Ambika nayak profile
Ambika nayak
167 30 4
Posts Followers Following
Ambika nayak
Quote by Ambika nayak - ಕಳೆದು ಹೋದವರ ಹುಡುಕಿ
ಒಂದಲ್ಲ ಒಂದು ದಿನ ಸಿಗಬಹುದು
ಬಿಟ್ಟು ಹೋದವರ ಹುಡುಕದಿರಿ
ಸಿಕ್ಕರೂ, ನಿಮ್ಮವರಾಗಿರುವುದಿಲ್ಲ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ನನ್ನವಳ ಪ್ರೀತಿಯೆದುರು ಮೌನಿ ನಾ
ಬೈಗುಳಗಳ ಸುರಿಮಳೆಗಳ ಸುರಿಸುವವಳು
ಸ್ನೇಹ ಲೋಕಕೆ ಸ್ವಾಗತಿಸಿದವಳು
ನನ್ನವಳು ಪ್ರೀತಿಗೆ ಋಣಿ ನಾ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ನಿನ್ನದೇ ಸ್ಮರಣೆಯಲಿ ಮಗ್ನಳಾಗಿರಲು
ಬೇರೊಬ್ಬರ ಗಮನವೇಕೆನಗೆ..?
ನಿನ್ನಲೇ ನನ್ನೆಲ್ಲಾ ಸಂತೋಷವಿರಲು 
ಮತ್ತೊಂದೆಡೆ ಅದನ ಹುಡುಕಲೇಕೆ..?

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಮಾತುಗಳ ಅರ್ಥೈಸಿಕೊಂಡವರ ಮರೆಯದಿರಿ
ಮೌನವ ಅರ್ಥೈಸಿಕೊಂಬುವವರ ಕಳೆದುಕೊಳ್ಳದಿರಿ
ಬಂಧಗಳ ಸಡಿಲವಲ್ಲ, ಬಿಗಿಗೊಳಿಸಿರಿ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಕಾಣದವರು ಬಗ್ಗೆ ಆಸೆಗಳಿಲ್ಲ
ಬಿಟ್ಟು ಹೋದವರ ಬಗ್ಗೆ ಚಿಂತೆಯಿಲ್ಲ
ಜೊತೆಯಿರುವವರೇ ನನಗೆಲ್ಲಾ

✍️ ಅಂಬಿಕಾ  - Made using Quotes Creator App, Post Maker App
6 likes 5 comments
Ambika nayak
Quote by Ambika nayak - ನನ್ನೊಲವ ಕಿರುನಗೆಗೆ ಕಾರಣೀಕರ್ತಳು
ನನ್ನೆಲ್ಲಾ ಭಾವನೆಗಳಿಗೆ ಸ್ಮಂದಿಸುವವಳು
ಅಂತರದೊಳಗೆ ಮನಕೆ ಸನಿಹವಿಹಳು

✍️ ಅಂಬಿಕಾ  - Made using Quotes Creator App, Post Maker App
5 likes 0 comments
Ambika nayak
Quote by Ambika nayak - ಮರೆತವರ ಮರೆತುಬಿಡು
ಜೊತೆಯಿರುವವರು ಮನದಲ್ಲಿಡು
ತಂದೆ ತಾಯಿಯ ನೆನಪಲ್ಲಿಡು....

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಅವಳೇನು ರೂಪಸಿಯಲ್ಲ
ರಕ್ಕಸಿಯೂ ಅಲ್ಲ
ಬಂಧುವಲ್ಲ, ಬಳಗವೂ ಅಲ್ಲ
ಆದರೂ ಅವಳೇ ನನಗೆಲ್ಲ...

✍️ ಅಂಬಿಕಾ  - Made using Quotes Creator App, Post Maker App
2 likes 0 comments
Ambika nayak
Quote by Ambika nayak - ನಂಬಿಕೆಯ ಸೌಧ ಕುಸಿಯುತ್ತಿದ್ದರೂ 
ಪ್ರಯತ್ನದಿ ಗೋಡೆಯ ಕಟ್ಟುತ್ತಿರು
ಭವಿಷ್ಯವ ಬಲ್ಲವರ್ಯಾರು?
ಅದು ಅರಮನೆಯೂ ಆಗಬಹುದು!

✍️ ಅಂಬಿಕಾ  - Made using Quotes Creator App, Post Maker App
2 likes 3 comments
Ambika nayak
Quote by Ambika nayak - ಯಾವುದೋ ಬದ್ಧತೆಗೆ ಬಂಧಿಯಾದ ಬಾಂಧವ್ಯವಿದು
ಬಿಡಿಸಲಾಗದ ಕೊಂಡಿಯಾಗಿ ಹುದು
ಸಾವಿರ ಆಸೆಗಳ ಹೊತ್ತಿರುವ ಸುಂದರ ಬಂಧವಿದು
ಎಂದಿಗೂ ಕೊನೆಯಾಗದ ಅಜರಾಮರ ಸ್ನೇಹವಿದು

✍️ ಅಂಬಿಕಾ  - Made using Quotes Creator App, Post Maker App
6 likes 2 comments

Explore more quotes

Ambika nayak
Quote by Ambika nayak - ಸ್ನೇಹದ ಊರಿಗೆ ಭೇಟಿ ನೀಡಿದ್ದಳಾಕೆ
ಪ್ರೇಮದ ಕಾಮಗಾರಿಯ ನಡೆಸಿದಳಾಕೆ
ಅವಳೆನ್ನ ಜೀವನದ ಕೀರ್ತಿ ಪತಾಕೆ
ಸದಾ ಹಸನ್ಮುಖಿಯಾಗಿರಲೆಂದು ಬಯಕೆ

✍️ ಅಂಬಿಕಾ  - Made using Quotes Creator App, Post Maker App
4 likes 5 comments
Ambika nayak
Quote by Ambika nayak - ನಾ ಬರೆದ ಕವಿತೆಯಲಿ
ಅವಳದೇ ಪೀಠಿಕೆ
ಅವಳದೇ ತುಂಟಾಟಿಕೆ

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak -  ಅಂದು  ಅಂಗಡಿಗೆ  ಬಂದಿದ್ದಳಾಕೆ
ಇಂದು ಪಡೆದಿರುವಳು ಅದರ ಯಜಮಾನಿಕೆ
ರಾಣಿಯಾಗಿಹಳು ನನ್ನೀ ಪುಟ್ಟ ಮನಕೆ..

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ನಿನ್ನ ಮನವೆಂಬ ಮನೆಯೊಳು ಒಂದು ಕೋಣೆಯಾಗುವಾಸೆ
ಅಲ್ಲಿಯೇ ಬಹುಕಾಲ ಸಮಯ ಕಳೆಯುವೆಯಾ.. ಕೂಸೆ
ಉಸಿರು ನಿಲ್ಲುವವರೆಗೂ ನೀ ಜೊತೆಯೊಳಿರಬೇಕೆಂಬುದು ನನ್ನ  ಒತ್ತಾಸೆ
ನನ್ನ ಮುದ್ದು ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🥰

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ನನ್ನೊಲವೆ ಮನದೊಳಗೆ ಅವಳದೇ ಶಾಯರಿ
ಅವಳೆನ್ನ ಪ್ರೇಮನಿಧಿಯ ಕಿನ್ನರಿ
ಆಕರ್ಷಿಸಿಹಳೆನ್ನ ನಾಟ್ಯ ಮಯೂರಿ

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಯಾರದೋ ಅರಮನೆಯಲಿ ಸೇವಕಿಯಾಗುವ ಬದಲು
ತನ್ನದೇ ಗುಡಿಸಲಲ್ಲಿ ರಾಣಿಯಾಗಿರುವುದು ಲೇಸು...

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ನನ್ನೆದೆಯ ಕಿರುಹಾದಿಯಲಿ ಅವಳದೇ ನೆನಹು
ಅಲ್ಲಿಯೇ ಬಿಡಾರ ಹೂಡಲು ಆಗದು
ಮುಂದೆ ಸಾಗಲೂ ಸಾಧ್ಯವಾಗದು..😌

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಗಿಡಕೆ ಹೂ ಭಾರವಾದೀತೇ..?
ತಾಯಿಗೆ ಮಗು ಹೊರೆಯಾದೀತೇ..?
ನೀನಿರೆ ಜೊತೆಯೊಳು ಇದ್ದೀತೇ ಕೊರತೇ..

✍️ ಅಂಬಿಕಾ  - Made using Quotes Creator App, Post Maker App
4 likes 2 comments
Ambika nayak
Quote by Ambika nayak - ಬಯಸಿದ್ದೆಲ್ಲಾ ದೊರಕಿದೊಡೆ ಬಯಕೆಗೆ ಬೆಲೆಯಲ್ಲಿ?
ನಂಬಿದ್ದು ನಿಜವಾಗದೊಡೆ ನಂಬಿಕೆಗೆ ಬೆಲೆಯಲ್ಲಿ?
ಧ್ಯೇಯವೇ ಇರದ ಬದುಕಿಗೆ ಬೆಲೆಯಲ್ಲಿ?

✍️ ಅಂಬಿಕಾ  - Made using Quotes Creator App, Post Maker App
4 likes 0 comments
Ambika nayak
Quote by Ambika nayak - ಗುರಿ ನಿಶ್ಚಲವಾಗಿರಲಿ
ಪ್ರಯತ್ನ ಚಲನೆಯಲ್ಲಿರಲಿ
ಕೆಲಸದಲ್ಲಿ ನಿಯತ್ತಿರಲಿ

✍️ ಅಂಬಿಕಾ  - Made using Quotes Creator App, Post Maker App
0 likes 0 comments

Explore more quotes

Ambika nayak
Quote by Ambika nayak - ನೀ ಬಯಸಿಯೂ ನಿನ್ನ ಕಡೆಗಣಿಸದವರ ಹಿಂದೆ ಹೋಗದಿರು
ನಿನ್ನ ಬಯಸಿ ಬಂದವರ ನೀ ಕಡೆಗಣಿಸದಿರು
ನೀ ಬಯಸಿದ ನಿನ್ನನ್ನೂ ಬಯಸಿದ ಬಂಧವ ಕಳೆದುಕೊಳ್ಳದಿರು

Quote by Ambika nayak - ಹಸಿರನೆ ಹೊದ್ದು ಕಂಗೊಳಿಸುವ ಪ್ರಕೃತಿಯ ಮಡಿಲಲಿ
ರಂಗುರಂಗಿನ ಸುಮವಾಗಿ ಅರಳುವಾಸೆ
ತಾರಾಗಣದ ಬಾನಂಗಳದಲಿ
ಚುಕ್ಕಿಯಾಗಿ ಮಿನುಗುವಾಸೆ

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ನೇಹವೆಂಬ ಗೂಡಿನೊಳು ಬಚ್ಚಿಡುವಾಸೆ ಅವಳ
ಪಂಜರವಾಗದಿರಲಿ ಅವಳಿಗೆ
ಮನವೆಂಬ ಗುಡಿಯೊಳು ಪೂಜಿಸುವೆ ಅವಳ
ಮುಡಿಪಿಡುವೆ ನನ್ನನ್ನೇ ಅವಳಿಗೆ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಬೇಡೆನು ನಾ ಕಾಣದ ಲೋಕವ
ಬೇಡೆನು ನಾ ಕಾಣದ ಸುಖವ
ಕರುಣಿಸುವೆಯಾ ನೀ ಎನಗೆ 
ನೆಮ್ಮದಿಯ ಜೀವನವ‌‌...

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಒಡಹುಟ್ಟಿದವಳಲ್ಲ ಅವಳೆನಗೆ
ಮೂಡಿಸುವಳು ಮೊಗದಲ್ಲಿ ಮುಗುಳ್ನಗೆ
ಕಾಡುತಿದೆ ನನ್ನನ್ನು ಅವಳ ನಗೆ
ಬಿಟ್ಟಿರಲಾರೆ ಅವಳ ಅರೆ ಗಳಿಗೆ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಕಣ್ಗಳು ಪರದಾಡಿವೆ ಹುಡುಕುತ ಅವಳನು
ಹುಡುಕಿರುವೆ ನನ್ನೊಳಗಿನ ನನ್ನವಳನು
ಎಂದಿಗೂ ಮರೆಯಾಗಳು ಆಕೆ
ನನ್ನೊಳಗೆ ಬೆರೆತಿಹಳು ನನ್ನಾಕೆ

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಬೇಡವೆಂದವರಿಂದ ದೂರವಿರು
ಬಯಸಿದವರ ಜೊತೆಗಿರು
ತುಳಿಯುವವರ ಮುಂದೆ ಬೆಳೆಯುತಿರು

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಮರೆಯಲಾಗುತ್ತಿಲ್ಲ ಆ ಸವಿನೆನಪುಗಳ
ಮರೆಯಲಾಗುತ್ತಿಲ್ಲ ಆ ಕೈತುತ್ತುಗಳ
ಮರೆಯಲಾಗುತ್ತಿಲ್ಲ ಆ ತುಂಟಾಟಗಳ
ಮೆಲುಕು ಹಾಕುತಿರುವೆ ನಾ ನೆನಪುಗಳ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ನಾನೆಂದು ಬದುಕದಿರು 
ಒಂಟಿಯಾಗಿಬಿಡುವೆ
ನಾವೆಂದು ಬದುಕುತಿರು
ಸಂಘಜೀವಿಯಾಗಿರುವೆ

✍️ ಅಂಬಿಕಾ  - Made using Quotes Creator App, Post Maker App
0 likes 0 comments

Explore more quotes

Ambika nayak
Quote by Ambika nayak - ಮುಗಿಲೆತ್ತರದ ಆಸೆಗಳು ನಸುನಗುತಿಹವು
ಜವಾಬ್ದಾರಿಗಳ ಮೂಟೆಗಳ ಕಂಡು
ಆಗಬೇಕಿದೆ ನಾ ಮೊಂಡು
ಮೆಟ್ಟಿ ನಿಲ್ಲಬೇಕಿದೆ ಕಷ್ಟಗಳ ಹಿಂಡು 

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಜೀವನವೊಂದು ಸಂತೆ
ಅನುಭವಗಳ ಕಂತೆ
ಮಾಡುವೆಯೇಕೆ ಚಿಂತೆ?
ಸಾಗುತಿರು ಕಾಲ ಬಂದಂತೆ..

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ನಾ ಬಯಸಿದ್ದು ಪೂರ್ಣವೇ
ದೊರೆತಿದ್ದು ಮಾತ್ರ ಅಲ್ಪವೇ
ಸಂತಸದಿ ಎಲ್ಲವ ಸಹಿಸಿರುವೇ
ಏಕೆಂದರೆ,
ನಾ ಅಲ್ಪತೃಪ್ತಳಲ್ಲವೇ,..

✍️ ಅಂಬಿಕಾ  - Made using Quotes Creator App, Post Maker App
2 likes 0 comments
Ambika nayak
Quote by Ambika nayak - ನಾನಿದ್ದಿದ್ದೂ ವಾಸ್ತವತೆಯಲ್ಲಿಯೇ
 ಆದರೂ 
ನಾ ನಂಬಿದ್ದು ಭ್ರಮತೆಯನ್ನು...

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಬಯಸದಿದ್ದರೂ ಬಂದೆಯಾ ನೋವೆ?
ಬಯಸಿದರೂ ಬಾರದಿರುವೆಯಾ ನಗುವೆ?
ನೋವಿನಲ್ಲೂ ನಗುವುದನ್ನು ಕಲಿಯುತಿರುವೆ.

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಖಾಲಿಯೂ ಆಗದ
ತಿರುಗಿಯೂ ಬಾರದ
ಎಣಿಸಲೂ ಆಗದ
ಬಚ್ಚಿಡಲೂ ಆಗದ
ನನ್ನ ಸಂಪತ್ತೆಂದರೆ ನೆನಪುಗಳಷ್ಟೇ..

✍️ ಅಂಬಿಕಾ  - Made using Quotes Creator App, Post Maker App
1 likes 2 comments
Ambika nayak
Quote by Ambika nayak - ಸ್ವಪ್ನವೆಲ್ಲಾ ನೈಜವಾಗಿರದು
ನೈಜತೆಯೆಲ್ಲಾ ಇಷ್ಟವಾಗದು
ಇಷ್ಟವಾಗಿದ್ದೆಲ್ಲಾ ಜೊತೆಗಿರದು..😌

✍️ ಅಂಬಿಕಾ  - Made using Quotes Creator App, Post Maker App
2 likes 0 comments
Ambika nayak
Quote by Ambika nayak - ನೆನಪೆಂಬ ರಸ್ತೆಯಲಿ ಸಂಚರಿಸುತಿರುವೆನು
ನನ್ನದೇ ಭ್ರಮಾ ಲೋಕದಲಿ ಸಿಲುಕಿರುವೆನು
ಅನಗತ್ಯ ತಿರುವುಗಳ ಅಳಿಸಬೇಕೆಂಬ ಚಿತ್ತದೊಳು
ಸಾಗಿದೆ ಮುಂದೆ ಅದಾಗದು ಎಂಬ ಗಮನದೊಳು..

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಮಾತುಗಳೇನು ಎಲ್ಲರು ಅರ್ಥೈಸಿಕೊಳ್ಳಬಲ್ಲರು
ನಿಮ್ಮ ಮೌನವನ್ನು ಕೆಲವರು ಮಾತ್ರ ಅರ್ಥೈಸಿಕೊಳ್ಳಬಲ್ಲರಷ್ಟೇ..
ಆ ಕೆಲವರನ್ನು ಎಂದಿಗೂ ಕಳೆದುಕೊಳ್ಳಬೇಡಿ
ಏಕೆಂದರೆ ಅಂತವರು ಸಿಗುವುದು ಬೆರಳೆಣಿಕೆಯಷ್ಟೇ..

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಅವರದ್ದೇ ಇಚ್ಛೆಯಾಗಿತ್ತು ಆಗಮನ
ಅವರದ್ದೇ ಇಚ್ಛೆಯಾಗಿದೆ ನಿರ್ಗಮನ
ಯಾರಿದ್ದರೂ ಯಾರಿಲ್ಲದಿದ್ದರೂ ಸಾಗುವುದು ಜೀವನವೆಂಬ ಪಯಣ
ಜೊತೆಯಿರುವವರೊಡನೆ ನಲಿಯುವ ಸಾಗೋಣ..

✍️ ಅಂಬಿಕಾ  - Made using Quotes Creator App, Post Maker App
1 likes 0 comments

Explore more quotes

Ambika nayak
Quote by Ambika nayak - ಹಿಡಿದ ಕೈ ಎಂದಿಗೂ ಬಿಡದಿರು ಒಲವೆ..
ನಾ ಎಂದಿಗೂ ನಿನ್ನ ಜೊತೆಗೇಯಿರುವೆ..
ನಮ್ಮೀ ಸ್ನೇಹ ಚಿರವಾಗಿರಲೆಂದು ಬಯಸುವೆ

✍️ ಅಂಬಿಕಾ  - Made using Quotes Creator App, Post Maker App
1 likes 0 comments
Ambika nayak
Quote by Ambika nayak - ಬಿಟ್ಟು ಹೋದ ಮನಗಳಲ್ಲೊಂದು ಮನವಿ
ನಿಮ್ಮ ಬಳಿಯಿತ್ತು ನನ್ನ ಪ್ರೀತಿಯು ಗಿರವಿ
ವಿಫಲವಾಗಿರುವೆ ಪಡೆಯಲು ತಿರುಗಿ
ಹಿಂಪಡೆಯಿರಿ ನೆನಪುಗಳ ಮರುಗಿ..

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ತಪ್ಪು ಮಾಡದ ಮನುಜನಿಲ್ಲ
ತಿದ್ದಿ ನಡೆದರೆ ಬದುಕು ಚೆನ್ನ
ಮನಸ್ಸೊಂದಿದ್ದರೆ ಯಾವುದು ದೊಡ್ಡದಲ್ಲ
ಸಾಧನೆಯಾದೊಡೆ ಹೊಗಳುವರು ನಿನ್ನ..

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - ಪರಿಚಯವಿಲ್ಲ ಎನಗೆ ಸ್ವರ್ಗ ನರಕಗಳು
ನಾ ಕಂಡ ಸ್ವರ್ಗವದುವೇ ಸ್ನೇಹ ಬಾಂಧವ್ಯತೆ
ನಾ ಕಂಡ ನರಕವದುವೇ ಅಗಲಿಕೆ..

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika nayak
Quote by Ambika nayak - U ignored by ur loved one 
that's shows another one filled ur place in their life...

✍️ Ambika  - Made using Quotes Creator App, Post Maker App
2 likes 0 comments
Ambika
Quote by Ambika - ಸಾಗುವ ದಾರಿ ಅನಂತದೆಡೆಗೆ ಆದರೂ
ಅದರ ಮೂಲ ಒಂದೇ ಆಗಿರುತ್ತದೆ
ಅನೇಕ ಸವಾಲುಗಳ ಸ್ವೀಕರಿಸಿದೆಯಾದರೇ
ಗೆಲುವೊಂದೇ ಉತ್ತರವಾಗಿರುತ್ತದೆ.

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika
Quote by Ambika - ಗಮನವಿರಲಿ ನುಡಿಯೆಡೆಗೆ
ನಡೆಯಿರಲಿ ಗುರಿಯೆಡೆಗೆ
ಆಯ್ಕೆಯಿರಲಿ ಉತ್ತಮದೆಡೆಗೆ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika
Quote by Ambika - ಮಂದಹಾಸ ಬೀರುತಿಹುದು ಈ ಮೊಗದಲಿ
ಅದೆಷ್ಟೋ ನೋವು ಮರೆಯಲು ಮನದಲಿ
ಕಂಬನಿಯಿಹುದು ಯಾರಿಗೂ ಕಾಣದೆ ಕಣ್ಣಂಚಲಿ
ಇಚ್ಛಿಸುವೆ ನಾ ಎಲ್ಲರೂ ನಗುತಿರಲಿ

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika
Quote by Ambika - ಗಮನವಿಟ್ಟು ಕೇಳು
ನಾಳೆಯೆಂಬುದು ಹಾಳು
ಇಂದಿಗಾಗಿ ಬಾಳು
ಪ್ರತಿಯೊಂದರಲ್ಲೂ ನೀನಾಗು ಮುಂದಾಳು 

✍️ ಅಂಬಿಕಾ  - Made using Quotes Creator App, Post Maker App
0 likes 0 comments
Ambika
Quote by Ambika - ನಮ್ಮ ಭೇಟಿಗೆ ಸಾಕ್ಷಿಯಾಗಿದೆ ಈ ತಾಣ
ಅದೆಂದೂ ಮರೆಯಲಾಗದ ಅಧ್ಬುತ ಕ್ಷಣ
ನಿನ್ನ ನೋಡದಿದ್ದರೆ ಮನಸ್ಸಿನಲ್ಲೇನೋ ತಲ್ಲಣ
ತೀರಿಸಲು ಅಸಾಧ್ಯ ನಿನ್ನಯ ಋಣ
ನೀನಿರದ ಯಾನ ನೋವಿನ ಪ್ರಯಾಣ..

✍️ ಅಂಬಿಕಾ  - Made using Quotes Creator App, Post Maker App
0 likes 0 comments

Explore more quotes