Vagish Aradhya profile
Vagish Aradhya
130 5 4
Posts Followers Following
ಕನ್ನಡವೇ ಸತ್ಯ ಕನ್ನಡವೇ ನಿತ್ಯ
Vagish Aradhya
Quote by Vagish Aradhya - ನನ್ನ ಭಾವನೆಗಳ 
ಸ್ಪಂದನೆ ನೀನು 
ನನ್ನ ಉಸಿರಿನ 
ಏರಿಳಿತ ನೀನು 
ಅಪೇಕ್ಷೆ ಏನು ಇಲ್ಲ 
ಹೊಂದಿಕೊಂಡಷ್ಟು 
ಹೆಚ್ಚಾಗಿ ಬಾಂಧವ್ಯ 
ನೀ ಕೊಟ್ಟ ಸಮಯಕ್ಕೆ 
ನಿನಗಾಗಿ ನನ್ನ ಉತ್ತರ 
ನಾ ಕಾಣದ ಉಡುಗೊರೆ
ನನಗೆ ಸಿಕ್ಕಿಹುದು 
ನಿನ್ನದೇ ರೂಪದಲ್ಲಿ. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಜೀವ ಹೋದರು 
ಬಿಡಲಾರೆ 
ಎಂದೂ ನಾನು. 
ಸಾವಿರ ಜನುಮಕು 
ನೀನೆ ನನ್ನ 
ಪ್ರೇಯಸಿಯು.
ಹೋರಾಟದ 
ಬದುಕಿಗೆ 
ನಾನೇ ನಿನ್ನ ಸಾರಥಿ. 
ಬೇಕಿಲ್ಲ ಯಾರ
 ಸಮ್ಮತಿ. 
ನನ್ನಾಣೆ ಪ್ರೀತಿಗೆ 
ಅರ್ಥ ನೀ.
ಕಾಡಿಸಿದಷ್ಟು 
ಹೆಚ್ಚುತ್ತಿದೆ
ಹೃದಯದ ಬಡಿತ.
ಕೇಳಿ ಸುಮ್ಮನಾಗಬೇಡ 
ಅದು ನಿನ್ನನ್ನೇ
ಜಪಿಸುತ್ತಿದೆ.


 - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಅಲೆಯ ರಭಸಕ್ಕೆ
 ಎಲ್ಲವೂ ಮರೆತಿದೆ 
ನಿನ್ನ ನೆನಪು ಮಾತ್ರ 
 ಹೃದಯದ 
ಬಡಿತದಲ್ಲೇ ಇದೆ.
ಮತ್ತೆ ಮತ್ತೆ ಬರುವ 
 ಸಂಕಷ್ಟದ ಅಲೆಗಳು 
ತಾತ್ಕಾಲಿಕವೆಂಬ 
ಕುರುಹು ನೀಡಿದೆ. 
ನೀನೆಷ್ಟೇ ಬೋರ್ಗರೆದರು
ಕಲ್ಲು ಹೃದಯವ 
ಕರಗಿಸಲಾಗದು.
 - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ನಿಂಗೆಂದೇ ಬರೆದ 
ಸಾಲುಗಳು
ಮತ್ತೆ ಮತ್ತೆ ನಿನ್ನನ್ನೇ
 ನೆನಪಿಸುತ್ತಿದೆ.
ಈ ಸ್ನೇಹ ಸಂದೇಶವ 
ಸಾರಲು ಪದಗಳು 
ಗುಚ್ಚಗಳಾಗಿವೆ 
ಮತ್ತೇನು ಹೇಳಲಾರೆ 
ನಿನಗಾಗಿ ಬರೆಯಲು
 ಪುಸ್ತಕವೇ ಸಾಲದು. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ನನ್ನೊಲವಿನ ಕದ 
ತೆರೆಯಲು ನಿನ್ನ 
ನೋಟವೇ ಕೀಲಿ ಕೈ 
ನೋಡಿದಷ್ಟು ಕಣ್ಣು 
ಅರಳುತ್ತಿದೆ
ನಿನ್ನ ಚೂಪಾದ ನೋಟ 
ಬೆರಗು ಗೊಳಿಸಿದೆ.
ನಿನ್ನ ಚಳ ನಯನಕೆ 
ಮನಸು ಸೋತಿದೆ
ನೀಳ ಕಾಯದ ಚಲುವೆ 
ನಾ ಕಾಯಲಾರೆ ನಿನಗೆ
ನಗೆಯ ಬಗೆ
 ಚಿತ್ತಚಂಚಲ ಗೊಳಿಸಿದೇ 
ನಿನ್ನಯ ಬಿಂಬ ಕಣ್ಣಲ್ಲೇ 
ಕಟ್ಟಿಹಾಕಿದೆ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ತಿರುಗಿ ನೋಡದೆ 
ಹೋಗುವವರ 
ಹಿಂಬಾಲಿಸದಿರು
ನಿನಗೆ
 ಕಾಯುವವರ
ಜೊತೆ ನಡೆ. 
ಸಮಯವು 
ಕಾಯಲಾರದು 
ನೆನಪು 
ಅಳಿಯಲಾರದು
ಜೊತೆಗಿದ್ದ ಕ್ಷಣ 
ಮರೆಯಲಾಗದು. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಕನಸಲ್ಲಿ ನಾ ನಿನಗೆ 
ಕೊಟ್ಟ ಹೂ ಗುಚ್ಚವ 
ಎಚ್ಚರವಾದಾಗ 
ಮರುಕಳಿಸಲು 
ನನಗೇನು 
ಅಭ್ಯಂತರವಿಲ್ಲ .
ಬಾಡಿ ಹೋಗುವ 
ಮುನ್ನ ನೀ 
ಹಿಂದಿರುಗಿಸಿದರೆ ಚನ್ನ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ನೀ ಕಾಣದ ದಿನಗಳು
ನಿನ್ನದೇ ಕನವರಿಕೆ.
ನಾ ಕಾಯುವ ಸಮಯ 
ನಿನಗಾಗಿ ಮೀಸಲು.
ಅಸಲಿ ಮಾತ ಹೇಳುವೆ 
ಬಿಡಲು ನಾ ಒಲ್ಲೆ.. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಅದ್ಯಾವುದೋ 
ಬೇಡದ ಶಬ್ದವಲ್ಲ 
ನಿನ್ನ ಹೃದಯದ ಬಡಿತ 
ಕೇಳಿದಷ್ಟು ಕಿವಿಯಲ್ಲಿ
 ಗುನುಗುತಿದೆ 
ನಿನ್ನೆದೆಯ ಬಡಿತ 
ಒಮ್ಮೆ ಬಂದು ಸಂತೈಸು..
ಸಣ್ಣದೊಂದು 
ಅಪ್ಪುಗೆಯಿಂದ - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಸಂತಸದ ಕ್ಷಣ 
ನೀ ಜೊತೆಗಿರಲು
ಸ್ನೇಹವೊಂದು
 ಅರಸಿ ಬಂದಾಗ
ಕೈ ಚಾಚಿ ಸ್ವಾಗತಿಸಿದೆ.
ನಿನ್ನ ಭಾವನೆಗಳಿಗೆ 
ನನ್ನ ಸ್ಪಂದನೆ 
ಇಂದು ಎಂದೆಂದೂ
ಬಯಸದೇ ಬಂದೇ 
ಮನೆ ಮಾಡಿ ನೆಲೆಸಿದೆ 
ಹೀಗೆ ಇರು ಜೊತೆಯಲಿ 
ಎಂದೆಂದೂ. - Made using Quotes Creator App, Post Maker App
0 likes 0 comments

Explore more quotes

Vagish Aradhya
Quote by Vagish Aradhya - ಅದ್ಯಾವ ಕನಸು 
ಬೀಳುವುದೋ
 ನಾ ಕಾಣೆ 
ನಿನ್ನದೇ ನೆನಪು 
ಕಾಡುತಿಹುದು
ಅದೇನು 
ಮಾಡುತಿಹೆ 
ಎಂದು 
ಈ ಬಂದಕ್ಕೆ 
ಮತ್ತೇನು ಬೇಕು
ಸದಾ ನೆನಪುಗಳು 
ನಿನ್ನನ್ನೇ ಹುಡುಕುತಿದೆ - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ನನ್ನ ಸಾಲುಗಳಿಗೆ
 ನಿನ್ನ ಲೇಖನಿ 
ಸುಮ್ಮನೆ ಕುಳಿತಾಗ 
ನೆನಪು ಬಂದು 
ತಬ್ಬಿಕೊಳ್ಳಬಹುದು.
ಅದು ಪ್ರೀತಿಯ 
ಆಲಿಂಗನ.
ಕೆಂಪನೆಯ ಸೂರ್ಯ 
ಮುಳುಗುವಾಗ 
ಕೆಂಡದ ಹೊಳಪು.
ಆದ್ರೆ ಚಂದ್ರನಿಗೆ ದಾರಿ 
ಬಿಡಲೇಬೇಕು. 
ನೋಡನೋಡುತ್ತಲೇ
ದಿನದ ಅಂತ್ಯ..
 - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಹೇಳಲು ಸಮಯ 
ಬೇಕಿಲ್ಲ 
ಕೇಳುವ ಮನಸ್ಸು 
ನಿನಗಿದ್ದರೆ..
ಅದ್ಯಾವಗಳಿಗೆ 
ನೀ ಸಿಕ್ಕಿದೆ 
ಅದೇ ಸಂತಸದ
 ಘಳಿಗೆ..
ಹೇಳಿಬಿಡು ನಿನ್ನ 
ಸಂಕಷ್ಟವ 
ನಾನಿರುವೆ 
 ಕಡಿಮೆ ಮಾಡಲು 
ನಿನ್ನ ದುಃಖವ..
 - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಪುಸ್ತಕದ ಪಾಠ 
ಅಂಕಗಳಿಗೆ ಸೀಮಿತ 
ಬದುಕು ಕಲಿಸಿದ ಪಾಠ 
ಜೀವನಕ್ಕೆ ಅಗತ್ಯ..
ಯಾರು ನಮ್ಮವರು 
ಎಂದು ತಿಳಿಯಲು 
ಹೆಚ್ಚು ಸಮಯ ಬೇಕಿಲ್ಲ.
ಎಲ್ಲಕ್ಕೂ ಉತ್ತರ 
ಶೀಘ್ರ. ಬಂದದ್ದು ಬರಲಿ ... - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಅದಾವುದೋ ಗಳಿಗೆಯಲ್ಲಿ 
ಸ್ನೇಹಕ್ಕೆ ಸಹಿ ಹಾಕಿದೆ..
ಇಂದಿಗೂ ಜೀವಂತ..
ಕಳೆಯಲಿಲ್ಲ ಮರೆಯಲಿಲ್ಲ. 
ಹಿಂದೆ ಮುಂದೆ ಯೋಚಿಸಲಿಲ್ಲ
ಬಿಕ್ಕಳಿಸಿ ಅಳಲು ನೀ ಬಿಡಲಿಲ್ಲ
ಕಣ್ಣೀರ ಒರೆಸಲು ತುದಿ ಬೆರಳು
 ಸಾಕು ಅದ ನಾ ಕೊಡಲಾರೆ
ಕಣ್ಣೀರು ಬರದಂತೆ ನೋಡುವೆ
ಬದಲಿ ನಗುವ ತರುವೆ.. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ವರುಷಗಳೆ ಕಳೆದರೂ 
ನಿನ್ನ ಮರೆತಿಲ್ಲ..
ಅದಾವ ಬೇಡಿಕೆಯು ಇಲ್ಲ 
ನಿರಂತರ ಬದುಕಿಗೆ 
ನನ್ನ ಸಾಂತ್ವನ..
ನಿಲ್ಲಬೇಡ ಹೀಗೆ ಓಡುತಿರು..
ತಡೆಯುವವರ ಮುಂದೆ 
ಸಮಯ ವ್ಯರ್ಥ ಬೇಡ.
ಜೊತೆಗೆ ಬರುವವರಿಗೆ ಇರಲಿ
ಸಾಕಷ್ಟು ಸಮಯ.. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಬಂದಂತೆ ಬರುವ 
ಸುಖಗಳು
ಬಂದು ಅಪ್ಪಳಿಸುವ 
ಕಷ್ಟಗಳು 
ಎದುರಿಸಲು ನಮ್ಮಲ್ಲೇ 
ಹುಟ್ಟುವ ದೈರ್ಯ.. 
ಕಾಣಿಸದ ಕೆಟ್ಟ 
ಮುಖಗಳು.. 
ಪಾರಾಗಲು ನಮ್ಮಲ್ಲೇ 
ಮಾಡಿದ ಸಾಹಸಗಳು
ಎಲ್ಲವೂ ಬದುಕಿನ 
ಪಾಟಗಳು. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಅಲ್ಲೆಲ್ಲೋ ಧನಿ ಕೇಳಿಸುತ್ತಿದೆ 
ಅದು ಅವಳೇ ಇರಬಹುದು..
ಛೇ ಅವಳಲ್ಲ..
ಅಲ್ಲಿ ಯಾರೂ ನಡೆದು 
ಹೋಗುತ್ತಿರುವರು 
ಅವಳೇ ಇರಬಹುದು..
ಛೇ ಅವಳಲ್ಲ.. 
ಹಾಗಿದ್ರೆ ಕಾಡಿಸಿ ಕಾಣದೆ 
ಮಾಯವಾಗುವವಳು 
ಅವಳೆಲ್ಲಿ..? 
ಅಯ್ಯೋ ಇದು ಕನಸು
ಅಲ್ಲಾ ಅದು ಅವಳೇ..
ಅಲ್ಲಾ ಅದು ಅವಳಲ್ಲ..
ಇದೆಂತ ಆಳಕ್ಕೆ ಇಳಿಸಿದೆ 
ಎಲ್ಲೆಲ್ಲೂ ಕಾಣುವ ನಿನ್ನ 
ಕಲ್ಪನೆಯ ಬಿಂಬ
ವಾಸ್ತವಕ್ಕೆ ಮರಳಬಾರದೆ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಹೇಳಬೇಕಾಗಿರುವುದು 
ಸಾಕಷ್ಟಿದೆ
ಕೇಳುವ ಕೂತೂಹಲ 
ನಿನಗೆ ಇದೆ
ನನ್ನ ಮಾತುಗಳು 
ನಿಮಗೆಷ್ಟು ಹಿತ
ತಿಳಿದಿದೆ ನಿನ್ನೊಳಗಣ 
ಮಾತು ನನ್ನ ಮನದಲ್ಲಿ 
ಮೂಡಿದೆ - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ನೀ ನನಗೆ ಕೊಟ್ಟಂತ ಈ ಸಲುಗೆ 
ನಾ ನಿನಗೆ ಕೊಟ್ಟಂತ ಈ ಪ್ರೀತಿ 
ಜೀವ ಇರುವವರೆಗೂ 
ಮಾತಲ್ಲಿ ಕಪಟವಿಲ್ಲ 
ನಂಬಿಕೆಗೆ ದ್ರೋಹಿ ನಾನಲ್ಲ 
ಹೃದಯದೊಳಗೆ ಬಂಧಿಸಿ ಆಯಿತು.
 ಇನ್ನೇನಿದ್ದರೂ ನೀ ನನಗೆ ನಾ ನಿನಗೆ - Made using Quotes Creator App, Post Maker App
0 likes 0 comments

Explore more quotes

Vagish Aradhya
Quote by Vagish Aradhya - ನಿದ್ದೆ ಆವರಿಸುವ 
ಮುನ್ನ ನಿನ್ನದೇ 
ನೆನಪು 
ಕನಸಲ್ಲಿ ನಿನ್ನದೇ
 ಕನವರಿಕೆ
ಮನಸಲ್ಲಿ ಮನೆ 
ನೆಲೆಸಿದಮೇಲೆ 
ನಿನ್ನನ್ನೇ ನೋಡುತ್ತಾ 
ಜಾರಿದೆ ವಾಸ್ತವಕ್ಕೆ - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ತುಟಿಯಂಚಲಿ ಬಂದ ಮಾತುಗಳು 
ತುಟಿಯನ್ನು ಸವರಿ ಹಾರಿ ಹೋಗಿದೆ..
ಬಾಯಿಯ ಬದಲು ಹೃದಯ 
ಮಾತಾಡಿದೆ.. ಸ್ವೀಕರಿಸು.. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ನುಣುಪಾದ 
ಕೆನ್ನೆಯ ಚೋರಿ 
ಪಿಸು ಮಾತಲ್ಲಿ 
ಹೇಳುವೆ ಕೇಳು 
ನೀ ಚಂದ್ರ ಚಕೋರಿ 
ಕಣ್ ಮಿಟುಕಿಸದೆ 
ನೋಡುವ 
ಬಯಕೆ ನನ್ನಲ್ಲಿ..
ನಿನ್ನ ಕಣ್ ಸನ್ನಿಗೆ 
ನನ್ನ ಹೃದಯವೇ 
ಸೋತಿದೆ ಇಲ್ಲಿ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಆಡಿದಷ್ಟು 
ಮಾತುಗಳು 
ಮನಸ್ಸಿನೊಳಗೆ
 ಇಳಿದಷ್ಟು ಆಳ 
ಅಳತೆ ಇಲ್ಲದ 
ಪ್ರೀತಿಯ ಸಲುಗೆ 
ಬೇಡವೆಂದರೂ 
ಬರುವ ಪ್ರೀತಿ 
ಹೂರಹಾಕಲಾಗದೆ 
ತಳಮಲಿಸುವ 
ಆತಂಕ ಎಲ್ಲದಕ್ಕೂ 
ಹೇಳಿಕೊಳ್ಳುವ ಸ್ನೇಹಿತನ 
ಜೀವಂತ ಮಾತುಗಳು - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ನಾ ನಿನಗೆ ಹೇಳುವುದು 
ಮೆಚ್ಚಿಸುವ ಪದಗಳಲ್ಲ 
ಇಚ್ಚಿಸಿ ಬರೆದ ಪದಗಳು 
ನನ್ನುಸಿರಲಿ ಬೆರೆತ ಪದಗಳು 
ನಿನ್ನುಸಿರಿಗೆ ಧಾರೆಯರದ ಪದಗಳು 
ಅದಲು ಬದಲಾಗಿ ನಿಂತರೂ 
ಸಾಲುಗಟ್ಟಿ ನಿಲ್ಲಿಸುವಪದಗಳು 
ನಿನ್ನ ಹೆಸರಿಲ್ಲದ ಪದಗಳ ಅಕ್ಷರಗಳು 
ಪದಗಳೇ ಅಲ್ಲವೆನ್ನುವ 
ಭಾವನೆಯು ನನ್ನಲ್ಲಿ - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಹುಚ್ಚ ಎಂದು 
ಕಲ್ಲ ಎಸೆಯುವರು
 ಅವರಿಗೆ ಏನು ಗೊತ್ತು 
ಹುಚ್ಚನ ತಲೆಯಲ್ಲಿ 
ಓಡಿದ ಐಡಿಯಾ ಗಳೆಷ್ಟೆಂದು 
ಬುದ್ದಿಯು ಅತಿಯಾಗಿ 
ಹುಚ್ಚನಾದದ್ದು 
ಬುದ್ಧಿ ಇಲ್ಲದೆ
ಕಲ್ಲೆಸೆಯುವವರಿಗೆ 
ಬುದ್ಧಿ ಎಷ್ಟು - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಪ್ರಕಟಣೆ ಇಲ್ಲ
ಕಾಣೆಯಾದವರ
ಸುಳಿವು ಸಿಕ್ಕಿದೆ
ಆಲಿಸುತ್ತಿರುವರು 
ಹೃದಯದ ಬಡಿತವ 
ಹುಡುಕುವ ಗೋಜಿಲ್ಲ
ಹೃದಯದರಮನೆಯಲ್ಲಿ
ವಾಸ್ತವ್ಯ ಖಚಿತ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಕಾಲಕ್ಕೆ ಕಾಲವೇ 
ಉತ್ತರ 
ಹೇಳುಗರು
 ನಾವಲ್ಲ 
ಕೇಳುವ ಮನಸ್ಥಿತಿ 
ನಮಗಿಲ್ಲ
ಬಂದದ್ದು 
ಸ್ವೀಕರಿಸಲೇ ಬೇಕು 
ಒಲ್ಲೆ ಎನ್ನುವ ಹಾಗಿಲ್ಲ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಸುಲಭವಲ್ಲದ ಬರಹ 
ಬಯಸಿ ಬಯಸಿ 
ಬರೆದದ್ದು ನಿನ್ನಿಂದ .. 
ಒತ್ತರಿಸಿ ಕೂಡಿಸಿ
ಪದಪುಂಜವಾದದ್ದು 
ನಿನ್ನಿಂದ ಗೆಳತಿ.. 
ಕಷ್ಟವಲ್ಲದ ಬರಹ ನನಗೆ 
ಇಷ್ಟಪಟ್ಟ ಬರೆದದ್ದಕ್ಕೆ..
ಬತ್ತಳಿಕೆಯ ಬರಹ 
ಖಾಲಿಯಾಗದು
 ನೀ ಕೊಟ್ಟ ಸ್ನೇಹದ 
ಒತ್ತಕ್ಷರದಿಂದ. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಕತ್ತಲಾಯಿತು ಎದ್ದೇಳು
ಇದು ನಿಶಾಚರಿಗಳ ಸಮಯ 
ನಿದ್ರಿಸುವ ಸಮಯದಲ್ಲಿ 
ಕಾಯಕ ಮಾಡುವ ಸಮಯ 
ಇದು ಕಲಿಗಾಳವಲ್ಲವೇ.. 
ಮುಂಜಾನೆ ಮಲಗುವ 
ಆಗ ಹಗಲು ಕಾಣದು ವಿಪರ್ಯಾಸ 
ವ್ಯತ್ಯಾಸ ಆಗಿದ್ದು ಇದೆ ಕಲಿಗಾಲ..
ಮಾನವನ ಆವಿಷ್ಕಾರವೋ 
ಇಲ್ಲ ಅವನತಿಯೋ.. - Made using Quotes Creator App, Post Maker App
1 likes 0 comments

Explore more quotes

Vagish Aradhya
Quote by Vagish Aradhya - ಆಡಿದಷ್ಟು ಮಾತುಗಳು 
ಗಂಟೆಗಟ್ಟಲೆ 
ಬರದಷ್ಟು ಸಾಲುಗಳು 
ಪುಟಗಟ್ಟಲೆ.
ನಮ್ಮಿಬ್ಬರಿಗೂ ಇಲ್ಲ ಎಲ್ಲೇ
ಅದನ್ನು ನೀನು ಕೂಡ ಬಲ್ಲೆ 
ಅದಕ್ಕೆ ನಾ ನಿನ್ನ ಬಲ್ಲೆ 
ನೀ ನನ್ನ ಬಲ್ಲೆ . 
ಆದದ್ದು ಆಗಲಿ ಇಲ್ಲೇ.. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಮಾತು ಕಡಿಮೆಯಾದರೂ ನೀ ಹತ್ತಿರ 
ಮಾತು ಜಾಸ್ತಿಯಾದರೂ ನೀ ಹತ್ತಿರ 
 ಸರಿಯಲು ಆಗದು ನೀನಿದ್ದರೆ ಹತ್ತಿರ 
ಅಂತರಾಳದ ಮಾತುಗಳ
 ಆಲಿಸಿದವಳು ನೀನು 
ಬಚ್ಚಿಡುವ ಅಗತ್ಯ ನನಗಿಲ್ಲ 
ತೆರೆದ ಪುಸ್ತಕದಿ ಪುಟವ ತಿರುಗಿಸಿ 
ಓದಿ ಹೇಳು ನನ್ನಂತರಂಗವ - Made using Quotes Creator App, Post Maker App
2 likes 0 comments
Vagish Aradhya
Quote by Vagish Aradhya - ಕಾದು ಬಸವಳಿದ 
ಜೀವಕ್ಕೆ 
ನಿನ್ನದೊಂದು 
ಪ್ರೀತಿ ಸಾಕು 
ಕಾಯುವಾಗಲು 
ನೀ ಸಿಗುವ  
ಭರವಸೆ 
ಮನಸ್ಸಿಗೆ ಮುದ. 
ಕಾಯುವ 
ಜಾಯಮಾನ 
ನನ್ನದಲ್ಲದಿದ್ದರೂ 
ಕಾಯುವಿಕೆಯಲ್ಲೂ 
ನಿನ್ನ ಹಂಬಲ.. 
ಇದಕ್ಕೆಲ್ಲಾ ಕಾರಣ 
ನಿನ್ನ ಬೆಂಬಲ - Made using Quotes Creator App, Post Maker App
2 likes 0 comments
Vagish Aradhya
Quote by Vagish Aradhya - ನಿತ್ಯವೂ ಹೊಸ ದಿನ 
ಭರವಸೆಯ ಪ್ರಾರಂಭ 
ನೆನ್ನೆಯ ಕಾರ್ಯಕ್ಕೆ 
ಇಂದಿನ ಲೇಪನ
ನಾಳೆಗೆ ಮುಂದುವರೆಯಲು
ಮತ್ತೊಂದು ಹೊಸ ಹಗಲು 
ಈ ಮುಂಜಾನೆ ಬೆಳಗಲಿ 
ಸಂಜೆ ತಂಪಾಗಲಿ ನಡುವೆ 
ನಮ್ಮ ದಿನಚರಿ ಸಾಗಲಿ 
ಶುಭದಿನ - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಕೃತಿಗೆ ಗೊತ್ತಿರಲಿಲ್ಲ ಎ
ಷ್ಟು ಪುಟಗಳಿವೆ ಎಂದು..
ಕೃತಿಯು ಆಕೃತಿಯಾದದ್ದು 
ಬರವಣಿಗೆಯು ಪುಸ್ತಕ 
ಸೇರಿದ ಮೇಲೆ. 
ಕೃತಿಗೆ ಲೇಖನಿ ನನ್ನದೇ 
ಬರೆಯುವ ಕೈಗಳು ಕೃತಿಯ 
ಆಳಕ್ಕೆ ಇಳಿದಿದೆ. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಏನಿಲ್ಲ ಯಾಕಿಲ್ಲ 
ಅದಾವುದೂ ಗೊತ್ತಿಲ್ಲ
ಇರುವುದೆಲ್ಲವೂ ಇಲ್ಲ
ಇಲ್ಲದ್ದು ಹುಡುಕಲು 
ಸಮಯವಿಲ್ಲ..
ತಪ್ಪಾದರೆ ಅದು ನಾನಲ್ಲ
ಸರಿಯಾದರೆ ನಾನೆ ಎಲ್ಲಾ..
ಇಲ್ಲ ಸಲ್ಲದ ಆಪಾದನೆಗೆ 
ಕಾರಣನಲ್ಲ..
ಗಂಟು ಸಿಗುವುದಾದರೆ
ನನ್ನದೇ ಎಲ್ಲಾ - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ನನ್ನ ಸಾಲುಗಳಿಗೆ 
ಮರುಜೋಡನೆ ಕೊಟ್ಟೆ 
ನಿಂತಿದ್ದ ಪಯಣ
 ನಡೆಯಲು ಪ್ರಾರಂಭಿಸಿದೆ 
ನಿಂತ ಸಾಲುಗಳು 
ನಿನ್ನಿಂದ ಮುಂದುವರೆದಿದೆ..
ಬರೆಯುವ ಬಯಕೆ ನನ್ನದಿದ್ದರೂ 
ಕಾಲವು ನಿಲ್ಲಿಸಿತ್ತು..
ಪಯಣ ಮುಂದುವರೆದಿದೆ 
ನಿಲ್ಲದಿರಲಿ ಹೀಗೆ ನಿತ್ಯ.. - Made using Quotes Creator App, Post Maker App
3 likes 0 comments
Vagish Aradhya
Quote by Vagish Aradhya - ಏನೆಂದು ಹೇಳಲಿ 
ತಿಳಿಯಲಾಗಿದೆ 
ಗೀಚುವ ಬಯಕೆ 
ಪೆನ್ನು ಕೂಡ 
ಯೋಚಿಸುತ್ತಿದೆ..
ನಿನ್ನೆಸರ ಬರೆಯಲೇ..
ಹೆಸರಲ್ಲೇನಿದೆ 
ಎನ್ನಬೇಡ..
ನಿನ್ನೆಸರು ಕೂಡ ನನ್ನ 
ಮನದಲ್ಲೇ ಉಳಿದಿದೆ..
ಹೃದಯಕ್ಕೆ ಅಂಟಿದ ಹೆಸರಿಗೆ 
ಲೇಖನಿಯ ಅಗತ್ಯವೇಕೆ..
ದೂರ ಸರಿಯಬೇಡ 
ಏನೂ ತೋಚದಂತಾಗಿದೆ.. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ವಿರಮಿಸಲು ಬಿಡದ ನಿನ್ನ ಪ್ರೀತಿ 
ಹೃದಯದಲ್ಲೇ ಮನೆ ಮಾಡಿದೆ 
ಬಚ್ಚಿಡುವ ಅಗತ್ಯವಿಲ್ಲ 
ಮನಸೇ ಬಿಚ್ಚಿ ಹೇಳುತ್ತಿದೆ 
ಸೇರಿದ ಮನಸ್ಸು ನಿನ್ನ ಗುಂಗಲ್ಲೇ
ಎಲ್ಲಕ್ಕೂ ಉತ್ತರ ನಿನ್ನಲ್ಲೇ.. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಮಾಯವಾಗಿ ಮತ್ತೆ ಮತ್ತೆ 
ಪ್ರತ್ಯಕ್ಷವಾಗುವವಳು 
ಮನದಲ್ಲೇ ಉಳಿದವಳು
ಮಾತಿಗೆ ಸಿಗದಿದ್ದರೂ 
ನೆನಪಲ್ಲೇ ಉಳಿದವಳು 
ಮತ್ತೇನು ಹೇಳಲಾರೆ 
ಹೀಗೆ ಇರು ಜೊತೆಯಾಗಿ - Made using Quotes Creator App, Post Maker App
1 likes 0 comments

Explore more quotes

Vagish Aradhya
Quote by Vagish Aradhya - ನಾ ಹೇಳಲಾರೆ 
ಮೌನವೇ ಉತ್ತರ..
ಪ್ರಶ್ನೆ ಉಳಿದಿಲ್ಲ
ನಿನಗೆ ತಿಳಿದಿದೆ ಉತ್ತರ. 
ತತ್ತರಿಸಲು ಸಾಧ್ಯವಿಲ್ಲ 
ನೀನಿರುವಾಗ..
ಸಾಂತ್ವನಕ್ಕೆ ನೀನಿರಲು 
ಯೋಚಿಸುವ ಭಯವಿಲ್ಲ 
ನನ್ನವಳು ನೀನೀರುವಾಗ
ಸ್ವಾರ್ಥಿ ನಾನಲ್ಲ .. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ಸಮಯಕ್ಕೆ 
ಸಮಯವಿಲ್ಲ 
ಎನ್ನುವಾಗ
ಹುಡುಕುವ 
ಭರದಲ್ಲಿ 
ಸಮಯವೇ
 ಕಳೆದಿವೆ 
ಕಳೆದ ಸಮಯದ 
ನೆನಪಾದರು 
ನೆನಪಲ್ಲಿ 
ಉಳಿಯಲು 
ನಿನ್ನದೊಂದು 
ಸಂದೇಶ ಸಾಕು. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ನಿನ್ನ ಓರೆ ನೋಟ 
ಹೃದಯಕ್ಕೆ ನಾಟಿದೆ 
ಆ ಕಣ್ಣ ಸೆಳೆತ 
ಹೇಳಲಾಗದ ಮಿಡಿತ 
ಬಂದು ಹೋಗುವವರ ಮಧ್ಯೆ 
ದಿಟ್ಟಿಸಿ ನೋಡುವ ಕಂಗಳು 
ನನ್ನನ್ನೇ ಕೆಣಕಿದಂತಿದೆ..
ಕಾಡಿ ಕಂಗಡಿಸಿದ ಕಂಗಳು 
ಮತ್ತು ಬರಿಸಿದೆ.. - Made using Quotes Creator App, Post Maker App
1 likes 0 comments
Vagish Aradhya
Quote by Vagish Aradhya - ನಡೆವ ಹಾದಿಯು 
ಕಲ್ಲು ಮುಳ್ಳಾದರೇನು 
ಬೆಟ್ಟಗುಡ್ಡಗಳು 
ಗುಹೆ ಆದರೇನು 
ಗುರಿಯೊಂದು ಇರುವಾಗ 
ಸಾಗರದ ಆಚೆಯಾದರೇನು 
ತಲುಪುವ ಗುರಿ ಇದ್ದರೆ ಎಷ್ಟೇ 
ಅಡೆತಡೆಗಳಿದ್ದರೇನು 
ನಿಲ್ಲದ ಪಯಣ ಗುರಿ 
ಮುಟ್ಟುವವರೆಗೂ - Made using Quotes Creator App, Post Maker App
2 likes 0 comments
Vagish Aradhya
Quote by Vagish Aradhya - ಬರೆಯಲು ನಾ 
ಒಲ್ಲೆ ಎಂದೆನ್ನಲಾರೆ 
ನಿನಗಾಗಿ ಬಾರದ 
ಸಾಲುಗಳು 
ಮತ್ಯಾರಿಗೆ..
ಗೀಚಿದಷ್ಟು ಮತ್ತಷ್ಟು 
ಮಗದಷ್ಟು 
ಎಲ್ಲವೂ ನಿನಗಾಗಿ 
ಬರೆದ ಸಾಲುಗಳೇ..
ನಿನ್ನ ವಿನಹ ಬೇರೇನೂ 
ಗೀಚಲಿ.. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಒಬ್ಬಂಟಿ ನಾನಲ್ಲ ನೀನಿರುವಾಗ 
ಜೊತೆಗಾರರು ಯಾರೆಂದು 
ಹುಡುಕುವ ತವಕ ನನಗಿಲ್ಲ 
ನಿನ್ನುಸಿರಲಿ ಬೆರೆಯಲು 
ಬಹಿರಂಗವಾಗಿ ಹೇಳಬೇಕಿಲ್ಲ 
ಆಂತರ್ಯದಿ ರುಜುವಾದಾಗಿದೆ.. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಕಾದಷ್ಟು ಕುತೂಹಲ 
ಅದು ನಮ್ಮವರಿಗಾಗಿ ಮಾತ್ರ. 
ಇಷ್ಟವಾಗದವರ ಕಾಯುವಿಕೆ 
ಬಲು ಕಷ್ಟ..
ಇಷ್ಟ ಕಷ್ಟಗಳ ನಡುವೆ 
ಸಮಯವೊಂದು ಬೇಕು 
ನಮ್ಮಿಬ್ಬರ ಭಂದಕ್ಕೆ. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಮೌನಕ್ಕೆ ಶರಣಾದೆ 
ಅಂತರಂಗದ ಮಾತು 
ಹೆಚ್ಚಾಯಿತು. 
ನನ್ನ ಕನವರಿಗೆ 
ನನಗೆ ತಿಳಿಯದು 
ತಿಳಿದವರಿಗೆ 
ತಿಳಿದರೆ ಸಾಕು..
ನಾನೇನು ಬಲ್ಲವನಲ್ಲ 
ನಾ ನಿನ್ನ ಪಡೆದವನು.
ಮಾತು ಅಂತರಂಗದ್ದೆ 
ನಿನಗೂ ತಿಳಿದಿದೆ 
ನನ್ನ ಮಾತಿನ ಅಂತರಾಳ
ಅದು ಮನಸು ಮಾತಾಡಿದ್ದು. - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಕೊಡಲಿನ ನಾದಕ್ಕೆ 
ನವಿಲಲ್ಲ
 ನವಿಲ ಗರಿಯು 
ನರ್ತಿಸುತ್ತಿದೆ..
ಇಂಪಾದ ನಾದವು 
ಕೊಳಲ ಸ್ಪರ್ಶದಿ 
ಗರಿಗೆದರಿ ನಿಂತಿದೆ 
ಬೆರಳುಗಳು ಕೂಡ 
ಆಹ್ಲಾದಿಸುತ್ತಿದೆ 
ನಿನ್ನ ಸ್ಪರ್ಶಕೆ..

 - Made using Quotes Creator App, Post Maker App
0 likes 0 comments
Vagish Aradhya
Quote by Vagish Aradhya - ಹೇಳಲು ಏನು ಇಲ್ಲ 
ಆದರೂ ಮತ್ತೇನೋ
 ಉಳಿದಿದೆ ಮುಗಿಯದ 
ಮಾತುಗಳಿಗೆ ಮತ್ತೇನು 
ಎನ್ನುವುದೇ ಪೀಠಿಕೆ 
ಮಾತು ಮುಗಿದರೆ 
ಮತ್ತೇನು ಎನ್ನಲಾಗದು..
ಮಾತು ಉಳಿದಿದ್ದರೆ 
ಮತ್ತೆ ಮತ್ತೆನು ಎನ್ನುವ 
ಮಾತು ಕೇಳುವ ಬಯಕೆ.. - Made using Quotes Creator App, Post Maker App
0 likes 0 comments

Explore more quotes