನು ಹೇಳದೆ.,
ಇರುವ ಸ್ನೇಹವ ಕಳೆಯೋ ಭಯದಲಿ,!
ಬಚ್ಚಿಟ್ಟೆ ನಾ ಒಲವ ಮನದಲಿ..
ನಿನ್ನ ಮದುವೆಯ ಮಮತೆಯ
ಮೊದಲ ಕರೆ ಓಲೆಯ
ನನಗಾಗಿಯೇ ತೆಗೆದಿಡು,,
ಬಂಧುಗಳಂತೆ ದೂರದಿ ಮೂಕ
ಪ್ರೇಕ್ಷಕಿಯಂತೆ  ನಿಂತು
ಅಕ್ಷತೆ ಹಾಕಿ ಶುಭಕೋರುವೆ,!!
ನನ್ನವನಲ್ಲದ ನನ್ನವನಿಗೆ....

ಗಂಗೋತ್ರಿ _ ಅಕ್ಷಿ...











 - Made using Quotes Creator App, Post Maker App
8 likes 2 comments
Gangothri R V
Quote by Gangothri R V - ಅಳಸದಂತ ನೆನಪು...💔

ಏನೋ ಹೇಳಿ,ಹೇಳದಂತೆ ನಟಿಸಿ!
ಕಾಡುತಿಹಳು ಮನದ ರೂಪಸಿ.!
ಅವಳ ಮುಂಗುರುಳಿನ ನರ್ತನವು,
ನಡೆಸಿದೆ ಮನದಿ ಗಾನಸುದೆಯು.,
ಅವಳ ಕಣ್ಗಳ ಸೆಳೆತವು!
ದೂರವಿರುವಷ್ಟು ದೂರವಲ್ಲ
ಹತ್ತಿರವಿರುವಷ್ಟು ಹತ್ತಿರವಲ್ಲ.
ಆದರೂ ಮನದಿ ಅಡಗಿದ ಅವಳು
ಉಳಿದಳಲ್ಲ ಕಣ್ಗಳದಿ ದೂರ...
ಮದರಂಗಿ ಹಚ್ಚಿದ ಕೈಗಳದಿ
ತಬ್ಬಿ ಅತ್ತ  ಅವಳ ಪ್ರೀತಿಯನು
ನಾಟಕವೆಂದು ಹೇಗನಲ್ಲಿ?
ಒಲ್ಲದ ಮನದಿ ದೂರ ನಡೆದ,
ನಡೆಯ ಹಿಂಬಾಲಿಸದಿರು ಮನವ,
ನೊಂದೀತು ಎಂದವಳ ಪ್ರೀತಿಯ
ಹೇಗೆ ಮೋಸವೆನ್ನಲ್ಲಿ..?
ಸಂಗಾತಿಯಾಗುವಳು ಎಂದವನ
ಜೀವನದಲಿ ‌ಗೆಳತಿಯಾದವಳ 
ನೆನೆಯದೆ ಹೇಗಿರಲಿ!?
ನೊಂದ ಮನದಿ ಖುಷಿಯಿಂದ
ಹರಸದೆ ಹೇಗಿರಲಿ!?
ಅವಳಿಲ್ಲದ ಬದುಕು..!
ಬದುಕದೆ ಹೇಗಿರಲಿ..?????
ಕೊನೆಗು..!
ಅವಳಾದಳಲ್ಲ ಎನ್ನ ಕಣ್ಣೀರಿನ ರುವಾರಿ...!!!!!

ಗಂಗೋತ್ರಿ _ ಅಕ್ಷಿ..

 - Made using Quotes Creator App, Post Maker App
3 likes 0 comments
Gangothri R V
Quote by Gangothri R V - ಅರಿಯದ ಮನಕೆ.....

ಅರಿಯದ ಮನಕೆ,
ಮೂಡಿದೆಯೊಂದು ಬಯಕೆ,
ಒಲವ ಕಥನ ಹೇಳಲಿಕೆ,
ಪದಗಳಿಗೇಕೊ  ಅಂಜಿಕೆ,
ಕಂಡ ಕ್ಷಣದಿಂದಲೇ ಶುರು
ಸೆಳೆತದ ಜೋರು ಕಾರುಬಾರು,
ಅರಿವಿಲ್ಲದೆ ಇವಳ ಮನಕೆ
ಒಲವಾಗಿದೆ ಅವನ ಕಾಳಜಿಗೆ,
ಭಾವನೆಗಳೇ ತಿಳಿಯದ ಮನಕೆ,
ಭಾವನಾತ್ಮಕ ಸಂಬಂಧಗಳ ಬೇಲಿ
ಹಾಕಿ ,ಪ್ರೀತಿಯ ಕಡಲಲ್ಲಿ
ಬಂಧಿಸಲು ಬಂಧನವಳ ಜೀವನಕೆ,.
ಅವಳ ಅರಿವಿಲ್ಲದೆ ನೋಟ
ಅರಿಯುವುದು ಅವನ ತೀರಕೆ.
 ಅರಿತ ಪ್ರೀತಿಯ ನೋಟ
ಹೊತ್ತು ತರಲು ಕಾಯುತಿಹನು,
ಸಮಯವ ತಿಳಿಯದೆ ಅವನಿಲ್ಲಿ..,
ಕಣ್ಗಳ  ನಡುವಿನ ಸಂಭಾಷಣೆಯಲ್ಲಿ!
ಮನಸ್ಸಿನ ಮಾತಾಗಿದೆ ಮೌನ.,
ಮೌನ ಮುರಿದು ಭಾವ
ಹೇಳಲಿಕೆ ಹಾತೊರೆಯುತಿದೆ  ಮನ....

ಗಂಗೋತ್ರಿ_ಅಕ್ಷಿ..
 - Made using Quotes Creator App, Post Maker App
8 likes 2 comments

Explore more quotes

Gangothri R V
Quote by Gangothri R V - " Degree LIFE ವು"

ಮುಗಿತಾ ಬರ್ತಿದೆ ಡಿಗ್ರಿ
ಅನ್ನೊ ಮೂರು ವರ್ಷಗಳು..,
ಕಾಲೇಜ್ ನಾಗ್ ಅವ್ರೆ
ಅಷ್ಟೊ ಇಷ್ಟೊ Fridz ಗಳು..,
ಲೆಕ್ಕಕ್ಕಿಲ್ಲ ನಾವ್ ಮಾಡಿದ್
ಮಸ್ತ್ Enjoyment ಗಳು..,
ತಿದ್ದಿ ಬುದ್ಧಿ ಹೇಳೊ 
ನಮ್ಮ್ Teacher ಗಳು..,
ಸ್ಟ್ರಿಟ್ಟಾಗಿರೋ ಪ್ರಿನ್ಸಿಪಾಲ್ಗಳು
ಎಕ್ಸಾನಾಗ copy ಮಾಡಕ್
ಬಿಡ್ದಿರೋ Invisilator ಗಳು.,
ಆಗಾಗ ಬರೊ Skwad ಗಳು.,
ವಾರಕ್ಕೊಂದ್ ಸಲ ನಮ್ಮ್ 
ಹುಡುಗಿರ್ ಆಗ್ತಾರೆ Butterfly ಗಳು..,
ಎಕ್ಸಾಮ್‌ಗಳು ಗಿಗ್ಸಾಮ್ ಗಳು..,
ಟ್ರಯಲ್ ಬ್ಯಾಲೆನ್ಸ್ ಗಳು, ಟ್ರೇಡಿಂಗ್
ಅಕೌಂಟ್ ಗಳು, ಪ್ರಾಫಿಟ್ & ಲಾಸ್ ಗಳು,
ಟ್ಯಾಲಿ ಆಗ್ದಿರೊ ಬ್ಯಾಲೆನ್ಸ್ ಶೀಟ್ ಗಳು,
Totally ಎಲ್ಲಾ ಕನ್ಫ್ಯೂಷನ್ ಗಳು.,?
ಸೆಮಿನಾರು ಗಿಮಿನಾರ್ ಗಳು,
ಹಸ್ಯೈನ್ ಮೆಂಟ್ ಗಿಸ್ಯೈನ್ ಮೆಂಟ್ ಗಳು,
ಜೆರಾಕ್ಸು ಗಿರಾಸ್ಕುಗಳು,
ಸ್ಯೈಮಲ್ ಟೇನಿಯಸ್,Find X ಗಳು,
Production ,Sales ಗಳು,
Treding , Securitiess ಗಳು,
Market ವು,ಗೀರ್‌ ಕೆಟ್ಟು,
ಕೊನೆಗೆ ತಲೆಕೆಟ್ಟು..,
ಓದೋದ್ರಲ್ಲೇ ಕಳೀತಿದೆ ಆಯಸ್ಸು
ಕಲ್ತಿದ್ ನೆನ್ ಪೈತಿ ಅಷ್ಟೊ ಇಷ್ಟೊ..,
ಇಂಗೈತಪ್ಪಾ ನಮ್‌ Management,
(Commerce) ಎಜುಕೇಷನ್.......,

ಗಂಗೋತ್ರಿ _‌‌ ಅಕ್ಷಿ..

 - Made using Quotes Creator App, Post Maker App
2 likes 0 comments
Gangothri R V
Quote by Gangothri R V - ಸ್ವರ ಬಡಿತ...❣️

ಬಂದನವಳ ಜೀವನಕ್ಕೆ ಸಂಗಾತಿಯಾಗಿ,
ಬಂಧಗಳನ್ನು ಮುರಿದು ಹರಿವ
ಸಂಗೀತವಾಗಿ...,
ದುಡಿಮೆ ನಿಮ್ಮದೇನೆಂದು ?ಕೇಳಲಿಲ್ಲ
"ಬರೀ ನಂಬಿಕೆ ಜೀವನ"
 ಎಂದರೂ ಟೀಕೆ ಮಾಡಲಿಲ್ಲ..,
ಅಲ್ಲಿ ಅವನು ಇಲ್ಲಿ ಇವಳು
ಸುಲಭವಲ್ಲ ಕಾಯುವಿಕೆ,
ಜಿದ್ದು ಕೊಂಚ ,ಮುದ್ದು ಹೆಚ್ಚು
ಮದ್ದು ಇದುವೇ ಜೀವನಕ್ಕೆ..,
ಅವಳೆಲ್ಲಾ ಕರ್ತವ್ಯಗಳು ಮುಗಿಯುವರೆಗೂ,
ಶಿವನು ಸತಿಗಾಗಿ ಕಾತ ಹಾಗೆ,
ಇಲ್ಲಿ,
ಅವಳಿಗಾಗಿಯೇ ಕಾತ ಇವನ,
 ತಾಳ್ಮೆಗೆ ಸರಿಸಾಟಿ ಯಾರು...
ಮುಗಿಯದ ಅವರಿಬ್ಬರ ಮಾತಿಗೆ
 ಮೌನವೇ ವಿರಾಮ........
ಕೊನೆಗೆ,,,,
ಎಲ್ಲವನ್ನೂ ಛೇದಿಸಿ, ಎಲ್ಲರನ್ನೂ ಒಪ್ಪಿಸಿ
ಸಂಗೀತದ ಸ್ವರದಂತೆ ಅವನ 
ಎದೆಯೊಳು ಬಲಗಾಲಿಟ್ಟು , 
ಬೇರ್ಪಡಿಸಲಾಗದ ಪ್ರೀತಿಯೊಳಗೆ 
ಬಂದಿಯಾಳು.......

ಗಂಗೋತ್ರಿ. ಆರ್.ವಿ
 - Made using Quotes Creator App, Post Maker App
3 likes 0 comments
Gangothri R V
Quote by Gangothri R V - ಮಾಸದ ಒಲವು..,

ಏನೆಂದು ವರ್ಣಿಸಲಿ ನಿನ್ನ
ಮಾಸದೆ ಉಳಿದ ಚಿನ್ನ..,
ಮನದಲಿ ನೂರಾರು ಬಯಕೆ
ಅದ, ಸ್ವೀಕರಿಸಲು ಬೇಡುವುದು
ಈ ಪುಟ್ಟ ಹೃದಯ...
ಯಾರೂ ವರ್ಣಿಸಲಾಗದ ರೂಪ ನೀನು,
ಯಾರೂ ಬರೆಯಲಾಗದೆ ಉಳಿದ 
ಸಾಲು ನೀನು..,
ಯಾರ ಉತ್ಪ್ರೇಕ್ಷದಲ್ಲೂ‌ ನಿಲುಕದ
ಸೌಂದರ್ಯ ನೀನು...,
ಸನಿಹ ಬಂದು ಕೈ‌‌ ಹಿಡಿದು
ಜೊತೆಗೆ ಪಯಣಿಸಿದರೆ ಈ,
ಹೃದಯಕೆ ‌ಹೇಳಲಾಗದ ಆನಂದ..,
ಏನೆಂದು ವರ್ಣಿಸಲಿ ನಿನ್ನ
ಮಾಸದೆ ಉಳಿದ ಚಿನ್ನ.....,

ಗಂಗೋತ್ರಿ _ವಿ_ಅಕ್ಷಿ... - Made using Quotes Creator App, Post Maker App
19 likes 9 comments
Gangothri R V
Quote by Gangothri R V - ಕುಗ್ಗದಿರು ಮನವೇ.,

ಕುಗ್ಗದಿರು ಮನವೇ
ಸಂದರ್ಭಗಳು ನಿನ್ನ ಕುಗ್ಗಿಸಲು
ಯತ್ನಿಸಿದಾಗ,,,,,
ಕುಗ್ಗದಿರು ಮನವೇ
ನಿನ್ನವರೇ ನಿನ್ನನ್ನು ಈಯಾಲಿಸಲು 
ಯತ್ನಿಸಿದಾಗ,,,,
ಕುಗ್ಗದಿರು ಮನವೇ
ನಲಿಯುವ ವಯಸ್ಸಿನಲ್ಲಿ ಜವಾಬ್ದಾರಿಗಳು
 ಎಗಲೇರಿದಾಗ,,,
ಕುಗ್ಗದಿರು ಮನವೇ
ನಿನ್ನ ಮನ ಆತ್ಮವಿಶ್ವಾಸ 
ಕಳೆದುಕೊಂಡಾಗ,,,,
ಕುಗ್ಗದಿರು ಮನವೇ
ಭರವಸೆ ತುಂಬಲು ನಿನ್ನವರಿಲ್ಲದಾಗ,,,
ಕುಗ್ಗದಿರು ಮನವೇ
ನಿನ್ನ ಮಾತುಗಳು ಮೌನವಾದಾಗ,,,
ಕುಗ್ಗದಿರು ಮನವೇ
ನೀ ಕುಗ್ಗಿ ನಿನ್ನ ದೃತಿಗೆಡಸದಿರು
ಪರಿಶ್ರಮದ ಯತ್ನದಲ್ಲಿ ನೀ,
ತಲುಪು ನಿನ್ನ ಕನಸಿನ,
ಬದುಕಿನ ಒಲವಿನ ನಿಲ್ದಾಣಕೆ.....

ಗಂಗೋತ್ರಿ ಆರ್.ವಿ - Made using Quotes Creator App, Post Maker App
4 likes 0 comments
Gangothri R V
Quote by Gangothri R V - ನೀನೊಬ್ಬನೇ....

ನಾ ಮನಸಾರೆ ಮೆಚ್ಚಿದವ 
ನೀನೊಬ್ಬನೇ......,
ಎಲ್ಲಾ ಜನ್ಮಗಳು ನಿನ್ನೊಂದಿಗೆಯೇ
ಅಂದುಕೊಂಡವ ನೀನೊಬ್ಬನೇ..,
ಯಾರಿಗೂ ಸೋಲದ ಮನಸ್ಸನ್ನ
ಸೋಲಿಸಿದವ ನೀನೊಬ್ಬನೇ...,
ನಿನ್ನನ್ನ ಪಡೆಯಲು ನನ್ನ
ತಪಸ್ಸಿಗಿಳಿಸಿದವ ನೀನೊಬ್ಬನೇ...,
ನನ್ನೆಲ್ಲಾ ಬದಲಾವಣೆಗಳಿಗೆ
ಕಾರಣ ನಾದವ ನೀನೊಬ್ಬನೇ..,
ಎಲ್ಲವನ್ನು ತಿರಸ್ಕರಿಸಿ ನಿನ್ನೊಂದಿಗೆ
ಇರಬೇಕೆಂಬ ಬಯಕೆ ,,
ಹುಟ್ಟಿಸಿದವ ನೀನೊಬ್ಬನೇ...,
ಕೊನೆಗೂ...!
ನನ್ನಾತ್ಮವ ಮುಟ್ಟಿ ಜೀವನದಲ್ಲಿ
ಒಂದಾದವ ನೀನೊಬ್ಬನೇ..,
ಕನಸಲ್ಲೂ ಕಲ್ಪನೆಯಲ್ಲೂ ನೀನೊಬ್ಬನೇ..,
ಆರಾಧಿಸುವೆನು ನಿನ್ನನ್ನೇ,
ಎಂದೆಂದಿಗೂ ನೀನು ನನ್ನವನೇ...,

ಗಂಗೋತ್ರಿ_ವಿ_ಅಕ್ಷಿ
 - Made using Quotes Creator App, Post Maker App
6 likes 2 comments
Gangothri R V
Quote by Gangothri R V - ಇಟ್ಟಿರುವೆ  ಹೆಜ್ಜೆ...

ಗೆಜ್ಜೆ ಕಟ್ಟಿದವನ ಗಮನ
ಸೆಳೆಯಲು ಇಟ್ಟಿರುವೆ ಹೆಜ್ಜೆ,,
ನಿದ್ದೆಗೆ ಜಾರಿದರು ಸ್ವಪ್ನದಲ್ಲೂ
ಕಾಡುವವನ ಪಡೆಯಲು
ಇಟ್ಟಿರುವೆ ಹೆಜ್ಜೆ,,,
ಹೃದಯದೊಳಗೆ ಅಡಗಿರುವವನಿಗೆ
ಗುಡಿಕಟ್ಟಿ ಪೂಜಿಸಲು
ಹೃದಯದೊಳಗೆ ಕೂತು ಬಿಡಲು
ಇಟ್ಟಿರುವೆ ಹೆಜ್ಜೆ,,,,,
ಆರಾಧಿಸುವ ದೇವಿಯಾಗುವ ಬದಲು
ಜೀವನದುದ್ದಕ್ಕೂ ಜೀವಿಸುವ
ಬಂಧದೊಳಗೆ ಬಂದಿಯಾಗಲು
ಇಟ್ಟಿರುವೆ ಹೆಜ್ಜೆ,,,
ಅಂಗೈಯಲ್ಲಿ ಅರಿಶಿನ ಇರಿಸಿ
ಮುಂಗೈಯಲ್ಲಿ  ಕಂಕಣಕಟ್ಟಿ
ಕಾಲುಂಗುರ ತೊಡಿಸುವ
ಕನಸುಗಾರನ ಜೊತೆ
ಸಪ್ತಪದಿ ತುಳಿಯಲು
ಇಟ್ಟಿರುವೆ ಹೆಜ್ಜೆ.......,

ಗಂಗೋತ್ರಿ ಆರ್.ವಿ..
 - Made using Quotes Creator App, Post Maker App
4 likes 0 comments
Gangothri R V
Quote by Gangothri R V - ಮರೆಯದಿರು ಮನವೇ...

ಮರೆಯದಿರು ಮನವೇ
ಪುನರ್ಜನ್ಮ ನೀಡಿದವಳನು,
ಮರೆಯದಿರು ಮನವೇ
ಎನ್ನಯ ಜೀವನವನ್ನೇ ಪಣಕಿಟ್ಟು
ನಿನ್ನ ಹಸು ನಗಿಸಿದ ದೈವವನು,
ಮರೆಯದಿರು ಮನವೇ
ಎನ್ನಯ ಕಷ್ಟಗಳ ಅಡಗಿಸಿ
ನಿನ್ನಯ ಸುಖವನ್ನೇ ಬಯಸುವವಳನು,
ಮರೆಯದಿರು ಮನವೇ
ಹಗಲಿರುಳು ದುಡಿದು ಎನ್ನಯ
ಜೀವನ ರೂಪಿಸುವವಳನು,
ಮರೆಯದಿರು ಮನವೇ
ಮಡಿದ ಮೇಲು ನಿನ್ನ
ಶ್ರೇಯಸ್ಸನ್ನೇ ಬಯಸುವವಳನು,
ಮರೆಯದಿರು ಮನವೇ
ನಿನ್ನಯ ಜೀವನ ಅವಳ್
ನೀಡಿದ ಭಿಕ್ಷೆಯೆಂದು......

ಗಂಗೋತ್ರಿ ಆರ್ ವಿ
೦೬/೦೯/೨೨ - Made using Quotes Creator App, Post Maker App
5 likes 0 comments
Gangothri R V
Quote by Gangothri R V - ಶುಭಾಶಯಗಳು.🙏

ಶಿಕ್ಷಕರೆಂದರೆ ಕೇವಲ ಪಠ್ಯ
ಪುಸ್ತಕದ ಹೊಣೆ ಹೊತ್ತವರಲ್ಲ,
ಙ್ಞಾನವೆಂಬ ಕೊಳದಲ್ಲಿ ತುಂಬಿರುವ
ಅಜ್ಞಾನದ ಕತ್ತಲನ್ನು ಹೋಗಲಾಡಿಸಿ,
ಙ್ಞಾನವೆಂಬ ಹಣತೆಯನ್ನು ಅಚ್ಚುವವರು,
ಅನುಭವದ ಮಾತುಗಳನ್ನಾಡಿ
ವಿದ್ಯಾರ್ಥಿಗಳನ್ನ ಆಕರ್ಷಿಸುವವರು,
ಅಲ್ಪಕಾಲದಲ್ಲಿ ಪಠ್ಯದೊಂದಿಗೆ
ಬದುಕಿನ ಪಯಣದ ಹಾದಿ ತೋರಿಸುವವರು,
ಜೀವನವೆಂಬ ನಂಬಿಕೆಯ ಪಯಣದಲ್ಲಿ
ಸಂದರ್ಭಗಳ ಹೊಂದಿಸಿ ಬರೆಯಿರಿ
ಪದದ ಒಳ ಅರ್ಥ ತಿಳಿಸಿದವರು,
ನಂಬಿಕೆಯ ಪಯಣದಲ್ಲಿ ಸಾಗುತಿರುವ
ಜೀವನದ ಪ್ರತಿಯೊಂದು ಕ್ಷಣ-ಕ್ಷಣದಲ್ಲೂ
ಒಂದೊಂದು ಪಾಠ ಕಲಿಸಿದ ನನ್ನೆಲ್ಲಾ
ಗುರುಗಳಿಗೆ ನನ್ನ ಶತಕೋಟಿ
ನಮನಗಳು.....❣️


ಗಂಗೋತ್ರಿ ಆರ್.ವಿ
೦೫/೦೯/೨೨ - Made using Quotes Creator App, Post Maker App
3 likes 0 comments
Gangothri R V
Quote by Gangothri R V - ಭಾವನೆಗಳ ಬೀಳ್ಕೊಡಗೆ

ನಿನ್ನ ಕಂಡ ಕ್ಷಣ, ಮೌನ ಆವರಿಸಿತು ನನ್ನಲು
ಆಡಬೇಕಿರುವ ಮಾತು ಮರೆತು,
ಬರೀ ಕಂಗಳ ನಡುವಿನ
ಸಂಭಾಷಣೆ ನಡೆದಿತ್ತು..
ಪ್ರೀತಿ ಹೇಳಲಾಗದೆ ಹೃದಯದಲ್ಲೇ ಉಳಿದಿತ್ತು.
ಓ ನನ್ನ ಮನದ ಆಯ್ಕೆ
ತಾಳ್ಮೆಯ ಶಿಖರ ನೀನು,
ನನ್ನ ಸಾಮ್ರಾಜ್ಯದ ಒಡೆಯ ನೀನು
ಹಿಂದೆಂದೂ ಆಗದ ಹೊಸ
ಅನುಭವ ನನ್ನೊಳಗೆ....
ಅಲೆಯ ಪ್ರಕ್ಷುಬ್ಧತೆ ತೀರ ಆಕ್ರಮಿಸಿದಂತೆ
ನೀ ನನ್ನ ಮನವ ಆವರಿಸಿದೆ....

ಸುಮ್ಮನೆ ನಿನ್ನ ತಬ್ಬಿ ನಿಲ್ಲಬೇಕು...,
ಜೀವ ನಿಲ್ಲುವವರೆಗೆ - ಜೀವನ ಮುಗಿಯುವವರೆಗೂ.. 💝👩‍❤️‍👨

ಗಂಗೋತ್ರಿ_ವಿ_ಅಕ್ಷಿ
 - Made using Quotes Creator App, Post Maker App
3 likes 0 comments
Gangothri R V
Quote by Gangothri R V - ನೊಂದಾಗ ನಾ ಒರಗುವ ಹೆಗಲಾಗಿರು,
ನಗುವಾಗ, ಅದರ ಕಾರಣವು ನೀನಾಗಿರು  - Made using Quotes Creator App, Post Maker App
24 likes 12 comments

Explore more quotes

Gangothri R V
Quote by Gangothri R V -  ನಿಲ್ದಾಣ.....

ನೆನ್ನೆಯ ಅನುಭವ, 
ನಾಳೆಯ ಭರವಸೆಗಳ
ಮಧ್ಯೆ, ಇಂದು ಜೀವಿಸುವ 
ನಂಬಿಕೆಯ ಪಯಣದ 
ನಿಲ್ದಾಣವೇ  "ಜೀವನ".............. 



ಗಂಗೋತ್ರಿ ಆರ್. ವಿ
31/07/2022  - Made using Quotes Creator App, Post Maker App
8 likes 2 comments
Gangothri R V
Quote by Gangothri R V - Dear love.. ❣️

        Thank you....

ನನ್ನೊಳಗಿನ  ನನ್ನ  ನನಗೆ 
ಪರಿಚಯಿಸಿದ್ದಕ್ಕೆ......... 
ನನ್ನೊಳಗಿನ ಹಸು ನಗುವಿನ 
ಪರಿಚಯ ಮಾಡಿಸಿದ್ದಕ್ಕೆ.... 
ಭಾವನೆಗಳೇ ಇಲ್ಲದ ಮನದೊಳಗೆ 
ಪ್ರೀತಿಯ ತುಂಬಿದಕ್ಕೆ......... 
ನನಗೇ ತಿಳಿಯದೆ ನನ್ನೊಳಗೆ 
ಆವರಿಸಿದ್ದಕ್ಕೆ....... 
ಸಂಬಂಧಗಳ ಬೆಲೆ ತಿಳಿಸಿದ್ದಕ್ಕೆ...... 
ನಿನ್ನೆಲ್ಲಾ ಸಂಗಂತಿಗಳನ್ನಾ ನನ್ನೊಂದಿಗೆ 
ಹಂಚಿಕೊಂಡಿದ್ದಕ್ಕೆ......... 
ನನ್ನ  ಸಂಗಂತಿಗಳನ್ನ ತಾಳ್ಮೆಯಿಂದ 
ಕೇಳಿದ್ದಕ್ಕೆ.......... 
ನನ್ನೆಲ್ಲಾ ಕೆರಳಿಕೆಗಳನ್ನ ಸಹಿಸಿದ್ದಕ್ಕೆ..... 
ಯಾವುದಕ್ಕೂ ವ್ಯಸನಿಯಾಗದಿರೋ ನನ್ನ, 
ನಿನ್ನ  ವ್ಯಸನಿಯಾಗಿ  ಮಾಡಿದ್ದಕ್ಕೆ.......
ಎನ್ನ  ಜೀವನದಲ್ಲಿ ಅಮ್ಮ ಆಗಿದ್ದಕ್ಕೆ.... 
ಈ  ಒಂದೇ  ಜನ್ಮ ಸಾಲದು, 
ನಿನ್ನೆಲ್ಲಾ  ಪ್ರೀತಿಯ  ಮರುಪಾವತಿಸಲಕ್ಕೆ..... 
ಎಲ್ಲಾ  ಜನ್ಮಗಳಲ್ಲೂ ನನ್ನವಳಾಗಿಯೇ,,
ಹುಟ್ಟು, ನನ್ನ  ಕಾಟ  ಸಹಿಸೋದಕ್ಕೆ.......


        From..... 
Ur partner..... 

         

 - Made using Quotes Creator App, Post Maker App
14 likes 2 comments
Gangothri R V
Quote by Gangothri R V - ನಾನಿರುವೆ......

ಜಗತ್ತೇ ನಿನ್ನ ದ್ವೇಷಿಸಿದರೂ,
ನಾನು ನಿನ್ನ ಪರವಾಗಿ ನಿಲ್ಲುವೆ
ನಿನ್ನನ್ನು ಯಾರೇ ದೂರ ತಳ್ಳಿ,
ಬಿಟ್ಟು ಹೋದರು ನಾನು
ನಿನ್ನ ಜೊತೆಯಾಗಿರುವೆ..
ನಿನ್ನ ಸಂತೋಷದಲ್ಲಿ
ಭಾಗಿಯಾಗದಿದ್ದರು ದುಃಖದಲ್ಲಿ
ಖಂಡಿತವಾಗಿಯೂ ಭಾಗಿಯಾಗುವೆ...
ಎಂತಹದೇ ಕಷ್ಟಗಳಿದ್ದರೂ,
ಕೊನೆಯವರೆಗೂ ಹೆಗಲ ನೀಡುವೆ... ❣️

ಗಂಗೋತ್ರಿ ಆರ್. ವಿ
2/07/2022 - Made using Quotes Creator App, Post Maker App
9 likes 7 comments
Gangothri R V
Quote by Gangothri R V - ಮೊದಲ ಭೇಟಿ..

ಅಂದು ನಮ್ಮ ಭೇಟಿ ಕೇವಲ ಅನಿರೀಕ್ಷಿತ
ತಿಳಿದಿರಲಿಲ್ಲ ನಮ್ಮ ಸ್ನೇಹ ಸಾಗುವುದೆಂದು
ಇಲ್ಲಿಯ ತನಕ..

ನೊಂದ ಜೀವಕೆ ನಗುವುದನ್ನು ಕಲಿಸಿದೆ ನೀನು
ನಿನ್ನ ನಿಸ್ಕಲ್ಮಷ ಮನಸ್ಸಿಗೆ ಸೋತಿಯೆನು ನಾನು
ಒಂದೇ ಗರ್ಭದಲ್ಲಿ ಜನಿಸದೆ ಇದ್ದರು
ನಮ್ಮ ಭಾಂದವ್ಯ ವರ್ಣಿಸಲು ಸಾಲದು ಪದಪುಂಜಗಳು.....

ನೀ ತೋರುವ ಪ್ರೀತಿ, ಆರೈಕೆ
ನಂಬಿಕೆಗೆ ಶಿರ ಬಾಗುವೆ..
ನನ್ನ ಬದುಕಿನಲ್ಲಿ ದೊರೆತ ಅಮುಲ್ಯವಾದ
ಉಡುಗೊರೆ..ಕಾಯುವೆ ಕೊನೆಯವರೆಗೂ
ನೆರಳಾಗಿ... ಜೊತೆಗಿರು ಬದುಕಿನ ಎಲ್ಲಾ
ಕ್ಷಣದಲೂ.... 

ಗಂಗೋತ್ರಿ ಆರ್. ವಿ
೧೨/೦೭/೨೦೨೨ - Made using Quotes Creator App, Post Maker App
8 likes 9 comments
Gangothri R V
Quote by Gangothri R V - ಒಲವಿನ ಎಣಿಕೆ

ಬರೆಯುವೆನು ನಿನಗೊಂದು
ಪ್ರೀತಿಯ ಕವಿತೆ...
ಅದ ನೆನೆದರೆ ಹಚ್ಚಿದಂತಾಯಿತು
ಮನದಲಿ ಪ್ರೀತಿಯ ಹಣತೆ...!
ನಿನ್ನ ಮಾತಿನ ಮಧುರತೆ
ಕೋಗಿಲೆಯ ಧ್ವನಿಯಂತೆ.,
ಸೋತೆ ನಾ, ಈ ತಾಳ್ಮೆಯ ಶಿಖರಕೆ.. 

ಗಂಗೋತ್ರಿ ಆರ್. ವಿ
02/06/2022 - Made using Quotes Creator App, Post Maker App
3 likes 4 comments
Gangothri R V
Quote by Gangothri R V - ಮಿನುಗು ತಾರೆ..

ನಿನ್ನ ಈ ನಗು ಪೌಣ್ಮೀಮೆಯ
ಚಂದ್ರನನ್ನು ನಾಚಿಸುದೇನೋ,
ಅರಳಿದ ಕಮಲವು ನಿನ್ಮುದ್ದಾದ
ಮೊಗದ ಹಾಗೆ ಆಕರ್ಷಸುವುದೇನೋ!
ಕಂಗಳ ಕಾಂತಿಯ ನಕ್ಷತ್ರಕ್ಕೂ
ಹೊಳಪು ನೀಡಬಹುದೇನೋ
ನಾಚಿಕದ ನತ್ತು ನಾಚುತಿದೆ..
ನಿನ್ನ ಅಂದವ ಕಂಡು
ಕೊರಳ ಹಾರವು ನೀನೆ ಸುಂದರಿ
ಎಂದು ಹಿಡಿದಿದೆ ಮೊಂಡು..
ಕಿವಿಯೋಲೆಯು ಕೂಗಿ ಹೇಳುತಿದೆ
ನಿನ್ನ ಚೆಲುವಿನ ಮುಂದೆ ನಾನು ಬೆಪ್ಪ ನೋಡು..
ಕಪ್ಪು ಸೀರೆ, ಕೆಂಪು ರವಿಕೆ ತೊಟ್ಟು
ಮಿನುಗುತಿರುವ ಚೆಲುವ ತಾರೆ.... 

ಗಂಗೋತ್ರಿ ಆರ್. ವಿ..  - Made using Quotes Creator App, Post Maker App
4 likes 2 comments
Gangothri R V
Quote by Gangothri R V - Too,
Dad..

A dad is someone who
Want to catch you before you fall..
A dad is someone who
Wants to keep you from making mistakes..
Instead lets you find your own way,
Even though his heart breaks
in silence when you get hurt... 

Gangothri R V  - Made using Quotes Creator App, Post Maker App
14 likes 0 comments
Gangothri R V
Quote by Gangothri R V - ಬಂಧಿಯಾಗಿದೆ..?

ತಂದೆ ತಾಯಿ ಮಾತಿಗೆ ಬೆಲೆಯನು ಕೊಟ್ಟು.
ಇಷ್ಟ ಇಲ್ಲದವನಿಗೆ ಕೊರಳನು ಕೊಟ್ಟು..
ತಾನು ಪ್ರೀತಿಸಿದ ಹೃದಯ ಬಲಿಕೊಟ್ಟು..
ತನ್ನ ಆಸೆಗಳ ಬದಿಗೆ ಇಟ್ಟು..
ತಾನು ಪ್ರೀತಿಸಿದವನ ದೂರ ಇಟ್ಟು.
ಬಂದಿಯಾದಳು....

ಭಾವನೆಗಳ ಪ್ರತಿಬಿಂಬ
ಬಂಧವರಿಯದೆ ಬರಹದಲ್ಲೆ
ಬಂಧಿಯಾಗಿವೆ....... 

Gangothri R V  - Made using Quotes Creator App, Post Maker App
6 likes 2 comments
Gangothri R V
Quote by Gangothri R V - "ಮೊದಲ ಸಲ"
ಒಲವ ಕಥನ ಶುರುವಿನಲ್ಲಿ,
ಅರಿಯದಷ್ಟು ಮಧುರವು!
ಕಾಲ ಉರುಳಿ ಸಾಗುವಲಿ
ಪರಿಚಯಿಸುವುದು ವಿರಹವು..

ಆಂತರ್ಯ ಕೇಳುವ ಎಷ್ಟೊ ಪ್ರಶ್ನೆಗೆ
ಉತ್ತರ ಹೇಳಲು ನಾ ಸೋತೆನು!
ಆಂತರ್ಯದ ಆನಂದ ಒಲವಾಗಿತ್ತು
ಎನ್ನುವ ನಿಜವನ್ನೆ ನಾ ತಿಳಿದನು..

ಹಿಂದೆಂದು ಆಗದ ನವ ಅನುಭವ!
ಮನದ ಬೀದೀಲಿ ನಿನದೆ ಕಲರವ!
ಬೇಕೋ ಬೇಡೋ ಸ್ಥಿತಿಗೆ ತಲುಪಿ
ಯಥಾಸ್ಥಿತಿಗೆ ಬದುಕು ತಲುಪಿ..


Gangothri R V  - Made using Quotes Creator App, Post Maker App
14 likes 2 comments
Gangothri R V
Quote by Gangothri R V - It was easy for her to fall in love, to wish being
his for the rest of her life, to be his soul mate
that he had been searching for endlessly to complete him..... They said she wasn't aware of the difficult part,
She didn't know that love wasn't easy, it would
enfail her heart, mind, body & even soul
deliberately! But she was lost in the glory
Singing song of love 

Gangothri R V
 - Made using Quotes Creator App, Post Maker App
5 likes 0 comments

Explore more quotes