aditya nm profile
aditya nm
8 0 0
Posts Followers Following
aditya nm
Quote by aditya nm - ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದ ಶಿವುಗೆ ಅನಿರೀಕ್ಷಿತವಾಗಿ ಅವನ ಮಾಜಿ ಪ್ರೇಯಸಿ ಸಿಕ್ಕಿದಳು.ಪ್ರೇಯಸಿ ಮಾಜಿ ಆದರೇನಂತೆ,ಪ್ರೀತಿ ಇನ್ನೂ ಮಾಜಿ ಆಗಿರಲಿಲ್ಲ.ಹಾಗಾಗಿ ಅವರು ಹತ್ತಿರದ ಹೋಟೆಲ್ ನಲ್ಲಿ ರೂಮ್ ಮಾಡಿದರು.ಅಲ್ಲಿಂದ ಹೊರಡುವಾಗ ರಾತ್ರಿ ಹತ್ತು ಗಂಟೆಯಾಗಿತ್ತು."ಇಷ್ಟು ಲೇಟ್ ಆಯ್ತಲ್ಲಾ ಹೆಂಡತಿಗೆ ಏನು ಹೇಳ್ತೀಯ" ಅಂತ ಪ್ರೇಯಸಿ ಕೇಳಿದಾಗ ಶಿವು "ಕೆಲಸಕ್ಕಾಗಿ ಮಂಗಳೂರಿಗೆ ಹೋಗಿದ್ದೆ.ಬರುವಾಗ ಸಂತೆಕಟ್ಟೆಯಲ್ಲಿ ಯಕ್ಷಗಾನ ಆಗ್ತಾ ಇತ್ತು.ನನ್ನ ಫ್ರೆಂಡ್ ಗುಂಡಣ್ಣನದ್ದೂ ವೇಷ ಇತ್ತು.ಮಾತಾಡಿಕೊಂಡು ಬರುವಾಗ ಲೇಟ್ ಆಯ್ತು.ಸಾರಿ ಡಾರ್ಲಿಂಗ್" ಅಂದ್ರೆ ಮುಗಿತು ಅಷ್ಟೇ ಅಂದು ಮನೆ ಕಡೆ ಹೊರಟ.ಮನೆಗೆ ಬರುವಾಗ‌ ಬೀಗ ಹಾಕಿತ್ತು.ಸ್ವಲ್ಪ ಸಮಯದ ನಂತರ ಹೆಂಡತಿ ಬಂದಳು.ಶಿವು ಬಾಯಿ ತೆಗೆಯುವ ಮುನ್ನವೇ "ಉಡುಪಿ ಡಿಮಾರ್ಟ್ ಗೆ ಹೋಗಿದ್ದೆ.ಬರುವಾಗ ಸಂತೆಕಟ್ಟೆಯಲ್ಲಿ ಯಕ್ಷಗಾನ ಆಗ್ತಾ ಇತ್ತು.ನಿಮ್ ಫ್ರೆಂಡ್ ಗುಂಡಣ್ಣನ ವೇಷ ಕೂಡ ಇತ್ತು.ಮಾತಾಡಿಸಿಕೊಂಡು ಬರುವಾಗ ಲೇಟ್ ಆಯ್ತು.ಸಾರಿ ಡಾರ್ಲಿಂಗ್" ಅಂದವಳೇ ಹೋಗಿ‌ಮಲಗಿಬಿಟ್ಟಳು..............ಶಿವು ಮಾತ್ರ ರಾತ್ರಿ ಇಡೀ ಮಲಗಲೇ ಇಲ್ಲ.
🖊 ಆದಿತ್ಯ ಹೆಗಡೆ.

 - Made using Quotes Creator App, Post Maker App
0 likes 0 comments
aditya nm
Quote by aditya nm - ಸಣ್ಣವನಿದ್ದಾಗ ನೂರು ರೂಪಾಯಿ ನೋಟಿನ ಮೇಲಿರುವ ಗಾಂಧೀಜಿಯ ನಗು ನೋಡಿ "ಹೀಗೆ ನಗ್ತಾ ಇದ್ರೆ ದುಡ್ಡು ತಾನಾಗಿಯೇ ಬರುತ್ತೇನೋ" ಅಂತ ತಿಳಿದಿದ್ದೆ..............

ಯೌವನ ಬಂದಾಗ ಅದೇ ನೋಟಿನ ಗಾಂಧಿಯ ನಗುವನ್ನು ಕಂಡು "ಇಂತಹ ನೋಟು ಬೇಕಾದಷ್ಟು ಇದ್ದರೆ ನಗು ತಾನಾಗಿಯೇ ಬರುತ್ತದೆ" ಎಂದು ಭಾವಿಸಿದೆ...........

ಈಗ ಗೊತ್ತಾಗಿದೆ ಗಾಂಧೀಜಿಯ ನಗುವಿಗೂ ನೋಟಿಗೂ ಏನೇನೂ ಸಂಬಂಧವಿಲ್ಲ ಅಂತ.ಆದರೂ ಆ ನೋಟಿನ ನಗು ನೋಡಿದಾಗೆಲ್ಲ "ನೋಟನ್ನಾದರೂ ಸುಲಭವಾಗಿ ಸಂಪಾದಿಸಬಹುದು,ಆದರೆ ನಗುವನ್ನಲ್ಲ.ನಗುವಿಗಿಂತ ದೊಡ್ಡ ಸಂಪತ್ತು ಬೇರೆ ಇಲ್ಲ ಅಂತ ಅನ್ನಿಸುತ್ತಿದೆ............
🖊 ಆದಿತ್ಯ ಹೆಗಡೆ.

 - Made using Quotes Creator App, Post Maker App
1 likes 0 comments
aditya nm
Quote by aditya nm - ಹರಿಶ್ಚಂದ್ರ ಸತ್ಯಕ್ಕಾಗಿ ಕಷ್ಟ ಪಟ್ಟಿದ್ದು ಕೆಲವು ದಿನಗಳು ಮಾತ್ರ.ನಂತರ ಸುಖದಿಂದ ರಾಜ್ಯವಾಳಿದ್ದು ಸತತ "ಹತ್ತು ಸಾವಿರ ವರ್ಷಗಳು". ಆದರೆ ನಾವೀಗ ಹೇಳುವಾಗ ಹರಿಶ್ಚಂದ್ರ ಸತ್ಯಕ್ಕಾಗಿ ಕಷ್ಟ ಪಟ್ಟ ಅನ್ನುತ್ತೇವೆಯೇ ಹೊರತು,ಸತ್ಯದಿಂದ ಸುಖ ಪಡೆದ ಎನ್ನುವುದಿಲ್ಲ...............

ಹಾಗೆಯೇ ಸುಮ್ಮನೇ ನಿಮ್ಮಷ್ಟಕ್ಕೇ ನೀವು ನಗಾಡುತ್ತಿದ್ದರೆ ಜನ ನಿಮಗೆ ಏನೋ ತಲೆ ಸರಿ ಇಲ್ಲ ಅಂದುಕೊಂಡು ಸುಮ್ಮನಾಗಿಬಿಡುತ್ತಾರೆ.ಅದೇ ನೀವು ಸುಮ್ಮನೇ ಅತ್ತು ನೋಡಿ.ಎಲ್ಲರೂ ಬಂದು ಏನಾಯಿತು ಅಂತ ವಿಚಾರಿಸುತ್ತಾರೆ.ಜನ ಕಾಣಬಯಸುವುದು ನಿಮ್ಮ ಅಳುವನ್ನೇ ಹೊರತು ನಗುವನ್ನಲ್ಲ.
🖊 ಆದಿತ್ಯ ಹೆಗಡೆ.

 - Made using Quotes Creator App, Post Maker App
1 likes 0 comments
aditya nm
Quote by aditya nm - ಭೂಮಿಯ ಬಹುಪಾಲು ನೀರು ಇದೆಯಂತೆ.ದೇಹದಲ್ಲೂ ಮುಕ್ಕಾಲು ಪಾಲು ನೀರೇ ತುಂಬಿದೆಯಂತೆ.ಆದರೂ ವಿಪರೀತ ಮಳೆಯಾದಾಗ,ಪ್ರವಾಹ ಬಂದಾಗ "ಹಾಳು ಮಳೆ" ಎಂದು ಜನ ಹಿಡಿಶಾಪ ಹಾಕುತ್ತಾರೆ.ಅದರ ಅರ್ಥ ಜನರಿಗೆ ನೀರಿನ ಮೇಲೆ ದ್ವೇಷವಿದೆಯೆಂದೋ ಅಥವಾ ನೀರು ಬೇಡವೆಂದೋ ಅಲ್ಲ.ನೀರು ಸಿಕ್ಕಿದ್ದು ಹೆಚ್ಚಾಗಿದೆಯೆಂದು ಅರ್ಥ...............


ಹಾಗೆಯೇ ಜನ ನಮ್ಮನ್ನು ದೂರ ಮಾಡುತ್ತಿದ್ದಾರೆ,ದೂಷಿಸುತ್ತಾರೆ ಅಂದರೆ ಅವರಿಗೆ ನಮ್ಮ ಮೇಲೆ ದ್ವೇಷ ಇದೆ ಅಂತ ಅರ್ಥ ಅಲ್ಲ. ಅವರಿಗೆ ನಾವು ಸಿಕ್ಕಿದ್ದು "ಹೆಚ್ಚಾಗಿದೆ" ಅಂತ ಅರ್ಥ. ಸ್ವಲ್ಪ ಕಡಿಮೆಯಾದರೆ ಸರಿಯಾದೀತು.
🖊 ಆದಿತ್ಯ ಹೆಗಡೆ.

 - Made using Quotes Creator App, Post Maker App
1 likes 0 comments
aditya nm
Quote by aditya nm - ಇವತ್ತು ಬಂದ 'ಹುಣ್ಣಿಮೆ'ಯನ್ನು ಅನುಭವಿಸುವುದು ಬಿಟ್ಟು,ಹದಿನೈದು ದಿನದ ನಂತರ ಬರುವ 'ಅಮಾವಾಸ್ಯೆ'ಯನ್ನು ನೆನಪಿಸಿಕೊಂಡು ಚಿಂತೆ ಮಾಡಿದ್ದರಿಂದಲೇ ಚಂದ್ರನ ಮುಖದಲ್ಲಿ ಕಪ್ಪು ಕಲೆಗಳಾಯಿತಂತೆ...................

ಕೊನೆಯ ಪಕ್ಷ ನಾವು ಇಂದು ಇರುವ 'ಅಮಾವಾಸ್ಯೆ'ಯ ನೋವನ್ನು ಮರೆತು ಮುಂದೆ ಬರುವ 'ಹುಣ್ಣಿಮೆ'ಯ ತಂಪನ್ನು ನೆನೆದು ಮುಖದಲ್ಲಿ ಬಿಳಿಯ ನಗುವನ್ನು ಉಳಿಸಿಕೊಳ್ಳೋಣವಂತೆ.

🖊 ಆದಿತ್ಯ ಹೆಗಡೆ.

 - Made using Quotes Creator App, Post Maker App
1 likes 0 comments
aditya nm
Quote by aditya nm - ಅಂತೂ ಇಂತೂ ಧೈರ್ಯ ಮಾಡಿ "ಹ್ಯಾಪಿ ವ್ಯಾಲೆಂಟೈನ್ಸ್ ಡೇ" ಅಂತ ಮೆಸೇಜ್ ಮಾಡಿಯೇ ಬಿಟ್ಟೆ.........

ತಕ್ಷಣ ಬ್ಲೂ ಟಿಕ್ ಬಂತು.ಟೈಪಿಂಗ್.....ಅಂತ ಕಾಣಿಸತೊಡಗಿದಾಗ ಎದೆಯ ಬಡಿತ ಜೋರಾಯಿತು.ಕೊನೆಗೆ ಉತ್ತರವೂ ಬಂತು........."ಹ್ಯಾಪಿ ವ್ಯಾಲೆಂಟೈನ್ಸ್ ಡೇ ಟೂ ಯೂ" ಅಂತ.ಎಷ್ಟು ಖುಷಿ ಅಂದ್ರೆ ಸ್ವರ್ಗಕ್ಕೆ ಒಂದೇ ಗೇಣು ಅನ್ನುವಷ್ಟು.ಆದ್ರೂ ಯಾಕೋ ಡೌಟ್ ಬಂದು "ಹ್ಯಾಪಿ ರಕ್ಷಾಬಂಧನ್" ಅಂತ ಕಳಿಸಿದೆ.ಆ ಕಡೆಯಿಂದ "ಹ್ಯಾಪಿ ರಕ್ಷಾಬಂಧನ್ ಟೂ ಯು" ಅಂತ ಬಂತು.................


ಈ AI (META AI chat) ಸರಿ ಇಲ್ಲ ಮಾರ್ರೇ 😟

                                      🖊 ಆದಿತ್ಯ ಹೆಗಡೆ. - Made using Quotes Creator App, Post Maker App
0 likes 0 comments
aditya nm
Quote by aditya nm - ಅವಳು ಹೇಳಿದ್ಲು "ಬೇರೆ ಎಲ್ಲಾ ಓಕೆ,ಬಟ್ ನೀನು ನಮ್ ಜಾತಿ ಆಗಿರ್ಬೇಕಿತ್ತು ಕಣೋ" ಅಂತ.........

ಇವಳು ಹೇಳಿದ್ಲು "ನೀನು ನಮ್ ಜಾತಿ ಅಲ್ದೇ ಬೇರೆ ಜಾತಿ,ಧರ್ಮ ಆಗಿದ್ರೂ ಪರವಾಗಿಲ್ಲವಾಗಿತ್ತು,ಬಟ್ ಡಾಕ್ಟರ್, ಸಾಫ್ಟ್‌ವೇರ್ ಇಂಜಿನಿಯರ್ ಅಥವಾ ಬ್ಯಾಂಕ್ ಎಂಪ್ಲಾಯ್ ಆಗಿದ್ದು ಬೆಂಗಳೂರಲ್ಲಿ ಇದ್ರೆ ಸಾಕಿತ್ತು ಕಣೋ" ಅಂತ............

ನಂಗೀಗ ಫುಲ್ ಕನ್ಫ್ಯೂಷನ್ ಮಾರ್ರೆ,"ಅವಳಿಗಾಗಿ" ತಕ್ಷಣ ಸತ್ತು ಅವಳ ಜಾತಿಯಲ್ಲಿ ಹುಟ್ಟೋದಾ? ಅಥವಾ "ಇವಳಿಗಾಗಿ" ಮಣಿಪಾಲ್ ಕಾಲೇಜಲ್ಲಿ MBBS ಸೀಟ್ ತಗೊಳ್ಳೋದಾ ಅಂತ 🤔.
                                                              🖊 ಆದಿತ್ಯ ಹೆಗಡೆ.
                              - Made using Quotes Creator App, Post Maker App
2 likes 2 comments
aditya nm
Quote by aditya nm - ದೇವರು ಕಾಣದಿದ್ದರೇನಂತೆ? 
ಭಕ್ತರು ಅವನ ನೆನಪಿನಲ್ಲೇ ಬದುಕುವುದು ತಾನೇ.......

ನೀನು ಸಿಗದಿದ್ದರೇನಂತೇ? ನಿನ್ನ ನೆನಪಿನಲ್ಲೇ ಬದುಕುವ ಹುಚ್ಚ ಮಾತ್ರ ನಾನೇ..........

                                       🖊 ಆದಿತ್ಯ ಹೆಗಡೆ. - Made using Quotes Creator App, Post Maker App
6 likes 0 comments