anandakavi profile
anandakavi
523 41 2
Posts Followers Following
anandakavi
Quote by anandakavi - ರಶ್ಮಿ 

ಮೃದು ಭಾವದ ಚಕೋರಿ
ಮಿತ ಭಾಷಿ ಮುದ್ದು ಬಂಗಾರಿ
ವಿನೋದನ ಪ್ರೀತಿಯ ಸಹಾಚಾರಿ 

ಪೂರ್ವಿ ಪ್ರಗತಿಗೆ ಮುದ್ದು ಅಮ್ಮ
ದಣಿವಿಲ್ಲದ ಮುಖವದನ 
ಗರ್ವ ಅಹಂ ತಿಳಿಯದ ಮನ

ಸ್ನೇಹ ಭಾವ ಇವಳ ಉಡುಗೆ
ಬಲು ಸೊಬಗು ಅವಳ ನಡುಗೆ
ಸರಳ ಸುಂದರ ಅವಳ ಕಡೆಗೆ

ಹಿರಿಯರಿಗೆ ತೆಲೇ ಬಾಗಿ
ಕಿರಿಯರಿಗೆ ಮೌನ ಸಂಪ್ರೀತಿ 
ಕೂಡಿ ಬಾಳುವ ಪ್ರೀತಿಯ ನೀತಿ

ಬಾಳಿನಲಿರಲಿ ಸದಾ ವಿನೋದ
ವಿಶ್ವಗಿರಿಯ ಹೆಮ್ಮೆಯಾಗಿರು ಸದಾ
ರಶ್ಮಿಯ ಕಿರಣದಂತೇ ಬೆಳಕಾಗಿರು ಸದಾ
ಮಧುವಂತೆ ವೀಣೆಯಾಗಿ ಹೊರಹೊಮ್ಮ ಸದಾ..

ಆನಂದಕವಿ



 - Made using Quotes Creator App, Post Maker App
0 likes 0 comments
anandakavi
Quote by anandakavi - *ನಾರಿ ಆಲ್ವೇಸ್ ಟ್ರೆಂಡಿಂಗ್*

ಸಿಲ್ಕ್ ಸೀರೀಯೇ ನೀ 
ಗಂಡನಿಗೆ ಬಾರಿಯೇ 
ಬೀರುವಿಗೆ ಹೊರೆಯೇ?
ಅದ್ಧೂರಿಯ ಸಮಾರಂಭ
ಪತಿಗೆ ಅಭಿಮಾನದ ಪ್ರತಿ
ಸತಿ ಉಡುವ ಸೀರೆಯೇ ಪ್ರಗತಿ
ಮೊದಲಾದರೆ ಅವಳು ಸಖಿ
ಈಗ ಸೆಕ್ರೆಟರಿ ಸತಿ ಸಂಗಾತಿ
ಪತ್ನಿ ಬರೇ ಅಡುಗೆಮನೆಗೆ ಸಲ್ಲ
ಪಾರ್ಲರ್ ಜಿಮ್ ಕ್ಲಬ್ ಒಡತಿ
ಮಕ್ಕಳು ರೆಸಿಡೆನ್ಸಿಯಲ್ ಸ್ಕೂಲ್
ಸತಿ ಪತಿ ಮಸ್ತ್  ವರ್ಲ್ಡ್ ಟೂರ್ 
ಮಕ್ಕಳಿಗೂ ಬೇಡ ಸಪ್ಪೆ ಸೀರೆ
ಅಮ್ಮ ಕಾಣಬೇಕು ತಾರೆ ಹಾಗೇ 
ಇಂಗ್ಲಿಷ್ ಮಾತಾಡಬೇಕು ಮಸ್ತ್ ಆಗೆ
ನಾರಿ ಆದಳು ಈಗ ಬಲು ದುಬಾರಿ
ದುಡಿಯುವಳು ಚೆಂದ ಕಾಣುವಳು 
ಮನೆ ಮಕ್ಕಳನ್ನು ನಿಭಾಯಿಸುವಳು
ಅಡುಗೆ ಮನೆ ಕೆಲಸಕ್ಕೆ ಆಳು ಇಡುವಳು 
ಬದುಕುಲು ಕಲಿತಿರುವಳು ಅವಳು
ಸೆರಗು ಸುತ್ತಿಕೊಂಡು ನಿಲ್ಲುವಳಲ್ಲ
ಸ್ಲೀವ್ಲೆಸ್ ಬ್ಲೌಸ್ ಮೈ ಕಾಣುವ ಮಾಡೆಲ್..
ಇಂದಿನ ನಾರಿ ಮನೆಗೆ ಮಹಾರಾಣಿ
ಸಖಿ ನಿನಗೆ ಸೀರೆ ಬಟ್ಟೆ ಎಂದಾದರೂ ಹೊರೆಯೇ?
ಹೊಸ ಬಟ್ಟೆಗೆ ಈಗ ಜಾಗವಿಲ್ಲ
ರೆಂಟ್ ಬಟ್ಟೆಗಳ ಟ್ರೆಂಡ್ ನೆಡೆದಿದೆಯಲ್ಲ
ಸುಂದರಿ ಇವಳು ಮನೋಹರಿ
ಕಾಣುವಳೂ ಅಪ್ಪಟ ಅದ್ಧೂರಿ
ಮದುವೆಯಲ್ಲಿ ಇವರಿದ್ದರೆ ಚೆಂದ
ವಧು ವರರಿಗಿಂತ ಇವರದೆ ಡ್ರೆಸ್ಸಿಂಗ್
ಫೋಟೋ ಭೂತ್ ಸೆಲ್ಫಿ ಮಿಂಚಿಂಗ್
ನಾರಿ ನಿನ್ನ ಸೊಬಗು ವೈಖರಿ ಆಲ್ವೇಸ್ ಟ್ರೆಂಡಿಂಗ್..

✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ಸಿದ್ದೇಶ್ವರ ಸಂತ

ಅನಂತತೆಯ ದಿವ್ಯ ಸಾಗರ
ತನ್ಮಯತೆಯ ಸಾಧನೆಯ ಶಿಖರ 
ಒಡಲೊಳಗೆ ಜ್ಞಾನದ ಸಮುದ್ರ

ಜ್ಞಾನದ ಕಗ್ಗಂಟ ಬಿಡಿಸಿದರು ಸಸಾರ
ಸರಳ ಶಬ್ದಗಳ ಸುಂದರ ಕಥಾ ವಿವರ
ಅನುಭಾವಿಯ ಅನುಭವದ ಪ್ರಕಾರ 

ಅಲ್ಲಮರ ಉತ್ಕೃಷ್ಟ ಬಯಲ ಚರಾಚರ
ಬಸವಣ್ಣನ ಸಮಾನತೆಯ ವಚನ ಹರಿಕಾರ
ಅಕ್ಕಮಹಾದೇವಿಯ ನಿರ್ಭಯಾ ಸಂಚಾರ

ಜ್ಞಾನದ ಅಂಬಲಿ ಕುಡಿದು ತೃಪ್ತಿ ಪಟ್ಟ
ಆಕಾಶವೇ ಚಪ್ಪರ ನಕ್ಷತ್ರ ತಾರೆಗಳ ಆಟ 
ಜೀವನ ಪರಿಸರ ಪ್ರೀತಿ ತಿಳಿಸುವ ಪಾಠ

ಅಬ್ಬರವಿಲ್ಲ ಮೌನದಲಿ ಮೆಲ್ಲ ದ್ವನಿಯಲಿ 
ಆಲಿಸುವರು ಸಹಸ್ರ ಕಿವಿಗಳು ಶಾಂತತೆಯಲಿ 
ನೇರ ಮನಕೆ ಮುದ ನೀಡುವ ಪ್ರವಚನ ಇಲ್ಲಿ

ಹುಟ್ಟುವರು ಸಂತರು ಕೋಟಿಗೊಬ್ಬರು 
ದೇವರ ಪ್ರತಿರೂಪ ಅವರೇ ಸಿದ್ದೇಶ್ವರರು 
ಹುಟ್ಟು ಸಾವು ನಿರಂತರ ಮನ್ವಂತರ
ಗೆದ್ದು ಅನಂತತೆಯಲಿ ಬಯಲಾದರು.


ಆನಂದಕವಿ



 - Made using Quotes Creator App, Post Maker App
0 likes 0 comments
anandakavi
Quote by anandakavi - Our brain ,our thoughts ,vision can only see to what extent we can look for. There is so much unfolded unseen beyond we look. Humans created robots unparalleled excellent potential which can help in extending their knowledge. Life a place to live.Life Love it live it.

Fuel Life 💕




ananda kavi - Made using Quotes Creator App, Post Maker App
2 likes 0 comments
anandakavi
Quote by anandakavi -  *ಪ್ರವಾಸ*


ಜೀವನವೊಂದು ಪ್ರವಾಸ
ಸ್ವಲ್ಪ  ಅಶ್ವಾಸ   ಸ್ವಲ್ಪ ಪ್ರಯಾಸ
ಬೇವು ಬೆಲ್ಲದ ಮಿಶ್ರಿತ ಪಾಯಸ
ಧೈರ್ಯವೇ ಅದರ ಆತ್ಮವಿಶ್ವಾಸ
ಗೆದ್ದರೆ ಪ್ರಾಸ ಸೋತವಗೆ ತ್ರಾಸ.


ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - ನನ್ನೊಳಗೆ

ನಾನೆಲ್ಲಿ ಉಳಿದೆ 
ಹುಡುಕಿದೆ ನನ್ನೊಳಗೆ
ಪ್ರಯಾಣ ಪ್ರಮಾಣ
ಚಿಂತನ ಸಂಚಲನ
ಹೊರಟಿದೆ ಗಮನ
ಬಿಕ್ಕಳಿಸಿದ ಮೌನ

ರಂಗೋಲಿಯ ಬಣ್ಣ
ಹಾಕಿದೆ ಬೃಂದಾವನ
ಹಾಡಿದೆ ಸರಿಗಮ
ಹೊಸ ರಾಗ ನವ ಚೈತನ
ಆವರಿಸಿದ ನನ್ನತನ
ಚಿರ ಯೌವನದ ಮನ


ಕಾಲದ ಕನ್ನಡಿ 
ತೋರಿದೆ ಮುನ್ನುಡಿ
ಹಾರುವ ರಕ್ಕೆಗಳಿಗೆ
ಬಿರುಗಾಳಿಯ ಅಬ್ಬರ
ಕುಗ್ಗಿದೆ ಸಂಚಾರ
ಭಾವ ಸುಳಿಯಲಿ ಭ್ರಮರ 

ಮತ್ತೆ ಮೌನದ ಸಮರ 
ನಿರಂತರದ ಜೀವನ
ಇರುವೇನೋ ಇಲ್ಲವೂ 
ಎಚ್ಚರಿಸುವ ಒಳ ಮನ
ಜಾರಿದೆ ಅಂತರಂಗದೊಳಗೆ
ನನ್ನ ನೆನಪಿನ ಅಂಗಳಕೆ

ತೂಗಡಿಸಿ ನಿದ್ದೇಕಡೆಗೆ
ಮಂಪರು ಎಚ್ಚರ
ನಾನೋ ಬದುಕೋ
ಅರಿವಿಲ್ಲದ ಭಾವವೋ
ಸುಮ್ಮನೆ  ಕೆಣಕಿದೆ
ಹೃದಯವನು ಒಮ್ಮೆ

ನಾನೆಲ್ಲಿ ಉಳಿದೆ 
ಹುಡುಕಿದೆ ನನ್ನೊಳಗೆ....


ಆನಂದಕವಿ

 - Made using Quotes Creator App, Post Maker App
0 likes 0 comments
anandakavi
Quote by anandakavi -  ನನ್ನಮ್ಮ


ಒಡಲೊಳು ಇಟ್ಟು ಬೆಳೆಸಿದೆ ಅಮ್ಮ
ಹಾಲುಣಿಸಿ ಜಗಕೆ ಪರಿಚಯಿಸಿದೆ ನನ್ನ 
ಬಿಸಿ ಅಪ್ಪುಗೆ ಮುದ್ದಿಸಿ ಉಣಿಸಿದೆ ಅನ್ನ 
ಸವಿ ಭಾಷೆ ನುಡಿದು ಕಲಿಸಿದೆ ಮಾತನ್ನ

ಚಂದ್ರನ ತೋರಿಸಿ ಕಥೆ ಹೇಳಿದ ನನ್ನಮ್ಮ 
ವಚನ ಮಂತ್ರವ ಪಠಿಸಿ ಕೈಮುಗಿಸಿದ ಅಮ್ಮ
ಜಾತ್ರೆಗೆ ಹಬ್ಬಕ್ಕೆ ಹೊಸ ಬಟ್ಟೆ ತೊಡಿಸಿದ ಅಮ್ಮ
ಸಿಹಿ ತಿಂಡಿ ಸವಿ ರುಚಿ ಉಣಿಸಿದ ನನ್ನಮ್ಮ

ದಣಿಯದೆ ದುಡಿವಳು ಸಹಿಸಿ ನೆಡೆವಳಮ್ಮ 
ಸಿಟ್ಟು ನುಂಗಿ ನಗುಮುಖ ತೋರಿಸುವ ಅಮ್ಮ
ಶಾಲೆಯ ಅಭ್ಯಾಸ ದಿನ ಪತ್ರಿಕೆ ಓದಿಸುವ ಅಮ್ಮ
ಸಂಸ್ಕೃತಿ ಸಂಸ್ಕಾರ ನಡೆ ನುಡಿ ನೋಡಿ ಕಲೆತೇವಮ್ಮ

ನಿನ್ನ ಮನದ ಆಳ ನೋವು ತಿಳೆಯಲೇ ಇಲ್ಲಾ
ನಿನ್ನ ಆರೋಗ್ಯ ವಯ ಕಣ್ಣಿಗೆ ಕಾಣಲೇ ಇಲ್ಲಾ
ಇಂದಿಗೂ ಅದೇ ಪ್ರೀತಿ ಹುರುಪು ಉತ್ಸಾಹ ಛಲ 
ಮೊಮ್ಮಕ್ಕಳ ಜೊತೆ ಮತ್ತೆ ಅದೇ ಸಂಭ್ರಮದ ಬಲ

ಎಲ್ಲರ ಕನಸಲ್ಲಿ ನಿನ್ನ ಕನಸ ಮರೆತ ಅಮ್ಮ
ಆಸೆ ಪಟ್ಟರು ಇಷ್ಟ ಪಟ್ಟು ಕೇಳಲೂ ಎನನ್ನ 
ಜೀವನದ ಮೌಲ್ಯಗಳ ಅರಿತು ಬೆರೆತ ಜೀವನ
ಹರಸುತ್ತ  ಶ್ರಮಿಸಿ ಶರಣಾದ ಜೀವನ ಪಾವನ.

ಸಂಬಂಧಗಳ ಬೆಲೆ ಮಿಗಿಲಾದದ್ದು
ಸಹಾಯದ ಬೆಲೆ ಕಾಸಿಗೆ ಮೀರಿದ್ದು
ಪ್ರೀತಿ ಸ್ನೇಹ ಅಹಂಕಾರಕ್ಕೂ ಹೆಚ್ಚಿನದು
ಒಗ್ಗಟ್ಟಿದ್ದರೆ ಬಾಳು ಬಂಗಾರವಾಗುವುದು 


ಅಮ್ಮ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🥳🙏💐
ಆನಂದಕವಿ 



 - Made using Quotes Creator App, Post Maker App
0 likes 0 comments
anandakavi
Quote by anandakavi - ಕನ್ನಡ

ಶ್ರೀಗಂಧದ ನಾಡು
ಚೆಲುವ ಕನ್ನಡನಾಡು 
ಸಿರಿ ಕಂಪಿನ ಕನ್ನಡ 
ಸವಿ ನುಡಿ ಕನ್ನಡ 
ನಮ್ಮ ಹೆಮ್ಮೆಯ ನಾಡು

ಹೊಯ್ಸಳ ಚಾಲುಕ್ಯ 
ರನ್ನ ಪಂಪ ರಟ್ಟ 
ಕದಂಬ ಚೋಳ 
ಹಕ್ಕ ಬುಕ್ಕ ರಾಜರು
ವೀರರು ಆಳಿದ ನಾಡು

ಕುವೆಂಪು ಡಿವಿಜಿ
ಬೇಂದ್ರೆ ಕಾರಂತ
ಬಸವ ಅಲ್ಲಮ
ಅಕ್ಕಮಹಾದೇವಿ
ಕವಿಗಳು ,ಸಂತರ ನಾಡು

ಕೃಷ್ಣ ಕಾವೇರಿ 
ತುಂಗಾ ಭದ್ರಾ
ಶರಾವತಿ ಭೀಮಾ 
ಹರಿವ ನದಿಗಳ ಬೀಡು

ಜ್ಞಾನ ಸಂಪದ ವಿಜ್ಞಾನ 
ಸಿರಿ ಸಂಪತ್ತಿನ ಕಾನನ
ದೇವ ಋಷಿಗಳ ಸ್ಥಾನ
ಕನ್ನಡ ನಮ್ಮ ಅಭಿಮಾನ

ಉಳಿಸಿ ಕನ್ನಡ ಬೆಳೆಸಿ ಕನ್ನಡ

ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 

✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ಪ್ರಣತಿ

ದೀಪಾವಳಿ ಹಬ್ಬ ಬಂದೈತಿ 
ಹಚ್ಚಿರೆಲ್ಲರು ಸಂಬ್ರಮದ ಪ್ರಣತಿ
ನಕ್ಷತ್ರದ ಹೊಳೆ ಹರಿದೈತಿ
ರಂಗೋಲಿ ಸ್ವಾಗತ ಮಾಡೈತಿ 

ಬಂಧು ಬಳಗ ಕೂಡೈತಿ 
ಮನಿ ಮನ ಸ್ವಚ್ಛ ಆಗೈತಿ 
ಸಡಗರ ಸಂಬ್ರಮ ಹೆಚ್ಚೈತಿ
ಊರ ಮಾರ್ಕೆಟ್ ತುಂಬೈತಿ 

ಚೂಡಾ ಉಂಡಿ ಸವಿಯುತ್ತಾ 
ಹರಟೆ ಹಾಸ್ಯ ನೆನೆಯುತ್ತಾ
ಹಿರಿಯರ ಬೆಟ್ಟಿ ಮಾಡುತ್ತಾ
ಹಬ್ಬದ ರಂಗು ಹರಡುತ್ತಾ 

ನರಕ ಚತುರ್ದಶಿ, ಮಹಾಲಕ್ಷ್ಮಿ ಪೂಜೆ 
ಹಿರಿಯರ ಕಾಲಿಗೆ ನಮಸ್ಕಾರ
ಕಿರಿಯರಿಗೆ ಪ್ರೀತಿಯ ಆಶೀರ್ವಾದ
ಸಂಬ್ರಮ ಸಡಗರ ಪಟಾಕಿ ಆಗರ


ಶುಭ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 


 - Made using Quotes Creator App, Post Maker App
0 likes 0 comments
anandakavi
Quote by anandakavi - ಸತ್ಯ ಕಥೆಗಳು
*ಪರಿಸ್ಥಿತಿ*

ಮಾಲಾ ಮನೆಯಲ್ಲಿ ಅಡುಗೆ ಮಾಡಿ ಪ್ರೀತಿಸಿದ ಗಂಡ ಮಕ್ಕಳ ಶಾಲೆ ಪುಟ್ಟ ಸಂಸಾರ ನಿರ್ವಹಿಸುತ್ತಾ ನೆಡೆದವಳು.
ಗಣೇಶ ಮನೆ ಬಿಟ್ಟು ಬಂದು ಅವಳ ಮದುವೆಯಾಗಿದ್ದ .
ತಾನು ಯಾರು ಎಂದು ಮದುವೆಯಾಗಿ ಮೂವತ್ತು ವರ್ಷ ಮುಚ್ಚೆ ಇಟ್ಟಿದ್ದ. ಒಮ್ಮೆ ಕುಡಿದ ಮತ್ತಿನಲ್ಲಿ ತನ್ನ ಮನೆಯ ವಿಳಾಸ ನೀಡಿ ಮರೆತ. ಮಾಲಾ ಒಮ್ಮೆ ಗೆಳತಿಯರ ಜೊತೆ ಆ ಊರಿಗೆ  ಹೋದಾಗ ಈ ವಿಳಾಸಕ್ಕೆ ಹೋಗಿ ಮನೆಯವರಿಗೆ ನೆಡೆದ ವಿಷಯ ತಿಳಿಸಿ ಗಣೇಶನಿಗೆ ಫೋನ್ ಮಾಡಿ ಅಣ್ಣ ಅತ್ತಿಗೆ ಯೊಂದಿಗೆ ಮಾತನಾಡಿಸಿದಳು... ಅವರು ಉತ್ತಮ ಸ್ಥಿಥಿವಂತರಾಗಿದ್ದರು. ಪ್ರೀತಿಯಿಂದ ಮಾಲಾ ಮತ್ತು ಗಣೇಶನಿಗೆ ಮನೆಗೆ ಬರಲು ಹೇಳಿದರು.ಗಣೇಶನಿಗೆ ಮಕ್ಕಳ ಮುಂದೆ ತಮ್ಮ ಪರಿಸ್ಥಿತಿ ಉತ್ತಮವಾಗಿದ್ದು ತಾವು ಮತ್ತೊಬ್ಬರ ಮನೆಯಲ್ಲಿ ಕೆಲಸ ಮಾಡಲು ಹೋಗವ ತಂದೆ ತಾಯಿ ತಮ್ಮ ಈ ಬಡತನಕ್ಕೆ ಕಾರಣ. ಪ್ರೀತಿಯಿಂದ ಮನೆಯವರನ್ನೆಲ್ಲ ನೋಡಿ ಆಶೀರ್ವಾದ ಪಡೆದರು.
ಒಮ್ಮೆ ಮುಜುಗರ,ಒಮ್ಮೆ ಹೆಮ್ಮೆ ಎನಿಸಿದರೂ .ಗಣೇಶ ಮಾಲಾ ತಮ್ಮ ಕೆಲಸ ಮಾಡಲು ಮತ್ತೆ ಸಂತೋಷದಿಂದ ವಾಪಸ್ ಊರಿಗೆ ಹಿಂದಿರುಗಿದರು.

✍️ಆನಂದಕವಿ - Made using Quotes Creator App, Post Maker App
0 likes 0 comments

Explore more quotes

anandakavi
Quote by anandakavi - ಜಡೆಗವನ

*ಹೇಮಂತ ಋತು*

ಇಂದು ಹೇಮಂತ ಋತುವಿನ ಆಗಮನ
ಆಗಮನ ಚುಮು ಚಳಿ ಮಳೆಯ ನಿರ್ಗಮನ 
ನಿರ್ಗಮನ ರಾತ್ರಿ ನಕ್ಷತ್ರಗಳ ಅನಾವರಣ
ಅನಾವರಣ ಉದುರುವ ಎಲೆ ಮರಗಳ ವನ
ವನ ಸೂರ್ಯನ ಕಿರಣಕೆ ಬಯಸುವ ಮನ
ಮನ ಬಿಸಿಲ ಬಯಕೆಗೆ ಚಿಗುರುವ ಸಂಚಲನ
ಸಂಚಲನ ಸೂರ್ಯನ ಚಲನೆಗೆ ವಾತಾವರಣ
ವಾತಾವರಣ ಋತುಗಳ ವಿಶಿಷ್ಟ ಪ್ರಯಾಣ
ಪ್ರಯಾಣ ಜೀವ ರಾಶಿ ಭೂಮಿ ಬಾನಿನ ತಾಣ 
ತಾಣ ವೈವಿಧ್ಯತೆ ವಿಶೇಷತೆಯ ಭೂಮಿ ಖಣ 
ಖಣವಿದು  ಉಳಿಸಿ ಸಂರಕ್ಷಿಸಿ ಭೂಮಿಋಣ
ಋಣ ,ಇಂದು ಹೇಮಂತ ಋತುವಿನ ಆಗಮನ

✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ವಚನ
      *ಶಿವ*
ಶಿವ ನೀನು ಜಗವೋ
ಜಗದೊಳಗೆ ಶಿವನೋ 
ನನ್ನೊಳಗೆ   ಶಿವನೋ
ಶಿವನೊಳಗೆ ನಾನೋ 
ಅವನಿಲ್ಲದೆ ನಾನಿಲ್ಲ
ನಾನಿಲ್ಲದೆ ಅವನಿಲ್ಲ
ಬದುಕೆಂಬ ಪ್ರಣತಿಯಲಿ
ಕಾರುಣ್ಯದ ಎಣ್ಣೆಲಿ
ಕ್ಲೇಷವೆಲ್ಲ ಸುಡಲಿ
ಜ್ಞಾನದ ಬೆಳಕಾಗಲಿ
ಗುರು ಸಿದ್ದೇಶ್ವರ

✍️ಅನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - It's a joy to begin a day with a smile. wishes make your heart happy. Happiness surrounds your world.world which we see everyday looks bright and beautiful.Life live it love it.
Fuel Life 💕

anandakavi  - Made using Quotes Creator App, Post Maker App
0 likes 0 comments
anandakavi
Quote by anandakavi - में नारी

थोड़ी खुशी में मांग के लेती हूं।
उधर ही सही मैं हास लेती हूं।
साजेदारी की ए टेडी मेडी रास्ते।
कुछ हार के कुछ हांस के जी लेती हूं।

हार मेरी क्वाइश में तेरा टप्पा क्यों?
हार मेरी उड़ान पर चुपके से पांव कींच क्यों।
सहम सी जाते अरमान उम्मीद के पंखे यों।
कुछ न बोलके आंखो मे ही डर पीती हों क्यों।

स्त्री साब कुछ हो कर भी कुछ नहीं।
पुरुष कुछ न हो कर भी सब कुछ होना।
जीवन में हर वो पात्र हार के जीया।
पता नहीं में ने ऐसा क्यों किया प्यार से किया।

चाहत रिवाज है या आदत मेरी खुद की।
भीकर गई जुड़ गई खुद को हौसला देती रही।
आज की नारी साब पे भरी कहता जमाना सही।
ऊंची उड़ान परिश्रम करने वाली सुलझिहुई नारी।


आनंद कवि

 - Made using Quotes Creator App, Post Maker App
1 likes 0 comments
anandakavi
Quote by anandakavi - Life is a journey full of challenges along with a beautiful joy and hidden lesson to learn. These hard times of up and down keeps us alive .every bit and piece in the existence is a part of this universe. Smile that vanish all your sarrow. Laugh that creates positivity.cry to throw out anger.Help to gain happiness.

Fuel Life 💕



anandakavi - Made using Quotes Creator App, Post Maker App
2 likes 0 comments
anandakavi
Quote by anandakavi - *ನನ್ನ ಗುರು*

*ಗುರಿ ಮುಟ್ಟಿಸಿದವರೆ ಗುರು* ಹಂತ ಹಂತದಲ್ಲಿಯೂ ಬರುವ ಹಲವಾರು ಮಾರ್ಗದರ್ಶಕರು ನನ್ನ ಗುರು. ಜೀವನದ ಮೌಲ್ಯ ಮೌಢ್ಯ ಭಾವ ಚೇತನ ತಿಳಿ ಹೇಳಿದ *ಸಿದ್ದೇಶ್ವರ ಸಂತ* ನಮಗೆಲ್ಲರಿಗೂ ಒದಗಿದ ವರವೇ. ಸೂಕ್ಷ್ಮ ಸಂಗತಿಗಳನ್ನು ಮನ ಮುಟ್ಟಿ ಹೃದಯದೊಳಗೆ ಮನೆ ಮಾಡುವ ಸಹೃದಯಿ ಗುರು.ಏನನ್ನು ಬಯಸದೆ ಮೌನವಾಗಿ ತನ್ನ ಕೆಲಸ ಪ್ರಕೃತಿಗೆ ಹಾಗೂ ಜನಜಂಗುಳಿಯ ಕಿತ್ತಾಟ ರಾಜಕೀಯ ಅಶಾಂತಿಯ ಯೋಗದಲ್ಲಿ ನಿಸ್ವಾರ್ಥ ಸೇವೆ ಶಾಂತಿಯ ಧೂತ ಗುರು *ಸಿದ್ದೇಶ್ವರರು* ಅವರ ನುಡಿ ಪ್ರವಚನ ಕೇಳಿದ ಸಹಸ್ರಾರು ಅವರ ಕಣ್ಣ ಮುಂದೆ ನೋಡುವ ಕೇಳುವ ಭಾಗ್ಯ .*ಅಂತಿಮ ಸತ್ಯದ ಅನಂತ ಬಯಲು* ಗುರುವೇ ನಿಮಗೆ ಶರಣು🙏🌹
✍️ ಆನಂದ ಕವಿ
 - Made using Quotes Creator App, Post Maker App
0 likes 0 comments
anandakavi
Quote by anandakavi - *ಅಪ್ಪ*
ಅಪ್ಪ ನೀನು ಮನೆಯ ಧೈರ್ಯಸ್ಥಂಭ.
ನಮ್ಮ ನಗುವೇ ನಿನ್ನ ಪ್ರತಿಬಿಂಬ
ಸೂರ್ಯ ನೀನು ನಮ್ಮ ಬಾಳಿಗೆ
ಉಸಿರು ಹಸಿರು ನೀನೇ ನಮಗೆ ನನ್ನಪ್ಪ..

ನಿನ್ನ ದುಡಿವ ಕೈಲಿ ಅದ್ಭುತ ಶಕ್ತಿ
ಬಡಿದು ಬುದ್ದಿ,ಗದರಿ ಬೆದರಿಸಿ
ಪ್ರೀತಿಯ ಬಾಳಿನ ಸುಧೆಯ ಹರಿಸಿ
ಜೀವನ ಕಲಿಸುವ ಗುರುವೇ ನನ್ನಪ್ಪ..

ಪಯಣದಲಿ ಏರಿಳಿತಗಳ ಎದುರಿಸಿ
ಪ್ರತಿ ಹೆಜ್ಜೆಗೂ ಸದೃಢತೆ ಗಮನಿಸಿ
ಕುಗ್ಗದೆ ಜಗ್ಗದೆ ಬೇರು ದೃಢ ಗೊಳಿಸಿ
ಕಷ್ಟವೆಂಬ ಮಳೆಗೆ ಕೊಡೆಯಾಗುವ ನನ್ನಪ್ಪ..

ದುಡಿವ ಕೈಗಳ ಗೆರೆಗಳೆ ಅಳಿಸಿವೆ..
ಮನದ ಇಚ್ಛೆಗಳ ಮೌನದಿ ತ್ಯಜಿಸಿ..
ಮಕ್ಕಳ ಬಾಳಿಗೆ ಜೀವವೇ ಒದಗಿಸಿ
ತನ್ನ ತಾನೇ ಮರೆತು ದುಡಿವ ನನ್ನಪ್ಪ..

ಮರೆತರೆ ಅಪ್ಪ ನೆನೆವೆ ನಿಮ್ಮ.
ನನ್ನೂಸಿರಲಿ ಬೆರೆತು ,ರಕ್ತದಲ್ಲಿ ಹರಿದು
ಆದರ್ಶವೇ ನಮ್ಮ ಬದುಕಿನ ದಾರಿದೀಪ..
ನೀವು ಹಚ್ಚಿದ ನಂದದೀಪ ಸದಾ ಬೆಳಗಲಿ ನನ್ನಪ್ಪ ..
ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - *ದೃಷ್ಟಿ ದಾನ*

ಸೃಷ್ಟಿ ನೋಡಲು ದೃಷ್ಟಿ ಆಸರೆ 
ಪ್ರಕೃತಿಯ ಶ್ರೇಷ್ಠ ಉಡುಗೊರೆ
ದೃಷ್ಟಿದಾನ ಮಾಡಿ ಆಗದು ಹೊರೆ 

ನತದೃಷ್ಟರು ಅಂತ ಕಡೆಗಣಿಸದಿರಿ
ಅನುಕಂಪ ದಯೆಯಿಂದ ನೋಡದಿರಿ
ಸೃಷ್ಟಿಯ ವಿಚಿತ್ರ ದೃಷ್ಟಿ ದಾನ ಮಾಡಿರಿ

ಕಣ್ಣಿದ್ದವರ ಚಿಂತನೆ ಕುರುಡಾದರೆ
ಅಂಧನ  ಮನಸೇ ಅವನಿಗಾನಸರೆ
ಜ್ಞಾನದ ಬೆಳಕೇ ಬದುಕಲು ಆಸರೆ

ಅಂಧರ ಬಾಳಿಗೆ ನೀ ಕೊಡುವ ಕಣ್ಣು 
ಉಳಿಯುವುದು ಕಣ್ಣು ಆಗದೆ ಮಣ್ಣು 
ಕೊಟ್ಟು ನೇತ್ರ ಆಗುವೆ ಮಹಾದಾನಿ ಅಣ್ಣ 

ಹತ್ತಿರದ ಆಸ್ಪತ್ರೆಯಲ್ಲಿ  ಮಾಡಿ ನೇತ್ರದಾನ
ಸತ್ತಾಗ ಒಂದು ಗಂಟೆಯಲ್ಲಿ ಬಂದು ಒಯ್ಯುವರು ಕಣ್ಣ 
ಬೆಳಕಾಗಲೀ ಅವರ ಬಾಳು ಮಾಡಿ ದೃಷ್ಟಿ ದಾನವನ್ನ.👁️


✍️ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - *ಹಸಿರಿನಲ್ಲಿ ನಮ್ಮ ಉಸಿರಿದೆ*

ಸುಂದರ ಭೂಮಿಗೆ ಹಸಿರಿನ ಕಾನನ
ಜೀವ ಸಂಕುಲಕೆ ಉಸಿರಿನ ಜನನ
ವನಸಿರಿಯ ವೈಭೋಗದ ಸಂಚಲನ
ತರುವುದು ಸಂಬ್ರಮ ಮಳೆಯ ಆಗಮನ 

ಯಾರು ನೆಟ್ಟರು ಇಲ್ಲಿ ಹಸಿರು ಗಿಡ ಮರ
ಸಿಹಿ ಹುಳಿ  ಮಿಶ್ರಿತ ಹಣ್ಣುಗಳ ಸಾಗರ
ವಿವಿಧ ಬಗೆಯ ತೊಪ್ಪಲು ತರಕಾರಿ ಆಹಾರ
ನೆರಳು ತಂಪು ಕಂಪು ಸೂಸುವ ಹೆಮ್ಮರ

ಆಕಾಶದ ಹಕ್ಕಿಗೆ ಮರದ ಗೂಡೆ ಆಧಾರ 
ಹಸಿರಿದ್ದರೆ ಮಳೆ ಬೆಳೆ ಉಸಿರೇ ಚರಾಚರ
ಮಳೆಯಾದರೆ ನದಿ ಕೆರೆ ಕಟ್ಟೆಗಳ ಅಬ್ಬರ
ಪ್ರಾಣಿ ಪಕ್ಷಿಗಳ ರೈತನ ಬದುಕಲಿ ಸಡಗರ

ಭೂಮಿ ಕೊಟ್ಟದೆ ಈ ಅನನ್ಯ ಉಪಹಾರ
ಉಳಿಸಿ ಬೆಳೆಸುವ ಮನಗಳೇ ಮನೋಹರ
ಹಚ್ಚಿ ಹೆಚ್ಚು ಗಿಡಮರ ಕೊಡುವುದು ಉಸಿರ
ಹಸಿರೇ ಸಂಪತ್ತು ಉಸಿರೇ ಸೃಷ್ಟಿಯ ಸಹಾಕರ.

ಆನಂದ ಕವಿ 🎋🍀 - Made using Quotes Creator App, Post Maker App
0 likes 0 comments
anandakavi
Quote by anandakavi - The quality of humans is not know by degrees it's defined by the behaviour and knowledge he acquired by overcoming mistakes and challenges.life is all about experience you gain  and grow up in right direction.Life Love it Live it.

Fuel Life 💕 



anandakavi - Made using Quotes Creator App, Post Maker App
3 likes 0 comments

Explore more quotes

anandakavi
Quote by anandakavi - ಚಚ್ಚೌಕ ಕವನ
            *ಭಾಷೆ*
ಭಾಷೆ ವೇಷ ಭೂಷ ನೈಸರ್ಗಿಕ ನೆಲೆ
ಭಿನ್ನ ಭಿನ್ನ ಬಣ್ಣ ಚೆಲುವಿನ ಕಲೆ
ಮನುಜ ಕುಲದ ಹಲವು ಸಂಕೋಲೆ 
ಸಂಸ್ಕೃತವೇ ಮೂಲ ನಮ್ಮ ಈ ಭಾಷೆಗೆ
ಬೆಳೆವ ಭೂಮಿ ಎಲ್ಲರಿಗೂ ತಾಯಿಯೇ
ಸಂಸ್ಕೃತಿ ಸಂಸ್ಕಾರ ಭಾಷೆಗೆ ಭೂಷಣ
ಸುಂದರ ಸುಮಧುರ ಶುದ್ಧ ಭಾಷೆಯೂ
ದುಷ್ಠ ಭಾಷೆಗಿರಲಿ ಸದಾ ಅಂಕುಶ
ಬೇಧ ಭಾವ ಏಕೆ ಮನುಜ ಭಾಷೆಗೆ
ಸಾಹಿತ್ಯ ಕವನ ರಚಿಸುವ ಮನ
ನಮ್ಮ ನಾಡು ನುಡಿಯೂ ಎಲ್ಲರಿಗೊಂದೇ
ಭಾಷೆ ಹಲವು ಭಾವನೆ ಒಂದಲ್ಲವೇ

✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - *ಋಣಮುಕ್ತ*
ಬಾಬು ಅಣ್ಣ ಶ್ರೀಮಂತ ಮನೆತನದ ಪರಿಸ್ಥಿತಿಗೆ ಎಲ್ಲಾ ಕೆಳೆದುಕೊಂಡು ಬಡವರಾದ ಹೃದಯವಂತ.ಅವರ ಮಡದಿ ಲೀಲಾ, ಮಗ ಪ್ರಸಾದ .ಅಣ್ಣನ ಮಗನ ಸಹಾಯಕ್ಕೆ ಎರಡು ಲಕ್ಷ ಸಾಲ ಚಿಕ್ಕಮ್ಮನ ಮಗನ ಕೇಳಿ ಆದಷ್ಟು ಬೇಗ ತೀರಿಸುವ ಭರವಸೆ. ಒಂದು ಲಕ್ಷ ಕೆಲವು ವರ್ಷದಲ್ಲಿ ತೀರಿಸಿದರು.ಕೊಟ್ಟವರು ಅವರ ಪ್ರೀತಿ ವಿಶ್ವಾಸಕ್ಕೆ ಸಾಲ ಕೇಳಲ್ಲಿಲ್ಲ.ಬಾಬು ಅಣ್ಣ ತೀರಿ ಹೋದರು. ವರ್ಷಗಳ ನಂತರ ಪ್ರಸಾದ್ ಉಳಿದ ಒಂದು ಲಕ್ಷ ತಂದರು.ಎಷ್ಟು ಬೇಡವೆಂದರೂ, ಅವರ ತಂದೆಯ ಈ ಇಚ್ಚೆ ಅವರು ಮಗನಿಗೆ ಈ ಋಣವನ್ನು ತೀರಿಸಲು ಹೇಳಿದ್ದರು.ಪ್ರಸಾದ್ ತನ್ನ ಕಷ್ಟದಲ್ಲೂ ಉಳಿಸಿ ಬಾಬು ಅಣ್ಣ ಹೆಸರಲ್ಲಿ *ಋಣಮುಕ್ತ* ಮಾಡಲು ಹಣ ಮುಟ್ಟಿಸಿದರು.ಎಷ್ಟು ಇದ್ದರೂ ಸಾಲದ ಈ ಕಾಲದಲ್ಲಿ ,ಪ್ರಸಾದ್ ಹೃದಯವಂತ ಶ್ರೀಮಂತ ಋಣಮುಕ್ತ ಅಲ್ಲವೇ.

✍️ ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - Challenges will never end, learning itself is the part to live life and how eachone takes master those experiences, overcome the challenges give you reward of contentment... Life Love it Live it

Fuel Life 💕

 - Made using Quotes Creator App, Post Maker App
0 likes 0 comments
anandakavi
Quote by anandakavi - ಯುಗಾದಿ 

ಹೊಸ ಸಂವತ್ಸರ ಹೊಸ ಯುಗಾಂತರ
ಹೊಸ ಚಿಗುರು ಹೊಸ ಮನ್ವಂತರ 
ಮಾವಿನ ಚಿಗುರು ಕೋಗಿಲೆಯ ಇಂಚರ
ನವ ವಸಂತದ ಹೊಸ ದೃಷ್ಟಿಯ ಸಂಚಾರ
ಹೊಸ ವರುಷ ತರುವ ಹರುಷದ ಸಂಸ್ಕಾರ
ಯುಗಾದಿ ಬೇವು ಬೆಲ್ಲದ ಮಿಶ್ರ ಸಮಾಂತರ
ತರಲಿ ನಿಮ್ಮ ಮನಗೆ ನೆಮ್ಮದಿಯ ಆಗಾರ 

ಯುಗಾದಿ ಹಬ್ಬದ ಶುಭಾಶಯಗಳು 

ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - ಹೊಸ ವರುಷ ನವಚೇತನ

ವಸಂತನ ಆಗಮನ 
ತರುವುದು ನವ ಚೇತನ
ತುಸು ತಂಪು ತುಸು ಬಿಸಿಗಾಳಿ
ಹಸಿರಿನ ಸಿರಿ ಸುಮನ

ಬಾನಿನಲ್ಲಿ ಸೂರ್ಯನ ಪ್ರಕರಣ
ಭೂಮಿಗೆ ಬಿಸಿ ವಾತಾವರಣ
ಭೂಮಿ ಅಂತರ್ಜಾಲ ಕುಸಿದ ತಾಣ 
ಮಳೆಯ ಹನಿಗೆ ಕಾಯುವ ಮನ

ನವ ಚಿಗುರು ಹೊಸ ನಿಲುವು 
ಶ್ರಮಕೆ ಸಿಗುವುದು ನಿಶ್ಚಿತ ಗೆಲುವು 
ನಿಸರ್ಗ ಭೂಮಿ ಸೂರ್ಯನ ಬ್ರಮಣ 
ತರುವುದು ಹೊಸ ಸಂಭ್ರಮ 

ಹೊಸ ತಂತ್ರ ಹಳೇ ಬೇರಿನ ಅನುರಣ
ಬೇವು ಬೆಲ್ಲವೆ ಜೀವನದ ಮಿಶ್ರಣ
ಉಳಿಸಿ ಹಸಿರು ಉಸಿರು ಜಲ ಕ್ಷಾಮ 
ಮತ್ತೆ ಬರಲಿ  ಹರುಷ ತರಲಿ ಯುಗಾದಿಯ ನವಚೇತನ.

✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - Wish is not the one you want her to do. Allow her to spread her wings let her fly to where she reaches let her not impress anyone.there is never a perfect or imperfect .Happiness is beyond all the limits.let it be small or Big achivement appreciation approvement all are labels. Each woman is as wonderful as anyone.be happy for all that you have done.
Happy women's day to each one of you.
Life Love it Live it 

Fuel Life 💞

 - Made using Quotes Creator App, Post Maker App
0 likes 0 comments
anandakavi
Quote by anandakavi - *ಶಿವಪಾರ್ವತಿ*

ಶಿವ ಪಾರ್ವತಿ ನೀವು ಅರ್ಧನಾರೀಶ್ವರ
ಶಕ್ತಿ ಯುಕ್ತಿಗೆ ಸಮಾನ ಇದುವೇ ಶರೀರ
ಜನನ ಮರಣ ಎಲ್ಲರಿಗೊಂದೆ ಅದುವೇ ನಿರಂತರ

ಭಕ್ತರ ಭಕ್ತಿಗೆ ಒಲಿಯುವ ಉಮಾ ಮಹೇಶ್ವರ
ಜೀವ ಬದುಕು ಭಾವ ಹಲವು ಪರಮೇಶ್ವರ
ಸತ್ಯವ ರಕ್ಷಿಸು ಅಸತ್ಯವ ಶಿಕ್ಷಿಸು ಜಗದೇಶ್ವರ

ಸತ್ಯವೇ ಶಿವ ನಿತ್ಯವೇ ಗೌರೀ ಸುಮಧುರ
ನಿಸ್ವಾರ್ಥ ಭಕ್ತಿಯೇ ನಿನಗೆ ಕರುಣಾಕರ
ಪ್ರೀತಿಯಿಂದ ನೀಡಿದರೆ ಒಲಿಯುವ ಶಿವಶಂಕರ

ಅಂದಿಗೂ ಶಿವ ಇಂದಿಗೂ ಶಕ್ತಿ ಸ್ವರೂಪ
ಸಮಪಾಲು ಸಹಬಾಳ್ವೆ ಮಾದರಿ ಶಿವಶಕ್ತಿ ರೂಪ
ಶಿವನ ಧ್ಯಾನ ದುಷ್ಟರ ಸಂಹಾರಕ್ಕೆ ನಿಲ್ಲುವ ದುರ್ಗಿರೂಪ 

ಮಮತೆಯ ಕರುಣೆಯ ತೋರುವಳು ಸಿರಿಗೌರಿ 
ಸುಬೀಕ್ಷೆಯ ಹಸಿರು ಉಸಿರು ಬೆಳೆ ಹರಸು ತಂದೆ
ಕಾಯುವವನು ನೀ ಇರುವಾಗ ನನಗೇಕೆ ಚಿಂತೆ

ವಿಶ್ವ ಮಹಿಳಾ ದಿನಕ್ಕೆ ಶಿವಶಕ್ತಿ ಮಾದರಿ
ನಿಮಗೆಲ್ಲಾ ಅಭಿನಂದನೆಗಳು


ಆನಂದ ಕವಿ 




 - Made using Quotes Creator App, Post Maker App
0 likes 0 comments
anandakavi
Quote by anandakavi - Gratitude is the precious gift .never wait for any reason or any special occasion .never know you my get that chance again.live mindfully heartily, smile that spread
 so much energy around.life love it Live it

Fuel Life 💞



anandkavi  - Made using Quotes Creator App, Post Maker App
1 likes 0 comments
anandakavi
Quote by anandakavi - *Two feet and it's journey,*


Two strong feet and strong hand
Run here and there energy all around
Over thinking what a curious mind.

Joy that boost you for that you need
Playing games finding way to never loose
Climbing up attitude and happiness deed

Comics that create thrilling mind
Thinking you are a Hero and bond
School that make you strong and sound.

College infatuation load of syllabus
Tireing days sleepless nights studies
Over burdun still goal is golden ground

Sometimes think is that we need to stand
Rough road struggles and bright minds 
Made the you today best to mankind .

Stand with pride and proud to parents 
Today after years feet look it's footprints
Life was all worth for the two feet walk.

Congratulations to you 
Dr Naveen mulimani
.Dr abhinandan ruge

for all the hardship for 
saving and giving better life. 
Many more success to both you 💐

kavita hanji 













 - Made using Quotes Creator App, Post Maker App
1 likes 0 comments
anandakavi
Quote by anandakavi - Fear is the most scary thing.dare is the biggest strength of mind.brave minds stand still. Be an inspiration.life love it Live it

Fuel Life 💞



anandkavi  - Made using Quotes Creator App, Post Maker App
1 likes 0 comments

Explore more quotes

anandakavi
Quote by anandakavi -   ಗೆಲುವು

ಕೈ ಹಿಡಿದು ನೀ ನಡೆದಾಗ 
ಮನದಲ್ಲಿ ಮೋಹದ ಗೆಲುವು
ಕಣ್ಣ ಅಂಚಿನಲ್ಲಿ ಹೊಳೆವ ಚೆಲುವು

ವಿಶ್ವಾಸದ ಆ ಪ್ರೀತಿಯ ಸ್ಪರ್ಶ
ನಿನ್ನ ಸ್ನೇಹ ಪ್ರೀತಿ ಆಕರ್ಷಕ
 ಸಂಗಾತಿ ನೀ ನನ್ನ ಪ್ರಿಯ ಸಖ

ಗೆಲುವು ಸೋಲು ಪ್ರೀತಿ ನೆಮ್ಮದಿ
ಉತ್ಕೃಷ್ಟ ಭಾವದ ನಿನ್ನ ಸಾನಿಧ್ಯ
ಸಮಪಾಲು ಸಹಬಾಳ್ವೆ ನಿತ್ಯದ ಬದುಕು

 ಆದೇ ಒಲವು ಜೀವನದ ಹೊಸ ನಿಲುವು
ಮುಂದಿನ ಪೀಳಿಗೆಯ ಹೊಸ ಚಿಗುರು
ಅರಳಿ ಬೇರೂರಿ ನಿಂತ ಹಳೇ ಬೇರು

ಹರಸಿ ಬೆರೆಸಿ ಶ್ರಮಿಸಿ ಉಳಿಸಿ ಬೆಳೆಸಿ
ಅಳಿಯುವುದು ಅಲ್ಲ ಉಳಿವುದು ಅಲ್ಲ 
ಇದು ಬರೀ ಬಯಲು ಸತ್ಯದ ಬಯಲು.

ಆನಂದ ಕವಿ .💕 - Made using Quotes Creator App, Post Maker App
0 likes 0 comments
anandakavi
Quote by anandakavi - Human engineering technology and its energy is enormous.belive in the unseen technology of God who keep you alive with his Grace and blessings.life is between what you believe and unbelievable things.
Life Love it Live it.
Fuel Life 💞

anandkavi  - Made using Quotes Creator App, Post Maker App
1 likes 0 comments
anandakavi
Quote by anandakavi - Nither your self not your money comes to console.Its your smile and good will heal your soul.collect blessings before we leave .Be a  inspiration to leave a beautiful smile around.life love it Live it.

Fuel Life 💞



anandkavi  - Made using Quotes Creator App, Post Maker App
2 likes 0 comments
anandakavi
Quote by anandakavi - Time


Time is always precious

Never will be back again

Yet leaves it's scars behind


Memories that I held

Holding my little hand 

Tightly yet securely in pain


Smiles that fill my heart

 joy and blessed hands

remain with me every second


Life that give what it wish for

You like it or leave it doesn't matter 

Receive and accept with all love


Life is for all of us to live 

Never waste it's simple mood

Be loud and clear when you sound 


Giving hands is always a God

Serving hands are always Devine

Feeding hands  give life again.


Life love it Live it..

Fuel Life 💞

Anandakavi



 - Made using Quotes Creator App, Post Maker App
2 likes 0 comments
anandakavi
Quote by anandakavi - Life always puts you in the situation where you learn to let go your ego.the time you accept life starts looking more beautiful and valuable.

If ego is darkness, Realisation is the light.Life love it Live it.

Fuel life 💕



Anandakavi - Made using Quotes Creator App, Post Maker App
4 likes 0 comments
anandakavi
Quote by anandakavi - ಹಸಿ ಮುನಿಸು.


ಗಂಡನ ಮನೆ ತವರು ಮನೆ 

ಅಪಾರ ಪ್ರೀತಿ ಸ್ನೇಹ ಸ್ವೀಕೃತಿ ಇದ್ದರೂ

ಇದ್ದೆಂತಹ ಗಂಡ ಹೆಂಡತಿಯ ಹಸಿ ಮುನಿಸು?


ಮದ್ವೆಯಲ್ಲಿ ಬೀಗರು ಬಂದಾಗ

ಸ್ವಲ್ಪ ಮರ್ಯಾದೆ ಕೊಡಬೇಕಿತ್ತು

ಅವಳ ಕಣ್ಣಲ್ಲಿ ಎಲ್ಲಿರದ ಹಸಿ ಮುನಿಸು..


ನೂರು ಎಂದು ಐದುನೂರು ಜನರು

ಬಂದರೆ ಅಪ್ಪ ಅಮ್ಮ ಏನು ಮಾಡುವರು

ಅವನ ಮುಖದಲ್ಲಿ ಹೇಳದ ಹಸಿ ಮುನಿಸು...


ತುಪ್ಪದಲ್ಲಿ ಜಿಲೇಬಿ ಹೋಳಿಗೆ ಊಟಾ

ಬಂದವರಿಗೆ ಟೊಪ್ಪಿಗೆ ಟವಲು ಕುಬಸ.

ತಿವಿದು ಕಣ್ಣೊಳಗೆ ತೋರಿದಳು ಹಸಿ ಮುನಿಸು.


ಹೋಗಲಿ ಬೀಡೆ ಈಗೇನು ಕಮ್ಮಿ ಮಾಡಿರುವೆ ಏನು?

ಇಷರಾಮೆ ಜೀವನ ನನ್ನ ಮನದ ಅರಸಿ ಅಲ್ವೇನು 

ನಾಚಿ ನೀರಾದಳು ಬಿಟ್ಟು ಹಸಿ ಮುನಿಸು..


ಆನಂದ ಕವಿ 



 - Made using Quotes Creator App, Post Maker App
0 likes 0 comments
anandakavi
Quote by anandakavi - ನ್ಯಾನೋ ಕಥೆ

          ದಯೆ
ರೂಪ ಮಧ್ಯ ವಯಸ್ಸಿನ ಪ್ರಾಣಿ ಪ್ರಿಯೆ,ದುಬೈ ನಿಂದ ಬಂದ ಇವಳಿಗೆ ಬೀದಿ ನಾಯಿ ಬೆಕ್ಕು ಅವುಗಳಿಗೆ ಯೇನಾದರು ಮಾಡುವ ಹಂಬಲ. ದಿನಾಲೂ ಕೈಲಾದಷ್ಟು ಊಟಾ ನೀರು ಹಾಕುವ ರೂಢಿ.ಅಕ್ಕ ಪಕ್ಕದವರಿಗೆ ಈ ನಾಯಿಗಳ ಕಾಟದಿಂದ ಬೇಸತ್ತಿದ್ದರು.
ರೂಪ ಈ ನಾಯಿಗಳನ್ನು ಒಂದು ಸಂಸ್ಥೆಗೆ ಕೊಟ್ಟು ಅವುಗಳಿಗೆ ಆಪರೇಷನ್ ಮಾಡಿ ಅವುಗಳನ್ನು ಔಷದಿ ಕೊಟ್ಟು ಕಿವಿ ಕತ್ತರಿಸಿ ಮತ್ತೆ ತಂದು ಬಿಡುವರು.ಆಗ ಅವುಗಳು ರೋಷ ಮತ್ತು ಕಚ್ಚದೆ ಸುಮ್ಮನೆ ಇರುವವು ಎಂದು ಅಕ್ಕಪಕ್ಕದವರಿಗೆ ತಿಳಿಸಿ ಹೇಳಿದಳು.ಹಾಗೆಯೇ ಮರಿಗಳನ್ನು ಸಾಕುವ ಜವಾಬ್ದಾರಿ ತೋಟ ಹೊಲ ಇರುವವರಿಗೆ ಕೊಡುವರು.ಆಗ ಎಲ್ಲರಿಗೂ ಅವಳ ಕಾಳಜಿ ಪ್ರೀತಿಯ ಬಗ್ಗೆ ಹೆಮ್ಮೆಯಿಂದ ನೋಡುತ್ತಿರುವವರು.
✍️ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - *ಅಮ್ಮ*

ಅಮ್ಮನಿಗೆಂದೂ ವಯಸ್ಸಾಗುವುದಿಲ್ಲ
ಅಮ್ಮನಿಗೆಂದೂ ಬೇಸರವಿಲ್ಲ
ಅಮ್ಮ ನಿನಗೆ ಮಕ್ಕಳೆಂದರೆ ಜಗವೇಲ್ಲಾ

ಅಮ್ಮನೆಂದೂ ಪ್ರೀತಿ ಉತ್ಸಾಹದ ಕೃತಿ
ಅಮ್ಮ ಕರುಣೆ ವಾತ್ಸಲ್ಯದ ಮೂರ್ತಿ
ಅಮ್ಮ ಗೆಳತಿ ಅಪ್ಪನಿಗೆ ಸತಿ ಸಂಗಾತಿ

ಮಕ್ಕಳಿಗೆ ಅಮ್ಮ ಅದ್ಭುತ ದಿವ್ಯ ಆಕೃತಿ
ನೋವು ನಲಿವು ಒಲವಿನ ಸುಕೃತಿ
ತನ್ನ ದುಃಖವನೆಂದೂ ತೋರಿಸದ ಶ್ರೀಮತಿ

ಮಕ್ಕಳಿಗೆಂದು ತೀರಿಸಲಾಗದೂ ಅವಳ ಋಣ
ಅನಂತ ದಿಗಂತ ಅವಳ ಸುಂದರ ಮನ
ಒಲುಮೆ ತೋರಿದ ಚೆಲುವೆಯ ಜೀವನ 

ಅಮ್ಮ ಸುಖ ದುಃಖದ ಸಹನಾ ಸಖಿ
ಅಮ್ಮ ನಿನ್ನ ಪ್ರತಿ ಕ್ಷಣ ಇತರರಿಗೆ ಅಂತಿ
ಅಮ್ಮ ಆ ದೇವ ಕೊಟ್ಟ  ನಿನಗೆ ಎಂಥ ಶಕ್ತಿ

✍️ ಆನಂದಕವಿ🙏💐 - Made using Quotes Creator App, Post Maker App
1 likes 0 comments
anandakavi
Quote by anandakavi - *ಕಪ್ಪುಕಾಡಿಗೆ*

ಕಪ್ಪು ಕಾಡಿಗೆ ಕಣ್ಣ ಕೃಷ್ಣ ಸುಂದರಿ
ಮೋಹಕ ನೋಟದ ಮನೋಹರಿ
ತನು ಮನ ಸೆಳೆವ ನಿನ್ನ ವೈಖರಿ 
ಯಾರ ಕಾಯುತಿರುವೆ ನೀ ಸುಂದರಿ?

ಸುಂದರ ಲೋಕದ ಸ್ವಪ್ನವೋ 
ಇನಿಯನ ಪ್ರೀತಿಯ ಅಪ್ಪುಗೆಯೋ
ನಿನಗೆ ಬರೆದಿಟ್ಟ ಪ್ರೇಮ ಪತ್ರವೂ
ಕದ್ದು ಮುತ್ತಿಟ್ಟು ಚಿವುಟಿದ ನೆನಪೂ

ಸ್ನೇಹ ಬದಲಾದ ಮೋಹವೋ
ಕಿವಿಯಲ್ಲಿ ಏನೋ ಪಿಸುಗುಟ್ಟಿದ ಮಾತೋ
ಆಕಷಿಸುವ ನಿನ್ನ ಕೆಂಪು ಕುಂಕುಮವೋ 
ಸಂಪಿಗೆ ಮೂಗಿನ ಆ ಚೆಂದದ ಬೊಟ್ಟು

ಕಣ್ಣ ಕಾಂತಿ ಕಪ್ಪು ಕೇಶ ರಾಶಿ ಸೊಬಗು
ಮೌನದಿ ಕೂಗಿ ಸಾರುತಿರುವ ಮಾತು
ಜೇನು ರಾಣಿಯ ಭಾವ ನಿನ್ನ ಚೆಲುವು
ಯಾರ ಗೆಲ್ಲುವೆ ನೀ ಸೋಲುವೇ ಹೇಳೇ ಚೆಲುವೆ ...

✍️ ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - Life is a untravelled road with ups and downs
But his strong will and  strength make him overcome rough part. Nothing is easy you've to fight hardwork grounded gives the magnificent life. Life love it love it.

Fuel Life 💕



anandakavi  - Made using Quotes Creator App, Post Maker App
2 likes 0 comments

Explore more quotes

anandakavi
Quote by anandakavi - *ನಮ್ಮ ಸಿದ್ಧೇಶ್ವರ ಅಪ್ಪಾಜಿ* 

ಸರಳ ಸ್ವಚ್ಚ ಸುಂದರ . ಜ್ಞಾನಯೋಗಿ 
ಜೀವನವನ್ನು ಹೇಗೆ ಪ್ರೀತಿಸಿ ಪ್ರಕೃತಿಯೊಂದಿಗೆ ಬೆರೆತು ಮನಸೂರಗೊಳಿಸುವ ಸೂರ್ಯ ಚಂದ್ರ ಭೂಮಿ ನಕ್ಷತ್ರ ಗಿಡ ಕಾಡು ಮೇಡು ಪಕ್ಷಿ ಪ್ರಾಣಿ ಎಲ್ಲದರಲ್ಲೂ ಜೀವ ಕಾಣುವ ಸಜ್ಜನಿಕೆಯ ದೈವ. ಪ್ರಕೃತಿಯೇ ಅವರ ವ್ಯಕ್ತಿತ್ವ.
ನಾ ಅವರನ್ನ ನೋಡಿ ಬೇಟಿ ಮಾಡುವ ಯಾವುದೇ ಅವಕಾಶ ಸಿಕ್ಕರೂ ಬಿಡಲಿಲ್ಲ ಮೊದಲು ನೋಡಿದ್ದು ೯೭ಡಿಸೆಂಬರ್ ದಾವಣಗೆರೆಯ ಆವರಣದಲ್ಲಿ .ಕಿಕ್ಕೆರದ ಜನ ಸಾಗರ .ಆದರೂ ಶಿಸ್ತು ಸಂಯಮ ಶಾಂತಿಯಿಂದ ಅವರ ಸೂಕ್ಷ್ಮ ದ್ವನಿಯನ್ನ ಮನೋಜ್ಞಾಮಯವಾಗಿ ಆಲಿಸುವ ಜನ ಸಾಗರ.ಮುಂದೆ ಬೆಳಗಾವಿಯಲ್ಲಿ ೨೦೦೬ ನಲ್ಲಿ ಮಹಾತ್ಮ ಗಾಂಧಿ ಭವನ ಪತಂಜಲಿ ಅವರ ಪ್ರವಚನ ಒಂದು ತಿಂಗಳು
ತಪ್ಪದೆ ಸಮಯಕ್ಕೆ ಸರಿಯಾಗಿ ಮುಂದೆ ಕುಳಿತು ಅಂತಿಮ ಸತ್ಯ ನಮಃ ಶಿವಾಯ..ಕ್ಷಣ ಕ್ಷಣವು ಜ್ಞಾನ ಪ್ರವಾಹದ ಅನುಭವ .ಮನವನ್ನ ಸಂಪೂರ್ಣ ಸಂತೃಪ್ತ ಗಳಿಸಿತ್ತು.
ಪುಟ್ಟ ಕಥೆಗಳು ,ಹಾಸ್ಯ ಭಾವಗಳು ಗ್ರಂಥ ವಚನಗಳ ಸಾರ ಬಿಡಿಸಿ ಹೇಳಿದ್ದ ಮಾತುಗಳು ಮನವನ್ನ ತಟ್ಟಿ ಎಚ್ಚರ ಗಳಿಸಿತ್ತು.ಚಿಂತನ ಮಂಥನದ ಯಾವುದೇ ವಿಚಾರ ಚಿಂತಿಸುವ ಮಟ್ಟ ಉತ್ಕೃಷ್ಟ ದಾಗಿತ್ತು.
ನಾವು ಅವರಿಗೆ ಏನೋ ಕೆಳಬೇಕೆಂದ ಪ್ರಶ್ನೆಗೆ  ಕೇಳದೆಯೇ ಉತ್ತರ ದೊರೆಯುತ್ತಿತ್ತು. ಎಸ್ಟು ಸಲ ವಿಸ್ಮಯ ಅನಿಸುತಿತ್ತು.
ಈಗಲೂ ಅವರ ದೇಹ ಪ್ರಕೃತಿಯ ಪಂಚಭೂತದಲ್ಲಿ ಲೀನವಾಗಿ.ಅವರ ದ್ವನಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಅಷ್ಟು ಅವರ ಪ್ರವಚನ ಆಳವಾಗಿ ಬೇರೂರಿದೆ.ಅವರು ಸರ್ವರಲ್ಲಿ ವ್ಯಪಿಸಿದ್ದರೆ..
ಅವರ ನುಡಿ ನಡೆ ನಾವು ಅಳವಡಿಸಿದಾಗಾ ಅವರು ಜೀವಂತ..ಗುರುವೇ ನಮಃ.🙏

✍️ಕವಿತ ಹಂಜಿ - Made using Quotes Creator App, Post Maker App
2 likes 0 comments
anandakavi
Quote by anandakavi - Happy New year 2024 - Made using Quotes Creator App, Post Maker App
1 likes 0 comments
anandakavi
Quote by anandakavi - ಹೊಸ ವರ್ಷದ ಶುಭಾಶಯಗಳು 
2024

ನೀವು ನಡೆವ ಪ್ರತಿ ಹೆಜ್ಜೆಯೂ
ಯಶಸ್ಸಿನ ಪಥವಾಗಲಿ.
ನಿಮ್ಮ ಈ ವರ್ಷ ಹೆಚ್ಚು 
ಲವಲವಿಕೆಯಿಂದ 
ಕೂಡಿರಲಿ

ಆನಂದ ಕವಿ 
 - Made using Quotes Creator App, Post Maker App
0 likes 0 comments
anandakavi
Quote by anandakavi - Good bye 2023
we hold you in our memories
all the joy  pain and gain
we lost some loved ones
we met some new ones
Thank you for all the
ups and downs
that taught many lessons
yet one more year to cross

welcome 2024
Hope u bring love and joy
let the world be one 
without any war and crime
mother Earth bless everyone
with food shelter and good health.
wishing everyone a very happy New year
Fuel Life 💕 - Made using Quotes Creator App, Post Maker App
2 likes 0 comments
anandakavi
Quote by anandakavi - *ಹೊಸವರ್ಷ* 


ವರ್ಷ ಬೇರೆ ಆದೇ ಸೂರ್ಯ ಆದೇ ಚಂದ್ರ

ಭೂಮಿ ಒಂದೇ ನಾವು ನೀವು ಎಲ್ಲಾ ಅದುವೇ 

ಹೊಸದು ಏನು ಹೊಸ ತನವು ಯಾವುದು?


ಚೈತ್ರ ಹೊಸದು ಹೊಸ ಗಾಳಿ ಚಳಿ ಬೀಸುವುದು

ನಾಲ್ಕು ಋತುಗಳ ದಾಟಿ ನವಮಾಸ ಬರುವುದು

ಹೊಸ ಸಂಯೋಜನೆ ,ಪರಿವರ್ತನೆ ಭಾವ ತರುವುದು


ನವ ವಸಂತ ನಿತ್ಯ ನವೀನ ಹೊಸ ಜೀವನ

ಜೀವ ಜಲ ರಾಶಿ ಹೊಸ ಹುರುಪು ಸಂಭ್ರಮ

ಚಳಿ ಮುಗಿದು ಚೈತ್ರ ವಸಂತ ಮಳೆ ಆಗಮನ


ನಿಸರ್ಗದ ನಡುವೆ ರೈತ ಬಿತ್ತಿ ಬೆಳೆಯುವ ಧಾನ್ಯ

ಮಾವು ಬೇವು ಹಲಸು ಬತ್ತ ಕಬ್ಬು ಅಡಿಕೆ ತೆಂಗು

ವಿವಿಧ ಭೂಮಿ ವೈವಿಧ್ಯ ಸಿರಿ ಕೊಡುವ ಭೂಮಿ


ನವ ವರ್ಷದ ನವ ಚೈತನ್ಯ ಹಂಚುವಳು ಭೂಮಿ

ಉಳಿಸಿ ಬೆಳೆಸಿ ಸಂರಕ್ಷಿಸಿ ಹಸಿರು ಒಡಲು ಕಡಲು

ಅದಿಲ್ಲದೆ ನಾವಿಲ್ಲ ಭೂಮಿಯೇ ನಮಗೆಲ್ಲಾ..

ಭೂಮಿಯೇ ನಮಗೆಲ್ಲಾ...


       *ಆನಂದಕವಿ* 

 - Made using Quotes Creator App, Post Maker App
0 likes 0 comments
anandakavi
Quote by anandakavi - *ಶಾರದೆ*

*ನಿಸ್ವಾರ್ಥ ನಿಷ್ಕಲ್ಮಷ ನಿನ್ನ ಮನ
ಮೌನದಲ್ಲಿ ಕಣ್ಣ ಅಂಚಿನಲ್ಲಿ ಪ್ರೇಮ
ಎಲ್ಲರ ಸೌಖ್ಯ ಬಯಸುವ  ಮನ
ಕೈಗೆ ಮೀರಿ ಮಿಡಿಯುವ ನಿನ್ನ ಮನ
ಶಾರದೇ ನೀನು ಸೌಮ್ಯ ಸಂಚಲನ
ಸದ್ಭಾವ ನಿನ್ನ ಮನಸಿನ ತೋರಣ.
ಹಿರಿಯರ ಸೇವೆ ಕಿರಿಯರ ಸಂಭ್ರಮ 
ವಚನ ಸಾಹಿತ್ಯ ಶರಣರ ಅನುಕರಣ
ಸಂಬಂಧ ಬೆಸೆವ ನಿನ್ನ ಸಂಯಮ
ಸಂಸ್ಕೃತಿ ಸಂಸ್ಕಾರ ನಿನ್ನ ಆಭರಣ
ಬಸವ ಅಲ್ಲಮ ಶರಣರ ಹಿತವಚನ
ಅರಿತು ಬೆರೆತು ಆದೆನೀ ಪರಿಪೂರ್ಣ
ಸಾಗಲಿ ಜನ್ಮ ಜೀವನದ ಈ ಋಣ.
ಆದೇ ನೀ ಪರಿಪೂರ್ಣ ಸಂಪೂರ್ಣ.
ಶಾರದೆ ನೀ ನಮ್ಮೆಲ್ಲರ ಅಭಿಮಾನ.

ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - Deepawali, festival of lights.celebrating returning of Rama seeta lakshmana to ayodhya.lights lit up to return to unite family and friends.spread good over evil.

Shubh deepawali to you and your family.

Fuel Life 💕



anandakavi  - Made using Quotes Creator App, Post Maker App
1 likes 0 comments
anandakavi
Quote by anandakavi - Mother Earth takes care of her living things by providing all that she can for survival.Human greed and ego is leading towards destruction. A simple tactics and business strategy is ruling uneducated human who are pawns in the name of war. don't follow blindly.be human save humanity. Life love it Live it.

Fuel Life 💕



anandakavi  - Made using Quotes Creator App, Post Maker App
1 likes 0 comments
anandakavi
Quote by anandakavi - Human minds are in search of some or other things.good thoughts leads towards right path.negetive thoughts towards wrong path.Love and smile are the universal key for peace and happiness.a bit of understanding and compromise make it a beautiful world for all of us.Life Love it Live it.
Fuel Life 💕

anandakavi  - Made using Quotes Creator App, Post Maker App
1 likes 0 comments
anandakavi
Quote by anandakavi - Earth is a beautiful place to live, Where are we humans heading the greed of leadership is it taking us towards destruction.a piece of land is reason for war.such a coward act. Minds are dead just behaving like sheeps. Think wisely be *progressive not destructive*Respect this beautiful gift Life. Life Love it Live it.

Fuel Life 💕



anandakavi  - Made using Quotes Creator App, Post Maker App
1 likes 0 comments

Explore more quotes